Blind Singers : ‘ಕನ್ನಡದ ಚಾನೆಲ್​ಗಳೇ, ಇವರುಗಳ ಧ್ವನಿ ನಿಮ್ಮ ರಿಯಾಲಿಟಿ ಷೋ ತನಕ ತಲುಪಬಲ್ಲುದೆ?’

Self Reliant : ‘ಸ್ಟೋವ್ ಹಚ್ಚಿ ಸಣ್ಣಪುಟ್ಟ ಅಡುಗೆ ಮಾಡುತ್ತೇನೆ. ಡಬ್ಬಿ ಅಲುಗಾಡಿಸಿದರೆ ಸಕ್ಕರೆ, ಉಪ್ಪು ಯಾವುದೆಂದು ಗೊತ್ತಾಗುತ್ತದೆ. ಇತ್ತೀಚೆಗೆ ನನ್ನ ಎರಡು ವರ್ಷದ ಮಗ ಅಡುಗೆಮನೆಗೆ ಕರೆದುಕೊಂಡು ಹೋಗು, ರೂಮ್​ಗೆ ಕರೆದುಕೊಂಡು ಹೋಗು ಅಂದರೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ತರಬೇತಿಯ ನಂತರ ಯಾರ ಮೇಲೂ ಅವಲಂಬಿಸಿಲ್ಲ ಎನ್ನುವುದೇ ಜೀವನದ ಖುಷಿ’ ಮಂಜುಶ್ರೀ, ಗಾಯಕಿ

Blind Singers : ‘ಕನ್ನಡದ ಚಾನೆಲ್​ಗಳೇ, ಇವರುಗಳ ಧ್ವನಿ ನಿಮ್ಮ ರಿಯಾಲಿಟಿ ಷೋ ತನಕ ತಲುಪಬಲ್ಲುದೆ?’
ನಮಗೆ ಅವಕಾಶ ಬೇಕು ಅನುಕಂಪ ಬೇಡ
Follow us
ಶ್ರೀದೇವಿ ಕಳಸದ
|

Updated on:Nov 11, 2021 | 12:11 PM

Blind Artists : ಸಂಗೀತ ಕಾರ್ಯಕ್ರಮವಿದ್ದರೆ ಜೀವನ ನಡೆಯುತ್ತದೆ ಇಲ್ಲವಾದರೆ ಕುಂಟುತ್ತದೆ. ರಸ್ತೆಬದಿ ಹಾಡುವಾಗ ಟ್ರಾಫಿಕ್​ ಜಾಮ್ ಆಗುತ್ತದೆ ಎಂದು ಅಂಗಡಿಯವರು ಇವರನ್ನು ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ಕೆಲವು ಕಡೆ ಪೊಲೀಸರು, ಸೌಂಡ್ ಕಡಿಮೆ ಮಾಡಿಕೊಂಡು ಹಾಡಿ ಎಂದು ಹೇಳಿ ಸಹಾಯ ಮಾಡುತ್ತಾರೆ. ಇನ್ನೂ ಕೆಲವು ಕಡೆ ಮೈಕ್ ಕಿತ್ತುಕೊಂಡು ರೆಕಾರ್ಡ್ ಮಾಡಿರುವ ಹಾಡುಗಳನ್ನು ಪ್ಲೇ ಮಾಡುತ್ತಿದ್ದಾರೆ ಎಂದು ಭಾವಿಸಿ ಈಗ ಹಾಡಿ ಅಂತ ಪರೀಕ್ಷೆ ಮಾಡುತ್ತಾರೆ. ಇವರಿಗೆಲ್ಲ ಅವಮಾನದ ಜೊತೆಗೆ ಅದ್ಭುತವಾಗಿ ಹಾಡುತ್ತೀರಿ ಎಂದು ಶಾಲು ಹೊದಿಸಿ, ಹಾರ ಹಾಕಿ, ಹೂ ಕೊಟ್ಟು ಸನ್ಮಾನವನ್ನೂ ಮಾಡುತ್ತಾರೆ. ಆದರೆ ಎಷ್ಟು ದಿನ ಹೀಗೇ ಇವರು ಕುಂಟುತ್ತ ಸಾಗುವುದು? ಜ್ಯೋತಿ ಎಸ್. 

