ICMR Guidelines for Covid Treatment: ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರ ವಿತರಿಸಿದ ಏಮ್ಸ್

| Updated By: Digi Tech Desk

Updated on: Apr 23, 2021 | 6:08 PM

ದೆಹಲಿ ಮೂಲದ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ನಿಂದ ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ವಿತರಣೆ ಮಾಡಿದೆ.

ICMR Guidelines for Covid Treatment: ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರ ವಿತರಿಸಿದ ಏಮ್ಸ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ ಮೂಲದ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ನಿಂದ ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ವಿತರಣೆ ಮಾಡಿದೆ. ಈ ಮಾರ್ಗದರ್ಶಿ ಸೂತ್ರಗಳಲ್ಲಿ ಏಮ್ಸ್​ನಿಂದ ಗಂಭೀರತೆ ಆಧಾರದಲ್ಲಿ ನಿರ್ದಿಷ್ಟ ಚಿಕಿತ್ಸೆಗಳನ್ನು ತಿಳಿಸಲಾಗಿದೆ. ಕನಿಷ್ಠ, ಸಾಮಾನ್ಯ ಹಾಗೂ ಗಂಭೀರ ಕೊರೊನಾ ಪ್ರಕರಣ ಎಂದು ವರ್ಗೀಕರಣ ಮಾಡಿಕೊಳ್ಳಲಾಗಿದೆ. ಇಲ್ಲಿದೆ ಏಮ್ಸ್ ಮಾರ್ಗದರ್ಶಿ ಸೂತ್ರದ ಮಾಹಿತಿ:

ಕನಿಷ್ಠವಾದ ಕೋವಿಡ್- 19 ಸೋಂಕು ಲಕ್ಷಣದ ಪ್ರಕರಣಗಳು
ಗುರುತಿಸುವುದು: ಯಾವ ರೋಗಿಗೆ  ಕನಿಷ್ಠವಾದ ಕೋವಿಡ್- 19 ಸಮಸ್ಯೆ ಇರುತ್ತದೋ ಅಂಥವರಿಗೆ ಮೇಲ್ಭಾಗದ ಶ್ವಾಸಕೋಶ ಸಮಸ್ಯೆ ಲಕ್ಷಣಗಳು ಇರುತ್ತವೆ ಮತ್ತು/ಅಥವಾ ಉಸಿರಾಟದ ಸಮಸ್ಯೆ ಇಲ್ಲದ ಜ್ವರ ಅಥವಾ ಆಮ್ಲಜನಕದ ಕೊರತೆ ಇರುತ್ತದೆ.

ಶಿಫಾರಸು: ಮನೆಯಲ್ಲಿ ಪ್ರತ್ಯೇಕವಾಗಿ ಇರುವುದು ಮತ್ತು ಕಾಳಜಿ

ಕಡ್ಡಾಯವಾಗಿ ಮಾಡಬೇಕಾದದ್ದು:
1) ಸಾಮಾಜಿಕ ಅಂತರ, ಒಳಾಂಗಣದಲ್ಲಿ ಮಾಸ್ಕ್ ಬಳಕೆ, ಕಡ್ಡಾಯವಾಗಿ ಕೈಗಳ ಸ್ವಚ್ಛತೆ
2) ರೋಗಲಕ್ಷಣದ ನಿರ್ವಹಣೆ (ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಬಾರದು, ಜ್ವರ ಕಡಿಮೆ ಮಾಡಿಕೊಳ್ಳುವುದು, ಕೆಮ್ಮು ಕಡಿಮೆ ಆಗುವ ಔಷಧ ಮತ್ತು ಮಲ್ಟಿವಿಟಮಿನ್​ಗಳು)
3) ಚಿಕಿತ್ಸೆ ನೀಡುವ ವೈದ್ಯರ ಜತೆಗೆ ನಿರಂತರ ಸಂಪರ್ಕ
4) ತಾಪಮಾನ ನಿಗಾ ಮಾಡುವುದು ಮತ್ತು ಆಮ್ಲಜನಕ ಗರಿಷ್ಠ ಮಟ್ಟ (SpO2 ಬೆರಳುಗಳಿಗೆ ಹಾಕಿಕೊಳ್ಳಬೇಕು)

ಹೀಗಾದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ:
1) ಉಸಿರಾಟದ ಸಮಸ್ಯೆಯಾದಲ್ಲಿ
2) ವಿಪರೀತ ಜ್ವರ/ಗಂಭೀರವಾದ ಕೆಮ್ಮು, ಅದರಲ್ಲೂ ಐದು ದಿನಕ್ಕೂ ಹೆಚ್ಚು ಸಮಯ ಸಮಸ್ಯೆ ನಿವಾರಣೆ ಆಗದಿದ್ದಲ್ಲಿ ಎಚ್ಚರಿಕೆಯಿಂದ ಇರಿ.
3) ಹೀಗೆ ಹೆಚ್ಚಿನ ಸಮಸ್ಯೆ ಇರುವ ಲಕ್ಷಣಗಳು ಉಲ್ಬಣ ಆಗುವ ತನಕ ಕಾಯದಿರಿ.

ಹೀಗೂ ಮಾಡಬಹುದು
1) ಕಡಿಮೆ ಪ್ರಮಾಣದ ಸಾಕ್ಷ್ಯಗಳ ಆಧಾರದಲ್ಲೇ ಚಿಕಿತ್ಸೆಗಳು
2) ಮಾತ್ರೆ Ivermectin (200 mcg/kg ದಿನಕ್ಕೆ ಒಂದರಂತೆ ಮೂರು ದಿನ). ಇದನ್ನು ಗರ್ಭಿಣಿಯರು ಹಾಗೂ ಹಾಲೂಡಿಸುವ ಮಹಿಳೆಯರಿಗೆ ನೀಡಬಾರದು.
3) ನಿರ್ದಿಷ್ಟವಾಗಿ ಸೂಚಿಸಿದಲ್ಲಿ ಮಾತ್ರ HCQ (400 mg BD 1ದಿನ f/b 400 mg OD 4 ದಿನಕ್ಕೆ)
4) ಮೂಗಿನ ಮೂಲಕ ನೀಡುವಂಥ Budesonide (ಅಳತೆ ಇರುವಂಥ ಇನ್​ಹೇಲರ್/ಡ್ರೈಪೌಡರ್ ಇನ್​ಹೇಲರ್ ಮೂಲಕ ನೀಡಲಾಗುತ್ತದೆ) 800 mcg BD 5 ದಿನಗಳ ಅವಧಿಗೆ ನೀಡಲಾಗುತ್ತದೆ) ಒಂದು ವೇಳೆ ಸೋಂಕು ಲಕ್ಷಣಗಳು (ಜ್ವರ ಮತ್ತು/ಅಥವಾ ಕೆಮ್ಮು) 5 ದಿನಗಳ ಆಚೆಗೂ ಇದ್ದಲ್ಲಿ ಮಾತ್ರ.

ಸಾಧಾರಣವಾದ ಕೋವಿಡ್- 19 ಪ್ರಕರಣಗಳು:
ಗುರುತಿಸುವುದು: ರೋಗಿಯ ಶ್ವಾಸಕೋಶ ದರವು ನಿಮಿಷಕ್ಕೆ 24ಕ್ಕಿಂತ ಹೆಚ್ಚಿದ್ದು, ಉಸಿರಾಟದ ಸಮಸ್ಯೆಗಳಿದ್ದಲ್ಲಿ ಮತ್ತು Sp02 ಶೇ 90ರವರೆಗೆ ಇದ್ದಲ್ಲಿ.

ಶಿಫಾರಸು: ವಾರ್ಡ್​ನಲ್ಲಿ ದಾಖಲಾಗಿ.

