AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Time: ನಿಮ್ಮ ಈ ಹವ್ಯಾಸಗಳು ನಿಮಗೇ ಅರಿವಿಲ್ಲದಂತೆ ದಿನನಿತ್ಯದ ಸಮಯವನ್ನು ಕೊಲ್ಲುತ್ತಿರುತ್ತವೆ; ಅವು ಯಾವುವು?

Time Management: ನಮ್ಮ ದಿನನಿತ್ಯದ ಸ್ವಭಾವಗಳು ನಮಗರಿವಿಲ್ಲದಂತೆ ಸಮಯವನ್ನು ಕೊಲ್ಲುತ್ತಿರುತ್ತದೆ. ಅವು ಯಾವುವು? ಅದರಿಂದ ಹೊರಬರುವುದು ಹೇಗೆ? ಇಲ್ಲಿದೆ ಸಲಹೆಗಳು.

Time: ನಿಮ್ಮ ಈ ಹವ್ಯಾಸಗಳು ನಿಮಗೇ ಅರಿವಿಲ್ಲದಂತೆ ದಿನನಿತ್ಯದ ಸಮಯವನ್ನು ಕೊಲ್ಲುತ್ತಿರುತ್ತವೆ; ಅವು ಯಾವುವು?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Dec 13, 2021 | 7:00 AM

ಬಹಳಷ್ಟು ಬಾರಿ ನಾವು ದಿನನಿತ್ಯ ಮಾಡುವ ಹಲವು ಕೆಲಸಗಳು ಸುಮ್ಮನೆ ಕಾಲಹರಣ ಮಾಡಿಸುತ್ತವೆ ಎಂಬ ಸಂಗತಿಯನ್ನು ನೀವೆಂದಾದರೂ ಗಮನಿಸಿದ್ದೀರಾ? ಹಲವು ಬಾರಿ ಅದರ ಅರಿವಾದರೂ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ಬಾರಿ ಯಾವುದರಲ್ಲಿ ಸಮಯ ಕಳೆದುಹೋಗುತ್ತದೆ ಎಂಬುದೇ ತಿಳಿಯುವುದಿಲ್ಲ. ಸಮಯವನ್ನು ಚೆನ್ನಾಗಿ ನಿರ್ವಹಣೆ ಮಾಡುವವರು ದಿನದಲ್ಲಿ ಬಹಳಷ್ಟು ಸಮಯ ಉಳಿಸಿ, ತಮ್ಮ ವೈಯಕ್ತಿಕ ಕಾರ್ಯಗಳಿಗೆ ಮೀಸಲಿಡುತ್ತಾರೆ. ಆದರೆ ಬಹಳಷ್ಟು ಜನರು ತಮಗೆ ಸಮಯವೇ ಸಿಗುತ್ತಿಲ್ಲ ಎಂದು ಚಿಂತಿಸುತ್ತಾರೆ. ಹಾಗಾದರೆ ನಿಮ್ಮ ಸಮಯವೆಲ್ಲಿ ಹೋಗುತ್ತಿದೆ? ಈ ಕುರಿತ ಬರಹ ಇಲ್ಲಿದೆ. 