ಬೆಂಗಳೂರಿನ ವಿದ್ಯಾನಗರ ಕ್ರಾಸ್ ಬಳಿ ಇರುವ ಅಕ್ಕಯ್ಯಮ್ಮನ ಬೆಟ್ಟದ ಹತ್ತಿರ, ಬಸವಣ್ಣನ ಸರ್ಕಲ್ ಇದೆ. ಅದರ ಬಳಿ ಇರುವ ಉತ್ತನಹಳ್ಳಿಯಲ್ಲಿ ವಾಸವಾಗಿರುವ ದೃಷ್ಟಿ ವಿಶೇಷ ಚೇತನರನ್ನು ಈ ಸಲ ಭೇಟಿಯಾಗಲು ಹೋಗಿದ್ದೆ. ಕಣ್ಣು ಕಾಣಿಸುವವರಿಗೆ ಹೊರಗಣ್ಣಿಗೆ ಕಾಣುವಂಥದ್ದು ಮಾತ್ರ. ಆದರೆ, ದೃಷ್ಟಿ ವಿಶೇಷಚೇತನರಿಗೆ ಒಳಗಣ್ಣಿನಿಂದ ಜಗತ್ತನ್ನು ಸುಂದರವಾಗಿಸಿಕೊಳ್ಳುವ, ಅನುಭವಿಸುವ ವಿಶೇಷ ಸಾಮರ್ಥ್ಯವಿರುತ್ತದೆ. ಇವರ ಬದುಕು ಒಂದು ರೀತಿಯ ಗಟ್ಟಿತನವನ್ನು ಕಲಿಸಿರುತ್ತದೆ.

ಇಷ್ಟು ವರ್ಷ ಎಲ್ಲವನ್ನು ನೋಡಿಕೊಂಡು ಬೆಳೆದಿರುವ ನಾವೆಲ್ಲ, ಕೇವಲ ಒಂದು ದಿನ ಕಣ್ಣು ಕಾಣಿಸದೇ ಕತ್ತಲೆಯ ಜಗತ್ತನ್ನು, ಬದುಕನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯವೇ. ಹಾಗಿರುವಾಗ ಅಂಧರ ಬದುಕನ್ನೊಮ್ಮೆ ಕಲ್ಪಿಸಿಕೊಳ್ಳಿ. ಕಣ್ಣು ಕಳೆದುಕೊಂಡರೂ ಧೃತಿಗೆಡದೆ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದದ್ದೇ ಏನಾದರೂ ಸಾಧಿಸುವ ಹಂಬಲದಿಂದ ಎನ್ನುತ್ತಾರೆ ಅಂಜನಾಮೂರ್ತಿ ಟಿ. ‘ನಮ್ಮಲ್ಲಿ ಹಲವರು ಮೊಬಿಲಿಟಿ ಟ್ರೈನಿಂಗ್  ಮಾಡಿಕೊಂಡಿದ್ದಾರೆ. ಈ ತರಬೇತಿಯಲ್ಲಿ ಒಬ್ಬರೇ ಹೇಗೆ ಓಡಾಡುವುದು, ರಸ್ತೆ ದಾಟುವುದು, ಬಸ್ ಹತ್ತಿ ಪ್ರಯಾಣ ಮಾಡುವುದು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವುದು ಒಟ್ಟಾರೆ ಸ್ವಾವಲಂಬಿಯಾಗಿ ಜೀವನವನ್ನು ನಿರ್ವಹಿಸುವುದು ಹೇಗೆ ಎನ್ನುವುದನ್ನು ಕಲಿಸಿಕೊಡುತ್ತಾರೆ. ಈ ತರಬೇತಿಯನ್ನು ಪಡೆದ ನಾವು, ಯಾರನ್ನೂ ಅವಲಂಬಿಸದೆ ಬದುಕುತ್ತಿದ್ದೇವೆ’ ಎನ್ನುತ್ತಾರೆ.

