ಕಾರಿನ ಏರ್‌ಬ್ಯಾಗ್‌ಗಳಿಗೆ ಎಕ್ಸ್‌ಪೈರಿ ಡೇಟ್ ಅನ್ನೋದು ಇದ್ಯಾ? ಅದರ ನಿರ್ವಹಣೆಯ ಹೇಗೆ?
ಏರ್‌ಬ್ಯಾಗ್‌ಗಳು ಜೀವ ಉಳಿಸುವ ಸುರಕ್ಷತಾ ಸಾಧನಗಳಾಗಿವೆ. ರಸ್ತೆ ಅಪಘಾತದ ಸಂದರ್ಭದಲ್ಲಿ, ಅವು ಪ್ರಯಾಣಿಕರ ತಲೆ, ಕುತ್ತಿಗೆ ಮತ್ತು ಎದೆಯ ಭಾಗವನ್ನು ಗಂಭೀರ ಗಾಯಗಳಾಗದಂತೆ ರಕ್ಷಿಸುತ್ತವೆ. ಕಾರ್‌ನಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸದಿದ್ದರೆ ಸಣ್ಣ ಡಿಕ್ಕಿಗಳು ಸಹ ಗಂಭೀರ ಗಾಯಗಳಿಗೆ ಕಾರಣವಾಗಬಹುದು. ಇಂತಹ ಜೀವ ರಕ್ಷಕ ಏರ್ ಬ್ಯಾಗ್‌ಗಳಿಗೆ ಎಕ್ಸ್‌ಪೈರಿ ಡೇಟ್ ಇದೆಯೇ, ಅದರ ಕಾರ್ಯನಿರ್ವಹಣೆಯನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಬ್ಯಾಗ್‌ಗಳು (airbags) ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಪ್ರತಿಯೊಂದು ಕಾರ್‌ಗಳಲ್ಲೂ ಏರ್ ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ರಸ್ತೆ ಅಪಘಾತದ ಸಂದರ್ಭದಲ್ಲಿ, ಈ ಏರ್‌ಬ್ಯಾಗ್‌ಗಳು ಒಂದು ಸೆಕೆಂಡಿನ ಕೆಲವೇ ನಿಮಿಷಗಳಲ್ಲಿ ವಿಸ್ತರಿಸುತ್ತವೆ, ತಲೆ, ಕುತ್ತಿಗೆ ಮತ್ತು ಎದೆಯ ಗಂಭೀರ ಗಾಯಗಳಾಗದಂತೆ ರಕ್ಷಿಸುತ್ತವೆ ಅಲ್ಲದೆ ಜೀವಗಳನ್ನು ಉಳಿಸುತ್ತವೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಏರ್ ಬ್ಯಾಗ್‌ಗಳಿಗೆ ಮುಕ್ತಾಯ ದಿನಾಂಕವಿದೆಯೇ, ಅವುಗಳನ್ನು ಸರಿಯಾಗಿ ನಿರ್ವಹಿಸುವುದು ಹೇಗೆ ಎಂಬುದರ ಪೂರ್ಣ ವಿವರವನ್ನು ತಿಳಿದುಕೊಳ್ಳಿ.
ಏರ್‌ಬ್ಯಾಗ್‌ಗಳು ಏಕೆ ಅಗತ್ಯ?
ಏರ್‌ಬ್ಯಾಗ್ ಎಂದರೆ ಹತ್ತಿಯಿಂದ ಮಾಡಲ್ಪಟ್ಟ ಮತ್ತು ಸಿಲಿಕೋನ್‌ನಿಂದ ಲೇಪಿತವಾದ ಬಲೂನ್‌ನಂತಹ ರಚನೆಯಿರುವ ವಸ್ತುವಾಗಿದೆ. ಏರ್‌ಬ್ಯಾಗ್ ಸೋಡಿಯಂ ಅಜೈಡ್ ಅನಿಲದಿಂದ ತುಂಬಿರುತ್ತದೆ ಮತ್ತು ವಾಹನದ ಮುಂಭಾಗದ ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸಲಾಗಿರುತ್ತದೆ. ಕಾರುಗಳಲ್ಲಿರುವ ಏರ್‌ಬ್ಯಾಗ್‌ಗಳು ಅಪಘಾತದ ಸಂದರ್ಭದಲ್ಲಿ ಚಾಲಕ ಮತ್ತು ಪ್ರಯಾಣಿಕರ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಡಿಕ್ಕಿ ಹೊಡೆದಾಗ, ಅವು ಬಲೂನ್‌ಗಳಂತೆ ಉಬ್ಬುತ್ತವೆ, ಪ್ರಯಾಣಿಕರು ಡ್ಯಾಶ್‌ಬೋರ್ಡ್ ಅಥವಾ ಸ್ಟೀರಿಂಗ್ ಚಕ್ರಕ್ಕೆ ಡಿಕ್ಕಿ ಹೊಡೆಯುವುದನ್ನು ತಡೆಯುತ್ತದೆ, ಗಂಭೀರ ಗಾಯಗಳಾಗುವುದನ್ನು ತಡೆಗಟ್ಟಿ, ಅಮೂಲ್ಯ ಜೀವವನ್ನು ರಕ್ಷಿಸುವಂತ ಕಾರ್ಯ ಮಾಡುತ್ತದೆ.