1. ಆಲಸ್ಯ: ಇದು ಬಹಳ ಸಾಮಾನ್ಯವಾಗಿದ್ದು. ಎಲ್ಲರೂ ಇದನ್ನು ಅನುಭವಿಸುತ್ತಾರೆ. ನಾವು ಯಾವ ಕೆಲಸವನ್ನು ಮಾಡಬೇಕು ಎಂದು ಅಂದುಕೊಂಡಿರುತ್ತೇವೋ ಅದನ್ನು ಮಾಡಲು ಉತ್ಸಾಹ ಸಾಲುವುದಿಲ್ಲ. ಅಲ್ಲದೇ ಬಹಳಷ್ಟು ಬಾರಿ ಡೆಡ್​​ ಲೈನ್ ಮೀರಿ ಹೋದರೂ ಕೆಲಸ ಪೂರ್ಣವಾಗದೇ ಅನಗತ್ಯ ಒತ್ತಡಗಳನ್ನು ಜನರು ಮೈಮೇಲೆ ಎಳೆದುಕೊಳ್ಳುತ್ತಾರೆ. ಇದಕ್ಕೆ ಇನ್ನೂ ಸಮಯವಿದೆಯಲ್ಲಾ.. ಎಂಬ ಭಾವ ಹಾಗೂ ಯಾರು ಮಾಡುತ್ತಾರೆ.. ಎಂಬ ಆಲಸ್ಯದ ಭಾವವೇ ಕಾರಣ. ಇದು ಯಶಸ್ಸಿಗೆ ಸಹಾಯ ಮಾಡುವುದಿಲ್ಲ. ಜೊತೆಗೆ ಸಮಯವನ್ನೂ ತಿನ್ನುತ್ತದೆ. ಆದ್ದರಿಂದ ಆಲಸ್ಯ ತೊಡೆದು ಹಾಕಿದರೆ ಹೆಚ್ಚು ಪರಿಣಾಮಕಾರಿ ವ್ಯಕ್ತಿಯಾಗಿ ಬದಲಾಗಲು ಸಾಧ್ಯವಿದೆ.

2. ಸಾಮಾಜಿಕ ಜಾಲತಾಣಗಳು: ಆಲಸ್ಯ ಸಾಮಾನ್ಯವಾಗಿ ಮನಸ್ಸಿಗೆ ಸಂಬಂಧಿಸಿದ್ದಾದರೆ, ಸಾಮಾಜಿಕ ಜಾಲತಾಣಗಳು ಅದಕ್ಕೂ ಅಪಾಯಕಾರಿ. ಕಾರಣ, ಒಂದು ವೇಲೆ ಕೆಲಸ ಮಾಟಡುವ ಉತ್ಸಾಹ ಇದ್ದರೂ ಆ ಸಮಯವನ್ನು ಇವು ಬಹುತೇಕ ಬಾರಿ ತಿನ್ನುತ್ತವೆ. ಪೋಸ್ಟ್, ಫೋಟೋ, ವಿಡಿಯೋಗಳು ಸಾಲುಸಾಲಾಗಿ ಪರದೆಯ ಮೇಲೆ ಮೂಡುತ್ತಿರುವಂತೆ, ಜನರು ಅದರಲ್ಲೇ ಹೆಚ್ಚು ಕಳೆದುಹೋಗುತ್ತಾರೆ. ಅಂತಿಮವಾಗಿ ದಿನವೊಂದರಲ್ಲಿ ಎಷ್ಟು ಸಮಯ ಇದಕ್ಕೆ ವ್ಯಯವಾಗಿದೆ ಎಂದು ಗಮನಿಸಿದಾಗ, ಗಂಟೆಗಳೇ ಉರುಳಿರುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಿಗೆ ಕನಿಷ್ಟ ಸಮಯವನ್ನು ನೀಡಿ ಉಳಿದ ಸಮಯವನ್ನು ಬೇರೆಡೆ ವಿನಿಯೋಗ ಮಾಡುವುದು ಉತ್ತಮ.

3. ಮತ್ತೊಬ್ಬರ ಕೆಲಸವನ್ನು ಮಾಡುವುದು: ಮತ್ತೊಬ್ಬರಿಗೆ ಕೆಲಸ ಮಾಡಿಕೊಡುವುದು ಒಳ್ಳೆಯದೇ. ಆದರೆ ಇದರಿಂದ ನಿಮ್ಮ ಕೆಲಸಗಳು ನಿಧಾನವಾಗಬಾರದು. ತುರ್ತು ಪರಿಸ್ಥಿತಿಯಲ್ಲಿ ಸಮಯವನ್ನು ಮೀಸಲಿಡುವುದು ಸರಿ. ಆದರೆ ಉಳಿದ ಸಮಯದಲ್ಲೂ ನಿಮ್ಮ ಕೆಲಸಗಳನ್ನು ಬಾಕಿ ಉಳಿಸಿ, ಮತ್ತೊಬ್ಬರ ಕೆಲಸ ಮಾಡುತ್ತಾ ಕುಳಿತರೆ, ನಿಮ್ಮ ಕೆಲಸಗಳು ಸಾಗುವುದಿಲ್ಲ. ಅಷ್ಟೇ ಅಲ್ಲ, ಕಳೆದು ಹೋದ ಸಮಯ ನಿಮಗೂ ಸಿಗುವುದಿಲ್ಲ! ಆದ್ದರಿಂದ ಇದಕ್ಕೂ ನಿರ್ದಿಷ್ಟ ಸಮಯದ ಚೌಕಟ್ಟು ಹಾಕಿಕೊಳ್ಳುವುದು ಉತ್ತಮ.

