World Environmental Health Day 2024 : ಸುಸ್ಥಿರ ಜೀವನಕ್ಕಾಗಿ ಪರಿಸರವನ್ನು ಸಂರಕ್ಷಿಸುವುದು ಹೇಗೆ? ಇಲ್ಲಿದೆ ಸಲಹೆಗಳು

ಪ್ರಕೃತಿ ಮನುಷ್ಯನ ಜೀವನಕ್ಕೆ ಸಾಕಷ್ಟು ಕೊಟ್ಟಿದೆ, ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ನಗರೀಕರಣ, ಕೈಗಾರಿಕರಣದಂತಹ ವೇಗಗತಿಯಲ್ಲಿ ಸಾಗುತ್ತಿರುವ ಪ್ರಗತಿಯಿಂದ ಉಂಟಾದ ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯದಂತಹ ಮಾಲಿನ್ಯಗಳು ಪರಿಸರವನ್ನು ಕಲುಷಿತಗೊಳಿಸಿದೆ. ಈ ನಿಟ್ಟಿನಲ್ಲಿ ಮಾಲಿನ್ಯವನ್ನು ತಡೆಗಟ್ಟಿ, ಪರಿಸರ ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಸೆಪ್ಟೆಂಬರ್ 26 ರಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Environmental Health Day 2024 : ಸುಸ್ಥಿರ ಜೀವನಕ್ಕಾಗಿ ಪರಿಸರವನ್ನು ಸಂರಕ್ಷಿಸುವುದು ಹೇಗೆ? ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 26, 2024 | 9:35 AM

ಇಂದಿನ ಮಾನವನ ಸ್ವಾರ್ಥಭರಿತ ಜೀವನಶೈಲಿಯಿಂದಾಗಿ ಪರಿಸರವು ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದೆ. ಹೀಗಾಗಿ ಕಲುಷಿತ ಗಾಳಿ, ನೀರು ಹಾಗೂ ಆಹಾರ ಸೇವನೆಯಿಂದಾಗಿ ಅನೇಕ ರೋಗ ರುಜಿನಗಳು ಕಾಡುತ್ತಿದೆ. ಪರಿಸರವು ಸ್ವಚ್ಛವಾಗಿದ್ದರೆ ಮಾತ್ರ ನಾವುಗಳು ಶುದ್ಧ ಗಾಳಿಯನ್ನು ಉಸಿರಾಡಲು ಸಾಧ್ಯವಾಗುತ್ತದೆ. ಆದರೆ ಈ ಪರಿಸರವು ಹಾಳಾಗಲು ಪ್ರಾರಂಭಿಸಿದಾಗ ನಾವುಗಳು ಆರೋಗ್ಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಎದುರಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಪರಿಸರದ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಈ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ 26 ರಂದು ವಿಶ್ವ ಪರಿಸರ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪರಿಸರ ಆರೋಗ್ಯ ದಿನದ ಇತಿಹಾಸ

ವಿಶ್ವ ಪರಿಸರ ಆರೋಗ್ಯ ದಿನವನ್ನು 2011ರಲ್ಲಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ ಕೌನ್ಸಿಲ್ ಪ್ರಾರಂಭಿಸಿತು. ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕೆನ್ನುವುದು ಈ ದಿನದ ಉದ್ದೇಶವಾಗಿದೆ. ಹೀಗಾಗಿ ಈ ಒಕ್ಕೂಟವು ಪರಿಸರ ಆರೋಗ್ಯ ಸಂಬಂಧಿಸಿದ ವಿಷಯಗಳ ಮೇಲೆ ಕೆಲಸ ಮಾಡುವ ಅಂತಾರಾಷ್ಟ್ರೀಯ ಸಂಸ್ಥೆ ಇದಾಗಿದೆ. ಇದು ಪರಿಸರದ ಆರೋಗ್ಯವನ್ನು ರಕ್ಷಿಸಲು ಪ್ರಪಂಚದ ಜನರು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅನುಷ್ಠಾನಕ್ಕೆ ತರುವಲ್ಲಿ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ವಿಶ್ವ ಪರಿಸರ ಆರೋಗ್ಯ ದಿನದ ಮಹತ್ವ ಹಾಗೂ ಆಚರಣೆ