ಆಮ್ಲಜನಕದ ಸಪೋರ್ಟ್:
– ಗುರಿ Sp02: ಶೇ 92- 96 (COPD ಇರುವ ರೋಗಿಗಳಲ್ಲಿ ಶೇ 88ರಿಂದ 92)
– ಆಮ್ಲಜನಕಕ್ಕೆ ಆದ್ಯತೆಯ ಸಾಧನಗಳು: ಮತ್ತೆ ಅದೇ ಉಸಿರು ಆಡದಂಥ ಫೇಸ್ ಮಾಸ್ಕ್
– ಆಮ್ಲಜನಕ ಹೆಚ್ಚಾಗುವಂಥ ಚಿಕಿತ್ಸೆಗಳನ್ನು ಅಗತ್ಯ ಇರುವ ಎಲ್ಲ ರೋಗಿಗಳಲ್ಲೂ ಪ್ರೋತ್ಸಾಹಿಸುವುದು (ಪ್ರತಿ ಎರಡು ಗಂಟೆಗೆ ಸ್ಥಿತಿಯ ಬದಲಾವಣೆ ಮಾಡುವುದು)

ಆ್ಯಂಟಿ- ಇನ್​ಫ್ಲಮೇಟರಿ ಅಥವಾ ಇಮ್ಯುನೋಮಾಡ್ಯುಲೇಟರಿ ಚಿಕಿತ್ಸೆ
– ಇಂಜೆಕ್ಷನ್ Methylprednisolone 0.5ರಿಂದ 1 mg/kg 2 ವಿಭಜಿತ ಡೋಸ್​ಗಳಲ್ಲಿ (ಅಥವಾ ಅಷ್ಟಕ್ಕೆ ಸಮಾನವಾದ ಡೋಸ್ dexamethasone) ಸಾಮಾನ್ಯವಾಗಿ 5ರಿಂದ 10 ದಿನಗಳ ಅವಧಿಗೆ.
– ಒಂದು ವೇಳೆ ರೋಗಿಯು ಸ್ಥಿರವಾಗಿದ್ದಲ್ಲಿ ಅಥವಾ ಚೇತರಿಸಿಕೊಳ್ಳುತ್ತಿದ್ದಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳುವುದಕ್ಕೆ ಆರಂಭಿಸಬಹುದು.

ಆ್ಯಂಟಿಕೊವಾಗ್ಯುಲೇಷನ್
-ಸಾಂಪ್ರದಾಯಿಕ ಡೋಸ್ prophylactic unfractoinated heparin ಅಥವಾ ಕಡಿಮೆ ಮಾಲಿಕ್ಯುಲಾರ್ ವೇಯ್ಟ್ ಹೆಪಾರಿನ್ (ತೂಕದ ಆಧಾರಲ್ಲಿ ಉದಾಹರಣೆಗೆ, enoxaparin 0.5 mg/kg ದಿನಕ್ಕೆ SC). ರಕ್ತಸ್ರಾವದ ಅಪಾಯ ಇರಬಾರದು.

ನಿಗಾ
– ಕ್ಲಿನಿಕಲ್ ಮಾನಿಟರಿಂಗ್: ಉಸಿರಾಟ ಕಾರ್ಯ ನಿರ್ವಹಣೆ, ಹೆಮೊಡೈನಮಿಕ್ ಅಸ್ಥಿರತೆ, ಆಮ್ಲಜನಕ ಅಗತ್ಯದಲ್ಲಿ ಬದಲಾವಣೆ.
– ಸರಣಿ CXR; ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ HRCT ಚೆಸ್ಟ್ ಮಾಡಿಸಬೇಕು.
– ಲ್ಯಾಬ್ ನಿಗಾ: CRP ಮತ್ತು D- ಡೈಮರ್ 48ರಿಂದ 72 ಗಂಟೆಗಳ ತನಕ.

