AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ಸುಲಭವಾಗಿ ಹೊಟ್ಟೆ ಬೊಜ್ಜನ್ನು ಕರಗಿಸಬೇಕಾ? ಹಾಗಿದ್ರೆ ಹೀಗೆ ಮಾಡಿ

Health Tips in Kannada: ಅಧ್ಯಯನವೊಂದು, ಸೌತೆಕಾಯಿ ನೀರು ದೇಹ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜಕಾರಿ ಎಂದು ತಿಳಿಸಿದೆ.

Weight Loss: ಸುಲಭವಾಗಿ ಹೊಟ್ಟೆ ಬೊಜ್ಜನ್ನು ಕರಗಿಸಬೇಕಾ? ಹಾಗಿದ್ರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 05, 2021 | 7:06 PM

Share

ದೇಹ ಸೌಂದರ್ಯ ಕಾಪಾಡೋದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಪ್ರತಿಯೊಬ್ಬರೂ ಕೂಡ ತಾನು ಸುಂದರವಾಗಿ ಕಾಣಬೇಕು ಎಂದೇ ಬಯಸುತ್ತಾರೆ. ಆದರೆ ಕೆಲವೊಮ್ಮೆ ನಮ್ಮ ಆಹಾರ ಪದ್ಧತಿ ಅಥವಾ ಅಲಸ್ಯತನವೇ ನಮ್ಮ ದೇಹ ಸೌಂದರ್ಯದ ಮೇಲೆ ಪರಿಣಾಮ ಬೀರಿರುತ್ತವೆ. ಅದರಲ್ಲೂ ಮುಖ್ಯವಾಗಿ ನಾವು ಸೇವಿಸುವ ಆಹಾರಗಳಿಂದ ಹೊಟ್ಟೆಯ ಭಾಗದಲ್ಲಿ ಬೇಗನೆ ಬೊಜ್ಜು ಬೆಳೆಯುತ್ತವೆ. ಆದರೆ ಹೀಗೆ ಬಂದ ಬೊಜ್ಜನ್ನು ಕರಗಿಸಲು ಪಡುವ ಪಾಡು ಅಂತಿಂಥದಲ್ಲ. ಕೆಲವರು ಜಿಮ್​ಗಳ ಮೊರೆ ಹೋದರೆ, ಇನ್ನು ಕೆಲವರು ವ್ಯಾಯಾಮ, ಯೋಗದ ಮೊರೆ ಹೋಗುತ್ತಾರೆ. ಇದಾಗ್ಯೂ ಕೆಲವೊಮ್ಮೆ ಸೊಂಟದ ಭಾಗದ ಬೊಜ್ಜು ಸಂಪೂರ್ಣವಾಗಿ ಕರಗಿರುವುದಿಲ್ಲ. ಅದಾಗ್ಯೂ ನಾವು ನಮ್ಮ ಆಹಾರ ಪದ್ಧತಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದರೂ ಕೂಡ ಶೀಘ್ರದಲ್ಲೇ ಬೊಜ್ಜು ಕರಗಿಸಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಪಾನೀಯಗಳ ಸೇವನೆ. ಈ ಮೂಲಕ ಕೂಡ ದೇಹ ತೂಕ ಇಳಿಕೆಯನ್ನು ಉತ್ತೇಜಿಸಬಹುದು. ಇಂತಹ ಪಾನೀಯಗಳಲ್ಲಿ ಸೌತೆಕಾಯಿ ನೀರು ಪ್ರಮುಖವಾದದ್ದು. ಏಕೆಂದರೆ ಸೌತೆಕಾಯಿ ನೀರಿನಲ್ಲಿ ಕಡಿಮೆ ಕ್ಯಾಲೋರಿ ಕಂಡು ಬರುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಶೀಘ್ರದಲ್ಲೇ ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಸೌತೆಕಾಯಲ್ಲಿ ವಿಟಮಿನ್ ಸಿ ಮತ್ತು ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಫ್ಲೇವನಾಯ್ಡ್​ಗಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಂತಹ ಅಗತ್ಯ ಪೋಷಕಾಂಶ ಕಂಡು ಬರುತ್ತವೆ. ಹೀಗಾಗಿ ನಿಮ್ಮ ಡಯಟ್​ನಲ್ಲಿ ಸೌತೆಕಾಯಿಯನ್ನು ಸೇರಿಸುವುದು ಬಹಳ ಮುಖ್ಯ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಹಾಗೆಯೇ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಲ್ಲಿ ಕ್ಯಾಲೋರಿ ಕೂಡ ಕಡಿಮೆ. ಅವುಗಳಲ್ಲಿ ಅಧಿಕ ಕರಗುವ ನಾರಿನಾಂಶ ಇದ್ದು, ಅದು ಆರೋಗ್ಯಯುತವಾಗಿದೆ. ಇದು ಜಲಸಂಚಯನ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಇದು ಕುಕುರ್ಬಿಟೇಸಿ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಯಕೃತ್ತನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಸೌತೆಕಾಯಿ ನೀರಿನ ಸೇವನೆಯು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ.

