Leap Year: ಅಧಿಕ ವರ್ಷಗಳು ಇಲ್ಲದಿದ್ದರೆ ಏನಾಗುತ್ತಿತ್ತು ಗೊತ್ತಾ?

ಭೂಮಿ​ ಸೂರ್ಯ​ನ​ನ್ನು ಒಂದು ಸುತ್ತು ಸುತ್ತಲು ಅಂದಾಜು 365.242189 ದಿನ ಅಥವಾ 365 ದಿನ 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡುಗಳು ಬೇಕು. ಹಾಗಾಗಿ ವರ್ಷ​ದಲ್ಲಿ 365 ದಿನ​ಗ​ಳಿವೆ. ಇನ್ನುಳಿದ 0.242 ದಿನ​ವನ್ನು ಸೇರಿಸಿ 4 ವರ್ಷ​ಕ್ಕೊಮ್ಮೆ ಒಂದು ಪೂರ್ಣ ದಿನ​ವೆಂದು ಪರಿ​ಗ​ಣಿಸಲಾಗುತ್ತದೆ. ಆ ವರ್ಷ​ವನ್ನು ಅಧಿಕ ವರ್ಷ ಎಂದು ಕರೆಯಲಾಗುತ್ತದೆ.

Leap Year: ಅಧಿಕ ವರ್ಷಗಳು ಇಲ್ಲದಿದ್ದರೆ ಏನಾಗುತ್ತಿತ್ತು ಗೊತ್ತಾ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 28, 2024 | 4:24 PM

ವರ್ಷಕ್ಕೆ 365 ದಿನ, ಆದರೆ ಈ ಅಧಿಕ ವರ್ಷ​ದಲ್ಲಿ 366 ದಿನ ಏಕೆ ಎಂಬ ಪ್ರಶ್ನೆ ಮೂಡು​ವುದು ಸಹಜ. ಈ ಲೀಪ್ ವರ್ಷಗಳು, ಸೂರ್ಯನ ಸುತ್ತ ಭೂಮಿಯ ಚಲನೆಯೊಂದಿಗೆ, ಕ್ಯಾಲೆಂಡರ್ ಲೆಕ್ಕಾಚಾರವನ್ನು ಸರಿ ಹೊಂದಿಸಲು ಸಹಾಯ ಮಾಡುತ್ತದೆ. ಭೂಮಿ ಗಂಟೆಗೆ 800 ಕಿ.ಮೀ ವೇಗ​ದಲ್ಲಿ ಗೋಲಾ​ಕಾ​ರ​ದಲ್ಲಿ ಸುತ್ತು​ತ್ತಿ​ರು​ತ್ತದೆ. ತನ್ನ ಪಥ​ದಲ್ಲಿ ಸತ್ತು​ತ್ತಲೇ ಸೂರ್ಯ​ನನ್ನೂ ಸುತ್ತು​ತ್ತಿ​ರು​ತ್ತದೆ. ಭೂಮಿ​ ಸೂರ್ಯ​ನ​ನ್ನು ಒಂದು ಸುತ್ತು ಸುತ್ತಲು ಅಂದಾಜು 365.242189 ದಿನ ಅಥವಾ 365 ದಿನ 5 ಗಂಟೆ, 48 ನಿಮಿಷ ಮತ್ತು 45 ಸೆಕೆಂಡುಗಳು ಬೇಕು. ಹಾಗಾಗಿ ವರ್ಷ​ದಲ್ಲಿ 365 ದಿನ​ಗ​ಳಿವೆ. ಇನ್ನುಳಿದ 0.242 ದಿನ​ವನ್ನು ಸೇರಿಸಿ 4 ವರ್ಷ​ಕ್ಕೊಮ್ಮೆ ಒಂದು ಪೂರ್ಣ ದಿನ​ವೆಂದು ಪರಿ​ಗ​ಣಿಸಲಾಗುತ್ತದೆ. ಆ ವರ್ಷ​ವನ್ನು ಅಧಿಕ ವರ್ಷ ಎಂದು ಕರೆಯಲಾಗುತ್ತದೆ.

