AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Mental Health Day ಭಾರತದಲ್ಲಿ ಶೇ 55 ವೃತ್ತಿಪರರು ಒತ್ತಡಕ್ಕೊಳಗಾಗಿದ್ದಾರೆ: ಲಿಂಕ್ಡ್ ಇನ್ ವರದಿ

ಭಾರತದಲ್ಲಿ ಕೆಲಸದ ಒತ್ತಡ ಪರಿಹರಿಸಲು ಏನು ಮಾಡಲಾಗುತ್ತದೆ ಮತ್ತು ವೃತ್ತಿಪರರು ತಮ್ಮ ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಹೆಚ್ಚಿನ ಫ್ಲೆಕ್ಸಿಬಿಲಿಟಿ ಹೇಗೆ ನಿರೀಕ್ಷಿಸುತ್ತಾರೆ ಎಂಬುದರ ಬಗ್ಗೆ 'ಮಾನಸಿಕ ಆರೋಗ್ಯ' ವಿಶೇಷ ಆವೃತ್ತಿಯಲ್ಲಿ ಹೇಳಲಾಗಿದೆ.

World Mental Health Day ಭಾರತದಲ್ಲಿ ಶೇ 55 ವೃತ್ತಿಪರರು ಒತ್ತಡಕ್ಕೊಳಗಾಗಿದ್ದಾರೆ: ಲಿಂಕ್ಡ್ ಇನ್ ವರದಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 07, 2021 | 6:25 PM

Share

ಭಾರತದ ಅರ್ಧಕ್ಕಿಂತ ಹೆಚ್ಚು ಅಂದರೆ ಉದ್ಯೋಗಸ್ಥ ವೃತ್ತಿಪರರು ಕೆಲಸದಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದಾರೆ ಮತ್ತು ಯೋಗಕ್ಷೇಮ ಕ್ರಮಗಳು ಅನೇಕರಿಗೆ ಐಷಾರಾಮಿಯಾಗಿ ಕಾಣುತ್ತಿದೆ ಎಂದು ಲಿಂಕ್ಡ್‌ಇನ್‌ನ (LinkedIn) ವರ್ಕ್‌ಫೋರ್ಸ್ ಕಾನ್ಫಿಡೆನ್ಸ್ ಇಂಡೆಕ್ಸ್‌ನ ( Workforce Confidence Index) ವಿಶೇಷ ‘ಮಾನಸಿಕ ಆರೋಗ್ಯ’ (mental health)ಆವೃತ್ತಿಯಲ್ಲಿ ಹೇಳಲಾಗಿದೆ. 3,881 ವೃತ್ತಿಪರರ ಸಮೀಕ್ಷೆಯ ಪ್ರತಿಕ್ರಿಯೆಗಳು, ಕೆಲಸದಲ್ಲಿ ತೀವ್ರ ಪರಿವರ್ತನೆಗಳ ಹೊರತಾಗಿಯೂ, ಜುಲೈ 31 ರಿಂದ ಸೆಪ್ಟೆಂಬರ್ 24, 2021 ರವರೆಗೆ ಭಾರತದ ಒಟ್ಟಾರೆ ಕಾರ್ಮಿಕರ ಆತ್ಮವಿಶ್ವಾಸವು 55 ಕ್ಕಿಂತ ಹೆಚ್ಚಿನ ಸಂಯೋಜಿತ ಸ್ಕೋರ್‌ನೊಂದಿಗೆ ಸ್ಥಿರವಾಗಿ ಉಳಿದಿದೆ ಎಂಬುದನ್ನು ತೋರಿಸುತ್ತದೆ. ಆದರೆ ಕಳೆದ 18 ತಿಂಗಳುಗಳಿಂದ ಇದನ್ನು ಉಳಿಸಿಕೊಳ್ಳುವುದು ದೇಶದ ಕೆಲಸ ಮಾಡುವ ವೃತ್ತಿಪರರ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ. ಕೆಲಸದ ಒತ್ತಡಕ್ಕೆ ತಮ್ಮ ಪ್ರಾಥಮಿಕ ಕಾರಣಗಳನ್ನು ಹಂಚಿಕೊಳ್ಳಲು ಕೇಳಿದಾಗ ಉದ್ಯೋಗಿ ವೃತ್ತಿಪರರು ‘ವೈಯಕ್ತಿಕ ಅಗತ್ಯಗಳೊಂದಿಗೆ ಕೆಲಸವನ್ನು ಸಮತೋಲನಗೊಳಿಸುವುದು’ (34 ಶೇಕಡಾ), ‘ಸಾಕಷ್ಟು ಹಣವನ್ನು ಮಾಡದಿರುವುದು’ (ಶೇ 32 ), ಮತ್ತು ‘ನಿಧಾನಗತಿಯ ವೃತ್ತಿ ಪ್ರಗತಿ’ ( ಶೇ25 ) – ಇವು ಅತೀ ಹೆಚ್ಚು ಜನರು ಅನುಭವಿಸುವ ಒತ್ತಡಗಳಾಗಿವೆ. ಅಂತಹ ಒತ್ತಡದ ಸಮಯಗಳ ನಡುವೆ, 3 ರಲ್ಲಿ 1 ವೃತ್ತಿಪರರು ಕೂಡ ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿಉದ್ಯೋಗಗಳ ಲಭ್ಯತೆ(ಶೇ 36 ) ಮತ್ತು ವೆಚ್ಚಗಳ ಮೇಲೆ ಸುಧಾರಿತ ನಿಯಂತ್ರಣವನ್ನು (ಶೇ 30 ) ಪಡೆಯುವುದನ್ನು ಕಾಣಬಹುದು.

