AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ್​​ಗೆ ನಟ ಅಕ್ಷಯ್​ ಕುಮಾರ್​ ಬ್ರಾಂಡ್​ ಅಂಬಾಸಿಡರ್​​; ಫೋಟೋ ಶೇರ್​ ಮಾಡಿದ ಸಿಎಂ ಪುಷ್ಕರ್​ ಸಿಂಗ್ ಧಮಿ

ಉತ್ತರಾಖಂಡ್​​ನ 70 ವಿಧಾನಸಭೆ ಕ್ಷೇತ್ರಗಳಿಗೆ ಫೆ. 14ರಂದು ಮತದಾನ ನಡೆಯಲಿದೆ. ಇಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ತಾನೇ ಆಡಳಿತ ಹಿಡಿಯುವ ಪ್ರಯತ್ನದಲ್ಲಿದೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉತ್ತರಾಖಂಡ್​​ನಲ್ಲಿ ಮನೆ ಮನೆ ಪ್ರಚಾರ ನಡೆಸಿದ್ದಾರೆ.

ಉತ್ತರಾಖಂಡ್​​ಗೆ ನಟ ಅಕ್ಷಯ್​ ಕುಮಾರ್​ ಬ್ರಾಂಡ್​ ಅಂಬಾಸಿಡರ್​​; ಫೋಟೋ ಶೇರ್​ ಮಾಡಿದ ಸಿಎಂ ಪುಷ್ಕರ್​ ಸಿಂಗ್ ಧಮಿ
ಪುಷ್ಕರ್​ ಸಿಂಗ್ ಧಮಿ ಮತ್ತು ಅಕ್ಷಯ್​ ಕುಮಾರ್​
TV9 Web
| Edited By: |

Updated on:Feb 07, 2022 | 12:49 PM

Share

ಡೆಹ್ರಾಡೂನ್​: ಉತ್ತರಾಖಂಡ್​ ವಿಧಾನಸಭೆ ಚುನಾವಣೆ (Uttarakhand Assembly Election 2022) ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ  ಬಾಲಿವುಡ್ ನಟ ಅಕ್ಷಯ್​ ಕುಮಾರ್ (Akshay Kumar)​ ಅವರನ್ನು ಉತ್ತರಾಖಂಡ್​ ರಾಜ್ಯದ ಬ್ರಾಂಡ್​ ಅಂಬಾಸಿಡರ್ (ಬ್ರಾಂಡ್​ ರಾಯಭಾರಿ) ಆಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ (Pushkar Singh Dhami) ಘೋಷಣೆ ಮಾಡಿದ್ದಾರೆ. ಅಂದಹಾಗೇ, ರಾಜ್ಯದ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮನವಿ ಮಾಡಲು ಪುಷ್ಕರ್​ ಸಿಂಗ್​ ಧಮಿಯವರೇ ಅಕ್ಷಯ್​ ಕುಮಾರ್​ರನ್ನು ಭೇಟಿ ಮಾಡಿದ್ದರು.  ಅದಕ್ಕೆ ಅಕ್ಷಯ್​ ಕುಮಾರ್ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧಮಿ, ನಾವು ಅಕ್ಷಯ್​ ಕುಮಾರ್​ ಎದುರು ಪ್ರಸ್ತಾಪವನ್ನು ಇಟ್ಟಿದ್ದೆವು. ಅದನ್ನವರು ಒಪ್ಪಿಕೊಂಡಿದ್ದು ಖುಷಿಯಾಗಿದೆ ಎಂದು ಹೇಳಿದ್ದಾರೆ. 

