AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಇಬ್ಬರ ಹತ್ಯೆ ಖಂಡಿಸಿ ಮುಖ್ಯಮಂತ್ರಿ ಮನೆಯೆದುರೇ ಶವವಿಟ್ಟು ಪ್ರತಿಭಟನೆ

ಮಣಿಪುರದಲ್ಲಿ ಮತ್ತೊಮ್ಮೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ಇಂಫಾಲ್ ಪೂರ್ವ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಯ ಗಡಿ ಭಾಗದಲ್ಲಿ ಇಂದು ಬೆಳಿಗ್ಗೆ ಸೌದೆ ಸಂಗ್ರಹಿಸಲು ಅರಣ್ಯಕ್ಕೆ ತೆರಳಿದ್ದ ಇಬ್ಬರು ವ್ಯಕ್ತಿಗಳನ್ನು ಉಗ್ರರು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ನಾಗರಿಕರು ಹಾಗೂ ಮೃತರ ಸಂಬಂಧಿಕರು, ಹತ್ಯೆಯಾದ ಇಬ್ಬರ ಮೃತದೇಹಗಳನ್ನು ಇಂಫಾಲ್‌ನಲ್ಲಿರುವ ಮುಖ್ಯಮಂತ್ರಿ ವೈ. ಖೇಮ್ಚಂದ್ ಸಿಂಗ್ ಅವರ ಅಧಿಕೃತ ನಿವಾಸದ ಮುಖ್ಯ ಗೇಟ್ ಮುಂಭಾಗ ತಂದಿಟ್ಟು ಭಾರಿ ಪ್ರತಿಭಟನೆ ನಡೆಸಿದರು. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸುಮಾರು 16 ಜನರ ಗುಂಪು ತಮ್ಮ ಗ್ರಾಮದ ಸಮೀಪದ ಬೆಟ್ಟಗಳಿಗೆ ತೆರಳಿದ್ದಾಗ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಇಬ್ಬರ ಹತ್ಯೆ ಖಂಡಿಸಿ ಮುಖ್ಯಮಂತ್ರಿ ಮನೆಯೆದುರೇ ಶವವಿಟ್ಟು ಪ್ರತಿಭಟನೆ
ಮಣಿಪುರದಲ್ಲಿ ಇಬ್ಬರ ಹತ್ಯೆImage Credit source: TV9
ಸುಷ್ಮಾ ಚಕ್ರೆ
|

Updated on: Oct 19, 2026 | 3:23 PM

Share

ಇಂಫಾಲ್, ಅಕ್ಟೋಬರ್ 19: ಮಣಿಪುರದಲ್ಲಿ ಮುಂದುವರಿದಿರುವ ಹಿಂಸಾಚಾರದ ನಡುವೆ, ಇಬ್ಬರು ವ್ಯಕ್ತಿಗಳ ಹತ್ಯೆಯನ್ನು ವಿರೋಧಿಸಿ ಸ್ಥಳೀಯರು ಮಣಿಪುರ ಮುಖ್ಯಮಂತ್ರಿ ವೈ. ಖೇಮ್ಚಂದ್ ಸಿಂಗ್ ಅವರ ಇಂಫಾಲ್‌ನಲ್ಲಿರುವ ಬಂಗಲೆಯ ಗೇಟ್ ಮುಂಭಾಗದಲ್ಲಿ ಮೃತದೇಹಗಳನ್ನು ತಂದು ಇಟ್ಟ ಘಟನೆ ಇಂದು ನಡೆಯಿತು. ಇದು ಭದ್ರತಾ ಸಿಬ್ಬಂದಿಯನ್ನು ದಂಗುಬಡಿಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು.

ಇಂದು ಬೆಳಿಗ್ಗೆ ಅರಣ್ಯಕ್ಕೆ ಸೌದೆ ಸಂಗ್ರಹಿಸಲು ಹೋಗಿದ್ದ ಇಬ್ಬರು ಮೈತೇಯ್ ಸಮುದಾಯದ ಪುರುಷರನ್ನು ಕುಕಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ  ಹತ್ಯೆಗಳು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದ್ದು, ಮೃತದೇಹಗಳನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಎದುರು ಇಟ್ಟು ಪ್ರತಿಭಟನೆ ನಡೆಸಲಾಗಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಐವರು ಸಾವು, 30 ಮನೆಗಳು ಬೆಂಕಿಗಾಹುತಿ

ಇಂಫಾಲ್ ಪೂರ್ವ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿ ಸೌದೆ ಸಂಗ್ರಹಿಸಲು ತೆರಳಿದ್ದ ಗುಂಪಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಮೃತಪಟ್ಟಿರುವುದಲ್ಲದೆ, ಇತರ ನಾಲ್ವರು ಗಾಯಗೊಂಡಿದ್ದಾರೆ. ಹತ್ಯೆಗೊಳಗಾದವರನ್ನು ಅರುಬಮ್ ರೊನಿಲ್ (35) ಮತ್ತು ಲೈರೆನ್‌ಲಾಕ್ಪಮ್ ಇನೋಬಿ (51) ಎಂದು ಗುರುತಿಸಲಾಗಿದೆ. ಇಂಫಾಲ್ ಪೂರ್ವದ ನಾಂಗ್‌ಶುಮ್ ಗ್ರಾಮದ ಸಮೀಪವಿರುವ ಕಾಂಗ್‌ಪೋಕ್ಪಿಯ ಖೋಂಗ್‌ಬಲ್ ಸುನುರೋಕ್ ಉಯೋಕ್ ಎಂಬಲ್ಲಿ ನಡೆದ ಈ ಘಟನೆಯಲ್ಲಿ ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಅಧಿಕಾರಿಗಳ ಪ್ರಕಾರ, ತಮ್ಮ ಗ್ರಾಮದ ಸಮೀಪವಿರುವ ಬೆಟ್ಟಗಳಿಗೆ ಸುಮಾರು 16 ಜನರ ಗುಂಪು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸೌದೆ ಸಂಗ್ರಹಿಸಲು ತೆರಳಿದಾಗ ಈ ದಾಳಿ ನಡೆದಿದೆ. ಪ್ರತಿಭಟನೆ ವೇಳೆ ಮುಖ್ಯಮಂತ್ರಿ ವೈ. ಖೇಮ್ಚಂದ್ ಸಿಂಗ್ ಅವರು ನಿವಾಸದಲ್ಲಿ ಇದ್ದರೇ ಎಂಬುದು ಸ್ಪಷ್ಟವಾಗಿಲ್ಲ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಲವು ಸುತ್ತು ಅಶ್ರುವಾಯು ಗೋಂಡೆಗಳನ್ನು ಹಾರಿಸಿದರು. ನಂತರ ಮೃತದೇಹಗಳನ್ನು ಜವಾಹರಲಾಲ್ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ಸಾಗಿಸಲಾಯಿತು.

ಇದನ್ನೂ ಓದಿ: ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ

ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ, ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯ ಚಸ್ಸಾದ್‌ನಲ್ಲಿರುವ ಕುಕಿ ಗ್ರಾಮದಲ್ಲಿ ಶನಿವಾರ ಕುಕಿ ಮತ್ತು ನಾಗಾ ಸಮುದಾಯಗಳ ಸಶಸ್ತ್ರ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 36 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More