ಆಂಧ್ರಪ್ರದೇಶ: ಈಜುಕೊಳದಲ್ಲಿ ಕ್ಲೋರಿನ್​​ ಅನಿಲ ಸೋರಿಕೆ; 10ಕ್ಕಿಂತಲೂ ಹೆಚ್ಚು ಮಕ್ಕಳು ಅಸ್ವಸ್ಥ

ವಿಜಯವಾಡ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಬುಧವಾರ ಮಕ್ಕಳು ಈಜುಕೊಳದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೊಳದಲ್ಲಿ ಕ್ಲೋರಿನ್ ಸೋರಿಕೆಯಿಂದಾಗಿ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಳೆಯ ಉಪಕರಣಗಳು ಮತ್ತು ಹಳೆಯ ಗ್ಯಾಸ್ ಸಿಲಿಂಡರ್‌ನಿಂದಾಗಿ ಅನಿಲ ಸೋರಿಕೆ ಸಂಭವಿಸಿದೆ

ಆಂಧ್ರಪ್ರದೇಶ: ಈಜುಕೊಳದಲ್ಲಿ ಕ್ಲೋರಿನ್​​ ಅನಿಲ ಸೋರಿಕೆ; 10ಕ್ಕಿಂತಲೂ ಹೆಚ್ಚು ಮಕ್ಕಳು ಅಸ್ವಸ್ಥ
ಈಜುಕೊಳದ ಮೇಲ್ವಿಚಾರಕರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 09, 2022 | 7:35 AM

ವಿಜಯವಾಡ: ಆಂಧ್ರಪ್ರದೇಶದ(Andhra Pradesh) ವಿಜಯವಾಡ ಜಿಲ್ಲೆಯ ಪುರಸಭೆಯ ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ (Chlorine Gas Leak) ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಇವರೆಲ್ಲರೂ 8 ರಿಂದ 14 ವರ್ಷ ವಯಸ್ಸಿನವರು ಎಂದು ಈಜುಕೊಳ ಅಕಾಡೆಮಿ ಮೇಲ್ವಿಚಾರಕರು ತಿಳಿಸಿದ್ದಾರೆ. ವಿಜಯವಾಡ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಬುಧವಾರ ಮಕ್ಕಳು ಈಜುಕೊಳದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೊಳದಲ್ಲಿ ಕ್ಲೋರಿನ್ ಸೋರಿಕೆಯಿಂದಾಗಿ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಳೆಯ ಉಪಕರಣಗಳು ಮತ್ತು ಹಳೆಯ ಗ್ಯಾಸ್ ಸಿಲಿಂಡರ್‌ನಿಂದಾಗಿ ಅನಿಲ ಸೋರಿಕೆ ಸಂಭವಿಸಿದೆ. ನಂತರ ಅದನ್ನು ಸರಿಪಡಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಈಗ ಸ್ಥಿರವಾಗಿದ್ದಾರೆ ಎಂದು ಅವರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ

ಎಲ್ಲಾ ಮಕ್ಕಳು 50 ಮೀಟರ್ ಈಜುಕೊಳದಲ್ಲಿ ಈಜುತ್ತಿದ್ದರು. 25 ಮೀಟರ್ ಕೊಳದ ಟ್ಯಾಂಕರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಡಿ.11ರಂದು ಏಲೂರಿನಲ್ಲಿ ನಡೆಯಲಿರುವ ಸ್ಪರ್ಧೆಗಳಿಗೆ ಮಕ್ಕಳು ಸಿದ್ಧತೆ ನಡೆಸುತ್ತಿದ್ದರು. ಬುಧವಾರ ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿದ್ದು, ಡಿ.11ರಂದು ಸ್ಪರ್ಧೆ ಇರುವ ಕಾರಣ ಈಜಲು ಅನುಮತಿ ನೀಡುವಂತೆ ಕೆಲವು ಈಜು ಪಟುಗಳು ಮನವಿ ಮಾಡಿದ್ದರು. ಪಾಲಿಕೆ ಆಯುಕ್ತರಿಂದ ಅನುಮತಿ ಪಡೆಯುವಂತೆ ನಾವು ಅವರಿಗೆ ಹೇಳಿದ್ದು ಅನುಮತಿ ಇರುವುದಾಗಿ ಅವರು ಹೇಳಿದ್ದರು ಎಂದು ಈಜುಕೊಳ ಅಕಾಡೆಮಿ ಮೇಲ್ವಿಚಾರಕ ರಾಮಬಾಬು ಹೇಳಿದ್ದಾರೆ.

ಅಸ್ವಸ್ಥಗೊಂಡ 10 ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಹಾಗೂ ಗಂಭೀರ ಸ್ಥಿತಿಯಲ್ಲಿದ್ದ ಒಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ನಂತರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ  ವಿದ್ಯಾರ್ಥಿಗಳ ಆರೋಗ್ಯ  ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.

ಕ್ಲೋರಿನ್ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯೇ ಈ ಅಪಾಯಕ್ಕೆ ಕಾರಣ ಎಂದು ಪೋಷಕರು ದೂರಿದ್ದಾರೆ.

ಮತ್ತಷ್ಟು  ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:20 am, Fri, 9 December 22