ಗಾಯಕಿ ಮಂಜುಶ್ರೀ, ‘ನನ್ನ ಮೇಲೆ ನನಗೇ ತುಂಬಾ ಬೇಸರ ಬರುತ್ತಿತ್ತು. ಆದರೆ NAT (National Association for the Blind) ತರಬೇತಿ ಮಾಡಿದ ಮೇಲೆ ಧೈರ್ಯ ಬಂತು. ಮೊದಲು ಪ್ರಪಂಚದಲ್ಲಿ ನಾನೊಬ್ಬಳೇ ಅಂಧ ವ್ಯಕ್ತಿ ಅಂದುಕೊಂಡು ಖಿನ್ನಳಾಗಿದ್ದೆ. ಆದರೆ ಅಲ್ಲಿ ತರಬೇತಿಗೆ ಬಂದ ಎಷ್ಟೋ ಜನರಿಗೆ, ವ್ಯಕ್ತಿಯೊಬ್ಬರು ಯಾವ ದಿಕ್ಕಿಗೆ ನಿಂತಿದ್ದಾರೆ ಅವರೊಂದಿಗೆ ಮಾತನಾಡಬೇಕೆಂದರೆ ಯಾವ ಕಡೆ ತಿರುಗಬೇಕು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಹೀಗಿರುವಾಗ ನಾನ್ಯಾಕೆ ಚಿಂತೆ ಮಾಡಬೇಕು, ಧೈರ್ಯವೊಂದೇ ನಮ್ಮನ್ನು ಮುನ್ನಡೆಸುವುದು ಎನ್ನಿಸಿತು. ನಾನು ಧ್ವನಿಯಿಂದ ವ್ಯಕ್ತಿಗಳನ್ನು ಗುರುತಿಸುತ್ತೇನೆ. ಸ್ಟೋವ್ ಹಚ್ಚಿ ಸಣ್ಣ ಪುಟ್ಟ ಅಡುಗೆ ಮಾಡುತ್ತೇನೆ. ಸಕ್ಕರೆ, ಉಪ್ಪು ಯಾವುದು ಎಂದು ತಿಳಿಯಲು ಡಬ್ಬಿ ಅಲುಗಾಡಿಸಿದರೆ ಗೊತ್ತಾಗುತ್ತದೆ. ಸಕ್ಕರೆ ಡಬ್ಬದ ಶಬ್ಧ ಬೇರೆ. ಉಪ್ಪಿನ ಡಬ್ಬದ ಶಬ್ಧ ಬೇರೆ. ಇನ್ನೂ ಕೆಲವನ್ನು ವಾಸನೆಯಿಂದ, ಸ್ಪರ್ಶದಿಂದ ಕಂಡುಕೊಳ್ಳುತ್ತೇನೆ. ಇತ್ತೀಚೆಗೆ ನನ್ನ ಎರಡು ವರ್ಷದ ಮಗ ಅಡುಗೆ ಮನೆಗೆ ಕರೆದುಕೊಂಡು ಹೋಗು. ರೂಮ್​ಗೆ ಕರೆದುಕೊಂಡು ಹೋಗು ಅಂದರೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ಯಾರ ಮೇಲೂ ಅವಲಂಬಿಸಿಲ್ಲ ಎನ್ನುವುದೇ ಜೀವನದ ಖುಷಿ’ ಎನ್ನುತ್ತಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಂದ್ರಗಿರಿಯವರಾದ ಮಲ್ಲಿಕಾರ್ಜುನ ವಾಲಿಕಾರ್, ಶರಣಪ್ಪ ಸಂಕನೂರು ನೇತೃತ್ವದಲ್ಲಿ ಸ್ನೇಹಜೀವಿ, ಮತ್ತು ಜೀವನ ಮಾರ್ಗ ಎಂಬ ಎರಡು ಕಲಾತಂಡಗಳನ್ನು ಕಟ್ಟಿಕೊಂಡಿದ್ದಾರೆ. ಮದುವೆ, ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬ, ಜಾತ್ರೆ ಮಹೋತ್ಸವ, ಹುಟ್ಟುಹಬ್ಬ ಮತ್ತು ಎಲ್ಲಾ ರೀತಿಯ ಶುಭಸಮಾರಂಭಗಳಲ್ಲಿಯೂ ಕರೋಕೆ ಮತ್ತು ವಾದ್ಯಗಳೊಂದಿಗೆ ಕಾರ್ಯಕ್ರಮಗಳನ್ನು ನೀಡುತ್ತಾರೆ. ಕಾರ್ಯಕ್ರಮಗಳು ಇಲ್ಲದಿರುವಾಗ ಯಲಹಂಕ, ಕೋರಮಂಗಲ, ಹೆಚ್ಎಸ್ಆರ್ ಲೇಔಟ್, ಜಯನಗರ, ಬಿಟಿಎಂ ಲೇಔಟ್, ಮಲ್ಲೇಶ್ವರಂ, ಕಲ್ಯಾಣನಗರ, ಕೆಂಪಾಪುರ, ಹೀಗೆ ಪ್ರತಿದಿನ ಒಂದೊಂದು ಕಡೆ ಮಲ್ಲಿಕಾರ್ಜುನ್ ವಾಲಿಕಾರ್, ಮಂಜುಶ್ರೀ, ಶರಣಪ್ಪ ಸಂಕನೂರು, ಗೌತಮ್ ಕುಮಾರ್, ಶ್ರೀಧರ್, ರಂಗನಾಥ್ ಇನ್ನೂ 15 ಮಂದಿ ಕಲಾವಿದರನ್ನು ಒಳಗೊಂಡ ತಂಡ ಭಾವಗೀತೆ, ಜಾನಪದ ಗೀತೆ, ಚಿತ್ರಗೀತೆ, ಭಕ್ತಿಗೀತೆಯಂತಹ ಹಾಡುಗಳನ್ನು ಹಾಡುತ್ತಾರೆ. ಕನಿಷ್ಟ ಮೂರು ಗಂಟೆಗಳ ಕಾಲ ಕಾರ್ಯಕ್ರಮ ಕೊಡುತ್ತಾರೆ.

