ಗುಜರಾತಿನಲ್ಲಿ ಬಿಜೆಪಿ ಆಡಳಿತ ಮುಂದುವರಿಕೆ; ಯಾವ ರಾಜ್ಯದಲ್ಲಿ ಯಾವ ಪಕ್ಷ ಸುದೀರ್ಘ ಕಾಲ ಅಧಿಕಾರದಲ್ಲಿದ್ದವು? ಇಲ್ಲಿದೆ ಮಾಹಿತಿ
1997 ಮಾರ್ಚ್ ತಿಂಗಳಲ್ಲಿ ಗುಜರಾತಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿ 2022 ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ವಿಜಯದ ನಗೆ ಬೀರಿದೆ. 2027ರ ವರೆಗೆ ಇಲ್ಲಿ ಬಿಜೆಪಿ ಅಧಿಕಾರದಲ್ಲಿರಲಿದೆ
ಭಾರತದ ರಾಜ್ಯಗಳಲ್ಲಿ ಅತೀ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಪಕ್ಷಗಳ ಪಟ್ಟಿಯಲ್ಲಿ ಸಿಪಿಐ(ಎಂ)(CPI(M) ಮೊದಲ ಸ್ಥಾನದಲ್ಲಿದೆ. 1977 ಜೂನ್ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ (West Bengal)ಅಧಿಕಾರಕ್ಕೇರಿ 33 ವರ್ಷ ಆಡಳಿತ ನಡೆಸಿದ್ದ ಸಿಪಿಎಂ 2011 ಮೇ ತಿಂಗಳಲ್ಲಿ ಅಧಿಕಾರದಿಂದ ಕೆಳಗಿಳಿದಿತ್ತು. ಸಿಪಿಎಂನ ಸುದೀರ್ಘ ಆಡಳಿತಕ್ಕೆ ಟಿಎಂಸಿ ಬ್ರೇಕ್ ಹಾಕಿತ್ತು. ಅದೇ ವೇಳೆ ಗುಜರಾತಿನಲ್ಲಿ 32ವರ್ಷ ಅಧಿಕಾರದಲ್ಲಿದ್ದ ಹೆಗ್ಗಳಿಕೆ ಬಿಜೆಪಿ ಪಕ್ಷದ್ದಾಗಿದೆ. 1997 ಮಾರ್ಚ್ ತಿಂಗಳಲ್ಲಿ ಗುಜರಾತಿನಲ್ಲಿ(Gujarat) ಅಧಿಕಾರಕ್ಕೇರಿದ ಬಿಜೆಪಿ 2022 ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ವಿಜಯದ ನಗೆ ಬೀರಿದೆ. 2027ರ ವರೆಗೆ ಇಲ್ಲಿ ಬಿಜೆಪಿ ಅಧಿಕಾರದಲ್ಲಿರಲಿದೆ. ಸೆಪ್ಟೆಂಬರ್ 19- 23 ಅಕ್ಟೋಬರ್ 1996ರವರೆಗೆ ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಇತ್ತು. ಅಕ್ಟೋಬರ್ 1996- ಮಾರ್ಚ್ 1998ರ ನಡುವೆ ಇಲ್ಲಿ ರಾಷ್ಟ್ರೀಯ ಜನತಾ ಪಾರ್ಟಿ ಸರ್ಕಾರ ಅಧಿಕಾರದಲ್ಲಿತ್ತು. ಅಸ್ಸಾಂನಲ್ಲಿ ಮಾರ್ಚ್ 1950ರಿಂದ ಮಾರ್ಚ್ 1978ರವರೆಗೆ 27 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ 27 ವರ್ಷಗಳ ಕಾಲ ಅಧಿಕಾರ ನಡೆಸಿತ್ತು. ಫೆಬ್ರುವರಿ 1975ರಿಂದ 2002 ಅಕ್ಟೋಬರ್ ತಿಂಗಳವರೆಗೆ ನ್ಯಾಷನಲ್ ಕಾನ್ಫರೆನ್ಸ್ ಅಧಿಕಾರದಲ್ಲಿತ್ತು. ಜುಲೈ 1984-6 ಮಾರ್ಚ್ 1986ರವರೆಗಿನ ಅವಧಿಯಲ್ಲಿ ಆವಾಮಿ ನ್ಯಾಷನಲ್ ಕಾನ್ಫರೆನ್ಸ್ ಇಲ್ಲಿ ಅಧಿಕಾರ ನಡೆಸಿತ್ತು. ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ 26 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ನವೆಂಬರ್ 1956ರಿಂದ ಜನವರಿ 1983ರ ವರೆಗೆ ಕಾಂಗ್ರೆಸ್ ಇಲ್ಲಿ ಅಧಿಕಾರದಲ್ಲಿತ್ತು. ಇತ್ತ ತ್ರಿಪುರಾದಲ್ಲಿ ಸಿಪಿಎಂ 25 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಏಪ್ರಿಲ್ 1993ರಲ್ಲಿ ಅಧಿಕಾರಕ್ಕೇರಿದ ಸಿಪಿಎಂ ಮಾರ್ಚ್2018ರ ವರೆಗೆ ಸರ್ಕಾರ ಚಲಾಯಿಸಿತ್ತು.