2017ರಲ್ಲಿ ನಟ ಅಕ್ಷಯ್​ ಕುಮಾರ್​ ಅವರು ಉತ್ತರಾಖಂಡ್​​ಗೆ ಸ್ವಚ್ಛ ಭಾರತ್​ ಅಭಿಯಾನದ ಬ್ರಾಂಡ್​ ರಾಯಭಾರಿಯಾಗಿದ್ದರು. ಆಗ ಅವರು ಅದಕ್ಕಾಗಿ ಹಣ ಪಡೆಯದೆ ಉಚಿತವಾಗಿಯೇ  ರಾಯಭಾರಿಯಾಗಿದ್ದರು. ಇಂಥದ್ದೊಂದು ಅಭಿಯಾನದ ಭಾಗವಾಗುವುದು ನನ್ನ ಪಾಲಿಗೆ ಗೌರವ ಎಂದೂ ಹೇಳಿದ್ದರು.  ಇದೀಗ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂಬಾಸಿಡರ್ ಆಗಿದ್ದಾರೆ.

ಉತ್ತರಾಖಂಡ್​​ನ 70 ವಿಧಾನಸಭೆ ಕ್ಷೇತ್ರಗಳಿಗೆ ಫೆ. 14ರಂದು ಮತದಾನ ನಡೆಯಲಿದೆ. ಇಲ್ಲಿ ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ತಾನೇ ಆಡಳಿತ ಹಿಡಿಯುವ ಪ್ರಯತ್ನದಲ್ಲಿದೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉತ್ತರಾಖಂಡ್​​ನಲ್ಲಿ ಮನೆ ಮನೆ ಪ್ರಚಾರ ನಡೆಸಿದ್ದಾರೆ. ಗಂಗೋತ್ರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರಾಖಂಡ್​​ನಲ್ಲಿ ಬಿಜೆಪಿ ಸರ್ಕಾರ ಬಡವರು, ತುಳಿತಕ್ಕೊಳಗಾದವರು, ಹಿಂದುಳಿದವರು, ದೀನದಲಿತರು, ಮಹಿಳೆಯರ ಸಬಲೀಕರಣಕ್ಕಾಗಿ ಮಾಡಿದ ಕೆಲಸದ ರಿಪೋರ್ಟ್​ ಕಾರ್ಡ್ ಇಲ್ಲಿನ ಪ್ರತಿಯೊಬ್ಬರ ಎದುರಿಗೆ ಇದೆ. ಇವರೆಲ್ಲ ಮತ್ತೊಮ್ಮೆ ಬಿಜೆಪಿಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಲು ಉತ್ಸಾಹದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಜೆ.ಪಿ.ನಡ್ಡಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಶಾಲೆ- ಕಾಲೇಜುಗಳಲ್ಲಿ ಹೆಚ್ಚಾಗ್ತಿದೆ ಹಿಜಾಬ್, ಕೇಸರಿ ಶಾಲು ಸಮರ; ನೀಲಿ ಶಾಲ್ ಧರಿಸಿ ಬಂದ ಮತ್ತೊಂದು ಬಣ, ಪ್ರಾಂಶುಪಾಲರು ಹೈರಾಣ

Published On - 12:08 pm, Mon, 7 February 22

Follow Us
TV9 Web
TV9 Web

TV9 Kannada

Read More
'ಸಿದ್ದರಾಮಯ್ಯ ಸ್ಟಿಂಗ್​​ ಮಾಡಿಸಿದ್ದು ಜನತಾ ದಳ'​​: ಸಚಿವ ಚಲುವರಾಯಸ್ವಾಮಿ
'ಸಿದ್ದರಾಮಯ್ಯ ಸ್ಟಿಂಗ್​​ ಮಾಡಿಸಿದ್ದು ಜನತಾ ದಳ'​​: ಸಚಿವ ಚಲುವರಾಯಸ್ವಾಮಿ
ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳನ್ನು ತಿಪ್ಪೆ ರಾಶಿಗೆ ಎಸೆದ ಸಿಬ್ಬಂದಿ!
ಬಡ ರೋಗಿಗಳಿಗೆ ತಲುಪಬೇಕಾದ ಔಷಧಿಗಳನ್ನು ತಿಪ್ಪೆ ರಾಶಿಗೆ ಎಸೆದ ಸಿಬ್ಬಂದಿ!
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್!
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