ಏರ್‌ಬ್ಯಾಗ್‌ಗಳಿಗೆ ಎಕ್ಸ್‌ಪೈರಿ ಡೇಟ್ ಇದ್ಯಾ?
ಸಾಮಾನ್ಯವಾಗಿ, ಆಧುನಿಕ ಕಾರುಗಳಲ್ಲಿ ನಿರ್ಮಿಸಲಾದ ಏರ್‌ಬ್ಯಾಗ್‌ಗಳು ಎಷ್ಟು ಬಲವಾಗಿರುತ್ತವೆ ಎಂದರೆ ಅವು ವಾಹನದ ಸಂಪೂರ್ಣ ಜೀವಿತಾವಧಿ ಅಂದರೆ 10 ರಿಂದ 15 ವರ್ಷಗಳವರೆಗೆ ಯಾವುದೇ ತೊಂದರೆಗಳಿಲ್ಲದೆ ಬಾಳಿಕೆ ಬರುತ್ತವೆ. 15 ವರ್ಷ ಬಾಳಿಕೆ ಬಂದರೂ ಸಹ ಇವುಗಳನ್ನು ಕಾಲಕಾಲಕ್ಕೆ ಪರೀಕ್ಷಿಸುತ್ತಿರಬೇಕು.
ತಜ್ಞರ ಪ್ರಕಾರ, ನಿಮ್ಮ ಕಾರಿನ ಏರ್‌ಬ್ಯಾಗ್‌ಗಳು ಮತ್ತು ಸಂವೇದಕಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ವೃತ್ತಿಪರ ಮೆಕ್ಯಾನಿಕ್‌ನಿಂದ ಸಂಪೂರ್ಣವಾಗಿ ಪರಿಶೀಲಿಸಬೇಕು. ಕಾರು ಸಣ್ಣ ಅಪಘಾತಕ್ಕೆ ಒಳಗಾಗಿದ್ದರೂ ಸಹ, ತಕ್ಷಣವೇ ಏರ್‌ಬ್ಯಾಗ್ ವ್ಯವಸ್ಥೆಯನ್ನು ಪರಿಶೀಲಿಸುವುದು ಬಹಳ ಮುಖ್ಯ.
ಇದನ್ನೂ ಓದಿ: ಈ ಸಿಂಪಲ್ ಟಿಪ್ಸ್ ಅನುಸರಿಸುವ ಮೂಲಕ ಫ್ರೀಜರ್‌ನಲ್ಲಿ ಅತಿಯಾಗಿ ಐಸ್ ಕಟ್ಟಿಕೊಳ್ಳುವುದನ್ನು ತಡೆಯಬಹುದು
ಸುರಕ್ಷತೆಗಾಗಿ ಏನು ಮಾಡಬೇಕು?
- ಕಾರ್ ಡ್ಯಾಶ್‌ಬೋರ್ಡ್‌ನಲ್ಲಿ ಭಾರವಾದ ವಸ್ತುಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ ಮತ್ತು ಸಮಯಕ್ಕೆ ಸರಿಯಾಗಿ ಕಾರ್ ಕಂಪನಿಯ ಅಧಿಕೃತ ಕೇಂದ್ರದಲ್ಲಿ ಏರ್‌ಬ್ಯಾಗ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸುತ್ತಿರಿ.
- ತೇವಾಂಶ, ಬಲವಾದ ಸೂರ್ಯನ ಬೆಳಕು ಅಥವಾ ಇಲಿಗಳು ತಂತಿಗಳನ್ನು ಕತ್ತರಿಸುವುದರಿಂದ ಏರ್‌ಬ್ಯಾಗ್‌ನ ಕಾರ್ಯನಿರ್ವಹಣೆ ವ್ಯವಸ್ಥೆ ದುರ್ಬಲಗೊಳ್ಳಬಹುದು. ಡ್ಯಾಶ್‌ಬೋರ್ಡ್ ಬಳಿ ನಿರಂತರವಾಗಿ ಏರ್‌ಬ್ಯಾಗ್ ಲೈಟ್ ಸೆನ್ಸರ್ ಉರಿಯುತ್ತಿದ್ದರೆ ಏರ್ ಬ್ಯಾಗ್ ವೈರಿಂಗ್‌ನಲ್ಲಿ ಇಂತಹ ತಾಂತ್ರಿಕ ದೋಷವಿದೆ ಎಂದು ಸೂಚಿಸುತ್ತದೆ. ನಿಮ್ಮ ಕಾರ್‌ನಲ್ಲೂ ಈ ರೀತಿಯ ಸೂಚನೆಗಳು ಕಂಡುಬಂದರೆ ತಕ್ಷಣವೇ ಏರ್‌ಬ್ಯಾಗ್ ವ್ಯವಸ್ಥೆಯನ್ನು ಪರಿಶೀಲಿಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




