ಕುಟುಂಬದ ಅಧಿಕಾರಕ್ಕಾಗಿ ಅನೇಕ ಬಾರಿ ಸಂವಿಧಾನದ ಆಶಯ ಛಿದ್ರಗೊಳಿಸಿರುವ ಕಾಂಗ್ರೆಸ್; ಅಮಿತ್ ಶಾ ಟೀಕೆ

1975ರ ತುರ್ತು ಪರಿಸ್ಥಿತಿಯ 49ನೇ ವಾರ್ಷಿಕೋತ್ಸವದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪಕ್ಷದ ಯುವರಾಜ ಎಂದು ಕರೆದಿದ್ದಾರೆ. ಅವರ ಅಜ್ಜಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು ಮತ್ತು ಅವರ ತಂದೆ ರಾಜೀವ್ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪೇನಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದರು ಎಂದು ಟೀಕಿಸಿದ್ದಾರೆ.

ಕುಟುಂಬದ ಅಧಿಕಾರಕ್ಕಾಗಿ ಅನೇಕ ಬಾರಿ ಸಂವಿಧಾನದ ಆಶಯ ಛಿದ್ರಗೊಳಿಸಿರುವ ಕಾಂಗ್ರೆಸ್; ಅಮಿತ್ ಶಾ ಟೀಕೆ
ಅಮಿತ್ ಶಾ
Follow us
|

Updated on: Jun 25, 2024 | 4:54 PM

ನವದೆಹಲಿ: ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು (Emergency) ಹೇರಿದ್ದಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ “ಒಂದು ನಿರ್ದಿಷ್ಟ ಕುಟುಂಬವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು” ಸಂವಿಧಾನದ ಆಶಯವನ್ನು ಹಲವಾರು ಬಾರಿ ಛಿದ್ರಗೊಳಿಸಿದೆ ಎಂದು ಹೇಳಿದ್ದಾರೆ. 1975ರ ತುರ್ತು ಪರಿಸ್ಥಿತಿಯ 49ನೇ ವಾರ್ಷಿಕೋತ್ಸವದಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಯುವರಾಜ ಎಂದಿದ್ದಾರೆ. ರಾಹುಲ್ ಗಾಂಧಿಯ ಅಜ್ಜಿ ಇಂದಿರಾ ಗಾಂಧಿ (Indira Gandhi) ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ರಾಹುಲ್ ಗಾಂಧಿಯ (Rahul Gandhi) ತಂದೆ ರಾಜೀವ್ ಗಾಂಧಿ 1985ರ ಜುಲೈ 23ರಂದು “ತುರ್ತು ಪರಿಸ್ಥಿತಿಯಲ್ಲಿ ಯಾವುದೇ ತಪ್ಪಿಲ್ಲ” ಎಂದು ಸಂಸತ್ತಿನಲ್ಲಿ ಹೇಳಿದ್ದರು ಎಂದು ಅಮಿತ್ ಶಾ ಆಕ್ರೋಶ ಹೊರಹಾಕಿದ್ದಾರೆ.

“ಒಂದು ನಿರ್ದಿಷ್ಟ ಕುಟುಂಬವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ನಮ್ಮ ಸಂವಿಧಾನದ ಆಶಯವನ್ನು ಹಲವಾರು ಬಾರಿ ಪುಡಿ ಮಾಡಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಭಾರತದ ಜನರ ಮೇಲೆ ನಿರ್ದಯ ದೌರ್ಜನ್ಯಗಳನ್ನು ಮಾಡಿದರು” ಎಂದು ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Parliament Session: ಜೂನ್ 27ರಂದು ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದರು. ಈ ದೇಶದ ಯಾವುದೇ ಪ್ರಧಾನಿ ತುರ್ತು ಪರಿಸ್ಥಿತಿ ಅಗತ್ಯವಿದೆ ಎಂದು ಭಾವಿಸಿದರೆ ಅವರು ಈ ದೇಶದ ಪ್ರಧಾನಿಯಾಗಲು ಯೋಗ್ಯರಲ್ಲ. ಸರ್ವಾಧಿಕಾರದ ಬಗ್ಗೆ ಹೆಮ್ಮೆ ಪಡುವ ಕ್ರಮವು ಕಾಂಗ್ರೆಸ್‌ಗೆ ರೂಢಿಯಾಗಿದೆ’ ಎಂದು ಅಮಿತ್ ಶಾ ಟೀಕಿಸಿದ್ದಾರೆ.

ಹಿಂದಿಯಲ್ಲಿ ಈ ಹಿಂದಿನ ಪೋಸ್ಟ್‌ನಲ್ಲಿ ಬರೆದಿರುವ ಅಮಿತ್ ಶಾ “ದುರಹಂಕಾರಿ ಮತ್ತು ನಿರಂಕುಶ” ಕಾಂಗ್ರೆಸ್ ಸರ್ಕಾರವು ಒಂದು ಕುಟುಂಬಕ್ಕೆ ಅಧಿಕಾರಕ್ಕಾಗಿ ಜನರ ನಾಗರಿಕ ಹಕ್ಕುಗಳನ್ನು 21 ತಿಂಗಳ ಕಾಲ ಅಮಾನತುಗೊಳಿಸಿತ್ತು. ಪ್ರಜಾಪ್ರಭುತ್ವವನ್ನು ಕೊಲ್ಲುವ ಮತ್ತು ಪದೇ ಪದೇ ಹಾನಿ ಮಾಡುವ ವಿರೋಧ ಪಕ್ಷದ ಸುದೀರ್ಘ ಇತಿಹಾಸಕ್ಕೆ ತುರ್ತು ಪರಿಸ್ಥಿತಿ ಅತಿದೊಡ್ಡ ಉದಾಹರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳ ಮೇಲೆ ಸೆನ್ಸಾರ್​ಶಿಪ್ ವಿಧಿಸಲಾಯಿತು, ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು ಮತ್ತು ನ್ಯಾಯಾಂಗವನ್ನು ಸಹ ನಿರ್ಬಂಧಿಸಲಾಯಿತು ಎಂದಿರುವ ಅಮಿತ್ ಶಾ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಿಗೆ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ: Lok Sabha Session: ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಶುರು

18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಸೋಮವಾರ ಸಂಸತ್ತಿನಲ್ಲಿ ಸಂವಿಧಾನದ ಪ್ರತಿಗಳನ್ನು ಹೊತ್ತೊಯ್ದರು. ಮಂಗಳವಾರ ಪ್ರಮಾಣ ವಚನ ಸ್ವೀಕರಿಸುವಾಗ ಕೆಲವು ಕಾಂಗ್ರೆಸ್ ಸದಸ್ಯರು ಸಂವಿಧಾನದ ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ತುಳಿಯಲು ಯತ್ನಿಸಿದ ಕಾಂಗ್ರೆಸ್‌ನ ತುರ್ತು ಪರಿಸ್ಥಿತಿಯನ್ನು ಹೇರುವ ರಾಜಕೀಯ ಪ್ರೇರಿತ ನಿರ್ಧಾರ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನು ಅಲುಗಾಡಿಸಿದೆ ಎಂದು ಬಿಜೆಪಿ ನಾಯಕ ಜೆ.ಪಿ. ನಡ್ಡಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