ಕಣ್ಣು ಕಳೆದುಕೊಂಡರೂ ಧೃತಿಗೆಡದೆ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದದ್ದೇ ಏನಾದರೂ ಸಾಧಿಸುವ ಹಂಬಲದಿಂದ ಎನ್ನುತ್ತಾರೆ ಅಂಜನಮೂರ್ತಿ ಟಿ. ‘ನಾನು 3 ವರ್ಷದ ಮಗುವಿರುವಾಗ ದಢಾರ ಬಂದು ಚಿಕಿತ್ಸೆ ಫಲಕಾರಿಯಾಗದೆ ಎರಡೂ ಕಣ್ಣುಗಳ ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡೆ. ಎಸ್ಎಸ್ಎಲ್​ಸಿವರೆಗೂ ಓದಿದೆ. ಆದರೆ ಮುಂದೆ ಓದುವ ಆಸೆ ಇದ್ದರೂ ಬಡತನ ಅಡ್ಡಿಯಾಯಿತು. ನನಗೆ ಚಿಕ್ಕಂದಿನಿಂದಲೂ ಸಂಗೀತವೆಂದರೆ ಬಹಳ ಆಸಕ್ತಿ. ನಾಲ್ಕೈದು ಸಲ ಕೇಳಿದರೆ ಸಾಕು ಕಲಿತು ಕರೋಕೆ ಜೊತೆ ಹಾಡಲು ಸಿದ್ಧವಾಗಿಬಿಡುತ್ತೇನೆ. ಅದೇ ನನಗೆ ಆಧಾರವಾಯಿತು. ನನಗೀಗ 28 ವರ್ಷ ಮದುವೆಯಾಗಿದೆ. ಒಂದು ಪುಟ್ಟ ಮಗುವಿದೆ.’

‘ಕಾರ್ಯಕ್ರಮವಿದ್ದರೆ ಜೀವನ ನಡೆಯುತ್ತದೆ ಇಲ್ಲವಾದರೆ ಕುಂಟುತ್ತದೆ. ರಸ್ತೆಬದಿ ಹಾಡುವಾಗ ಟ್ರಾಫಿಕ್​ ಜಾಮ್ ಆಗುತ್ತದೆ ಎಂದು ಅಂಗಡಿಯವರು ನಮ್ಮನ್ನು ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ಕೆಲವು ಕಡೆ ಪೊಲೀಸರು, ಸೌಂಡ್ ಕಡಿಮೆ ಮಾಡಿಕೊಂಡು ಹಾಡಿ ಎಂದು ಹೇಳಿ ಸಹಾಯ ಮಾಡುತ್ತಾರೆ. ಇನ್ನೂ ಕೆಲವು ಕಡೆ ಮೈಕ್ ಕಿತ್ತುಕೊಂಡು ರೆಕಾರ್ಡ್ ಮಾಡಿರುವ ಹಾಡುಗಳನ್ನು ಪ್ಲೇ ಮಾಡುತ್ತಿದ್ದೇವೆ ಎಂದು ಭಾವಿಸಿ ಈಗ ಹಾಡಿ ಅಂತ ಪರೀಕ್ಷೆ ಮಾಡಿದ್ದೂ ಇದೆ. ನಮಗೆಲ್ಲ ಅವಮಾನದ ಜೊತೆಗೆ ಅದ್ಭುತವಾಗಿ ಹಾಡುತ್ತೀರಿ ಎಂದು ಶಾಲು ಹೊದಿಸಿ, ಹಾರ ಹಾಕಿ, ಹೂ ಕೊಟ್ಟು ಸನ್ಮಾನ ಮಾಡಿದ್ದೂ ಇದೆ.’

