AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

2023ರಿಂದ ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಉಪನಾಯಕರಾಗಿದ್ದರು. ಆ ಹುದ್ದೆಯಿಂದ ಇಂದು ಅವರನ್ನು ಆಮ್ ಆದ್ಮಿ ಪಕ್ಷವು ತೆಗೆದುಹಾಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರ ಸ್ಥಾನವನ್ನು ಪಂಜಾಬ್ ಸಂಸದ ಅಶೋಕ್ ಮಿತ್ತಲ್ ವಹಿಸಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು ರಾಜ್ಯಸಭಾ ಕಾರ್ಯದರ್ಶಿಗೆ ಸಂದೇಶ ಕಳುಹಿಸಲಾಗಿದೆ. ಸಂಸತ್ತಿನಲ್ಲಿ ಮಾತನಾಡಲು ರಾಘವ್ ಚಡ್ಡಾ ಅವರಿಗೆ ಸಮಯ ನೀಡಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ
Raghav Chadha
ಸುಷ್ಮಾ ಚಕ್ರೆ
|

Updated on: Apr 02, 2026 | 6:07 PM

Share

ನವದೆಹಲಿ ಏಪ್ರಿಲ್ 2: ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ರಾಘವ್ ಚಡ್ಡಾ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡಬಾರದು ಎಂದು ಹೇಳಿದೆ. “ಅಶೋಕ್ ಕುಮಾರ್ ಮಿತ್ತಲ್ ಅವರನ್ನು ರಾಜ್ಯಸಭಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಕುರಿತು ಎಎಪಿ ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತ ಪತ್ರವನ್ನು ಕಳುಹಿಸಿದೆ” ಎಂದು ಆಮ್ ಆದ್ಮಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

ಆಮ್ ಆದ್ಮಿ ಪಕ್ಷದ ಜನಪ್ರಿಯ ನಾಯಕ ರಾಘವ್ ಚಡ್ಡಾ ಈ ಹಿಂದೆ ಭಾರತದಲ್ಲಿ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕೆಂದು ಪ್ರತಿಪಾದಿಸುವ ಮೂಲಕ ಸುದ್ದಿಗಳಲ್ಲಿದ್ದರು. ಆರೈಕೆ ಮಾಡುವುದು ಇಬ್ಬರೂ ಪೋಷಕರ ನಡುವೆ ಹಂಚಿಕೆಯ ಜವಾಬ್ದಾರಿಯಾಗಿರಬೇಕು ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: MP Raghav Chadha: ರಾಜ್ಯಸಭೆಯಲ್ಲಿ ಎಎಪಿ ಪಕ್ಷದ ನಾಯಕನಾಗಿ ಸಂಸದ ರಾಘವ್ ಚಡ್ಡಾ ನೇಮಕ

ಪ್ರಸ್ತುತ, ಎಎಪಿ ರಾಜ್ಯಸಭೆಯಲ್ಲಿ 10 ಸದಸ್ಯರನ್ನು ಹೊಂದಿದೆ. ಇದರಲ್ಲಿ ಪಂಜಾಬ್‌ನಿಂದ 7 ಮತ್ತು ದೆಹಲಿಯಿಂದ ಮೂವರು ಸೇರಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ 2012ರಲ್ಲಿ ಎಎಪಿ ಸ್ಥಾಪನೆಯಾದಾಗಿನಿಂದ ಪಕ್ಷದಲ್ಲಿದ್ದಾರೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು.

ರಾಘವ್ ಚಡ್ಡಾ ಮೇಲ್ಮನೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಒಬ್ಬರು. ಅವರು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us