AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

40ನೇ ವಯಸ್ಸಿನಲ್ಲಿ ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಎಂಬಿಬಿಎಸ್ ಮುಗಿಸಿದ ಜಾಹ್ನವಿ: ಈಗ ಅಮೆರಿಕದಲ್ಲಿ ವೈದ್ಯೆ

ಜಾಹ್ನವಿ ಅಜಿತ್ ರಾವ್ ಅವರು ತಮ್ಮ 40ನೇ ವಯಸ್ಸಿನಲ್ಲಿ ಯಶಸ್ವಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ವೃತ್ತಿಜೀವನವನ್ನು ತ್ಯಜಿಸಿ, ವೈದ್ಯಕೀಯ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಎಂಬಿಬಿಎಸ್ ಪೂರೈಸಿ, ಈಗ ಅಮೆರಿಕದಲ್ಲಿ ಯಶಸ್ವಿ ವೈದ್ಯೆಯಾಗಿದ್ದಾರೆ. ವಯಸ್ಸು ಎಷ್ಟೇ ಆದರೂ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯ ಎಂಬುದಕ್ಕೆ ಜಾಹ್ನವಿ ಅವರೇ ಉತ್ತಮ ಉದಾಹರಣೆ. ಅವರ ಈ ಸ್ಪೂರ್ತಿದಾಯಕ ಕಥೆ ಎಲ್ಲರಿಗೂ ಪ್ರೇರಣೆಯಾಗಿದೆ.

40ನೇ ವಯಸ್ಸಿನಲ್ಲಿ ಸಾಫ್ಟ್‌ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಎಂಬಿಬಿಎಸ್ ಮುಗಿಸಿದ ಜಾಹ್ನವಿ: ಈಗ ಅಮೆರಿಕದಲ್ಲಿ ವೈದ್ಯೆ
ಜಾಹ್ನವಿ
ನಯನಾ ರಾಜೀವ್
|

Updated on:Jul 05, 2026 | 12:12 PM

Share

ನವದೆಹಲಿ, ಜುಲೈ 05: ಜೀವನದಲ್ಲಿ ಏನನ್ನಾದರೂ ಸಾಧಿಸಲು ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಎಂಬುದನ್ನು ಜಾಹ್ನವಿ ಅಜಿತ್ ರಾವ್ ಎಂಬ ಮಹಿಳೆ ಸಾಬೀತುಪಡಿಸಿದ್ದಾರೆ. ಜನರು ತಮ್ಮ 40ನೇ ವಯಸ್ಸಿನಲ್ಲಿ ನಿವೃತ್ತಿ ಅಥವಾ ಭವಿಷ್ಯದ ಆರ್ಥಿಕ ಭದ್ರತೆಯ ಬಗ್ಗೆ ಯೋಚಿಸುತ್ತಿದ್ದರೆ, ಜಾಹ್ನವಿ ಮಾತ್ರ ತಮಗಿದ್ದ ಯಶಸ್ವಿ ಎಂಜಿನಿಯರಿಂಗ್ ವೃತ್ತಿಜೀವನವನ್ನು ತ್ಯಜಿಸಿ, ವೈದ್ಯಕೀಯ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಇವರ ಸ್ಪೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ತಂತ್ರಜ್ಞಾನ ಲೋಕದಲ್ಲಿ 18 ವರ್ಷ ಮಹಾರಾಷ್ಟ್ರದ ಔರಂಗಾಬಾದ್ ಮೂಲದ ಜಾಹ್ನವಿ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಪದವಿ ಮತ್ತು ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (Post Graduation) ಪಡೆದರು. ಆ ನಂತರ ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು.

2002 ರಲ್ಲಿ ತಮ್ಮ ಎಂಜಿನಿಯರ್ ಪತಿಯೊಂದಿಗೆ ಬೆಂಗಳೂರಿಗೆ ಬಂದ ಜಾನ್ಹವಿ, ಇಲ್ಲೂ ಕೂಡ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಸೇವೆ ಸಲ್ಲಿಸಿದರು. ಆ ಬಳಿಕ ರಕ್ಷಣಾ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸ್ವಂತ ತಂತ್ರಜ್ಞಾನ ಕಂಪನಿಯನ್ನೂ ಸಹ ಆರಂಭಿಸಿ ಯಶಸ್ವಿಯಾಗಿದ್ದರು. ತಂತ್ರಜ್ಞಾನ ರಂಗದಲ್ಲಿ ಭರೋಸೆಯ 18 ವರ್ಷಗಳನ್ನು ಕಳೆದ ನಂತರ ಜಾಹ್ನವಿ ಅವರ ಜೀವನದಲ್ಲಿ ದೊಡ್ಡ ತಿರುವು ಎದುರಾಯಿತು.

ಮತ್ತಷ್ಟು ಓದಿ: ವಿದ್ಯಾರ್ಥಿಗಳಿಗೆ ಗುಡ್​​ನ್ಯೂಸ್: ಆಂಗ್ಲ ಮಾಧ್ಯಮ ಶಾಲೆಗಳ ಮೇಲ್ದರ್ಜೆಗೆ ಮುಂದಾದ ಶಿಕ್ಷಣ ಇಲಾಖೆ

40ನೇ ವಯಸ್ಸಿನಲ್ಲಿ ವೈದ್ಯಕೀಯ ಕಾಲೇಜಿಗೆ ಎಂಟ್ರಿ ಎಲ್ಲವೂ ಸುಗಮವಾಗಿ ಸಾಗುತ್ತಿದ್ದಾಗ, ಜಾಹ್ನವಿ ತಮ್ಮ ಮನಸ್ಸಿನ ಆಳದಲ್ಲಿದ್ದ ವೈದ್ಯೆಯಾಗುವ ಕನಸನ್ನು ನನಸು ಮಾಡಿಕೊಳ್ಳಲು ನಿರ್ಧರಿಸಿದರು. ಎಂಜಿನಿಯರಿಂಗ್ ವೃತ್ತಿಯನ್ನು ಸಂಪೂರ್ಣವಾಗಿ ತೊರೆದು, 40ನೇ ವಯಸ್ಸಿನಲ್ಲಿ ವೈದ್ಯಕೀಯ ಕಾಲೇಜಿನ ಹೊಸ್ತಿಲು ತುಳಿದರು. ಕಠಿಣ ಪರಿಶ್ರಮದಿಂದ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಇಂದು ಅಮೆರಿಕದಲ್ಲಿ ವೈದ್ಯೆ ಅಂದು ಜಾಹ್ನವಿ ತೆಗೆದುಕೊಂಡ ಆ ಒಂದು ಧೈರ್ಯದ ನಿರ್ಧಾರ, ಇಂದು ಅವರನ್ನು ಅಮೆರಿಕದಲ್ಲಿ ಯಶಸ್ವಿ ವೈದ್ಯೆಯನ್ನಾಗಿ ಮಾಡಿದೆ. ನೆಟ್ಟಿಗರು ಇವರ ಅದ್ಭುತ ಮನೋಭಾವ ಮತ್ತು ನಿರ್ಭೀತ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಬದುಕಿನಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಜಾನ್ಹವಿ ಅವರೇ ಬೆಸ್ಟ್ ಎಕ್ಸಾಂಪಲ್ ಎಂದು ಜನರು ಕೊಂಡಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:12 pm, Sun, 5 July 26

Follow Us
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?