A story of blind artists by jyothi s

ನಮಗೂ ಕನಸುಗಳಿವೆ ನಮಗೂ ಕುಟುಂಬವಿದೆ 

‘ಮೊಬೈಲ್​ನಲ್ಲಿ ಟಾಕ್ ಬ್ಯಾಕ್ ಆಪ್ಷನ್ ಆನ್ ಮಾಡಿದರೆ ನಮಗೆ ಮೊಬೈಲನ್ನು ಉಪಯೋಗಿಸಲು ಸುಲಭವಾಗುತ್ತದೆ. ಸ್ವಲ್ಪ ಇಂಗ್ಲಿಷ್ ಜ್ಞಾನ ಇದ್ದರೆ ಉಪಯೋಗಿಸುವುದು ಬಹಳ ಸುಲಭ. ಗೂಗಲ್, ಯೂಟ್ಯೂಬ್ ನಿಂದ ಹಾಡುಗಳನ್ನು ಕೇಳುತ್ತೇವೆ. ಡೌನ್ಲೋಡ್ ಮಾಡಿಕೊಂಡು ಕಲಿಯುತ್ತೇವೆ. ಮೊದಲು ತುಂಬಾ ಸಿನೆಮಾಗಳನ್ನು ನೋಡುತ್ತಿದ್ದೆ, ನೋಡುತ್ತಿದ್ದೆ ಎಂದರೆ ಕೇಳುತ್ತಿದ್ದೆ. ಎಷ್ಟು ಹುಚ್ಚಿತ್ತೆಂದರೆ ಊಟ ಬಿಟ್ಟಾದರೂ ಸಿನೆಮಾಗೆ ಕಿವಿಕೊಡುತ್ತಿದ್ದೆ. ಅದರಲ್ಲೂ ಶಿವರಾಜ್​ಕುಮಾರ್ ಅಭಿನಯದ ಎಲ್ಲಾ ಸಿನೆಮಾಗಳನ್ನು ಕೇಳಿಸಿಕೊಂಡಿದ್ದೇನೆ. ಶಿವರಾಜ್​ಕುಮಾರ್ ಸುಧಾರಾಣಿ ಅಭಿನಯದ ‘ಮನ ಮೆಚ್ಚಿದ ಹುಡುಗಿ’ ನನ್ನ ತುಂಬಾ ಇಷ್ಟದ ಸಿನೆಮಾ. ನಮ್ಮಲ್ಲಿ ಭರತನಾಟ್ಯ ಕಲಾವಿದರು, ಮಿಮಿಕ್ರಿ ಮಾಡುವವರು ಮತ್ತು ಸಿನೆಮಾಗಳಲ್ಲಿ ಅಭಿನಯಿಸಿದವರೂ ಇದ್ದಾರೆ. ಬೆಲ್ ಬಾಟಮ್ ಚಿತ್ರದಲ್ಲಿ ನಮ್ಮ ತಂಡದ ಶರಣಪ್ಪ ಸಂಕನೂರು ಅವರು ಅಂಧರ ಪಾತ್ರದಲ್ಲಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ.

ಮಳೆ ಬಂದರೆ ಇವರಿಗೆ ತುಂಬಾ ಕಷ್ಟ. ‘ಕಾರ್ಯಕ್ರಮ ಮಾಡಲು ಸಾಧ್ಯವಾಗುವುದಿಲ್ಲ. ಬಾಡಿಗೆ ಆಟೋ ಮಾಡಿಕೊಂಡು ಓಡಾಡಿ ಕಾರ್ಯಕ್ರಮ ಮಾಡುತ್ತಾರೆ. ಅಂತಹ ಸಮಯದಲ್ಲಿ ಕುಟುಂಬವನ್ನು ಸಂಭಾಳಿಸುವುದು ಕಷ್ಟವಾಗುತ್ತದೆ. ಕೊರೋನಾದಲ್ಲಿ ಯಾರೆಲ್ಲ ಫುಡ್ ಕಿಟ್ ಒದಗಿಸಿದ್ದರಿಂದ ಊಟಕ್ಕೆ ತೊಂದರೆಯಾಗಿಲ್ಲ.  ಉಳಿದಂತೆ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಆ ಸಾಲವನ್ನು ಇನ್ನೂ ತೀರಿಸುತ್ತಿದ್ದೇವೆ’ಎನ್ನುತ್ತಾರೆ ಮಂಜುನಾಥ್ ವಾಲಿಕಾರ್.

