ತೂಕ ಇಳಿಕೆ ಸೇರಿ ಸೋರೆಕಾಯಿಯಿಂದ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಒತ್ತಡದಲ್ಲಿ ಬದುಕುತ್ತಾರೆ. ಇದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ ಎಂದರೂ ತಪ್ಪಾಗಲಾರದು. ಆದರೆ, ಸೋರೆಕಾಯಿ ಸೇವನೆಯಿಂದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ತೂಕ ಇಳಿಕೆ ಸೇರಿ ಸೋರೆಕಾಯಿಯಿಂದ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ
ಸೋರೆಕಾಯಿ
Follow us
TV9 Web
| Updated By: ನಯನಾ ರಾಜೀವ್

Updated on: May 06, 2022 | 12:18 PM

ಸೋರೆಕಾಯಿ(Bottle Gourd)ಯನ್ನು ಯಾವಾಗಲೂ ಆರೋಗ್ಯಕರ ಸಸ್ಯಾಹಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಬಹುಮುಖ ತರಕಾರಿ ಸುಮಾರು 92% ರಷ್ಟು ನೀರು ಮತ್ತು ಖನಿಜಗಳಿಂದ ಕೂಡಿದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಕೆ ಮತ್ತು ಕ್ಯಾಲ್ಸಿಯಂ ಸಮೃದ್ಧ ವಾಗಿರುವುದನ್ನು ಕಾಣಬಹುದು. ಸೋರೆಕಾಯಿ ಅಧಿಕ ನೀರಿನಂಶ ಹೊಂದಿರುವ ತರಕಾರಿ ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಯಾಗಿದೆ. ಕೆಲವು ನಿರ್ಧಿಷ್ಟ ಕಾಯಿಲೆಗಳನ್ನು ಹೋಗಲಾಡಿಸಲು ಸೋರೆಕಾಯಿಯನ್ನು ಮದ್ದಾಗಿ ಉಪಯೋಗಿಸುತ್ತಾರೆ.ಆದರೆ ನಿಸರ್ಗದಿಂದ ಬಂದ ಈ ಉಡುಗೊರೆಗಳಿಂದ ನಮಗೆ ಸಿಗುವ ಆರೋಗ್ಯದ ಲಾಭಗಳು ಅಪಾರ ಪ್ರಮಾಣದಲ್ಲಿರುತ್ತವೆ. ಅದ್ರಲ್ಲೂ ಸೋರೆಕಾಯಿ (Bottle Gourd) ಎಂಬ ತರಕಾರಿ ದೇಹದ ಆರೋಗ್ಯಕ್ಕೆ ಅಮೃತ ಇದ್ದಂತೆ.

ರಿಬೊಫ್ಲಾವಿನ್, ಸತು, ಥೈಮೆನ್, ವಿಟಮಿನ್ ಎ, ಸಿ, ಫಾಲಟೆ, ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿನಾಂಶ, ವಿಟಮಿನ್ ಬಿ6, ಪೊಟಾಶಿಯಂ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳಿಂದ ಇದು ಸಮೃದ್ಧವಾಗಿದೆ. ಇಷ್ಟೇ ಅಲ್ಲದೆ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಆರೋಗ್ಯ(Health)ಕ್ಕೆ ಹಣ್ಣುಗಳು ಮತ್ತು ತರಕಾರಿಗಳ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂದರೆ ನಾವು ಅವುಗಳನ್ನು ಊಹಿಸಲು ಕೂಡ ಸಾಧ್ಯವಾಗುವುದಿಲ್ಲ. ನಮಗೆ ಗೊತ್ತಿಲ್ಲದೆ ನಾವು ಇಂದು ನೆಪ ಮಾತ್ರಕ್ಕೆ ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನಬೇಕಲ್ಲ ಎಂದು ತಿನ್ನುತ್ತಿದ್ದೇವೆ.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದರಿಂದ ಈ ರಸವು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಸೋರೆಕಾಯಿಯ ಪ್ರಯೋಜನಗಳು: ಬೇಸಿಗೆಯಲ್ಲಿ ಸೋರೆಕಾಯಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ತೂಕವನ್ನು ಕಡಿಮೆ ಮಾಡುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸೋರೆಕಾಯಿ ಪರಿಹಾರ ನೀಡಲಿದೆ.

ಇದಲ್ಲದೇ ಬೇಸಿಗೆ ಕಾಲದಲ್ಲಿ ಸೋರೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬಹುದು. ಎದೆಯುರಿ, ದೇಹದಲ್ಲಿ ನೀರಿನ ಕೊರತೆ, ಶಾಖದಿಂದ ತಲೆಸುತ್ತು, ಉಸಿರಾಟದ ತೊಂದರೆ ಇಂತಹ ಹಲವು ಸಮಸ್ಯೆಗಳಿಂದ ಸೋರೆಕಾಯಿ ಕಾಪಾಡುತ್ತದೆ.

ಸೋರೆಕಾಯಿಯ 5  ಪ್ರಯೋಜನಗಳನ್ನು ತಿಳಿಯಿರಿ: -ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ: ಸೋರೆಕಾಯಿ ತಿನ್ನುವುದರಿಂದ ಹೃದಯಾಘಾತದ ಅಪಾಯವೂ ಕಡಿಮೆಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಸಮತೋಲನದಲ್ಲಿರುತ್ತದೆ. ಇದಲ್ಲದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

-ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆಯಲ್ಲೂ ನೀವು ಪ್ರಯೋಜನವನ್ನು ಪಡೆಯಬಹುದು. ನಿತ್ಯ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿದರೆ ಕೂದಲು ಬೆಳೆಯುವುದರ ಜೊತೆಗೆ ಅದು ಬಿಳಿಯಾಗುವುದನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.

ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ: ಸೋರೆಕಾಯಿ ತೂಕವನ್ನು ಕಡಿಮೆ ಮಾಡಲು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಬಾಟಲ್ ಸೋರೆಕಾಯಿಯಲ್ಲಿ ವಿಟಮಿನ್-ಸಿ, ಸೋಡಿಯಂ, ಫೈಬರ್ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಇದರ ಸೇವನೆಯಿಂದ ನಿಮ್ಮ ತೂಕವನ್ನು ಆರೋಗ್ಯಕವಾಗಿ ಕಡಿಮೆ ಮಾಡಬಹುದು.

-ಮೂಳೆಗಳು ಸಹ ಬಲವಾಗಿರುತ್ತವೆ: ಸೋರೆಕಾಯಿಯನ್ನು ತಿನ್ನುವುದು ಮೂಳೆಗಳನ್ನು ಬಲಪಡಿಸುತ್ತದೆ. ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಪೋಷಕಾಂಶಗಳು ಕಂಡುಬರುತ್ತವೆ, ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ.

-ಒತ್ತಡವೂ ಕಡಿಮೆ : ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಒತ್ತಡದಲ್ಲಿ ಬದುಕುತ್ತಾರೆ. ಇದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ ಎಂದರೂ ತಪ್ಪಾಗಲಾರದು. ಆದರೆ, ಸೋರೆಕಾಯಿ ಸೇವನೆಯಿಂದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯರ ಸಲಹೆ ಪಡೆಯಿರಿ.

ಜೀವನಶೈಲಿ ಹಾಗೂ ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