AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಪ್ರಯಾಣ ಸುಮಧುರಗೊಳಿಸಲು “ಏರ್‌ಪೋರ್ಟ್‌ ಗೀತೆ” ಬಿಡುಗಡೆ ಮಾಡಿದ ಬೆಂಗ್ಳೂರು ವಿಮಾನ ನಿಲ್ದಾಣ

ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಸುಮಧುರಗೊಳಿಸಲು “ಏರ್‌ಪೋರ್ಟ್‌ ಗೀತೆ”ಯನ್ನು ಬೆಂಗಳೂರು ವಿಮಾನ ನಿಲ್ದಾಣ ಬಿಡುಗಡೆ ಮಾಡಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ‘ರಿಕಿ ಕೇಜ್’ ಅವರು ಸಂಯೋಜಿಸಿದ ಅಧಿಕೃತ ಗೀತೆಯು ವಿಮಾನ ನಿಲ್ದಾಣ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಥಮ ಪ್ರದರ್ಶನಗೊಂಡಿತು.

ನಿಮ್ಮ ಪ್ರಯಾಣ ಸುಮಧುರಗೊಳಿಸಲು “ಏರ್‌ಪೋರ್ಟ್‌ ಗೀತೆ” ಬಿಡುಗಡೆ ಮಾಡಿದ ಬೆಂಗ್ಳೂರು ವಿಮಾನ ನಿಲ್ದಾಣ
ಏರ್‌ಪೋರ್ಟ್‌ ಗೀತೆ” ಬಿಡುಗಡೆ ಮಾಡಿದ ಬೆಂಗ್ಳೂರು ವಿಮಾನ ನಿಲ್ದಾಣ
ಕಿರಣ್ ಹನುಮಂತ್​ ಮಾದಾರ್
|

Updated on:Jul 19, 2024 | 6:12 PM

Share

ಬೆಂಗಳೂರು, ಜು.19: ವಿಮಾನ ಪ್ರಯಾಣವನ್ನು ಇನ್ನಷ್ಟು ಮಾಧುರ್ಯವಾಗಿಸಲು ಹಾಗೂ ಕಾಯುವಿಕೆಯ ಸಮಯವನ್ನು ಸುಮಧುರಗೊಳಿಸಲು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ವು, ಇದೀಗ ತನ್ನ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿದ್ದು, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ “ರಿಕಿ ಕೇಜ್” ಸಂಯೋಜಿಸಿದ ಡೈನಾಮಿಕ್ ದ್ವಿಭಾಷಾ ಟ್ರ್ಯಾಕ್ನನ್ನು ಬಿಡುಗಡೆ ಮಾಡಲಾಯಿತು.

ಈ ಗೀತೆಯು ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಲೋನಿಪಾರ್ಕ್ ಮತ್ತು ಕನ್ನಡದ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಅವರ ಸುಮಧುರ ಕಂಠದಿಂದ ಮೂಡಿಬಂದಿದ್ದು, ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮಿಶ್ರಣದಲ್ಲಿ ಈ ಗೀತೆ ಹೊರಹೊಮ್ಮಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ, ಈ ಗೀತೆಯ ಪ್ರಥಮ ಪ್ರದರ್ಶನಗೊಂಡು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಮೂಲಕ ಮರೆಯಲಾಗದ ಸಂಗೀತ ಅನುಭವಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಇದನ್ನೂ ಓದಿ:ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಎಸ್‌ಜಿಯಿಂದ ಆಂಟಿ-ಹೈಜಾಕ್‌ ಅಣುಕು ಪ್ರದರ್ಶನ

ಪ್ರಸ್ತುತ ಈ ಗೀತೆಯು ಸ್ಪೂಟಿಫೈ, ಆಪಲ್‌ ಮ್ಯೂಸಿಕ್‌, ಅಮೆಜಾನ್‌ ಮ್ಯೂಸಿಕ್‌, ವಿಂಕ್‌ ಮತ್ತು ಇತರ ಮ್ಯೂಸಿಕ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಪ್ರಯಾಣಿಕರು ತಾವು ಹೋದಲ್ಲೆಲ್ಲಾ ಬೆಂಗಳೂರು ವಿಮಾನ ನಿಲ್ದಾಣದ ರೋಮಾಂಚಕ ಅನುಭವವನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು. ಈ ಸುಮಧುರ ಗೀತೆಯು ವಿಡಿಯೋದೊಂದಿಗೆ ಮೂಡಿಬಂದಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಪ್ರಯಾಣ ಪ್ರಾರಂಭಿಸುವ ಪ್ರಯಾಣಿಕರ ಮೂರು ಭಾವನಾತ್ಮಕ ಕಥೆಗಳನ್ನು ಒಳಗೊಂಡಿದೆ.