ಕೊರೋನಾಗೆ ಮೊದಲು ಆರೇಳು ಅಂಧ ಕಿಡ್ನಿ ಪೇಷಂಟ್​ಗಳಿಗೆ ಔಷಧಿಯ ಸಲುವಾಗಿ ನಮ್ಮ ತಂಡದಿಂದ  ಕಾರ್ಯಕ್ರಮಗಳನ್ನು ಮಾಡಿ ಅದರಿಂದ ಬಂದ ಹಣದಿಂದ ಸಹಾಯ ಮಾಡುತ್ತಿದ್ದೆವು. ಅವಶ್ಯಕತೆ ಇರುವವರಿಗೆ ಊಟ ವಸತಿಯೊಂದಿಗೆ 45 ದಿನಗಳ ಉಚಿತ ಕಂಪ್ಯೂಟರ್ ತರಬೇತಿಯನ್ನು ಕೊಡಿಸುತ್ತಿದ್ದೆವು. ಈಗ ಅದೆಲ್ಲವೂ ನಿಂತಿದೆ. ಯಾರಾದರೂ ಸಹಾಯ ಮಾಡಿದರೆ ಊದಿನಕಡ್ಡಿ, ಮೇಣದಬತ್ತಿ ತಯಾರಿಕೆಯ ಸ್ವಉದ್ಯೋಗ ಆರಂಭಿಸುವ ಕನಸಿದೆ ಎನ್ನುತ್ತಾರೆ ಮಂಜುಶ್ರೀ, ಶರಣಪ್ಪ ಸಂಕನೂರು, ಮಂಜುನಾಥ್ ವಾಲಿಕಾರ್ ಇನ್ನಿತರರು.

ಇವರಿಗೆಲ್ಲ ಕನ್ನಡದ ರಿಯಾಲಿಟಿ ಷೋಗಳಲ್ಲಿ ಹಾಡುವ ಕನಸಿದೆ. ಉಳಿದಂತೆ ಇವರ ಜೀವನದಲ್ಲಿ ನಮ್ಮ ಪಾತ್ರವೇನು? ಜವಾಬ್ದಾರಿಗಳೇನು? ಪರೀಕ್ಷೆ ಬರೆಯಲು ಪರೀಕ್ಷಾ ಸಹಾಯಕರಾಗಿ ನೆರವಾಗಬಹುದು. ನಮ್ಮ ಗಮನಕ್ಕೆ ಬಂದ ಸರ್ಕಾರಿ ಸೌಲಭ್ಯಗಳನ್ನು, ಹಕ್ಕುಗಳನ್ನು ಪ್ರಯೋಜನಗಳನ್ನು ಇವರಿಗೆ ತಲುಪಿಸಬಹುದು. ಇವರ ಓದಿಗೆ ಬೇಕಾಗುವ ಪಠ್ಯಗಳನ್ನು ರೆಕಾರ್ಡ್ ಮಾಡಿ ತಲುಪಿಸಬಹುದು. ಅವರು ಹೇಳುವುದು, ಅನುಕಂಪ ಬೇಡ ಅವಕಾಶ ಕೊಡಿ ಎಂದು.

ಯಾವ ಕಾರ್ಯಕ್ರಮಗಳಿಗೂ ಇವರು ಹಾಡುತ್ತಾರೆ. ಸಂಪರ್ಕಿಸಿ : ಮಲ್ಲಿಕಾರ್ಜುನ್ ವಾಲಿಕಾರ್ : 9743942673 ಶರಣಪ್ಪ ಸಂಕನೂರು : 8971812311

ಇದನ್ನೂ ಓದಿ : Kannada Rajyotsava : ‘ನಾನು ಮಹಾರಾಷ್ಟ್ರದ ಹೆಣ್ಣನ್ನೇ ಮದುವೆಯಾಗಿರುವುದಕ್ಕೆ ಕಾರಣವಿದೆ’

Published On - 12:06 pm, Thu, 11 November 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