AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಸ್ತುಗಳನ್ನು ಬೆರೆಸಿದ ನೀರಿನಲ್ಲಿ ನೆಲ ಒರೆಸುವುದರಿಂದ ಜಿರಳೆ, ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು‌

ಸೊಳ್ಳೆಗಳು ಮಾತ್ರವಲ್ಲ ಜಿರಳೆ, ಹಲ್ಲಿಗಳ ಕಾಟವೂ ಪ್ರತಿ ಮನೆಯಲ್ಲೂ ಇದ್ದೇ ಇರುತ್ತವೆ. ಇವು ಆಹಾರವನ್ನು ಕಲುಷಿತಗೊಳಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಹಾಗಾಗಿ ಇವುಗಳನ್ನು ತೊಡೆದುಹಾಕಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಇವು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ. ಆದ್ದರಿಂದ ಈ ಕೆಲವೊಂದು ವಸ್ತುಗಳನ್ನು ನೀರಿಗೆ ಬೆರೆಸಿ, ಆ ನೀರಿನಲ್ಲಿ ನೆಲ ಒರೆಸುವ ಮೂಲಕ ನೈಸರ್ಗಿಕವಾಗಿ ಹಲ್ಲಿ, ಜಿರಳೆಗಳನ್ನು ತೊಡೆದುಹಾಕಬಹುದು.

ಈ ವಸ್ತುಗಳನ್ನು ಬೆರೆಸಿದ ನೀರಿನಲ್ಲಿ ನೆಲ ಒರೆಸುವುದರಿಂದ ಜಿರಳೆ, ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು‌
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Jun 17, 2026 | 5:52 PM

Share

ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಕೊಳಕು ಮತ್ತು ಧೂಳು ಮಾತ್ರವಲ್ಲ ಹಲ್ಲಿ, ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಹಲ್ಲಿಗಳು (lizards) ಮತ್ತು ಜಿರಳೆಗಳ ಕಾಟ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇದ್ದೇ ಇರುತ್ತವೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಉತ್ಪನ್ನಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಈ ಉತ್ಪನ್ನಗಳು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ. ಆದ್ದರಿಂದ, ಪ್ರತಿನಿತ್ಯ ನೆಲ ಒರೆಸುವಾಗ ಆ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಬೆರೆಸಿ, ಆ ನೀರಿನಲ್ಲಿ ನೆಲವನ್ನು ಒರೆಸಿ.  ಇದು ನಿಮ್ಮ ಮನೆಯನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲದೆ ಹಲ್ಲಿಗಳು ಮತ್ತು ಜಿರಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮನೆಯಿಂದ ಕೀಟಗಳನ್ನು ಓಡಿಸಲು ನೆಲ ಒರೆಸುವ ನೀರಿಗೆ ಏನು ಬೆರೆಸಬೇಕು?

ನಿಂಬೆ ರಸ: ಹಲ್ಲಿಗಳು ಮತ್ತು ಜಿರಳೆಗಳು ನಿಂಬೆಹಣ್ಣಿನಲ್ಲಿರುವ ಬಲವಾದ ಸಿಟ್ರಿಕ್ ಆಮ್ಲದ ವಾಸನೆಯನ್ನು ಇಷ್ಟಪಡುವುದಿಲ್ಲ. ಎರಡು ಚಮಚ ನಿಂಬೆ ರಸವನ್ನು ಒರೆಸುವ ನೀರಿನಲ್ಲಿ ಬೆರೆಸಿ ನೆಲವನ್ನು ಸ್ವಚ್ಛಗೊಳಿಸುವುದರಿಂದ ಮನೆಯೂ ತಾಜಾವಾಗಿರುತ್ತದೆ, ಕೀಟಗಳ ಕಾಟವೂ ಇರೋದಿಲ್ಲ.

