ದೈನಂದಿನ ಆಹಾರದಲ್ಲಿ ಹೆಚ್ಚು ಪ್ರೋಟೀನ್ ಸೇರಿಸಿಕೊಳ್ಳಲು ಹೆಣಗಾಡುತ್ತಿದ್ದೀರಾ? ಸ್ಮಾರ್ಟ್ ಆಹಾರ ಆಯ್ಕೆಗಳ ಬಗ್ಗೆ ಪೌಷ್ಟಿಕಾಂಶ ತಜ್ಞರು ಹೇಳುವುದೇನು?
ಆರೋಗ್ಯಯುತವಾಗಿರಲು ಸೇವಿಸುವ ಆಹಾರವು ಅಷ್ಟೇ ಮುಖ್ಯ ಪಾತ್ರವಹಿಸುತ್ತದೆ. ಅದರಲ್ಲಿಯೂ ಆಹಾರದಲ್ಲಿ ಪ್ರೋಟೀನ್ ಸೇರಿಕೊಳ್ಳುವುದು ಅತ್ಯಗತ್ಯ. ಪ್ರೋಟೀನ್ ಭರಿತ ಆಹಾರ ಸೇವನೆಯೂ ಸ್ನಾಯುಗಳ ಬೆಳವಣಿಗೆಗೆ, ಕೀಲುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪ್ರೋಟೀನ್ ಸೇರಿಸಿಕೊಳ್ಳಲು ಪೌಷ್ಟಿಕಾಂಶ ತಜ್ಞ ಸ್ಮಾರ್ಟ್ ಆಹಾರ ಆಯ್ಕೆಗಳ ಕುರಿತಾದ ಸಲಹೆ ನೀಡಿದ್ದು, ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ದೇಹಕ್ಕೆ ನೀರು ಮತ್ತು ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ಪ್ರೋಟೀನ್ (Protein). ದೇಹದ ಜೀವಕೋಶಗಳು, ಅಂಗಾಂಶಗಳು ಮತ್ತು ಸ್ನಾಯುಗಳ ನಿರ್ಮಾಣ ಮತ್ತು ದುರಸ್ತಿಗೆ ಇದು ಅತ್ಯಗತ್ಯವಾಗಿದೆ. ಹೀಗಾಗಿ ಫಿಟ್‌ನೆಸ್ (Fitness), ಡಯಟ್ (Diet), ತೂಕ ಇಳಿಕೆ (Weight Loss) ಮಾಡುವವರಿಗೆ ಹೆಚ್ಚೆಚ್ಚು ಪ್ರೋಟೀನ್ ಭರಿತ ಆಹಾರ ಸೇವಿಸಿ ಎನ್ನುವ ಸಲಹೆಗಳನ್ನು ನೀಡುತ್ತಾರೆ. ಹೀಗಾಗಿ ಕೆಲವರು ಪ್ರೋಟೀನ್ ಪೌಡರ್ (Protein Powder) ಗಳನ್ನು ಸೇವನೆ ಮಾಡುವುದನ್ನು ನೋಡಿರಬಹುದು. ಆದರೆ ಆಹಾರ ಪದ್ಧತಿಯಲ್ಲಿ ಈ ಕೆಲವು ಆಹಾರವನ್ನು ಹೆಚ್ಚು ಸೇವಿಸುವ ಮೂಲಕ ದೇಹಕ್ಕೆ ಬೇಕಾಗುವ ಪ್ರೋಟೀನ್ ಪಡೆಯಬಹುದಾಗಿದೆ. ಪೌಷ್ಟಿಕತಜ್ಞೆ ಶಾಲಿನಿ ಸುಧಾಕರ್ (Nutritionist Shalini Sudhakar) ಇನ್‌ಸ್ಟಾಗ್ರಾಮ್ (Instagram) ನಲ್ಲಿ ದೇಹಕ್ಕೆ ಬೇಕಾಗುವ ಪ್ರೋಟೀನ್ ಯಾವೆಲ್ಲಾ ಆಹಾರದಲ್ಲಿ ಹೆಚ್ಚು ಲಭ್ಯವಿದೆ? ಸ್ಮಾರ್ಟ್ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸಲಹೆ ನೀಡಿದ್ದಾರೆ.
