AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಟ್ಟೆ ತುಂಬ ಊಟ ಮಾಡಿದರೂ ಮತ್ತೆ ಹಸಿವಾಗುತ್ತಿದೆಯೇ? ಇದಕ್ಕೆ ಈ ಕಾರಣಗಳಿರಬಹುದು!

ಹೊಟ್ಟೆ ತುಂಬ ಊಟ ಮಾಡಿದ ಕೆಲವೇ ಸಮಯದಲ್ಲಿ ಮತ್ತೆ ಹಸಿವಾಗುತ್ತಿದೆಯೇ? ಇದಕ್ಕೆ ಕೇವಲ ಹೆಚ್ಚು ತಿನ್ನಬೇಕು ಎಂಬುದೇ ಕಾರಣವಲ್ಲ. ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಾಂಶದ ಕೊರತೆ, ನೀರಿನ ಕೊರತೆ, ನಿದ್ರೆಯ ಅಭಾವ, ಒತ್ತಡ ಹಾಗೂ ವೇಗವಾಗಿ ಊಟ ಮಾಡುವ ಅಭ್ಯಾಸವೂ ಕಾರಣವಾಗಬಹುದು. ಪದೇಪದೇ ಹಸಿವಾಗುತ್ತಿದ್ದರೆ ಅದರ ಹಿಂದಿರುವ ಕಾರಣ ತಿಳಿದುಕೊಳ್ಳುವುದು ಮುಖ್ಯ.

ಹೊಟ್ಟೆ ತುಂಬ ಊಟ ಮಾಡಿದರೂ ಮತ್ತೆ ಹಸಿವಾಗುತ್ತಿದೆಯೇ? ಇದಕ್ಕೆ ಈ ಕಾರಣಗಳಿರಬಹುದು!
Eating
ಮಾಲಾಶ್ರೀ ಅಂಚನ್​
| Edited By: |

Updated on: Sep 02, 2026 | 9:02 PM

Share

ಮುಖ್ಯಾಂಶಗಳು

  • ಪ್ರೋಟೀನ್, ನೀರು, ನಿದ್ರೆ... ನಿಮ್ಮ ಹಸಿವಿನ ಮೇಲೆ ಇವುಗಳ ಪ್ರಭಾವ ಎಷ್ಟು?
  • ನಿದ್ರೆಯ ಕೊರತೆಯೂ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ.
  • ಪದೇಪದೇ ಹಸಿವಾಗುತ್ತಿದ್ದರೆ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಸಾಮಾನ್ಯವಾಗಿ ಹೊಟ್ಟೆ ತುಂಬ ಊಟ (Eating) ಮಾಡಿದ ಕೆಲವು ಗಂಟೆಗಳು ಕಳಿದ ಬಳಿಕ ಮತ್ತೆ ಹಸಿವಾಗುವುದು ಸಹಜ. ಆದರೆ ಊಟ ಮಾಡಿದ ತಕ್ಷಣವೇ ಪದೇಪದೇ ಏನಾದರೂ ತಿನ್ನಬೇಕು ಎನ್ನಿಸುವುದು ಅಥವಾ ನಿರಂತರವಾಗಿ ಹಸಿವಾಗುತ್ತಿರುವ ಅನುಭವವಾಗುತ್ತಿದ್ದರೆ, ಅದಕ್ಕೆ ನಮ್ಮ ಆಹಾರ ಪದ್ಧತಿ ಮಾತ್ರವಲ್ಲದೆ ನಿದ್ರೆ, ನೀರಿನ ಸೇವನೆ ಮತ್ತು ಒತ್ತಡವೂ ಕಾರಣವಾಗಿರಬಹುದು. ಹಾಗಾದರೆ ಹೊಟ್ಟೆ ತುಂಬ ಊಟ ಮಾಡಿದ ನಂತರವೂ ಮತ್ತೆ ಹಸಿವಾಗಲು ಕಾರಣವೇನು?.

ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಕಡಿಮೆ ಇರುವುದು

ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಕಡಿಮೆ ಇದ್ದರೆ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ಇರುವುದಿಲ್ಲ. ಅನ್ನ, ಬ್ರೆಡ್, ಸಿಹಿತಿಂಡಿ ಸೇರಿದಂತೆ ಕಾರ್ಬೋಹೈಡ್ರೇಟ್‌ಗಳನ್ನು ಹೆಚ್ಚಾಗಿ ಹೊಂದಿರುವ ಆಹಾರ ಹೊಟ್ಟೆ ತುಂಬಿಸಬಹುದು. ಆದರೆ ಕೆಲವೇ ಸಮಯದಲ್ಲಿ ಮತ್ತೆ ಹಸಿವಾಗಬಹುದು.

ಇದರ ಬದಲು ಬೇಳೆ, ಮೊಟ್ಟೆ, ಮೊಸರು, ಪನ್ನೀರ್, ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಂತಹ ಆಹಾರಗಳನ್ನು ಸೇರಿಸಿಕೊಂಡರೆ ಊಟ ಹೆಚ್ಚು ಸಮತೋಲಿತವಾಗುತ್ತದೆ. ಪ್ರೋಟೀನ್ ಮತ್ತು ನಾರಿನಾಂಶವು ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡಬಹುದು.

ನೀರು ಕಡಿಮೆ ಕುಡಿಯುತ್ತಿದ್ದೀರಾ?

ಕೆಲವೊಮ್ಮೆ ದೇಹಕ್ಕೆ ನೀರಿನ ಅಗತ್ಯವಿದ್ದರೂ ಅದನ್ನು ನಾವು ಹಸಿವು ಎಂದು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಊಟದ ನಂತರ ಮತ್ತೆ ಏನಾದರೂ ತಿನ್ನಬೇಕು ಎನ್ನಿಸಿದಾಗ ಮೊದಲು ನೀರು ಕುಡಿದು ಸ್ವಲ್ಪ ಸಮಯ ಕಾಯುವುದು ಸಹಾಯವಾಗಬಹುದು. ಆದರೆ ಪದೇಪದೇ ಅತಿಯಾದ ಬಾಯಾರಿಕೆ ಅಥವಾ ಹಸಿವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.

ನಿದ್ರೆ ಸರಿಯಾಗಿ ಆಗುತ್ತಿಲ್ಲವೇ?

ನಿದ್ರೆಯ ಕೊರತೆಯೂ ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ನಿದ್ರೆ ಇಲ್ಲದಿದ್ದರೆ ಹಸಿವು ಮತ್ತು ಹೊಟ್ಟೆ ತುಂಬಿದ ಅನುಭವವನ್ನು ನಿಯಂತ್ರಿಸುವ ಹಾರ್ಮೋನುಗಳ ಸಮತೋಲನದಲ್ಲಿ ಬದಲಾವಣೆ ಉಂಟಾಗಬಹುದು. ಇದರಿಂದ ಸಿಹಿ ಅಥವಾ ಹೆಚ್ಚಿನ ಕ್ಯಾಲೊರಿ ಇರುವ ಆಹಾರ ಸೇವಿಸುವ ಬಯಕೆ ಹೆಚ್ಚಾಗಬಹುದು. ಆದ್ದರಿಂದ ಪ್ರತಿದಿನ ಸಾಕಷ್ಟು ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯುವುದು ಮುಖ್ಯ.

