AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Music Day 2025 : ವಿಶ್ವ ಸಂಗೀತ ದಿನವನ್ನು ಆಚರಿಸುವುದು ಏಕೆ? ಏನಿದರ ಇತಿಹಾಸ, ಮಹತ್ವ?

ಎಷ್ಟೇ ನೋವಿರಲಿ, ಇಷ್ಟವಾದ ಹಾಡು ಕೇಳಿದ ಕೂಡಲೇ ಮನಸ್ಸು ಹಗುರವಾಗುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅಂತಹದ್ದು. ಹೌದು, ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಸಂಗೀತಕ್ಕೆಂದೇ ಮೀಸಲಾದ ಈ ದಿನದ ಆಚರಣೆ ಹುಟ್ಟಿಕೊಂಡದ್ದು ಹೇಗೆ? ಈ ದಿನದ ಇತಿಹಾಸ ಹಾಗೂ ಮಹತ್ವವೇನು? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Music Day 2025 : ವಿಶ್ವ ಸಂಗೀತ ದಿನವನ್ನು ಆಚರಿಸುವುದು ಏಕೆ? ಏನಿದರ ಇತಿಹಾಸ, ಮಹತ್ವ?
ವಿಶ್ವ ಸಂಗೀತ ದಿನImage Credit source: Getty Images
ಸಾಯಿನಂದಾ
|

Updated on: Jun 20, 2025 | 7:50 PM

Share

ಸಂಗೀತವನ್ನು (music) ಇಷ್ಟಪಡದವರು ಯಾರಿದ್ದಾರೆ ಹೇಳಿ. ಎಲ್ಲರೂ ಇಷ್ಟಪಟ್ಟು ಕೇಳುವ ಈ ಸಂಗೀತವು ಮಾಡುವ ಮೋಡಿ ಅಷ್ಟಿಷ್ಟಲ್ಲ. ಖುಷಿಯಿರಲಿ, ದುಃಖವಿರಲಿ, ಒಂಟಿತನವೇ ಇರಲಿ ಜೊತೆಯಾಗುವುದೇ ಈ ಸಂಗೀತ. ನೆಚ್ಚಿನ ಹಾಡುಗಳು ನೋವಿನ ವೇಳೆಯಲ್ಲಿ ಸಾಂತ್ವನ ನೀಡುತ್ತದೆ. ಹೀಗಾಗಿ ಎಷ್ಟೋ ಜನರು ಒಂಟಿ ಎನಿಸಿದಾಗ, ಹಾಡು ಕೇಳಿ ತಮ್ಮ ಎಲ್ಲಾ ನೋವುಗಳನ್ನು ಮರೆಯುತ್ತಾರೆ. ಹೀಗಾಗಿ ಈ ಸಂಗೀತ ಎನ್ನುವುದು ಮನಸ್ಸಿನ ಕಾಯಿಲೆಗೆ ಉತ್ತಮ ಔಷಧಿ ಎಂದರೆ ತಪ್ಪಾಗಲಾರದು. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಈ ಸಂಗೀತಕ್ಕಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಜೂನ್ 21. ಪ್ರತಿ ವರ್ಷ ಈ ದಿನದಂದು ವಿಶ್ವ ಸಂಗೀತ ದಿನ (World Music Day) ವನ್ನು ಆಚರಿಸಲಾಗುತ್ತದೆ. ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವಿಸುವ ಸಲುವಾಗಿ ಈ ವಿಶೇಷದ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಂಗೀತ ದಿನದ ಇತಿಹಾಸ :

