AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ 7 ದಿನ 7 ಬಗೆಯ ಹಣ್ಣು: ಸೇಬಿನಿಂದ ಕಿವಿವರೆಗೆ ಯಾವ ದಿನ ಯಾವ ಹಣ್ಣು ತಿನ್ನಬೇಕು?

ಪ್ರತಿದಿನ ಒಂದೇ ಹಣ್ಣು ತಿನ್ನುವ ಬದಲು ವಿವಿಧ ಹಣ್ಣುಗಳನ್ನು ವಾರದ 7 ದಿನವೂ ಆಹಾರದ ಜೊತೆ ಸೇರಿಸಿಕೊಂಡು ಸೇವನೆ ಮಾಡುವುದು ಒಳ್ಳೆಯದು. ಇದರಿಂದ ದೇಹಕ್ಕೆ ಫೈಬರ್, ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ವಿಭಿನ್ನ ಪೋಷಕಾಂಶಗಳು ದೊರೆಯುತ್ತವೆ. ಹಾಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ದಿನ ಯಾವ ರೀತಿಯ ಹಣ್ಣುಗಳ ಸೇವನೆ ಮಾಡಬೇಕು, ಟೈಮ್ ಟೇಬಲ್ ಹೇಗಿದ್ದರೆ ಒಳ್ಳೆಯದು ತಿಳಿದುಕೊಳ್ಳಿ.

ವಾರದ 7 ದಿನ 7 ಬಗೆಯ ಹಣ್ಣು: ಸೇಬಿನಿಂದ ಕಿವಿವರೆಗೆ ಯಾವ ದಿನ ಯಾವ ಹಣ್ಣು ತಿನ್ನಬೇಕು?
Best Fruits For ImmunityImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 03, 2026 | 7:15 PM

Share

ಪ್ರತಿದಿನ ಒಂದೇ ಹಣ್ಣು ತಿನ್ನುವುದಕ್ಕಿಂತ ವಾರದಲ್ಲಿ ವಿವಿಧ ಬಗೆಯ ಹಣ್ಣುಗಳನ್ನು ಆಹಾರದ ಜೊತೆಯಲ್ಲಿ ಸೇವನೆ ಮಾಡುವುದರಿಂದ ದೇಹಕ್ಕೆ ವಿಭಿನ್ನ ವಿಟಮಿನ್‌, ಖನಿಜಗಳು, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೊರೆಯುತ್ತವೆ. ಯಾವುದೇ ಒಂದು ಹಣ್ಣು ರೋಗನಿರೋಧಕ ಶಕ್ತಿಯನ್ನು ಡಬಲ್ ಮಾಡುವುದಿಲ್ಲ. ಆದರೆ ಸಮತೋಲಿತ ಆಹಾರದ ಭಾಗವಾಗಿ ವಿವಿಧ ಹಣ್ಣುಗಳನ್ನು ಸೇವಿಸುವುದು ಒಟ್ಟಾರೆ ಆರೋಗ್ಯಕ್ಕೆ ಸಹಾಯಕವಾಗಬಹುದು. ಹಾಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಯಾವ ದಿನ ಯಾವ ರೀತಿಯ ಹಣ್ಣುಗಳ ಸೇವನೆ ಮಾಡಬೇಕು, ಟೈಮ್ ಟೇಬಲ್ ಹೇಗಿದ್ದರೆ ಒಳ್ಳೆಯದು ತಿಳಿದುಕೊಳ್ಳಿ.

ಸೋಮವಾರ: ಸೇಬು ಮತ್ತು ಬಾಳೆಹಣ್ಣು

ಸೇಬಿನಲ್ಲಿ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಇದ್ದರೆ, ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇವೆರಡನ್ನೂ ಬೆಳಗಿನ ಉಪಾಹಾರ ಅಥವಾ ಮಧ್ಯಾಹ್ನದ ಆರೋಗ್ಯಕರ ಸ್ನ್ಯಾಕ್ ಆಗಿ ಸೇವಿಸಬಹುದು.

ಮಂಗಳವಾರ: ಕಿತ್ತಳೆ ಮತ್ತು ಪಪ್ಪಾಯಿ

ಕಿತ್ತಳೆಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಪಪ್ಪಾಯಿಯಲ್ಲಿ ವಿಟಮಿನ್ ಎ ಸೇರಿದಂತೆ ಹಲವು ಪೋಷಕಾಂಶಗಳು ಮತ್ತು ಪಪೈನ್ ಎಂಬ ಎಂಜೈಮ್ ಇದೆ. ವೈವಿಧ್ಯಮಯ ಹಣ್ಣುಗಳ ಸೇವನೆಯಿಂದ ವಿವಿಧ ಪೋಷಕಾಂಶಗಳನ್ನು ಪಡೆಯಬಹುದು.

ಬುಧವಾರ: ದಾಳಿಂಬೆ ಮತ್ತು ಪೇರಳೆ

ದಾಳಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಇದ್ದರೆ, ಪೇರಳೆಯಲ್ಲಿ ಫೈಬರ್ ಮತ್ತು ವಿಟಮಿನ್ ಸಿ ದೊರೆಯುತ್ತದೆ. ಇವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು.

