AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟವಾದ ತಕ್ಷಣ ಎಂದೂ ಈ 3 ಕೆಲಸ ಮಾಡಲೇಬೇಡಿ

ಬಹುತೇಕ ಜನರು ಊಟದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ನಿದ್ರೆ ಮಾಡುತ್ತಾರೆ. ಇದು ಜನರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು. ಊಟದ ನಂತರ ನಮ್ಮಲ್ಲಿ ಅನೇಕರು ಒಂದು ಕಪ್ ಕಾಫಿ ಅಥವಾ ಚಹಾವನ್ನು ಕುಡಿಯುತ್ತಾರೆ. ಇದು ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಊಟವಾದ ತಕ್ಷಣ ಎಂದೂ ಈ 3 ಕೆಲಸ ಮಾಡಲೇಬೇಡಿ
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Sep 12, 2023 | 4:26 PM

ಕೆಲವರು ತೂಕ ಇಳಿಸಬೇಕೆಂದು ಏನೇನೋ ಹರಸಾಹಸ ಪಡುತ್ತಾರೆ. ಅದಕ್ಕೆಂದೇ ನಾನಾ ರೀತಿಯ ಮೆಡಿಸಿನ್ ತೆಗೆದುಕೊಳ್ಳುತ್ತಾರೆ, ಡಯೆಟ್ ಮಾಡುತ್ತಾರೆ. ಆದರೆ, ನಮ್ಮ ಆಹಾರ ಶೈಲಿ ಮತ್ತು ಜೀವನಶೈಲಿಯಿಂದಲೂ ತೂಕವನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಕೆಲವರಿಗೆ ಊಟವಾದ ನಂತರ ಏನಾದರೂ ತಿನ್ನುವ ಅಭ್ಯಾಸ ಇರುತ್ತದೆ. ಆದರೆ, ಊಟವಾದ ನಂತರ ನೀವು ಈ 3 ಅಭ್ಯಾಸಗಳನ್ನು ಬಿಟ್ಟರೆ ನಿಮ್ಮ ತೂಕ ಇಳಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಊಟದ ನಂತರ ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ. ನಾವು ಜಾಗರೂಕರಾಗಿರದಿದ್ದರೆ ನಾವು ಮಾಡುವ ಈ 3 ತಪ್ಪುಗಳು ನಮಗೆ ತಿಳಿಯದೆ ನಮ್ಮ ತೂಕ ಹೆಚ್ಚಾಗಲು ಕಾರಣವಾಗಬಹುದು. ಆ 3 ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಊಟವಾದ ತಕ್ಷಣ ಮಲಗುವುದು:

ಬಹುತೇಕ ಜನರು ಊಟದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ನಿದ್ರೆ ಮಾಡುತ್ತಾರೆ. ಇದು ಜನರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದು. ಈ ಅಭ್ಯಾಸವು ನಿಮ್ಮ ತೂಕದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ನೀವು ತಿಂದ ತಕ್ಷಣ ಮಲಗಿದಾಗ ನಿಮ್ಮ ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಯು ನಿಧಾನವಾಗುತ್ತದೆ. ನಿಮ್ಮ ದೇಹವು ಆಹಾರವನ್ನು ಪರಿಣಾಮಕಾರಿಯಾಗಿ ಚಯಾಪಚಯಗೊಳಿಸಲು ಕಷ್ಟವಾಗುತ್ತದೆ. ಇದು ಹೆಚ್ಚುವರಿ ಕ್ಯಾಲೋರಿ ಶೇಖರಣೆಗೆ ಕಾರಣವಾಗಬಹುದು. ಇದರಿಂದ ತೂಕ ಹೆಚ್ಚಾಗಬಹುದು.

ಇದನ್ನೂ ಓದಿ: ಮಧುಮೇಹಿಗಳ ಗಾಯಗಳು ಯಾಕೆ ಬೇಗ ವಾಸಿಯಾಗುವುದಿಲ್ಲ?; ಇಲ್ಲಿದೆ ಕಾರಣ

ಹೀಗಾಗಿ, ಊಟದ ನಂತರ ಸ್ವಲ್ಪವಾದರೂ ವಾಕ್ ಮಾಡಿ. ಈ ಸರಳ ಚಟುವಟಿಕೆಯು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ.

2. ಕೆಫೀನ್ ಸೇವನೆ:

ಊಟದ ನಂತರ ನಮ್ಮಲ್ಲಿ ಅನೇಕರು ಒಂದು ಕಪ್ ಕಾಫಿ ಅಥವಾ ಚಹಾವನ್ನು ಕುಡಿಯುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಅಥವಾ ನಿದ್ರೆ ಮಾಡದಂತೆ ನಮ್ಮನ್ನು ಎಚ್ಚರವಾಗಿರಿಸುತ್ತದೆ ಎಂಬುದು ಅವರ ನಂಬಿಕೆ. ಆದರೆ, ಕೆಫೀನ್ ನಮ್ಮ ನಿದ್ರೆಯನ್ನು ನಿಯಂತ್ರಿಸುವುದು ನಿಜವಾದರೂ ಅದು ನಮ್ಮ ತೂಕವನ್ನು ಹೆಚ್ಚಿಸುತ್ತದೆ. ನೀವು ಸಂಜೆ ತಡವಾಗಿ ಕೆಫೀನ್ ಅನ್ನು ಸೇವಿಸಿದಾಗ ಅದು ನಿದ್ರಿಸಲು ಅಡ್ಡಿಪಡಿಸುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ನಿದ್ರೆ ಕಡಿಮೆಯಾದರೆ ಜನರು ಏನಾದರೂ ತಿನ್ನಬೇಕೆಂಬ ಆಸೆಗೆ ಒಳಗಾಗುತ್ತಾರೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.

ಇದನ್ನೂ ಓದಿ: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದಾ?; ಉತ್ತರ ಇಲ್ಲಿದೆ

3. ಊಟವಾದ ತಕ್ಷಣ ನೀರು ಕುಡಿಯುವುದು:

ದೇಹವನ್ನು ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದು ಅತ್ಯಗತ್ಯ. ಆದರೆ ಊಟದ ನಂತರ ತಕ್ಷಣವೇ ನೀರು ಕುಡಿಯುವುದು ಹೊಟ್ಟೆಯ ಆಮ್ಲಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಅತಿಯಾದ ನೀರಿನ ಸೇವನೆಯು ನಿಮಗೆ ಹೊಟ್ಟೆ ಉಬ್ಬರಿಸುವುದು, ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆಗೆ ಅಡ್ಡಿಯಾಗದಂತೆ ಸರಿಯಾದ ಜಲಸಂಚಯನವನ್ನು ಕಾಪಾಡಿಕೊಳ್ಳಲು ದಿನವಿಡೀ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುವುದು ಉತ್ತಮ. ಆದರೆ, ಊಟದ ಮೊದಲು ಅಥವಾ ನಂತರ ದೊಡ್ಡ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್