
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದರೆ ಈ ಮಕ್ಕಳಿಗೆ ಶಿಕ್ಷಣದ ಜತೆಗೆ ಸರಿಯಾದ ಮಾರ್ಗದರ್ಶನ ನೀಡಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುವವರೇ ಈ ಶಿಕ್ಷಕರು. ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಶಿಕ್ಷಕರ ಪಾತ್ರವು ಬಹುದೊಡ್ಡದು. ಶಿಕ್ಷಕರಿಗೆ ಗೌರವ ಸಲ್ಲಿಸಲುವ ಸಲುವಾಗಿ ನಮ್ಮ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆಯನ್ನು (Teachers’ Day) ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನಿಮ್ಮ ಪ್ರೀತಿಯ ಶಿಕ್ಷಕರಿಗೆ ವಿವಿಧ ಗಿಫ್ಟ್‌ಗಳನ್ನು ನೀಡಿ ಶುಭಾಶಯಗಳನ್ನು ಕೋರಬಹುದು.
ರಾಧಕೃಷ್ಣನ್ ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಆಗಿದ್ದವರು. 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಅವರು 1962 ರಲ್ಲಿ ಭಾರತದ ಎರಡನೇಯ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಭಾರತದ ಅಧ್ಯಕ್ಷರಾದಾಗ, ಅವರ ಕೆಲವು ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ಬಯಸಿದರು. ಅವರು “ನನ್ನ ಜನ್ಮದಿನವನ್ನು ಆಚರಿಸಲು ಬದಲಾಗಿ 5 ಸೆಪ್ಟೆಂಬರ್ ನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಅದು ನನಗೆ ಹೆಮ್ಮೆಯಾಗುತ್ತದೆ” ಎಂದು ಉತ್ತರಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 , 1962 ರಲ್ಲಿ ಮೊದಲ ಬಾರಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಅಗಾಧವಾಗಿದ್ದು, ಅವರನ್ನು ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಶಾಲಾ ಕಾಲೇಜುಗಳಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಭಾರತದಲ್ಲಿ ಶಿಕ್ಷಕರ ದಿನಾಚರಣೆಯ ಸಲುವಾಗಿ ರಾಷ್ಟ್ರಪತಿಗಳಿಂದ ಪ್ರತಿಭಾನ್ವಿತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಫೋಟೋ ಫ್ರೇಮ್: ಗುರುಗಳಿಗೆ ಫೋಟೋ ಫ್ರೇಮ್ ಉಡುಗೊರೆಯಾಗಿ ನೀಡಬಹುದು. ಗುರುಗಳೊಂದಿಗೆ ನೀವು ತೆಗೆಸಿಕೊಂಡಿದ್ದ ಫೋಟೋಗಳಿದ್ದರೆ ಫ್ರೇಮ್ ಮಾಡಿಕೊಡಬಹುದು.
ಹೂವಿನ ಗಿಡ: ನಿಮ್ಮ ನೆಚ್ಚಿನ ಗುರುಗಳಿಗೆ ಹೂವಿನ ಗಿಡವನ್ನು ಗಿಫ್ಟ್ ಆಗಿ ನೀಡಬಹುದು. ಪ್ರತಿದಿನ ಗಿಡಕ್ಕೆ ನೀರು ಹಾಕಿ ಆರೈಕೆ ಮಾಡುವ ವೇಳೆ ಗುರುಗಳಿಗೆ ನಿಮ್ಮ ನೆನಪಾಗುತ್ತದೆ.
ಪೆನ್ ಮತ್ತು ಡೈರಿ: ಹೆಚ್ಚಿನ ಶಿಕ್ಷಕರಿಗೆ ಡೈರಿ ಬರೆಯುವ ಅಭ್ಯಾಸವಿರುತ್ತದೆ. ಹೀಗಾಗಿ ನೀವು ಉಡುಗೊರೆಯನ್ನು ಶಿಕ್ಷಕರಿಗೆ ನೀಡಬಹುದು. ಈ ಗಿಫ್ಟ್ ಯೋಚನೆ ಹಳೆಯದಾಗಿದ್ದರೂ, ಶಿಕ್ಷಕರಿಗೆ ಇಷ್ಟವಾಗುತ್ತದೆ.
ಪುಸ್ತಕ: ಶಿಕ್ಷಕರು ಪುಸ್ತಕ ಓದಲು ಇಷ್ಟ ಪಡುತ್ತಾರೆ. ಹೀಗಾಗಿ ನಿಮ್ಮ ಶಿಕ್ಷಕರಿಗೆ ಅವರ ನೆಚ್ಚಿನ ಲೇಖಕರ ಅಥವಾ ಉತ್ತಮ ಪುಸ್ತಕವನ್ನು ಉಡುಗೊರೆಯಾಗಿ ನೀಡಬಹುದು.
ಇದನ್ನೂ ಓದಿ: Krishna Janmashtami 2026: ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಈ ನೈವೇದ್ಯಗಳನ್ನು ಅರ್ಪಿಸಲೇಬೇಕು
ಗ್ರೀಟಿಂಗ್ ಕಾರ್ಡ್: ನೀವೇ ಸ್ವತಃ ತಯಾರಿಸಿದ ಕಾರ್ಡ್ ಮೇಲೆ ಗುರುಗಳ ಬಗ್ಗೆ ಕೃತಜ್ಞತೆಯ ಮಾತುಗಳನ್ನು ನಿಮ್ಮ ಕೈಯಾರೆ ಬರೆದು ಕೊಟ್ಟರೆ ಖುಷಿ ಪಡುತ್ತಾರೆ. ಇದು ಯಾವುದೇ ದುಬಾರಿ ಉಡುಗೊರೆಗಳಿಗಿಂತ ಕಡಿಮೆಯಿಲ್ಲ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