ಇದನ್ನೂ ಓದಿ: ವಿಚಿತ್ರ ವಾಸನೆಯ ನೋನಿ ಹಣ್ಣಿಗೆ ಇಷ್ಟೊಂದು ಆರೋಗ್ಯ ಪ್ರಯೋಜನಗಳಿವೆಯೇ? ಆರೋಗ್ಯ ತಜ್ಞರು ಹೇಳುವುದೇನು?

ಗುರುವಾರ: ಕಲ್ಲಂಗಡಿ ಮತ್ತು ಕಿವಿ

ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ದೇಹದ ದ್ರವಪೂರೈಕೆಗೆ ಸಹಾಯ ಮಾಡಬಹುದು. ಕಿವಿಯಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್ ಮತ್ತು ಪೊಟ್ಯಾಸಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ.

ಶುಕ್ರವಾರ: ದ್ರಾಕ್ಷಿ ಮತ್ತು ಅನಾನಸ್

ದ್ರಾಕ್ಷಿಯಲ್ಲಿ ವಿವಿಧ ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳಿದ್ದು, ಅನಾನಸ್‌ನಲ್ಲಿ ಬ್ರೊಮೆಲೈನ್ ಎಂಬ ಎಂಜೈಮ್ ಕಂಡುಬರುತ್ತದೆ. ಪ್ರಮಾಣವನ್ನು ಗಮನಿಸಿ ಸೇವಿಸುವುದು ಉತ್ತಮ.

ಶನಿವಾರ ಮತ್ತು ಭಾನುವಾರ: ಡ್ರ್ಯಾಗನ್ ಫ್ರೂಟ್, ಹಲಸು, ಸಪೋಟಾ ಮತ್ತು ಏಪ್ರಿಕಾಟ್

ಡ್ರ್ಯಾಗನ್ ಫ್ರೂಟ್ ಮತ್ತು ಹಲಸಿನಲ್ಲಿ ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಸಪೋಟಾ ಮತ್ತು ಏಪ್ರಿಕಾಟ್‌ನಲ್ಲೂ ವಿವಿಧ ವಿಟಮಿನ್‌ಗಳು ಮತ್ತು ಖನಿಜಗಳು ದೊರೆಯುತ್ತವೆ. ಆದರೆ ಸಪೋಟಾ, ಹಲಸಿನಂತಹ ಸಿಹಿ ಹಣ್ಣುಗಳನ್ನು ಮಿತವಾಗಿ ಸೇವಿಸುವುದು ಸೂಕ್ತ. ಇದು ಸಿಗದಿದ್ದಾಗ ಇದರ ಪರ್ಯಾಯವಾಗಿ ಬೇರೆ ಹಣ್ಣುಗಳ ಸೇವನೆ ಮಾಡಬಹುದು.

ಹಣ್ಣು ತಿನ್ನುವ ಸರಿಯಾದ ವಿಧಾನ ಯಾವುದು?

ಸಾಧ್ಯವಾದಷ್ಟು ಹಣ್ಣುಗಳನ್ನು ತಾಜಾ ಮತ್ತು ಸಂಪೂರ್ಣ ಹಣ್ಣಿನ ರೂಪದಲ್ಲಿ ಸೇವಿಸುವುದು ಉತ್ತಮ. ಜ್ಯೂಸ್ ಮಾಡುವುದಕ್ಕಿಂತ ಹಣ್ಣನ್ನು ಹಾಗೆಯೇ ತಿನ್ನುವುದರಿಂದ ಫೈಬರ್ ಹೆಚ್ಚು ಉಳಿಯುತ್ತದೆ. ಹೆಚ್ಚುವರಿ ಸಕ್ಕರೆ ಅಥವಾ ಸಿರಪ್ ಸೇರಿಸಬೇಡಿ.

ಆ ದಿನ ಅದೇ ಹಣ್ಣನ್ನು ತಿನ್ನಬೇಕೆಂದಿಲ್ಲ. ಆದರೆ ಒಂದು ಸೂಕ್ತ ಟೈಮ್ ಟೇಬಲ್ ಅನುಸರಿಸುವುದರಿಂದ ಎಲ್ಲಾ ರೀತಿಯ ಹಣ್ಣುಗಳ ಸೇವನೆ ಮಾಡಿದಂತಾಗುತ್ತದೆ.

ಗಮನಿಸಿ: ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆಗಳಿರುವವರು ಹಣ್ಣಿನ ಪ್ರಕಾರ ಮತ್ತು ಪ್ರಮಾಣವನ್ನು ವೈದ್ಯರು ಅಥವಾ ಡೈಟಿಷಿಯನ್ ಸಲಹೆಯಂತೆ ನಿರ್ಧರಿಸುವುದು ಉತ್ತಮ. ಹಣ್ಣುಗಳು ಆರೋಗ್ಯಕರ ಆಹಾರದ ಒಂದು ಭಾಗ ಮಾತ್ರ; ಸಮತೋಲಿತ ಆಹಾರ, ವ್ಯಾಯಾಮ ಮತ್ತು ಉತ್ತಮ ಜೀವನಶೈಲಿಯೂ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