ಅಧ್ಯಯನವೊಂದು, ಸೌತೆಕಾಯಿ ನೀರು ದೇಹ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜಕಾರಿ ಎಂದು ತಿಳಿಸಿದೆ. ಸೌತೆಕಾಯಿ ನೀರಿನಲ್ಲಿ ಅನೇಕ ವಿಟಮಿನ್‌ಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಿವೆ. ಇದರಲ್ಲಿ ಫೈಟೊಈಸ್ಟ್ರೊಜೆನ್ ಮತ್ತು ಜೀರ್ಣಕಾರಿ ಕಿಣ್ವಗಳನ್ನು ಹೊಂದಿದ್ದು, ಇದು ಕರುಳಿಗೆ ಪ್ರಯೋಜನಕಾರಿಯಾಗಿದೆ. ಜೊತೆಗೆ ಇದು ನಿಮ್ಮ ದೇಹವನ್ನು ತಂಪಾಗಿಸುತ್ತದೆ. ಬೇಸಿಗೆಯಲ್ಲಿ ದೇಹದ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಹಾಗಿದ್ರೆ ಸೌತೆಕಾಯಿ ನೀರು ತಯಾರಿಸಲು ಬೇಕಾದ ವಸ್ತುಗಳಾವುವು ನೋಡೋಣ.

ಸೌತೆಕಾಯಿ – 1 ಒಂದು ಗ್ಲಾಸ್ ನೀರು – 1 ನಿಂಬೆ – 1 ರುಚಿಗೆ ತಕ್ಕಂತೆ ಕಪ್ಪು ಉಪ್ಪು

ತಯಾರಿಸೋದು ಹೇಗೆ?

ಮೊದಲು ಸೌತೆಕಾಯಿಯನ್ನು ನೀರಿನಿಂದ ತೊಳೆಯಿರಿ. ಅದರ ಸಿಪ್ಪೆ ತೆಗೆದು ಅಥವಾ ಹಾಗೆಯೇ ಅದನ್ನು ಹೋಳುಗಳಾಗಿ ಕತ್ತರಿಸಿ. ಈ ಹೋಳುಗಳನ್ನು ಜಾರ್ ಅಥವಾ ನೀರಿನ ಗ್ಲಾಸ್​ನಲ್ಲಿರಿಸಿ. ಹಾಗೆಯೇ ನಿಂಬೆಯನ್ನು ಹೋಳುಗಳನ್ನಾಗಿ ಕತ್ತರಿಸಿ ಅದನ್ನು ಸೌತೆಕಾಯಿ ನೀರಿನೊಂದಿಗೆ ಮಿಶ್ರ ಮಾಡಿ. ಈ ನೀರನ್ನು ರೆಫ್ರಿಜರೇಟರ್‌ನಲ್ಲಿ (ಫ್ರಿಡ್ಜ್​​) ರಾತ್ರಿಯಿಡೀ ಇಟ್ಟು ಬಿಡಿ. ಬೆಳ್ಳಿಗೆ ಅದನ್ನು ತೆಗೆದು ಹೊರಗಿಟ್ಟು ನಿಮಗೆ ಬೇಕಾದಾಗ ಕುಡಿಯುತ್ತಾ ಇರಿ. ಹೀಗೆ ನೀವೆಷ್ಟು ಬಾರಿ ಸೌತೆಕಾಯಿ ನೀರನ್ನು ಕುಡಿಯುತ್ತೀರಾ ಅಷ್ಟೇ ಶೀಘ್ರದಲ್ಲಿ ನಿಮ್ಮ ಹೊಟ್ಟೆ ಬೊಜ್ಜು ಕರಗುತ್ತದೆ. ಅಷ್ಟೇ ಅಲ್ಲದೆ ದೇಹ ತೂಕ ಇಳಿಕೆಯಾಗುತ್ತದೆ.

ಇದನ್ನೂ ಓದಿ:-

Health Tips: ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

(Weight Loss: How To Use Cucumber Water To Lose Weight)