ವಿಶ್ವ ಸಂಗೀತ ದಿನದ ಆಚರಣೆ ಆರಂಭವಾದದ್ದು 1982 ರಲ್ಲಿ. ಮೊಟ್ಟಮೊದಲ ಬಾರಿಗೆ ಪ್ರಾನ್ಸ್​ನಲ್ಲಿ ಜೂನ್​ 21ರಂದು ಸಂಗೀತ ದಿನವನ್ನು ಆಚರಿಸಲಾಯಿತು. ಫ್ರೆಂಚ್​​ ಸಾಂಸ್ಕೃತಿಕ ಸಚಿವ ಮೌರೈಸ್​ ಫ್ಲುರೆಟ್​​ ವಿಶ್ವ ಸಂಗೀತ ದಿನ ಆಚರಣೆಗೆ ಅಧಿಸೂಚನೆ ಮಂಡಿಸಿದರು. ಈ ಮಂಡನೆಯನ್ನು ಫ್ರಾನ್ಸ್​ ಸಾಂಸ್ಕೃತಿಕ ಸಚಿವರಾದ ಜಾಕ್ವೆಸ್ ಲ್ಯಾಂಗ್ 1981ರಲ್ಲಿ ಅಂಗೀಕರಿಸಲಾಯಿತು. ಇದಾದ ಒಂದು ವರ್ಷದ ಬಳಿಕ ಅಂದರೆ 1982 ರಲ್ಲಿ ವಿಶ್ವ ಸಂಗೀತ ದಿನದ ಆಚರಿಸುವ ಮೂಲಕ ಈ ದಿನದ ಆಚರಣೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ವಿಶ್ವ ಸಂಗೀತ ದಿನದ ಆಚರಣೆಯೂ ಚಾಲ್ತಿಯಲ್ಲಿದೆ.

ಇದನ್ನೂ ಓದಿ
Image
ವಿಶ್ವ ನಿರಾಶ್ರಿತರ ದಿನವನ್ನು ಏಕೆ ಆಚರಿಸುವುದೇಕೆ?
Image
ಪಿಕ್ನಿಕ್‌ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?
Image
ಹವಾಮಾನ ಬದಲಾವಣೆಯಿಂದ ಬರಡಾಗುತ್ತಿದೆ ಭೂಮಿ
Image
ವಿಶ್ವ ವಾಯು ದಿನವನ್ನು ಏಕೆ ಆಚರಿಸಲಾಗುತ್ತದೆ?

ಇದನ್ನೂ ಓದಿ : World Refugee Day 2025: ವಿಶ್ವ ನಿರಾಶ್ರಿತರ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ತಿಳಿಯಿರಿ

ವಿಶ್ವ ಸಂಗೀತ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ವಿಶ್ವ ಸಂಗೀತ ದಿನವು ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಸಂಗೀತವನ್ನು ಯುವ ಪೀಳಿಗೆಗೆ ಹೆಚ್ಚು ಉಪಯುಕ್ತವಾಗಿಸುವುದು. ಸಂಗೀತದ ವಿವಿಧ ಪ್ರಕಾರಗಳನ್ನು ಗುರುತಿಸಿ, ಕರಗತ ಮಾಡಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದಾಗಿದೆ. ಹವ್ಯಾಸಿಗಳು ಮತ್ತು ವೃತ್ತಿಪರ ಕಲಾವಿದರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಂಗೀತಗಾರರನ್ನು ಗೌರವಿಸುವ ದಿನವೂ ಇದಾಗಿದೆ. ಈ ದಿನವನ್ನು ಸಂಗೀತ ಉತ್ಸವಗಳು, ಸ್ಥಳೀಯ ಬ್ಯಾಂಡ್ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಶಾಸ್ತ್ರೀಯ ಸಂಗೀತ, ಪ್ರಾದೇಶಿಕ ಸಂಗೀತದ ಪ್ರದರ್ಶನಗಳು ನಡೆಯುತ್ತವೆ. ಸಂಗೀತ ಶಾಲೆಗಳು ಮತ್ತು ಸಂಸ್ಥೆಗಳು ವಿಶೇಷ ಕಾರ್ಯಾಗಾರಗಳು ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತವೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಎಕ್ಕ’ ಚಿತ್ರ ನೋಡಿದ ವಿನಯ್ ರಾಜ್​ಕುಮಾರ್​; ತಮ್ಮನ ಸಿನಿಮಾ ಇಷ್ಟ ಆಯ್ತಾ?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
‘ಜೂನಿಯರ್’ ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್