time

ಪ್ರಾತಿನಿಧಿಕ ಚಿತ್ರ

4. ವಸ್ತುಗಳನ್ನು ಅಸ್ತವ್ಯಸ್ತವಾಗಿರಿಸುವುದು: ನೀವು ಯಾವುದನ್ನಾದರೂ ಬಳಸಿದ ನಂತರ ಅದನ್ನು ಮತ್ತೆ ಅದೇ ಸ್ಥಳದಲ್ಲಿ ಇಡಿ. ಇಲ್ಲದಿದ್ದರೆ ಮತ್ತೊಮ್ಮೆ ವಸ್ತುಗಳ ಅಗತ್ಯ ಬಿದ್ದಾಗ ಎಲ್ಲೆಡೆ ಹುಡುಕಾಡುವಂತಾಗುತ್ತದೆ. ಇದು ಸಮಯವನ್ನು ತಿನ್ನುವುದಷ್ಟೇ ಅಲ್ಲ, ವಸ್ತುಗಳು ಸಿಗದಿದ್ದಾಗ ಅನಗತ್ಯ ಒತ್ತಡವನ್ನೂ ಸೃಷ್ಟಿಸುತ್ತದೆ.

5. ಅಗತ್ಯವಿಲ್ಲದ ಜನರೊಂದಿಗೆ ಕಾಲಹರಣ: ಎಷ್ಟೋ ಬಾರಿ ನಮಗೆ ಎದುರಿನವರೊಂದಿಗೆ ಮಾತನಾಡುತ್ತಿರುವುದು ವ್ಯರ್ಥ ಎಂದು ಅನಿಸುತ್ತಿರುತ್ತದೆ. ಅದಾಗ್ಯೂ ನಾವು ಅಲ್ಲಿಂದ ಕದಲದೇ ಸಮಯ ವ್ಯರ್ಥ ಮಾಡುತ್ತೇವೆ. ಇದನ್ನು ಆದಷ್ಟು ಕಡಿಮೆ ಮಾಡುವುದರಿಂದ ನಕಾರಾತ್ಮಕತೆ ಕಡಿಮೆಯಾಗುತ್ತದೆ. ಮತ್ತು ವ್ಯಕ್ತಿತ್ವವೂ ಉತ್ತಮವಾಗಿ ರೂಪುಗೊಳ್ಳುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಮೂಲ್ಯ ಸಮಯ ನಿಮ್ಮ ಕೈಯಲ್ಲಿ ಉಳಿಯುತ್ತದೆ.

ಇದನ್ನೂ ಓದಿ:

ಮುರಿದುಹೋದ ಸಂಬಂಧದಿಂದ ಪ್ರಪಂಚವೇನೂ ಮುಳುಗದು, ಅದರಿಂದ ಪಾಠ ಕಲಿತು ಜೀವನದಲ್ಲಿ ಮುಂದುವರಿಯಬೇಕು: ಡಾ ಸೌಜನ್ಯ ವಶಿಷ್ಠ

ಸಂಬಂಧಗಳನ್ನು ಹಾಳುಮಾಡುವ ಕೋಪವನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಅಂತ ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ

ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
60 ವರ್ಷದ ವ್ಯಕ್ತಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
ಇಂದಿನಿಂದ ಚಾರ್​ ಧಾಮ್ ಯಾತ್ರೆ ಆರಂಭ, ಬಾಗಿಲು ತೆರೆದ ಕೇದಾರನಾಥ ದೇವಾಲಯ
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್