ಗಂಭೀರ ಕಾಯಿಲೆಗೆ ಚಿಕಿತ್ಸೆ
ಗುರುತಿಸುವುದು: ಶ್ವಾಸಕೋಶದ ದರ ನಿಮಿಷಕ್ಕೆ 30ಕ್ಕಿಂತ ಹೆಚ್ಚು, ಉಸಿರಾಟದ ಸಮಸ್ಯೆ ಅಥವಾ SpO2 ಈ ಮೂರರ ಪೈಕಿ ಯಾವುದೇ ಒಂದಿರುವುದು.

ಶಿಫಾರಸು: ಐಸಿಯು (ತೀವ್ರ ನಿಗಾ ಘಟಕಕ್ಕೆ) ದಾಖಲಾಗಿ.

ಶ್ವಾಸಕೋಶ ಸಪೋರ್ಟ್:
– ಒಂದು ವೇಳೆ ಉಸಿರಾಟದ ಕಾರ್ಯ ನಿರ್ವಹಣೆ ಕಡಿಮೆ ಆಗಿದ್ದು, ಆಮ್ಲಜನಕ ಬಳಕೆ ಮಾಡುವ ಅಗತ್ಯ ಹೆಚ್ಚಿರುವ ರೋಗಿಗಳಲ್ಲಿ ಎನ್​ಐವಿ (ಹೆಲ್ಮೆಟ್ ಅಥವಾ ಫೇಸ್ ಮಾಸ್ಕ್ ಇಂಟರ್​ಫೇಸ್ ಇವುಗಳಲ್ಲಿ ಏನು ದೊರೆಯುತ್ತದೋ ಅದು) ಬಳಸುವ ಬಗ್ಗೆ ಆಲೋಚಿಸಿ.
– ಹೆಚ್ಚಿನ ಆಮ್ಲಜನಕ ಅಗತ್ಯ ಇದೆ ಎನಿಸುವಂಥ ರೋಗಿಗಳಲ್ಲಿ HFNC ಬಳಸುವ ಬಗ್ಗೆ ಆಲೋಚಿಸಬಹುದು.
– ಒಂದು ವೇಳೆ ಎನ್​ಐವಿಯನ್ನು ತಡೆಯುವುದಕ್ಕೆ ರೋಗಿಯಿಂದ ಸಾಧ್ಯವಾಗದಿದ್ದಾಗ ಇನ್​ಟ್ಯುಬೇಷನ್ ಬಳಕೆಗೆ ಆದ್ಯತೆ ನೀಡಬೇಕು.
– ವೆಂಟಿಲೇಟರ್ (ಜೀವರಕ್ಷಕ ಸಾಧನಗಳು) ನಿರ್ವಹಣೆಗೆ ಸಾಂಪ್ರದಾಯಿಕ ARDSನೆಟ್ ಪ್ರೊಟೋಕಾಲ್ ಬಳಸಬೇಕು.

ಆ್ಯಂಟಿ- ಇನ್​ಫ್ಲಮೇಟರಿ ಅಥವಾ ಇಮ್ಯುನೋಮಾಡ್ಯುಲೇಟರಿ ಚಿಕಿತ್ಸೆ
– ಇಂಜೆಕ್ಷನ್ Methylprednisolone 1ರಿಂದ 2 mg/kg IVರಲ್ಲಿ 2 ವಿಭಜಿತ ಡೋಸ್​ಗಳಲ್ಲಿ (ಅಥವಾ ಅಷ್ಟಕ್ಕೆ ಸಮಾನವಾದ ಡೋಸ್ dexamethasone) ಸಾಮಾನ್ಯವಾಗಿ 5ರಿಂದ 10 ದಿನಗಳ ಅವಧಿಗೆ.

ಆ್ಯಂಟಿಕೊವಾಗ್ಯುಲೇಷನ್
– ತೂಕದ ಆಧಾರದಲ್ಲಿ ಡೋಸ್ prophylactic unfractoinated heparin ಅಥವಾ ಕಡಿಮೆ ಮಾಲಿಕ್ಯುಲಾರ್ ವೇಯ್ಟ್ – – ಹೆಪಾರಿನ್ (ಉದಾಹರಣೆ, Enoxaparin 0.5 mg/kg ಪ್ರತಿ ಡೋಸ್ SC BD).
– ಈ ಔಷಧದಿಂದ ತೊಂದರೆ ಇರಬಾರದು ಅಥವಾ ರಕ್ತಸ್ರಾವದ ಅಪಾಯ ಇರಬಾರದು.