ಪುದೀನಾ ಎಣ್ಣೆ: ಈ ಎಣ್ಣೆ ಅತ್ಯುತ್ತಮ ನೈಸರ್ಗಿಕ ಕೀಟ ನಿವಾರಕವಾಗಿದೆ. ಹಲ್ಲಿಗಳು ಮತ್ತು ಜಿರಳೆಗಳು ಇದರ ವಾಸನೆಯನ್ನು ಸಹಿಸುವುದಿಲ್ಲ. ನೆಲ ಒರೆಸುವ ನೀರಿಗೆ 8-10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ನೆಲ ಒರೆಸಿ, ಇದು ಕೂಡ ಹಲ್ಲಿ, ಜಿರಳೆ, ಕೀಟಗಳನ್ನು ದೂರವಿಡಲು ಸಹಕಾರಿ.

ಕರ್ಪೂರ: ಕರ್ಪೂರದ ಪರಿಮಳವು ಕೀಟಗಳು ಮತ್ತು ಹಲ್ಲಿಗಳು ಮನೆಯೊಳಗೆ ಬರುವುದನ್ನು ತಡೆಯುತ್ತದೆ. ಅದಕ್ಕಾಗಿ ಕರ್ಪೂರ ಬೆರೆಸಿದ ನೀರಿನಲ್ಲಿ ನೆಲ ಒರೆಸಿ.

ವಿನೆಗರ್: ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜಿರಳೆಗಳು ಅದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಮಾಪ್ ನೀರಿಗೆ ಅರ್ಧ ಕಪ್ ವಿನೆಗರ್ ಸೇರಿಸುವುದರಿಂದ ಹಲ್ಲಿಗಳು ಮತ್ತು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಬೇವಿನ ಎಣ್ಣೆ:  ಬೇವಿನ ಎಣ್ಣೆ ನೈಸರ್ಗಿಕ ಕೀಟ ನಿವಾರಕವಾಗಿದೆ. ನೀರಿಗೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಜಿರಳೆಗಳು ಮತ್ತು ಇತರ ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ: ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ

ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆಯ ಪರಿಮಳವು ಹಲ್ಲಿಗಳು ಮತ್ತು ಜಿರಳೆಗಳಿಗೆ ಇಷ್ಟವಾಗುವುದಿಲ್ಲ. 10-12 ಹನಿಗಳನ್ನು ನೀರಿನೊಂದಿಗೆ ಬೆರೆಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಮನೆ ತಾಜಾವಾಗಿರುತ್ತದೆ ಮತ್ತು ಕೀಟಗಳ ಕಾಟವೂ ಇರೋದಿಲ್ಲ.

ಅರಿಶಿನ: ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ನೆಲ ಒರೆಸುವ ನೀರಿಗೆ ಸ್ವಲ್ಪ ಅರಿಶಿನವನ್ನು ಸೇರಿಸುವುದರಿಂದ ನಿಮ್ಮ ಮನೆ ಸ್ವಚ್ಛವಾಗಿರುವುದಲ್ಲದೆ ಮತ್ತು ಹಲ್ಲಿ, ಕೀಟಗಳ ಕಾಟವೂ ಇರೋದಿಲ್ಲ.

ಕಲ್ಲು ಉಪ್ಪು: ಕಲ್ಲು ಉಪ್ಪು ಹಲ್ಲಿಗಳು ಮತ್ತು ಜಿರಳೆಗಳು ಇಷ್ಟಪಡದ ಬಲವಾದ ವಾಸನೆಯನ್ನು ಹೊಂದಿರುತ್ತದೆ. ಇದು ಅವುಗಳ ವಾಸನೆಯ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಆ ಪ್ರದೇಶದಿಂದ ದೂರವಿರುವಂತೆ ಮಾಡುತ್ತದೆ. ಹಾಗಾಗಿ ನೆಲ ಒರೆಸುವ ನೀರಿಗೆ ಕಲ್ಲು ಉಪ್ಪು ಸೇರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?"
'ಗ್ಯಾರಂಟಿಯಲ್ಲಿ ಅಕ್ರಮವಾಗಿದೆ ಎಂದಾದರೆ ಅನುಷ್ಠಾನ ಸಮಿತಿ ಏನ್ಮಾಡ್ತಿತ್ತು?