ಅಧಿಕ ವರ್ಷ ಇಲ್ಲದೇ ಹೋದರೆ ಕ್ಯಾಲೆಂಡರ್‌ನಲ್ಲಿ ಪ್ರತಿ ವರ್ಷ 5 ಗಂಟೆ, 48 ನಿಮಿಷ, 45 ಸೆಕೆಂಡ್‌ ತಪ್ಪಿ ​ಹೋ​ಗು​ತ್ತ​ದೆ. ಆಗ ನಾವು ಪ್ರತಿ ವರ್ಷ ಸೌರ ಮಂಡಲದ ಕಾಲಮಾನಕ್ಕಿಂತ 6 ಗಂಟೆ ಮತ್ತು 10 ವರ್ಷಗಳ ಬಳಿಕ 25 ದಿನ ಮುಂದೆ ಹೋಗುತ್ತೇವೆ. ಆಗ ಹವಾಮಾನ ಬದಲಾವಣೆಯ ಕುರಿತು ನಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಅಧಿಕ ವರ್ಷ ಆಚರಿಸುವುದು ಅನಿವಾರ್ಯ.

ಅಧಿಕ ವರ್ಷದ ಇತಿಹಾಸ;

ಕ್ರಿ.ಪೂ. 45 ರಲ್ಲಿ ರೋಮ್‌ ಸಾಮ್ರಾಜ್ಯದ ಚಕ್ರವರ್ತಿ ಜ್ಯೂಲಿಯಸ್‌ ಸೀಸರ್‌, ಈಜಿಪ್ಟಿನಲ್ಲಿ ಆತನೇ ಅಭಿವೃದ್ಧಿ ಪಡಿಸಿದ ಕ್ಯಾಲೆಂಡರ್ ಜಾರಿಗೆ ತಂದ. ಆದರೆ ಆತನ ಲೆಕ್ಕಾಚಾರಗಳಲ್ಲಿ ಅಧಿಕ ವರ್ಷವನ್ನು ಗುರುತಿಸುವಿಕೆ ಕಷ್ಟವಾಗುತ್ತಿತ್ತು. ಆ ಸಂದರ್ಭದಲ್ಲಿ ಅಂದರೆ 1500ರ ಸುಮಾರಿಗೆ ಗ್ರೆಗೊರಿಯನ್‌ ಕ್ಯಾಲೆಂಡರ್‌ನ್ನು ಸಿದ್ಧಪಡಿಸುವ ಮೂಲಕ ಈ ಲೆಕ್ಕಾಚಾರವನ್ನು ಸರಿಪಡಿಸಲಾಯಿತು. ಬಳಿಕ ಪೋಪ್ ಗ್ರೆಗೊರಿ XIII ಹೊಸ ಕ್ಯಾಲೆಂಡರ್ ವ್ಯವಸ್ಥೆಯನ್ನು ಬಳಸಿದರು ಜೊತೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ವರ್ಷ ಎಂಬುದನ್ನು ಕೂಡ ಬಳಸಿಕೊಂಡರು ಆದರೆ ಒಂದು ವಿನಾಯಿತಿಯನ್ನು ಹೊರತುಪಡಿಸಿ ಅದೇನೆಂದರೆ ಪ್ರತಿ ವರ್ಷದಲ್ಲಿ 365.242 ದಿನಗಳಿರುತ್ತವೆ. ಆದರೆ ಇದನ್ನು ಪೂರ್ಣ ಪ್ರಮಾಣವಾಗಿ ಮಾಡಿ 365.25 ಎಂದು ಪರಿಗಣಿಸಿ ಅಧಿಕ ವರ್ಷ ಎಂದು ನಿರ್ಧಾರ ಮಾಡಲಾಗುತ್ತದೆ. ಆದರೆ ವಾಸ್ತವ ಮಾಪನದ ಪ್ರಕಾರ ಈ ಬದಲಾವಣೆಯಿಂದ ಭೂಮಿಯ ಪಯಣದ 11 ನಿಮಿಷ ವ್ಯತ್ಯಾಸವನ್ನು ಕೈಬಿಟ್ಟದಂತಾಗುತ್ತದೆ. ಅದೇ ಕಾರಣಕ್ಕೆ ಪ್ರತಿ 400 ವರ್ಷಗಳಲ್ಲಿ ಮೂರು ಸಲ ಅಧಿಕ ವರ್ಷವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಹೀಗಾಗಿ 100ರಿಂದ ಭಾಗವಾಗುವ ವರ್ಷಗಳು 400 ರಿಂದಲೂ ಭಾಗವಾದರೆ ಅದೂ ಅಧಿಕವರ್ಷ. ಉಳಿದಂತೆ 100ರಿಂದ ಭಾಗವಾಗುವವು, ಅಧಿಕ ವರ್ಷ ಅಲ್ಲ.

