AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oxfam India Survey: ಭಾರತದ ಟಾಪ್ 10​ ಶ್ರೀಮಂತರ ಸಂಪತ್ತಲ್ಲಿ 25 ವರ್ಷಗಳ ತನಕ ಮಕ್ಕಳಿಗೆ ನೀಡಬಹುದಂತೆ ಶಿಕ್ಷಣ

ಭಾರತದ ಅತಿ ಶ್ರೀಮಂತರ ಬಳಿ ಎಷ್ಟು ಸಂಪತ್ತಿದೆ? ಹೆಚ್ಚುವರಿಯಾಗಿ ತೆರಿಗೆ ವಿಧಿಸಿದರೆ ಹಾಗೂ ಆ ಸಂಪತ್ತಿನ ಮೂಲಕ ಏನೆಲ್ಲ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಕೆಲಸಗಳನ್ನು ಮಾಡಬಹುದು ಎಂಬುದನ್ನು ಅಂಕಿ-ಅಂಶಗಳ ಸಹಿತ ಆಕ್ಸ್​ಫಾಮ್ ಸಮೀಕ್ಷೆ ತೆರೆದಿಟ್ಟಿದೆ.

Oxfam India Survey: ಭಾರತದ ಟಾಪ್ 10​ ಶ್ರೀಮಂತರ ಸಂಪತ್ತಲ್ಲಿ 25 ವರ್ಷಗಳ ತನಕ ಮಕ್ಕಳಿಗೆ ನೀಡಬಹುದಂತೆ ಶಿಕ್ಷಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 17, 2022 | 11:09 AM

Share

ಭಾರತದ ಶತಕೋಟ್ಯಧಿಪತಿಗಳ ಒಟ್ಟಾರೆ ಆಸ್ತಿ ಕೊವಿಡ್- 19 ಬಿಕ್ಕಟ್ಟಿನ ಕಾಲಘಟ್ಟದಲ್ಲಿ ದುಪ್ಪಟ್ಟಿಗೂ ಹೆಚ್ಚಾಗಿದೆ. ಮತ್ತು ಅವರ ಲೆಕ್ಕಾಚಾರವು ಶೇ 39ರಿಂದ 142ಕ್ಕೆ ಹೆಚ್ಚಳವಾಗಿದೆ. ಇನ್ನೂ ಆಸಕ್ತಿಕರ ವಿಚಾರ ಏನೆಂದರೆ, ಅತಿ ಶ್ರೀಮಂತರು ಎಂದು ಟಾಪ್ ಟೆನ್ ಪಟ್ಟಿಯಲ್ಲಿ ಇರುವವರ ಆಸ್ತಿಯ ಮೂಲಕ ದೇಶದ ಮಕ್ಕಳಿಗೆ ಮುಂದಿನ 25 ವರ್ಷ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಹಣಕಾಸು ನೆರವು ನೀಡಬಹುದು ಎಂದು ಹೊಸ ಅಧ್ಯಯನವು ಸೋಮವಾರ ತೋರಿಸಿದೆ. ವಾರ್ಷಿಕ ಅಸಮಾನತೆ ಸಮೀಕ್ಷೆಯನ್ನು ದಾವೋಸ್​ನಲ್ಲಿನ ವಿಶ್ವ ಆರ್ಥಿಕ ಫೋರಂನಲ್ಲಿ (World Economic Forum) ಕಾರ್ಯಸೂಚಿ ಸಮೀಕ್ಷೆಯಲ್ಲಿ ಮೊದಲ ದಿನ ಬಿಡುಗಡೆ ಮಾಡಲಾಯಿತು. ಆಕ್ಸ್​ಫಾಮ್ ಇಂಡಿಯಾ (Oxfam India) ಮತ್ತೂ ಮುಂದುವರಿದು, ಒಂದು ವೇಳೆ ದೇಶದ ಅತಿ ಶ್ರೀಮಂತರ ಸಮೂಹದಲ್ಲಿ ಇರುವ ಶೇ 10ರಷ್ಟು ಮಂದಿಗೆ ಕೇವಲ ಶೇ 1ರಷ್ಟು ಹೆಚ್ಚು ತೆರಿಗೆ ವಿಧಿಸಿದರೂ ದೇಶದಲ್ಲಿ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರ್ ಒದಗಿಸಬಹುದು ಎಂದಿದೆ. ಅದೇ ರೀತಿ ಶ್ರೀಮಂತಿಕೆ ತೆರಿಗೆಯನ್ನು 98 ಶ್ರೀಮಂತ ಬಿಲಿಯನೇರ್ ಕುಟುಂಬಗಳಿಗೆ ಹಾಕಿದಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಆದ ಆಯುಷ್ಮಾನ್​ ಭಾರತ್​ಗೆ ಏಳು ವಷ್ಟಕ್ಕೂ ಹೆಚ್ಚು ಹಣಕಾಸಿನ ನೆರವು ನೀಡಬಹುದು ಎಂದು ಲೆಕ್ಕಾಚಾರ ಮುಂದಿಡುತ್ತದೆ.