ಒಬ್ಬ ವ್ಯಕ್ತಿಯು ತನ್ನದೇ ರೀತಿಯಲ್ಲಿ ಪರಿಸರವನ್ನು ಉಳಿಸಲು ಪ್ರಯತ್ನಿಸಿದರೆ, ಸಂಪನ್ಮೂಲಗಳನ್ನು ಅತಿಯಾಗಿ ಬಳಸದಿದ್ದರೆ ಮತ್ತು ಮಾಲಿನ್ಯವನ್ನು ಉತ್ತೇಜಿಸದಿದ್ದರೆ, ಪರಿಸರವನ್ನು ರಕ್ಷಿಸುವುದು ಸುಲಭ. ಈ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸಲು ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಪರಿಸರ ಹಾನಿಯನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ವಿಶ್ವ ಸಂಸ್ಥೆಯ ಅಂಕಿಅಂಶಗಳನ್ನು ಗಮನಿಸಿದಾಗ ಪ್ರತಿ ವರ್ಷ ಜಾಗತಿಕ ರೋಗಗಳಲ್ಲಿ ಶೇಕಡಾ 25 ರಷ್ಟು ನೇರವಾಗಿ ಪರಿಸರ ಮಾಲಿನ್ಯದಿಂದಲೇ ಉಂಟಾಗುತ್ತದೆ ಎನ್ನಬಹುದು. ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಜಾಗೃತಿ ಕಾರ್ಯಗಳನ್ನು ಆಯೋಜಿಸುವ ಮೂಲಕ ಜನರಿಗೆ ಪರಿಸರ ರಕ್ಷಣೆ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತವೆ.

ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುವುದು ಹೇಗೆ?

ಪರಿಸರವನ್ನು ಸಂರಕ್ಷಣೆ ಹೇಗೆ ಮಾಡಬಹುದು?

* ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು. ಬದಲಾಗಿ ನೈಸರ್ಗಿಕ ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಬೇಕು.

* ಕಟ್ಟಿಗೆ,ಅನಿಲ ಇಂಧನಗಳನ್ನು ಅಡುಗೆಗೆ ಉರುವಲಾಗಿ ಉಪಯೋಗಿಸುವ ಬದಲು, ಸೌರಶಕ್ತಿ ಬಳಸಬಹುದು.

* ಇಂಧನಗಳನ್ನು ಮಿತವಾಗಿ ಅಗತ್ಯ ಇರುವಷ್ಟೇ ಬಳಸಬೇಕು. ವಾಹನಗಳು, ದೀಪಗಳು, ಅಗತ್ಯವಿಲ್ಲದಿರುವಾಗ ನಂದಿಸಬೇಕು.

* ಉಳಿದಿರುವ ಅರಣ್ಯವನ್ನು ಸಂರಕ್ಷಿಸುವ ಹೊಣೆ ನಮ್ಮದೇ ಆಗಿದೆ. ಮನೆ ಮನೆಗೊಂದು ಗಿಡ ನೆಟ್ಟು ವೃಕ್ಷ ಸಂಪತ್ತನ್ನು ಹೆಚ್ಚಿಸಬೇಕು. ಇದರಿಂದ ಬೇಸಿಗೆ ದಿನಗಳಲ್ಲಿ ತಂಪಾದ ವಾತಾವರಣವನ್ನು ನಿರ್ಮಾಣ ಮಾಡಿದ್ದಂತೆ ಆಗುತ್ತದೆ.

* ಬೃಹತ್ ಕೈಗಾರಿಕೆಗಳ ಸ್ಥಾಪನೆಯಿಂದ ಪರಿಸರವು ಕಲುಷಿತವಾಗುತ್ತಿದೆ. ಹೀಗಾಗಿ ಕೈಗಾರಿಕೆಗಳಿಂದ ಹೊರಬರುವ ಕಲುಷಿತ ರಾಸಾಯನಿಕ ಮತ್ತು ವಿಷಯುಕ್ತ ನೀರು ಮತ್ತು ಅನಿಲಗಳನ್ನು ಶುದ್ದೀಕರಿಸಿಯೇ ಹೊರಬಿಡಬೇಕು.

* ವಾಹನಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ವಾಹನದ ಯಂತ್ರಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಇಂಧನದ ಉಳಿತಾಯಕ್ಕಾಗಿ ಅವು ಯಾವಾಗಲೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.

* ಆಹಾರ ತ್ಯಾಜ್ಯಗಳು, ಮತ್ತಿತರೆ ಕೊಳೆಯುವ ವಸ್ತುಗಳನ್ನು ನದಿ, ಕೆರೆ, ಸರೋವರಗಳಿಗೆ ಬಿಡುವ ಬದಲು ತ್ಯಾಜ್ಯಗಳನ್ನು ಬಳಸಿ ಗೊಬ್ಬರ ತಯಾರಿಸುವುದು ಉತ್ತಮ.

* ಹೆಚ್ಚಿನ ಓಡಾಟಕ್ಕೆ ಸಾರ್ವಜನಿಕ ಸಾರಿಗೆಯನ್ನೇ ಉಪಯೋಗಿಸಬೇಕು. ಹತ್ತಿರದ ಸ್ಥಳಗಳಿಗೆ ನೆಡೆದುಕೊಂಡು ಹೋಗುವುದು ಆರೋಗ್ಯದ ದೃಷ್ಟಿಯಿಂದಲೂ ಹಾಗೂ ಪರಿಸರಕ್ಕೂ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