ಒಡಿಶಾದಲ್ಲಿ ಬಿಜು ಜನತಾ ದಳ ಮಾರ್ಚ್ 2000ರಿಂದ ಮೇ 2024ರವರೆಗೆ 24 ವರ್ಷ ಅಧಿಕಾರದಲ್ಲಿತ್ತು. ಸಿಕ್ಕಿಂನಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಡಿಸೆಂಬರ್ 1994 -ಮೇ 2019ರವರೆಗೆ 24 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಬಿಹಾರದಲ್ಲಿ ಜನತಾ ದಳ ಯುನೈಟೆಡ್ ನವೆಂಬರ್ 2005- ನವೆಂಬರ್ 2025ರವರೆಗೆ 20 ವರ್ಷಗಳ ಕಾಲ ಸರ್ಕಾರ ನಡೆಸಿತ್ತು. ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷ ಆಗಸ್ಟ್ 1947- ಮಾರ್ಚ್ 1967ಅಂದರೆ 20 ವರ್ಷ ಅಧಿಕಾರದಲ್ಲಿತ್ತು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜನವರಿ 1950ರಿಂದ ಏಪ್ರಿಲ್ 1967ರವರೆಗೆ 17 ವರ್ಷಗಳ ಕಾಲ ಇತ್ತು. ಮಧ್ಯ ಪ್ರದೇಶದಲ್ಲಿ ಜನವರಿ 1950- ಜುಲೈ 1967ರವರೆಗೆ 17 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಜನವರಿ 1950 -ಮಾರ್ಚ್ 1967ರವರೆಗೆ 17 ವರ್ಷಗಳ ಕಾಲ ಬಿಹಾರದಲ್ಲಿ ಕಾಂಗ್ರೆಸ್ ಅಧಿಕಾರ ಚಲಾಯಿಸಿತ್ತು. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಏಪ್ರಿಲ್ 1949 -ಮಾರ್ಚ್ 1967ರವರೆಗೆ 17 ವರ್ಷ ಕಾಲ ಅಧಿಕಾರ ನಡೆಸಿತ್ತು. ದಕ್ಷಿಣ ರಾಜ್ಯವಾದ ತಮಿಳುನಾಡಿನಲ್ಲಿಯೂ ಕಾಂಗ್ರೆಸ್ ಜನವರಿ 1950 -ಮಾರ್ಚ್ 1967ರವರೆಗೆ 17 ವರ್ಷಗಳು ಅಧಿಕಾರದಲ್ಲಿತ್ತು. ಗೋವಾದಲ್ಲಿ MGP ಅಥವಾ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಡಿಸೆಂಬರ್ 1963 -ಏಪ್ರಿಲ್ 1979ರವರೆಗೆ 17 ವರ್ಷಗಳ ಕಾಲ ಆಡಳಿತ ನಡೆಸಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮಾರ್ಚ್ 1948 -ಫೆಬ್ರವರಿ 1964ರವರೆಗೆ 16 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿ ಡಿಸೆಂಬರ್ 2003- ಡಿಸೆಂಬರ್ 2018ರವರೆಗೆ 15 ವರ್ಷಗಳು,ಬಿಹಾರದಲ್ಲಿಮಾರ್ಚ್ 1990 -ಮಾರ್ಚ್ 2005ರ ವರೆಗೆ ಬಿಜೆಡಿ 15 ವರ್ಷಗಳು, ದೆಹಲಿಯಲ್ಲಿ ಕಾಂಗ್ರೆಸ್ ಡಿಸೆಂಬರ್ 1998 -ಡಿಸೆಂಬರ್ 2013ರವರೆಗೆ 15 ವರ್ಷ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಮಾರ್ಚ್ 2002- ಮಾರ್ಚ್ 2017ರವರೆಗೆ ಒಟ್ಟು 15 ವರ್ಷಗಳ ಕಾಲ ಅಧಿಕಾರದಲ್ಲಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Thu, 8 December 22