
ನವದೆಹಲಿ, ಏಪ್ರಿಲ್ 29: ಈಗಾಗಲೇ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ (Assermbly Electiopns 2026) ನಡೆದಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶಗಳ ಮೊದಲು ಎಲ್ಲರ ಗಮನವು ಚುನಾವಣೋತ್ತರ ಸಮೀಕ್ಷೆಗಳ (Exit Poll Results) ಮೇಲೆ ಇದೆ. ಇದಿಗ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಯಾವ ಸಮೀಕ್ಷೆ ಏನು ಹೇಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಎಕ್ಸಿಟ್ ಪೋಲ್ ಹೊರಬಿದ್ದಿದೆ. ಎಕ್ಸಿಟ್ ಪೋಲ್ ಪ್ರಕಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಗೆಲುವಿನ ನಗು ಬೀರಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ. ಪುದುಚೇರಿಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Tamil Nadu Elections: 74 ವರ್ಷದ ದಾಖಲೆ ಮುರಿದ ತಮಿಳುನಾಡು; ಇಂದಿನ ಚುನಾವಣೆಯಲ್ಲಿ ಶೇ. 84ರಷ್ಟು ಮತದಾನ
ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಿತು. ಇಂದು ಪಶ್ಚಿಮ ಬಂಗಾಳದ 2ನೇ ಮತ್ತು ಕೊನೆಯ ಹಂತದ ಮತದಾನ ನಡೆದಿದೆ. ನಿಖರವಾದ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.
ಕೇರಳದಲ್ಲಿ ಬಿಜೆಪಿ 10 ರಿಂದ 14 ಸ್ಥಾನಗಳನ್ನು ಗಳಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 146 ರಿಂದ 161 ಸ್ಥಾನಗಳನ್ನು ಪಡೆಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಪ್ಲಸ್ 120 ರಿಂದ 140 ಸ್ಥಾನಗಳನ್ನು ಪಡೆಯಲಿದೆ. ಅಸ್ಸಾಂನಲ್ಲಿ ಬಿಜೆಪಿ ಪ್ಲಸ್ 88 ರಿಂದ 100 ಸ್ಥಾನಗಳನ್ನು ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಂದಾಜಿಸಿವೆ.
ಅಸ್ಸಾಂ ರಾಜ್ಯದಲ್ಲಿ ಯಾರಿಗೆ ಬಹುಮತ?
ಜೆವಿಸಿ ಸಮೀಕ್ಷೆ:
ಎನ್‌ಡಿಎ: 88–101 ಸ್ಥಾನಗಳು
ಕಾಂಗ್ರೆಸ್: 23 ಮತ್ತು 33 ಸ್ಥಾನಗಳು
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
ಬಿಜೆಪಿ: 88-100 ಸ್ಥಾನಗಳು
ಕಾಂಗ್ರೆಸ್: 24-36 ಸ್ಥಾನಗಳು
ವೋಟ್ ವೈಬ್ ಸಮೀಕ್ಷೆ:
ಬಿಜೆಪಿ: 90-100
ಕಾಂಗ್ರೆಸ್: 23-33
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
ಬಿಜೆಪಿ: 88-101
ಕಾಂಗ್ರೆಸ್: 23-33
ಚಾಣಕ್ಯ ಸ್ಟ್ರಾಟಜೀಸ್:
ಬಿಜೆಪಿ: 88-98
ಕಾಂಗ್ರೆಸ್: 22-32
ಮ್ಯಾಟ್ರಿಜ್ ಸಮೀಕ್ಷೆ
ಬಿಜೆಪಿ: 85-95
ಕಾಂಗ್ರೆಸ್: 25-32
PMARQ ಸಮೀಕ್ಷೆ:
ಬಿಜೆಪಿ: 82-94
ಕಾಂಗ್ರೆಸ್: 30-40
ಕೇರಳದಲ್ಲಿ ಯಾರಿಗೆ ಸಿಗಲಿದೆ ಅಧಿಕಾರ?
ಆಕ್ಸಿಸ್ ಮೈ ಇಂಡಿಯಾ
ಯುಡಿಎಫ್: 78–90
ಎಲ್‌ಡಿಎಫ್: 49–62
ಎನ್‌ಡಿಎ: 0–3
ಮ್ಯಾಟ್ರಿಜ್ ಸಮೀಕ್ಷೆ:
ಯುಡಿಎಫ್: 70–75
ಎಲ್‌ಡಿಎಫ್: 60–65
ಎನ್‌ಡಿಎ: 3-5
ವೋಟ್‌ವೈಬ್ ಸಮೀಕ್ಷೆ:
ಎಲ್‌ಡಿಎಫ್: 58-68
ಯುಡಿಎಫ್: 70-80
ಎನ್‌ಡಿಎ: 0-4
ಪೀಪಲ್ಸ್ ಪಲ್ಸ್ ಸಮೀಕ್ಷೆ:
ಎಲ್‌ಡಿಎಫ್: 55-65
ಯುಡಿಎಫ್: 75-85
ಎನ್‌ಡಿಎ: 0-3
ಪುದುಚೇರಿಯ ಎಕ್ಸಿಟ್ ಪೋಲ್ ಹೇಳೋದೇನು?
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ
ಬಿಜೆಪಿ: 16- 20
ಕಾಂಗ್ರೆಸ್: 6 – 8
ಇತರೆ: 3- 7
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Wed, 29 April 26