ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದ ಏರ್ ಇಂಡಿಯಾ ವಿಮಾನದ ಪ್ರಯಾಣಿಕನ ಬಂಧನ
'ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ' ಎಂಬ ಹೇಳಿಕೆ ನೀಡಿ ಆತಂಕ ಮೂಡಿಸಿದ ಏರ್ ಇಂಡಿಯಾ ವಿಮಾನದ 42 ವರ್ಷದ ಪ್ರಯಾಣಿಕನನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಕೊಚ್ಚಿ: ಎಕ್ಸರೇ ಬ್ಯಾಗೇಜ್ ಇನ್‌ಸ್ಪೆಕ್ಷನ್ ಸಿಸ್ಟಮ್ (ಎಕ್ಸ್‌ಬಿಐಎಸ್) ಚೆಕ್‌ಪಾಯಿಂಟ್‌ನಲ್ಲಿ ಸಿಐಎಸ್‌ಎಫ್ ಅಧಿಕಾರಿಗೆ ‘ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ’ ಎಂದು ಆತಂಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಏರ್ ಇಂಡಿಯಾ ಪ್ರಯಾಣಿಕನನ್ನು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 42 ವರ್ಷದ ಮನೋಜ್ ಕುಮಾರ್ ಎಂದು ಗುರುತಿಸಲಾದ ವ್ಯಕ್ತಿ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
42 ವರ್ಷದ ಏರ್ ಇಂಡಿಯಾ ಪ್ರಯಾಣಿಕ ಮನೋಜ್ ಕುಮಾರ್ ಅವರನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಲ್ಲಿ “ಬಾಂಬ್ ಇನ್ ಮೈ ಬ್ಯಾಗ್” ಎಂದು ಹೇಳಿಕೆ ನೀಡಿದ್ದಕ್ಕೆ ಆತನನ್ನು ಬಂಧಿಸಲಾಯಿತು. ಈ ಘಟನೆಯು ದೊಡ್ಡ ಭದ್ರತಾ ಭಯವನ್ನು ಉಂಟುಮಾಡಿತು. ಬಳಿಕ, ಏರ್ ಇಂಡಿಯಾ ವಿಮಾನವು ನಿಗದಿತ ಸಮಯಕ್ಕೆ ಹೊರಟಿತು.
ಇದನ್ನೂ ಓದಿ: ನಿಮ್ಮ ಪ್ರಯಾಣ ಸುಮಧುರಗೊಳಿಸಲು “ಏರ್‌ಪೋರ್ಟ್ ಗೀತೆ” ಬಿಡುಗಡೆ ಮಾಡಿದ ಬೆಂಗ್ಳೂರು ವಿಮಾನ ನಿಲ್ದಾಣ
“ಪ್ರೀ-ಎಂಬಾರ್ಕೇಶನ್ ಭದ್ರತಾ ತಪಾಸಣೆಯ ಸಮಯದಲ್ಲಿ ಮನೋಜ್ ಕುಮಾರ್ ಸಿಐಎಸ್ಎಫ್ ಅಧಿಕಾರಿಯನ್ನು ಕೇಳಿದರು. “ನನ್ನ ಬ್ಯಾಗ್‌ನಲ್ಲಿ ಬಾಂಬ್ ಇದೆ” ಈ ಹೇಳಿಕೆಯು ತಕ್ಷಣದ ಆತಂಕವನ್ನು ಉಂಟುಮಾಡಿತು. ಇದರಿಂದ ವಿಮಾನ ನಿಲ್ದಾಣದ ಭದ್ರತಾ ತಂಡ ಕ್ರಮ ಕೈಗೊಂಡು ಪರಿಶೀಲನೆ ನಡೆಸಿದರು ಎಂದು ಕೊಚ್ಚಿನ್ ವಿಮಾನ ನಿಲ್ದಾಣವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Kolkata Airport: ಭಾರೀ ಮಳೆಗೆ ಕೊಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ
ವಿಮಾನ ನಿಲ್ದಾಣದ ಅಧಿಕಾರಿಗಳು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (BDDS) ಗೆ ಕರೆ ಮಾಡಿದರು, ಅವರು ಪ್ರಯಾಣಿಕರ ಕ್ಯಾಬಿನ್ ಅನ್ನು ಪರಿಶೀಲಿಸಿದರು ಮತ್ತು ಬ್ಯಾಗೇಜ್ ಅನ್ನು ಪರಿಶೀಲಿಸಿದರು. ಅಗತ್ಯ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಹೆಚ್ಚಿನ ತನಿಖೆಗಾಗಿ ಮನೋಜ್ ಕುಮಾರ್ ಅವರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