ಕಳೆದ ವರ್ಷ ಕೊರೊನಾ ಎರಡನೇ ಅಲೆಯ ವೇಳೆ ಆಮ್ಲಜನಕ ಸಿಲಿಂಡರ್​ಗೆ ಮತ್ತು ಇನ್ಷೂರೆನ್ಸ್ ಕ್ಲೇಮ್​ಗೆ ಭಾರೀ ಬೇಡಿಕೆ ಕಂಡುಬಂತು. ಸಂಪತ್ತಿನ ಅಸಮಾನತೆ ಬಗ್ಗೆ ಆಖ್ಸ್​ಫಾಮ್ ವರದಿ ಇನ್ನೂ ಮುಂದುವರಿದು, 142 ಭಾರತೀಯರ ಬಳಿ ಒಟ್ಟಾರೆಯಾಗಿ 53 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತಿದೆ. ಭಾರತದಲ್ಲಿ ಶೇ 40ರಷ್ಟು ಅತಿ ಬಡವರು ಎನಿಸಿಕೊಂಡು ತಳಮಟ್ಟದಲ್ಲಿ ಇರುವ 55.5 ಕೋಟಿ ಜನರ ಬಳಿ ಒಟ್ಟಾರೆ ಸಂಪತ್ತು 49 ಲಕ್ಷ ಕೋಟಿ ರೂಪಾಯಿ ಇದ್ದರೆ, ಭಾರತದ ಅತಿ ಶ್ರೀಮಂತರು ಎನಿಸಿಕೊಂಡ 98 ಮಂದಿ ಬಳಿ ಹೆಚ್ಚೂ ಕಡಿಮೆ ಅದೇ ಪ್ರಮಾಣದ ಆಸ್ತಿ ಇದೆ.

10 ಮಂದಿ ಅತಿ ಶ್ರೀಮಂತ ಭಾರತೀಯರು ತಲಾ 10 ಲಕ್ಷ ಯುಎಸ್​ಡಿ ಅಂತ ಖರ್ಚು ಮಾಡಿದರೂ (ದಿನಕ್ಕೆ 7 ಕೋಟಿ ರೂಪಾಯಿಗೂ ಹೆಚ್ಚು) ತಮ್ಮೆಲ್ಲ ಸಂಪತ್ತನ್ನು ಖಾಲಿ ಮಾಡುವುದಕ್ಕೆ 84 ವರ್ಷ ಬೇಕಾಗುತ್ತದೆ. ಮಲ್ಟಿ ಮಿಲಿಯನೇರ್​ಗಳು ಮತ್ತು ಬಿಲಿಯನೇರ್​ಗಳ ಮೇಲೆ ವಾರ್ಷಿಕ ಸಂಪತ್ತಿನ ತೆರಿಗೆ ಹಾಕಿದರೆ 7830 ಕೋಟಿ ಅಮೆರಿಕನ್ ಡಾಲರ್​ನಷ್ಟು ಒಂದು ವರ್ಷಕ್ಕೆ ಸಂಗ್ರಹ ಆಗುತ್ತದೆ. ಆ ಮೊತ್ತದಿಂದ ಸರ್ಕಾರದ ಆರೋಗ್ಯ ಬಜೆಟ್ ಶೇ 271ರಷ್ಟು ಹೆಚ್ಚಿಸಬಹುದು. ಆರಂಭದಲ್ಲಿ ಕೊವಿಡ್​ ಕಾಣಿಸಿಕೊಂಡಿದ್ದು ಆರೋಗ್ಯ ಬಿಕ್ಕಟ್ಟು ಎಂಬಂತೆ. ಆದರೆ ಈಗ ಆರ್ಥಿಕತೆಗೆ ಸಂಬಂಧಿಸಿದ್ದಾಗಿದೆ. ಭಾರತದ ಶೇ 10ರಷ್ಟು ಅತಿ ಶ್ರೀಮಂತರು ಶೇ 45ರಷ್ಟು ರಾಷ್ಟ್ರೀಯ ಸಂಪತ್ತನ್ನು ಹೊಂದಿದ್ದರೆ, ತಳ ಮಟ್ಟದಲ್ಲಿ ಇರುವ ಶೇ 50ರಷ್ಟು ಜನಸಂಖ್ಯೆಯ ಬಳಿ ಕೇವಲ ಶೇ 6ರಷ್ಟಿದೆ.

ಸರ್ಕಾರದಿಂದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಗಾಗಿ ಮಾಡುತ್ತಿರುವ ವೆಚ್ಚ ಸಾಕಾಗುತ್ತಿಲ್ಲ. ಇದರಿಂದಾಗಿ ಆರೋಗ್ಯ ಮತ್ತು ಶಿಕ್ಷಣ ಖಾಸಗೀಕರಣ ಆಗುತ್ತಿದೆ. ಆ ಕಾರಣಕ್ಕೆ ಸಂಪೂರ್ಣ ಮತ್ತು ಸುರಕ್ಷಿತ ಕೊವಿಡ್- 19 ಚೇತರಿಕೆ ಎಂಬುದು ಸಾಮಾನ್ಯ ನಾಗರಿಕರಿಗೆ ಕೈಗೆ ಎಟುಕದಂತಾಗಿದೆ.

ಇದನ್ನೂ ಓದಿ: Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