ಸಪೋರ್ಟಿವ್ ಕ್ರಮಗಳು
– euvolemia ನಿರ್ವಹಣೆ ಮಾಡಿ (ಒಂದು ವೇಳೆ ಲಭ್ಯವಿದ್ದಲ್ಲಿ, ಫ್ಲುಯಿಡ್ ರೆಸ್ಪಾನ್ಸಿವ್​ನೆಸ್ ಅಳೆಯಲು ಸಾಧ್ಯವಿದ್ದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು).
– ಒಂದು ವೇಳೆ ಸೆಪ್ಸಿಸ್/ಸೆಪ್ಟಿಕ್ ಶಾಕ್ ಆದಲ್ಲಿ ಈಗಿನ ಪ್ರೋಟೋಕಾಲ್ ಮತ್ತು ಸ್ಥಳೀಯ ಆ್ಯಂಟಿಬಯೋಗ್ರಾಮ್​ನಂತೆ ನಿರ್ವಹಣೆ ಮಾಡಿ.

ನಿಗಾ
– ಸರಣಿ CXR; ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ HRCT ಚೆಸ್ಟ್ ಮಾಡಿಸಬೇಕು.

ರೆಮಿಡೆಸಿವಿರ್ ಮತ್ತು ಇತರ ಔಷಧಗಳೇನು?
ಏಮ್ಸ್​ನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ನಿರ್ದಿಷ್ಟ ಸನ್ನಿವೇಶ ಹಾಗೂ ಸೀಮಿತವಾಗಿ ಸಾಕ್ಷ್ಯಗಳು ಲಭ್ಯವಿರುವಾಗ ತುರ್ತು ಬಳಕೆ ಅನುಮತಿ ಆಧಾರದಲ್ಲಿ ಮಾತ್ರ ಅಪರೂಪದ ಪ್ರಕರಣಗಳಲ್ಲಿ ರೆಮಿಡೆಸಿವಿರ್ ಬಳಸಬೇಕು.

ರೆಮಿಡೆಸಿವಿರ್ ಔಷಧವನ್ನು ಈ ಕೆಳಕಂಡ ರೋಗಿಗಳಿಗೆ ಮಾತ್ರ ಪರಿಗಣಿಸಬಹುದು
– ಸಾಮಾನ್ಯದಿಂದ ಗಂಭೀರ ಕಾಯಿಲೆ ಇರುವವರು (ಹೆಚ್ಚುವರಿಯಾಗಿ ಆಮ್ಲಜನಕದ ಅಗತ್ಯ ಇರುವಾಗ), ಮತ್ತು
– ಯಾವುದೇ ರೆನಲ್ ಅಥವಾ ಹೆಪ್ಟಿಕ್ ಕಾರ್ಯನಿರ್ವಹಣೆ ಇಲ್ಲದಿರುವುದು ( eGFR 5 ಬಾರಿ ULN (ಸಂಪೂರ್ಣವಾಗಿ ವೈರುಧ್ಯ ಅಲ್ಲ), ಮತ್ತು
– 10 ದಿನಗಳಿಂದ ಯಾರಿಗೆ ರೋಗ ಲಕ್ಷಣಗಳು ಇವೆಯೀ ಅಂಥವರಿಗೆ

ಡೋಸ್ ಶಿಫಾರಸು: 200 mg IV ಮೊದಲ ದಿನ f/b 100 mg IV OD ಮುಂದಿನ ನಾಲ್ಕು ದಿನಗಳಿಗೆ.

ಯಾರು ಆಮ್ಲಜನಕದ ಸಪೋರ್ಟ್​ನಲ್ಲಿ ಇರುವುದಿಲ್ಲವೋ ಅಥವಾ ಮನೆಯ ವಾತಾವರಣದಲ್ಲಿ ಇರುತ್ತಾರೋ ಅಂಥವರಲ್ಲಿ ಬಳಸಬಾರದು.

