AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಸ್ ಸಮಸ್ಯೆಯಿಂದಾಗಿ ಸ್ವಾವಲಂಬನೆ ಹೆಜ್ಜೆ: ವಿನೂತನ ತಂತ್ರಜ್ಞಾನದ ವಿದ್ಯುತ್ ಸ್ಟೌ ಪರಿಚಯಿಸಿದ ಜೋಶಿ

ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಗ್ಯಾಸ್ ಸಿಲಿಂಡ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದ್ದರೆ, ಇತ್ತ ಭಾರತದಲ್ಲೂ ಸಹ ಗ್ಯಾಸ್ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ಅಭಾವ ಎದುರಾಗಿದ್ದು, ಜನ ಪರಾಡುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ, ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆ ಹೆಜ್ಜೆ ಇರಿಸುತ್ತಿದೆ

ಗ್ಯಾಸ್ ಸಮಸ್ಯೆಯಿಂದಾಗಿ ಸ್ವಾವಲಂಬನೆ ಹೆಜ್ಜೆ: ವಿನೂತನ ತಂತ್ರಜ್ಞಾನದ ವಿದ್ಯುತ್ ಸ್ಟೌ ಪರಿಚಯಿಸಿದ ಜೋಶಿ
Pralhad Joshi
ರಮೇಶ್ ಬಿ. ಜವಳಗೇರಾ
|

Updated on:Apr 10, 2026 | 6:45 PM

Share

ನವದೆಹಲಿ, (ಏಪ್ರಿಲ್ 10): ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ “ವಿದ್ಯುತ್ ಸ್ಟೌ” (Electric Stove)  ಅನ್ನು ಪರಿಚಯಿಸಿ ಅದರ ಉತ್ಪಾದನೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುವ ಚಿಂತನೆ ಸಹ ನಡೆಸುತ್ತಿದ್ದು, ಎಎಲ್​ಪಿಜೆ ಗ್ಯಾಸ್ (LPG) ಪರ್ಯಾಯವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಸಲಹೆಯಂತೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ 50 ಲಕ್ಷ PNG ಸಂಪರ್ಕಕ್ಕೆ ಪ್ರಾಶಸ್ತ್ಯ ನೀಡಿದೆ. ಈ ಜ್ವಾಲೆ ಉತ್ಪಾದಿಸುವ ವಿದ್ಯುತ್ ಸ್ಟೌ ಪ್ರದರ್ಶಿಸಿ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾಗುವಂತೆ ವಿವಿಧ ಮಾದರಿಗಳಲ್ಲಿ ಈ ವಿನೂತನ ವಿದ್ಯುತ್ ಸ್ಟೌ ತಯಾರಿಸಿ ಪೂರೈಸಬೇಕಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು LPG ಇಲ್ಲದೆ ಜ್ವಾಲೆಯನ್ನು ಉತ್ಪಾದಿಸುವ ವಿನೂತನ ಮಾದರಿ, ತಂತ್ರಜ್ಞಾನದ “ವಿದ್ಯುತ್ ಸ್ಟೌ” ಅನ್ನು ಪರಿಚಯಿಸಿದ್ದಾರೆ. ಗ್ಯಾಸ್ ಸ್ಟೌ ರೀತಿಯೇ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ನೋಡಿ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇದರ ಉತ್ಪಾದನೆಗೆ ಸಿದ್ಧತೆ ನಡೆಸುವಂತೆ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ದೇಶದ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರ ಪಾಲು!

ಎಲ್‌ಪಿಜಿಯ ಅಗತ್ಯವಿಲ್ಲದೆ ಅನಿಲದಂತೆ ಉರಿಯುವ ಶುದ್ಧ ಇಂಧನ ಮೂಲವನ್ನು ಅರಸುತ್ತಿದ್ದ ಭಾರತಿಯರಿಗೆ ಇದೀಗ ಎಲ್ಪಿಜಿಯಂತೆ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ. ಹೋಟೆಲ್, ಬೇಕರಿ ಮುಂತಾದ ಆಹಾರೋದ್ಯಮಿಗಳಿಗೆ ಒಂದು ಪರ್ಯಾಯ ಇಂಧನ ಮೂಲದ ಒಲೆಯಾಗಿ ಕಾಣಿಸುತ್ತಿದೆ. ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಸಾಕಾರಕ್ಕೆ ಮತ್ತೊಂದು ಗರಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಏನಿದರ ವಿಶೇಷತೆ?

ವಿದ್ಯುತ್ ಚಾಲಿತ ಈ ಸ್ಟೌವ್ ಅಲ್ಲಿ LPG ಇಲ್ಲದೆಯೇ ಗ್ಯಾಸ್ ಒಲೆಯಂತೆಯೇ ಜ್ವಾಲೆ ಉತ್ಪಾದನೆ ಆಗುತ್ತದೆ. ಹೆಚ್ಚು ಶಾಖವೂ ಇರುತ್ತದೆ. ಮಾತ್ರವಲ್ಲದೆ, ಕಾರ್ಬನ್ ಸಹ ಹೊರ ಸೂಸುವುದಿಲ್ಲ. ನಿಜವಾಗಿ ನಾನು ಸಹ ಈ ಹೊಸ ತಂತ್ರಜ್ಞಾನದಿಂದ ಪ್ರಭಾವಿತನಾಗಿದ್ದೇನೆ. ಭಾರತೀಯ ತಯಾರಕರು ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್ಪಿಜಿ ರಹಿತ, ವಿದ್ಯುತ್ ಜ್ವಾಲೆ ಹರಡುವ ನೂತನ ಒಲೆಯನ್ನು ದೇಶದೊಳಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕೆಂದು ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ ಕರೆ ಕೊಟ್ಟಿದ್ದಾರೆ.

ಸೂರ್ಯ ಘರ್ ಜತೆ ಸಂಯೋಜನೆ ಅಗತ್ಯ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಜತೆ ಈ ಸ್ಟೌ ಸಂಯೋಜಿಸಿದರೆ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದ ದೇಶಾದ್ಯಂತ ಒಂದು ಮಹತ್ತರ ಬದಲಾವಣೆ ತರಬಹುದು. ಇನ್ನು, Lpg ಗೆ ಪರ್ಯಾಯವಾಗಿ ದೇಶದಲ್ಲಿ ಮತ್ತೊಂದು ತಂತ್ರಜ್ಞಾನದ ಬಗ್ಗೆಯೂ ಚರ್ಚೆ ನಡೆದಿದೆ. LPG ಕೊರತೆ ಮತ್ತು ಬೆಲೆ ಏರಿಕೆ ಪರಿಣಾಮ ಹೈಡ್ರೋಜನ್ ಅಡುಗೆ ಘಟಕದ ಬಗ್ಗೆಯೂ ವ್ಯಾಪಕ ಚಿಂತನೆ ನಡೆದಿದೆ. ನೀರಿನಿಂದ ಅನಿಲ ಉತ್ಪಾದಿಸುವ ವಿಧಾನ ಇದಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:43 pm, Fri, 10 April 26

Follow Us