ಇದನ್ನೂ ಓದಿ: ಮಾರ್ಚ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ

ಲೀಪ್ ಇಯರ್ ಇಲ್ಲದಿದ್ದರೆ ಏನಾಗುತ್ತಿತ್ತು?

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಲೀಪ್ ಇಯರ್ ಅಥವಾ ಅಧಿಕ ವರ್ಷ ಬರದಿದ್ದರೆ, ನಾವು ಪ್ರತಿ ವರ್ಷ ಸೌರ ಮಂಡಲದ ಕಾಲಮಾನಕ್ಕಿಂತ ಮುಂದೆ ಹೋಗುತ್ತೇವೆ. ಆಗ ಹವಾಮಾನ ಬದಲಾವಣೆಯ ಕುರಿತು ನಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ ಜೊತೆಗೆ ಶತಮಾನಗಳಿಂದ ಸರಿಯಾಗಿ ಬರುವ ಹಬ್ಬ ಹರಿದಿನಗಳಲ್ಲಿಯೂ ವ್ಯತ್ಯಾಸ ಉಂಟಾಗುತ್ತದೆ. ಕ್ಯಾಲೆಂಡರ್ ನಲ್ಲಿ ಬೇಸಿಗೆ ತೋರಿಸುವಾಗ ಚಳಿಗಾಲ ಮುಗಿಯದಿರಬಹುದು. ಇನ್ನು, ಅನ್ನ ನೀಡುವ ರೈತರು ಕೂಡ ಹವಾಮಾನ ಬದಲಾವಣೆಯ ವಿಷಯವಾಗಿ ಗೊಂದಲಕ್ಕೊಳಗಾಗಬಹುದು. ಯಾವಾಗ ಬಿತ್ತನೆ ಮಾಡಬೇಕು, ಯಾವ ಸಮಯದಲ್ಲಿ ಕೊಯ್ಲು ಎಂಬುವುದರಲ್ಲಿ ಏರಿಳಿತ ಉಂಟಾಗಬಹುದು. ಹಾಗಾಗಿ ಲೀಪ್ ಇಯರ್ ಹಾಗೂ ಗ್ರೆಗೊರಿಯನ್‌ ಕ್ಯಾಲೆಂಡರ್‌ನಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಹೆಚ್ಚುವರಿ ದಿನವನ್ನು ಸೇರಿಸುವ ಲೆಕ್ಕಾಚಾರ ಸರಿಯಾಗಿದೆ ಎಂದು ಹೇಳಬಹುದು. ಇದರಿಂದ ಸೌರ ಮಂಡಲದ ಕಾಲಮಾನಕ್ಕೆ ತಕ್ಕಂತೆ ನಾವು ಸಾಗಬಹುದು.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