AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ; ನಾಳೆಯಿಂದಲೇ ಅಮುಲ್ ಹಾಲಿನ ಬೆಲೆ ಲೀಟರ್​​ಗೆ 2 ರೂ. ಏರಿಕೆ

ಅಮುಲ್ ಮತ್ತೊಮ್ಮೆ ಹಾಲಿನ ಬೆಲೆಯನ್ನು ಹೆಚ್ಚಿಸಿದೆ. ದೇಶದ ಪ್ರಮುಖ ಡೈರಿ ಸಹಕಾರಿ ಸಂಸ್ಥೆಯಾದ ಅಮುಲ್ ತನ್ನ ಹಾಲಿನ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಅಮುಲ್ ಒದಗಿಸಿದ ಮಾಹಿತಿಯ ಪ್ರಕಾರ, ಭಾರತದಾದ್ಯಂತ ಹಾಲಿನ ಬೆಲೆಗಳನ್ನು ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ. ಈ ಬೆಲೆ ಹೆಚ್ಚಳವನ್ನು ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿ ಏಕರೂಪವಾಗಿ ಜಾರಿಗೆ ತರಲಾಗುತ್ತಿದೆ. ಮೇ 14ರಿಂದಲೇ ಈ ಬೆಲೆ ಜಾರಿಗೆ ಬರಲಿದೆ.

ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ; ನಾಳೆಯಿಂದಲೇ ಅಮುಲ್ ಹಾಲಿನ ಬೆಲೆ ಲೀಟರ್​​ಗೆ 2 ರೂ. ಏರಿಕೆ
Amul Milk Price
ಸುಷ್ಮಾ ಚಕ್ರೆ
|

Updated on: May 13, 2026 | 7:53 PM

Share

ನವದೆಹಲಿ, ಮೇ 13: ಪ್ರಮುಖ ಡೈರಿ ಬ್ರಾಂಡ್ ಅಮುಲ್ (Amul) ತನ್ನ ಹಲವಾರು ಹಾಲಿನ ಉತ್ಪನ್ನಗಳಲ್ಲಿ ಪ್ರತಿ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಳವನ್ನು ಘೋಷಿಸಿದೆ. ಪರಿಷ್ಕೃತ ಬೆಲೆಗಳು ಮೇ 14ರಿಂದ (ನಾಳೆಯಿಂದ) ಜಾರಿಗೆ ಬರಲಿದೆ. ಮೇ 14ರಿಂದ ದೇಶಾದ್ಯಂತ ಅಮುಲ್ ಹಾಲು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಲಿದೆ. ದಿನನಿತ್ಯ ಬಳಸುವ ಹಾಲಿನ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಜನಸಾಮಾನ್ಯರ ಮೇಲೆ ಮತ್ತೆ ಹೊರೆಬೀಳುವುದು ಖಂಡಿತ.

ಮೇ 14ರಿಂದಲೇ ಲೀಟರ್‌ಗೆ 2 ರೂ. ಹೆಚ್ಚಳದ ನಿಯಮ ಜಾರಿಗೆ ಬಂದಿದೆ. ಇದರರ್ಥ ಮೇ 14ರಿಂದ ಗ್ರಾಹಕರು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳಲ್ಲಿ ಅಮುಲ್ ಹಾಲನ್ನು ಖರೀದಿಸಲು ಹೊಸ ದರಗಳ ಪ್ರಕಾರ ಪಾವತಿಸಬೇಕಾಗುತ್ತದೆ. ಹಸುಗಳ ಮೇವು ಮತ್ತು ಪ್ಯಾಕೇಜಿಂಗ್‌ನ ಹೆಚ್ಚುತ್ತಿರುವ ವೆಚ್ಚವು ಈ ಬೆಲೆ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ: ಸೆ. 22ರಿಂದ ಬೆಣ್ಣೆ, ಐಸ್ ಕ್ರೀಮ್, ತುಪ್ಪ ಸೇರಿ 700ಕ್ಕೂ ಹೆಚ್ಚು ಅಮುಲ್ ಉತ್ಪನ್ನಗಳ ಬೆಲೆ ಕಡಿತ

ಅಮುಲ್ ಕಂಪನಿಯ ಪ್ರಕಾರ, ಬೆಲೆ ಹೆಚ್ಚಳವು ಅಮುಲ್‌ನ ಅತ್ಯಂತ ಹೆಚ್ಚು ಸೇವಿಸುವ ಕೆಲವು ಹಾಲಿನ ಉತ್ಪನ್ನಗಳನ್ನು ಒಳಗೊಳ್ಳುತ್ತದೆ, ಅವುಗಳೆಂದರೆ, ಅಮುಲ್ ಗೋಲ್ಡ್, ಅಮುಲ್ ತಾಜಾ, ಅಮುಲ್ ಹಸು ಹಾಲು, ಅಮುಲ್ ಎಮ್ಮೆ ಹಾಲು, ಅಮುಲ್ ಸ್ಲಿಮ್ ಆ್ಯಂಡ್ ಟ್ರಿಮ್, ಅಮುಲ್ ಸ್ಟ್ಯಾಂಡರ್ಡ್ ಮಿಲ್ಕ್, ಅಮುಲ್ ಟಿ-ಸ್ಪೆಷಲ್.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More