ಈ ಪರಿವರ್ತನೆಯ ಸಮಯದಲ್ಲಿ ಉದ್ಯೋಗಿಗಳ ಆದ್ಯತೆಗಳು ಬದಲಾಗುತ್ತಲೇ ಇರುವುದರಿಂದ, ಸಂಶೋಧನೆಗಳು ಮುಂದಿನ ವರ್ಷಗಳಲ್ಲಿ ಭಾರತೀಯ ವೃತ್ತಿಪರರು ನಿರ್ಣಾಯಕ ಪ್ರತಿಭಾಶೀಲರಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಕೆಲಸ-ಬದುಕಿನ ಸಮತೋಲನವನ್ನು ಸೂಚಿಸುತ್ತವೆ. ಭಾರತದಲ್ಲಿ ಕೆಲಸದ ಒತ್ತಡ ಪರಿಹರಿಸಲು ಏನು ಮಾಡಲಾಗುತ್ತದೆ ಮತ್ತು ವೃತ್ತಿಪರರು ತಮ್ಮ ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿಡಲು ಹೆಚ್ಚಿನ ಫ್ಲೆಕ್ಸಿಬಿಲಿಟಿ ಹೇಗೆ ನಿರೀಕ್ಷಿಸುತ್ತಾರೆ ಎಂಬುದರ ಬಗ್ಗೆ ‘ಮಾನಸಿಕ ಆರೋಗ್ಯ’ ವಿಶೇಷ ಆವೃತ್ತಿಯಲ್ಲಿ ಹೇಳಲಾಗಿದೆ.

ಸುಮಾರು ಅರ್ಧದಷ್ಟು (ಶೇ 47 ) ಉದ್ಯೋಗಿ ವೃತ್ತಿಪರರು ಸಮಂಜಸವಾದ ಸಮಯದಲ್ಲಿ ಕೆಲಸವನ್ನು ಮುಗಿಸಲು ಬಯಸುತ್ತಾರೆ, ಕೇವಲ ಮೂರನೇ ಒಂದು ಭಾಗದಷ್ಟು (ಶೇ 36) ಮಾತ್ರ ಅದನ್ನು ಮಾಡಲು ಸಾಧ್ಯವಾಯಿತು. ಮತ್ತು 41 ಪ್ರತಿಶತದಷ್ಟು ಜನರು ಸಮಯಾವಕಾಶಕ್ಕಾಗಿ ಯೋಜಿಸಿದ್ದರೆ ಕಳೆದ ಎರಡು ತಿಂಗಳಲ್ಲಿ ಕೇವಲ 30 ಪ್ರತಿಶತದಷ್ಟು ಜನರು ಮಾತ್ರ ಸಮಯ ತೆಗೆದುಕೊಳ್ಳಬಹುದು. ಈ ಆತಂಕಕಾರಿ ಅಂಕಿಅಂಶಗಳು ಕಂಪನಿಗಳು ಕೆಲಸ-ಜೀವನ ಸಮತೋಲನವನ್ನು ಪ್ರೋತ್ಸಾಹಿಸುವ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಂಸ್ಕೃತಿಯನ್ನು ರಚಿಸುವುದು ಹೇಗೆ ನಿರ್ಣಾಯಕವಾಗಿ ಮುಂದುವರಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ತುರ್ತುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಲಿಂಕ್ಡ್‌ಇನ್‌ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಹೇಳಿದ್ದಾರೆ.

ಹೆಚ್ಚಿನ ಫ್ಲೆಕ್ಸಿಬಿಲಿಟಿ ತಲೆಮಾರುಗಳಿಂದೀಚೆಗೆ ಅಗತ್ಯವಾಗಿ ಉಳಿದಿದ್ದರೂ, ಕಿರಿಯ ವೃತ್ತಿಪರರು ತಮ್ಮ ಹಳೆಯ ಸಹವರ್ತಿಗಳಿಗಿಂತ ವಿರಾಮ ತೆಗೆದುಕೊಳ್ಳುವುದು ಸುಲಭವಾಗಿದೆ. ಸಂಶೋಧನೆಗಳು ಮಿಲೇನಿಯಲ್ಸ್ ಎರಡು ಬಾರಿ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸುತ್ತದೆ, ಆದರೆ ಜೆನ್ ಝೆಡ್ ವೃತ್ತಿಪರರು ಬೇಬಿ ಬೂಮರ್‌ಗಳಿಗೆ ಹೋಲಿಸಿದರೆ ಹಗಲಿನಲ್ಲಿ ವಿರಾಮ ತೆಗೆದುಕೊಳ್ಳುವ ಸಾಧ್ಯತೆ 1.5 ಪಟ್ಟು ಹೆಚ್ಚು. ಕುತೂಹಲದ ವಿಷಯವೆಂದರೆ ಮಿಲೇನಿಯಲ್ಸ್ ಮತ್ತು ಜೆನ್ ಝೆಡ್ ವೃತ್ತಿಪರರಿಗೆ ಹೋಲಿಸಿದರೆ ಬೂಮರ್‌ಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಮಾನಸಿಕ ಆರೋಗ್ಯ ಮತ್ತು ಒತ್ತಡದ ಬಗ್ಗೆ 1.5 ಪಟ್ಟು ಹೆಚ್ಚು ತೆರೆದಿರುತ್ತಾರೆ.

ಇದನ್ನೂ ಓದಿ: Pandora Papers ಪಂಡೋರಾ ಪೇಪರ್ಸ್: ಬಿವಿಐ ಸಂಸ್ಥೆಗಳ ಜಾಲದೊಂದಿಗೆ ದಿವಾಳಿಯಾದ ಕೋಟ್ಯಾಧಿಪತಿ ಬಿಆರ್ ಶೆಟ್ಟಿ

ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಸ್ಟೋಕ್ಸ್
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್