ಫ್ರಿಡ್ಜ್‌ನಲ್ಲಿಟ್ಟ ತರಕಾರಿ ವಾರಗಟ್ಟಲೆ ಫ್ರೆಶ್‌ ಆಗಿರಬೇಕೆಂದರೆ ಈ ಟಿಪ್ಸ್‌ ಅನುಸರಿಸಿ

ಒತ್ತಡದಿಂದಲೂ ಹಸಿವಾಗಬಹುದು

ಕೆಲವೊಮ್ಮೆ ನಿಜವಾದ ಹಸಿವಿಗಿಂತ ಒತ್ತಡ, ಆತಂಕದಿಂದ ತಿನ್ನುವ ಬಯಕೆ ಉಂಟಾಗುತ್ತದೆ. ಇದನ್ನು ಭಾವನಾತ್ಮಕ ಹಸಿವು ಎಂದು ಕರೆಯಬಹುದು. ಇಂತಹ ಸಂದರ್ಭದಲ್ಲಿ ಸಿಹಿ, ಕರಿದ ತಿಂಡಿ ಅಥವಾ ನಮಗೆ ಇಷ್ಟವಾದ ಆಹಾರವನ್ನು ತಿನ್ನಬೇಕು ಎನ್ನಿಸುವ ಸಾಧ್ಯತೆ ಹೆಚ್ಚು. ಹೀಗಾಗಿ, ನಿಮಗೆ ನಿಜವಾಗಿಯೂ ಹಸಿವಾಗಿದೆಯೇ ಅಥವಾ ಮನಸ್ಸಿನ ಒತ್ತಡದಿಂದ ತಿನ್ನಬೇಕು ಎನ್ನಿಸುತ್ತಿದೆಯೇ ಎಂಬುದನ್ನು ಗಮನಿಸುವುದು ಮುಖ್ಯ.

ತುಂಬಾ ವೇಗವಾಗಿ ಊಟ ಮಾಡಬೇಡಿ

ಊಟ ಮಾಡಿದ ಕೂಡಲೇ ಹೊಟ್ಟೆ ತುಂಬಿದೆ ಎಂಬ ಸಂಕೇತ ಮೆದುಳಿಗೆ ತಲುಪುವುದಿಲ್ಲ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ತುಂಬಾ ವೇಗವಾಗಿ ಊಟ ಮಾಡಿದರೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ. ಆಹಾರವನ್ನು ನಿಧಾನವಾಗಿ ಸೇವಿಸಿ, ಚೆನ್ನಾಗಿ ಅಗಿಯುವುದು ಉತ್ತಮ ಅಭ್ಯಾಸ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಹೊಟ್ಟೆ ತುಂಬ ಊಟ ಮಾಡಿದರೂ ನಿರಂತರವಾಗಿ ಅತಿಯಾದ ಹಸಿವಾಗುತ್ತಿದ್ದರೆ ಮತ್ತು ಇದರ ಜೊತೆಗೆ ತೂಕದಲ್ಲಿ ವೇಗವಾದ ಬದಲಾವಣೆ, ಅತಿಯಾದ ಬಾಯಾರಿಕೆ, ಪದೇಪದೇ ಮೂತ್ರ ವಿಸರ್ಜನೆ ಅಥವಾ ದೌರ್ಬಲ್ಯದಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೆಲವು ಸಂದರ್ಭಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟದ ಬದಲಾವಣೆ, ಥೈರಾಯ್ಡ್‌ನಂತಹ ಆರೋಗ್ಯ ಸಮಸ್ಯೆಗಳು ಅಥವಾ ಕೆಲವು ಔಷಧಿಗಳ ಪರಿಣಾಮದಿಂದಲೂ ಹಸಿವು ಹೆಚ್ಚಾಗಬಹುದು. ಹೀಗಾಗಿ, ಪದೇಪದೇ ಹಸಿವಾಗುವುದು ಎಂದರೆ ದೇಹಕ್ಕೆ ಇನ್ನಷ್ಟು ಆಹಾರ ಬೇಕು ಎಂದೇ ಅರ್ಥವಲ್ಲ. ಸಮತೋಲಿತ ಆಹಾರ, ಸಾಕಷ್ಟು ನೀರು, ಉತ್ತಮ ನಿದ್ರೆ ಮತ್ತು ಒತ್ತಡ ನಿಯಂತ್ರಣದತ್ತ ಗಮನ ಹರಿಸುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!