View this post on Instagram
ಪೌಷ್ಟಿಕಾಂಶ ತಜ್ಞೆ ಹೇಳುವಂತೆ ಆಹಾರ ಕ್ರಮ ಹೀಗಿರಲಿ
- ಮೊಸರಿನ ಬದಲಿಗೆ ಗ್ರೀಕ್ ಮೊಸರು ಸೇವಿಸಿ : ಹೆಚ್ಚಿನ ಭಾರತೀಯರು ತಮ್ಮ ಊಟದಲ್ಲಿ ಸೈಡ್ ಡಿಶ್ ಆಗಿ ಮೊಸರನ್ನು ಸೇರಿಸಿಕೊಳ್ಳುತ್ತಾರೆ. ಆದರೆ ಮೊಸರನ್ನು ಪ್ರೋಟೀನ್-ಭರಿತ ಆಹಾರವಾಗಿ ಬದಲಾಯಿಸಬಹುದು. ಮೊಸರಿನಲ್ಲಿ ಕೇವಲ ಮೂರು ಗ್ರಾಂ ಪ್ರೋಟೀನ್ ಹೊಂದಿದ್ದು, ಗ್ರೀಕ್ ಮೊಸರಿನಲ್ಲಿ ಹನ್ನೆರಡು ಗ್ರಾಂ ನಷ್ಟು ಪ್ರೋಟೀನ್ ಇದ್ದು ಒಬ್ಬರ ನಿಯಮಿತ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ ಎಂದಿದ್ದಾರೆ ತಜ್ಞರು.
- ಗೋಧಿ ಹಿಟ್ಟಿಗೆ ಸೋಯಾ ಹಿಟ್ಟು ಸೇರಿಸಿ: ಸಾಮಾನ್ಯವಾಗಿ ಚಪಾತಿ ಮಾಡುವಾಗ ಗೋಧಿ ಹಿಟ್ಟನ್ನು ಬಳಸುತ್ತೇವೆ. ಆದರೆ ಗೋಧಿ ಹಿಟ್ಟಿಗೆ ಸೋಯಾ ಹಿಟ್ಟನ್ನು ಸೇರಿಸಿ ಎನ್ನುವ ಸಲಹೆ ನೀಡಿದ್ದಾರೆ. ಗೋಧಿ ಹಿಟ್ಟಿನಲ್ಲಿ 3 ಗ್ರಾಂ ಪ್ರೋಟೀನ್ ಇರುತ್ತದೆ. ಆದರೆ ಸೋಯಾ ಹಿಟ್ಟು ಸೇರಿಸಿದರೆ ಒಂದು ಚಪಾತಿಯಲ್ಲಿ 10 ಗ್ರಾಂ ನಷ್ಟು ಪ್ರೋಟೀನ್ ಸಿಗುತ್ತದೆ. ಕೆಲವರ ಮನೆಯಲ್ಲಿ ಚಪಾತಿಯೂ ಪ್ರಮುಖ ಆಹಾರವಾಗಿದ್ದು, ಹಿಟ್ಟಿನಲ್ಲಿ ಸಣ್ಣ ಬದಲಾವಣೆಯೂ ದೇಹಕ್ಕೆ ಬೇಕಾದ ಹೆಚ್ಚು ಪ್ರೋಟೀನ್ ನೀಡುತ್ತದೆ ಎಂದು ಪೌಷ್ಟಿಕಾಂಶ ತಜ್ಞೆ ತಿಳಿಸಿದ್ದಾರೆ.
- ಎರಡು ಲೋಟ ನೀರಿಗೆ ಚಿಯಾ ಬೀಜ ಬೆರೆಸಿ ಕುಡಿಯಿರಿ : ದೇಹಕ್ಕೆ ನೀರು ಅತ್ಯಗತ್ಯವಾಗಿ ಬೇಕು. ಇದು ದೇಹವು ಹೈಡ್ರೇಟ್ ಆಗುವುದನ್ನು ತಪ್ಪಿಸುತ್ತದೆ. ಹೀಗಾಗಿ ದಿನನಿತ್ಯ ಕುಡಿಯುವ ನೀರಿಗೆ ಚಿಯಾ ಬೀಜಗಳನ್ನು ಸೇರಿಸುವ ಮೂಲಕ ಹೆಚ್ಚು ಪೌಷ್ಟಿಕಾಂಶಯುಕ್ತವಾಗಿಸಬಹುದು. ಚಿಯಾ ಬೀಜ ಬೆರೆಸಿ ಕನಿಷ್ಠ ಎರಡು ಗ್ಲಾಸ್ ನೀರು ಕುಡಿಯಿರಿ. ಇದು ದೇಹಕ್ಕೆ 10 ಗ್ರಾಂ ಪ್ರೋಟೀನ್ ಮತ್ತು ಹೆಚ್ಚುವರಿ ಎಂಟು ಗ್ರಾಂ ಫೈಬರ್ ಒದಗಿಸುತ್ತದೆ. ಉರಿಯೂತ ನಿವಾರಕವಾಗಿ ಕಾರ್ಯ ನಿರ್ವಹಿಸುವುದಲ್ಲದೇ, ಚರ್ಮ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ” ಎಂದು ವಿವರಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