ಈ ಗೀತೆಯ ವಿಡಿಯೋದಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣ ಪ್ರಾರಂಭಿಸುವ ಪೂರ್ವದಲ್ಲಿ ತಮ್ಮ ಉತ್ಸಾಹ ಹಾಗೂ ನಿರೀಕ್ಷೆಯಲ್ಲಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಭಾವನಾತ್ಮಕ ದೃಶ್ಯಾವಳಿಗಳು ಒಳಗೊಂಡಿದೆ. ಇದು ವಿಮಾನ ನಿಲ್ದಾಣದ ಪ್ರಯಾಣಿಕರ ಸೌಕರ್ಯ ಮತ್ತು ತೃಪ್ತಿಗೆ ಅಚಲವಾದ ಸಮರ್ಪಣೆಯನ್ನು ತೋರುತ್ತದೆ. ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು ಎಲ್ಲಾ ಪ್ರಯಾಣಿಕರಿಗೆ ಅನುಗುಣವಾಗಿ ಚಿಂತನಶೀಲ ಸೇವೆಗಳು, ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವುದು ಸೇರಿದಂತೆ, ವಿಮಾನ ನಿಲ್ದಾಣದ ಅನುಭವದ ಪ್ರತಿಯೊಂದು ಅಂಶವು ಪ್ರಯಾಣಿಕರ ಪ್ರಯಾಣವನ್ನು ಉನ್ನತೀಕರಿಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಾ? ಎಂಬಿ ಪಾಟೀಲ್ ಹೇಳಿದ್ದಿಷ್ಟು

ಈ ಬಗ್ಗೆ ಮಾತನಾಡಿದ ‘ರಿಕಿ ಕೇಜ್, ‘ಸಂಗೀತಗಾರನಾಗಿ ನನ್ನ ನಂಬಿಕೆ ಹಾಗೂ ಅನುಭವಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡುತ್ತೇನೆ ಎಂದು ನಾನು ಸದಾ ನಂಬುತ್ತೇನೆ. ನಾನು ರಚಿಸುವ ಪ್ರತಿಯೊಂದು ಸಂಗೀತವು ನನ್ನ ಒಂದು ಭಾಗವೇ ಆಗಿರುತ್ತದೆ. ನನ್ನ ಎರಡನೇ ಮನೆಯಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗೀತೆಯನ್ನು ಸಂಯೋಜಿಸಿದ್ದು, ಈ ಅನುಭವವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಮಾನ ನಿಲ್ದಾಣವು ಬೆಂಗಳೂರಿನ ಅತ್ಯುತ್ತಮ ನಗರವಾಗಿ ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ, ನಮ್ಮ ರಾಷ್ಟ್ರದ ಮನ್ನಣೆಯ ಸಂಕೇತವಾಗಿದೆ. ಈ ಗೀತೆಯು ನನಗೆ ಹಾಗೂ ನನ್ನ ಆತ್ಮೀಯ ಸ್ನೇಹಿತ ಲೋನಿ ಪಾರ್ಕ್‌ಗೆ ಹೆಮ್ಮೆಯ ವಿಷಯವಾಗಿದೆ. ಈ ಗೀತೆಯು ಈ ವಿಮಾನ ನಿಲ್ದಾಣದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದಲ್ಲದೆ, ಪ್ರತಿ ಸಂದರ್ಭದಲ್ಲೂ ವಿಮಾನ ನಿಲ್ದಾಣದ ಸಾಂಸ್ಕೃತಿಕ ಮಹತ್ವವನ್ನು ಸದಾ ಹಚ್ಚಹಸಿರಿನಂತೆ ಉಳಿಸಿಕೊಳ್ಳಲಿದೆ ಎಂದರು.

ಬೆಂಗಳೂರು ವಿಮಾನ ನಿಲ್ದಾಣದ ಗೀತೆಯು ಸಂಗೀತ ಮತ್ತು ನಮ್ಮ ಸಂಸ್ಕೃತಿಯ ಮೂಲಕ ಪ್ರಯಾಣಿಕರ ಅನುಭವವನ್ನು ಉತ್ಕೃಷ್ಟಗೊಳಿಸಲಿದೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ಕಲಾವಿದರೊಂದಿಗೆ ತೊಡಗಿಸಿಕೊಳ್ಳುವ ಮೂಲಕ, ಬೆಂಗಳೂರು ವಿಮಾನ ನಿಲ್ದಾಣವು ಭಾರತಕ್ಕೆ ಹೊಸ ಗೇಟ್‌ವೇ ಎಂಬ ಖ್ಯಾತಿಯನ್ನು ಬಲಪಡಿಸುತ್ತದೆ. ಈ ಗೀತೆಯು ಕೇವಲ ಹಾಡಷ್ಟೇ ಅಲ್ಲದೆ, ತನ್ನ ಗೇಟ್‌ಗಳ ಮೂಲಕ ಹಾದುಹೋಗುವ ಲಕ್ಷಾಂತರ ಪ್ರಯಾಣಿಕರ ವೈವಿಧ್ಯಮಯ ಕಥೆ, ಭಾವನೆ ಮತ್ತು ಅನುಭವಗಳ ಆಚರಣೆಯನ್ನು ಪ್ರತಿನಿಧಿಯಾಗಿರಲಿದೆ. ತಡೆರಹಿತ ಹಾಗೂ ಆರಾಮದಾಯ ಪ್ರಯಾಣದ ಅನುಭವಗಳನ್ನು ಒದಗಿಸುವ ಬೆಂಗಳೂರು ವಿಮಾನ ನಿಲ್ದಾಣದ ಸಮರ್ಪಣೆಯನ್ನು ಇದು ಒತ್ತಿಹೇಳುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Fri, 19 July 24

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?