World Vegan Day 2021: ಸಸ್ಯಹಾರದಲ್ಲಿ ಪ್ರೋಟೀನ್ ತುಂಬಿರುವ ಪದಾರ್ಥಗಳು ಯಾವುವು? ತಿಳಿಯಲೇಬೇಕು

ಆಹಾರ, ಅದರ ಪ್ರಯೋಜನಗಳು, ಆರೋಗ್ಯಕ್ಕೆ ಎಷ್ಟು ಅವಶ್ಯಕ ಮತ್ತು ಇದರ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದೊಂದಿಗೆ ವಿಶ್ವ ಸಸ್ಯಾಹಾರಿ ದಿನವನ್ನು ಪ್ರತೀ ವರ್ಷ ಆಚರಿಸಲಾಗತ್ತದೆ.

World Vegan Day 2021: ಸಸ್ಯಹಾರದಲ್ಲಿ ಪ್ರೋಟೀನ್ ತುಂಬಿರುವ ಪದಾರ್ಥಗಳು ಯಾವುವು? ತಿಳಿಯಲೇಬೇಕು
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Nov 01, 2021 | 12:04 PM

ಸಸ್ಯಾಹಾರವೆಂದರೆ ಕೇವಲ ಆಹಾರದ ಆಯ್ಕೆ ಮಾತ್ರವಲ್ಲ, ಇದು ಜೀವನದ ಒಂದು ವಿಧಾನವೂ ಹೌದು. ನವೆಂಬರ್ 1 ರಂದು ವಿಶ್ವ ಸಸ್ಯಾಹಾರಿ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಆಹಾರ, ಅದರ ಪ್ರಯೋಜನಗಳು, ಆರೋಗ್ಯಕ್ಕೆ ಎಷ್ಟು ಅವಶ್ಯಕ ಮತ್ತು ಇದರ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದೊಂದಿಗೆ ವಿಶ್ವ ಸಸ್ಯಾಹಾರಿ ದಿನವನ್ನು ಪ್ರತೀ ವರ್ಷ ಆಚರಿಸಲಾಗತ್ತದೆ. ಸಸ್ಯಾಹಾರದಲ್ಲಿ ಯಾವೆಲ್ಲಾ ಪದಾರ್ಥಗಳು ಹೆಚ್ಚು ಪ್ರೋಟೀನ್​ ಯುಕ್ತವಾಗಿದೆ, ಯಾವುದು ಆರೋಗ್ಯವನ್ನು ಸುಧಾರಿಸಲು ಸಹಾಯಕ ಎಂಬೆಲ್ಲಾ ವಿಷಯಗಳನ್ನು ತಿಳಿಯೋಣ.

ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಿರುವಾಗ ಸಸ್ಯಹಾರಿಗಳು ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು? ಮತ್ತು ಯಾವುದು ಪ್ರೋಟೀನ್​ ಸಮೃದ್ಧವಾಗಿರುವ ಪದಾರ್ಥಗಳು ಎಂಬುದು ಈ ಕೆಳಗಿನಂತಿದೆ. ಇವುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಿ.

ಸಸ್ಯಾಹಾರಿ ಪ್ರೋಟೀನ್ ಮೂಲಗಳು ಕಡಲೆ ಕಡಲೆ ಅರೋಗ್ಯಕ್ಕೆ ತುಂಬಾ ಪ್ರಯೋಜವನ್ನು ನೀಡುತ್ತದೆ. ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದ ಕೊಲೆಸ್ಟ್ರಾಲ್​ ಆರೋಗ್ಯಕರ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ಮಧುಮೇಹವನ್ನು ನಿಯಂತ್ರಿಸಲು ಸಹಾಯಕವಾಗಿದೆ.

ಬೀಜಗಳು ಪ್ರೋಟೀನ್ ಒದಗಿಸುವ ಉತ್ತಮ ಮೂಲವೆಂದರೆ ಬೀಜಗಳು. ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ, ಜೀವಸತ್ವಗಳು ಮತ್ತು ಕೊಬ್ಬುಗಳ ಮೂಲವಾಗಿವೆ. ಬೀಜಗಳ ಸೇವನೆಯು ತೂಕ ನಿಯಂತ್ರಣಕ್ಕೆ ಸಹಾಯಕವಾಗಿದೆ. ನೆನಪಿನ ಶಕ್ತಿ ಮತ್ತು ಚಟುವಟಿಕೆಯನ್ನು ಹೆಚ್ಚಿಸಲು ಸಹಾಯಕ. ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ಆರೋಗ್ಯವಾಗಿಡಲು ನೀವು ಪ್ರೋಟೀನ್ ಭರಿತ ಬೀಜಗಳನ್ನು ಸೇವಿಸಬೇಕು.

ಕುಂಬಳಕಾಯಿ ಬೀಜಗಳು ಆರೋಗ್ಯಕರ ಜೀವನ ಶೈಲಿಯಲ್ಲಿ ಕುಂಬಳಕಾಯಿ ಬೀಜ ಸೇವನೆ ನಿಮಗೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕುಂಬಳಕಾಯಿ ಬೀಜ ನಿಮಗೆ ಪ್ರೋಟೀನ್ ಒದಗಿಸುತ್ತದೆ. ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಬೇಳೆ ಕಾಳುಗಳು ಸಸ್ಯಹಾರಿಗಳಿಗೆ ಬೇಳೆಕಾಳುಗಳು ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಬೇಳೆಕಾಳುಗಳು ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಷಿಯಂ, ಪಾಸ್ಪರಸ್ ಹೀಗೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ. ನಿಮ್ಮ ಹೃದಯ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹ ಬೇಳೆಕಾಳುಗಳು ಸಹಾಯಕ. ಹೆಸರು ಬೇಳೆ, ಹುರುಳಿ, ಉದ್ದು, ತೊಗರಿ ಸೇರಿದಂತೆ ಇತರ ಬೇಳೆ ಕಾಳುಗಳನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳಿ. ಇದು ನಿಮ್ಮ ಆರೋಗ್ಯ ಸುಧಾರಣೆಗೆ ಉತ್ತಮ ಪ್ರೋಟೀನ್ಅನ್ನು ಒದಗಿಸುತ್ತದೆ.

ಇದನ್ನೂ ಓದಿ:

Eye Care: ಸುಡುವ ಬಿಸಿಲಿನಲ್ಲಿ ನಿಮ್ಮ ಕಣ್ಣುಗಳ ಆರೋಗ್ಯ ರಕ್ಷಣೆ ಹೇಗೆ? ಇಲ್ಲಿದೆ ತಜ್ಞರ ಸಲಹೆಗಳು

Health Tips: ಕಹಿಯಾಗಿದ್ದರೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ 5 ಪದಾರ್ಥಗಳ ಬಗ್ಗೆ ತಿಳಿಯಿರಿ

Published On - 11:55 am, Mon, 1 November 21