ಮೇಲಿನ ಎಲ್ಲ ಮಾನದಂಡಗಳು ಪೂರ್ಣಗೊಂಡಾಗ ಮಾತ್ರ TociliZumab (Off-Label) ಗಣನೆಗೆ ತೆಗೆದುಕೊಳ್ಳಬಹುದು.
– ಗಂಭೀರವಾದ ಕಾಯಿಲೆ ಇರುವಾಗ (ಮುಖ್ಯವಾಗಿ ಕಾಯಿಲೆ ಗಂಭೀರವಾದ ಅಥವಾ ಐಸಿಯುಗೆ ಸೇರಿದ 24ರಿಂದ 48 ಗಂಟೆಯೊಳಗೆ)
– ಪ್ರಮುಖವಾಗಿ ಇನ್​ಫ್ಲಮೇಟರಿ ಮಾರ್ಕರ್​ಗಳು ಹೆಚ್ಚಾಗಿರುವವರಲ್ಲಿ (CRP ಮತ್ತು/ಅಥವಾ ILR6)
– ಸ್ಟೆರಾಯಿಡ್​ಗಳ ಬಳಕೆ ನಂತರವೂ ಪರಿಸ್ಥಿತಿ ಚೇತರಿಸಿಕೊಳ್ಳದಿದ್ದಲ್ಲಿ
– ಸಕ್ರಿಯವಾದ ಬ್ಯಾಕ್ಟಿರಿಯಲ್/ಫಂಗಲ್/ಟ್ಯುಬರ್​ಕ್ಯುಲರ್ ಸೋಂಕು ಇಲ್ಲದಿದ್ದಲ್ಲಿ

ಶಿಫಾರಸಿನ ಸಿಂಗಲ್ ಡೋಸ್: 4ರಿಂದ 6 mg/kg (60 ಕೇಜಿ ತೂಕದ ವಯಸ್ಕರರಿಗೆ 400 mg)1 ಗಂಟೆ ಮೇಲ್ಪಟ್ಟು 100 ml NSನಲ್ಲಿ.

ಕನ್ವಲೆಸೆಂಟ್ ಪ್ಲಾಸ್ಮಾ (ಆಫ್​ ಲೇಬಲ್)ವನ್ನು ಈ ಕೆಳಗಿನ ಸಂದರ್ಭಗಳಲ್ಲಿ ಗಣನೆಗೆ ತೆಗೆದುಕೊಳ್ಳಬಹುದು
– ಆರಂಭದ ಸಾಧಾರಣ ಪ್ರಮಾಣದ ಕಾಯಿಲೆ ಇರುವಾಗ (ಪ್ರಮುಖವಾಗಿ ಸೋಂಕು ಕಾಣಿಸಿಕೊಂಡ 7 ದಿನದೊಳಗೆ, 7 ದಿನದ ನಂತರ ಪ್ರಯೋಜನವಿಲ್ಲ).
– ರೋಗನಿರೋಧಕ ಶಕ್ತಿ ಹೆಚ್ಚಿರುವ ದಾನಿಯ ಪ್ಲಾಸ್ಮಾ ಸಿಕ್ಕಲ್ಲಿ (ಸಿಗ್ನಲ್ ಟು ಕಟ್ ಆಫ್ ರೇಷಿಯೋ (S/O) >3.5 ಅಥವಾ ಅದಕ್ಕೆ ಸಮಾನವಾಗಿ ಯಾವ ಟೆಸ್ಟ್ ಕಿಟ್​ ಬಳಸಲಾಗುತ್ತದೆ ಎಂಬುದರ ಮೇಲೆ ಆಧಾರಪಟ್ಟಿರುತ್ತದೆ.)

ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

ಇದನ್ನೂ ಓದಿ: Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ

Published On - 5:33 pm, Fri, 23 April 21