
ನವದೆಹಲಿ, ನವೆಂಬರ್ 23: ಏಷ್ಯಾದ ಪ್ರಭಾವಿ ದೇಶಗಳ ಸಾಲಿನಲ್ಲಿ ಭಾರತ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಲೋವಿ ಇನ್ಸ್ಟಿಟ್ಯೂಟ್ (Lowy Institute) ಪ್ರತೀ ವರ್ಷ ಪ್ರಕಟಿಸುವ ಏಷ್ಯಾ ಪವರ್ ಇಂಡೆಕ್ಸ್ನಲ್ಲಿ (Asia Power Index 2026) ಭಾರತ ಏಷ್ಯಾದಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಏಷ್ಯಾದ ಅತ್ಯಂತ ಪ್ರಭಾವಿ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ, ಚೀನಾ ನಂತರದ ಸ್ಥಾನ ಭಾರತದ್ದಾಗಿದೆ. ಏಷ್ಯಾ ಪವರ್ ಇಂಡೆಕ್ಸ್ನಲ್ಲಿ ಕಳೆದ ಬಾರಿ 40 ಅಂಕ ಹೊಂದಿದ್ದ ಭಾರತ ಈ ಬಾರಿ 0.5 ಅಂಕ ವೃದ್ಧಿಸಿಕೊಂಡು 40.5 ಅಂಕ ಹೊಂದಿದೆ.
ಇಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ಏಷ್ಯಾದಲ್ಲಿ ಸೂಪರ್ ಪವರ್ ವಿಭಾಗಕ್ಕೆ ಸೇರುತ್ತವೆ. ಭಾರತವು ಪ್ರಮುಖ ಶಕ್ತಿ ಎನಿಸಿದೆ. ಈ ಪ್ರಮುಖ ಶಕ್ತಿ ವಿಭಾಗದಲ್ಲಿ ಭಾರತ ಮಾತ್ರವೇ ಇರೋದು.
ಇದನ್ನೂ ಓದಿ: ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದ ಡಿಸೆಂಬರ್ 16ಕ್ಕೆ ಸಹಿ ಸಾಧ್ಯತೆ: ವರದಿ
ಹೂಡಿಕೆ ಆಕರ್ಷಣೆ ಸೂಚಕದಲ್ಲಿ ಚೀನಾವನ್ನು ಭಾರತ ಮೀರಿಸಿ ಎರಡನೇ ಸ್ಥಾನದಲ್ಲಿದೆ. ಅಮೆರಿಕ ಮೊದಲ ಸ್ಥಾನ ಹೊಂದಿದೆ. 2016ರಿಂದ 2025ರವರೆಗೆ ಯಾವ ದೇಶಕ್ಕೆ ವಿದೇಶೀ ಬಂಡವಾಳ ಹೂಡಿಕೆ ಹರಿದುಬಂದಿದೆ ಎಂಬುದರ ಮೇಲೆ ಈ ಪಟ್ಟಿ ಮಾಡಲಾಗಿದೆ. ಭಾರತಕ್ಕೆ ಈ ಅವಧಿಯಲ್ಲಿ 581 ಬಿಲಿಯನ್ ಡಾಲರ್ ಎಫ್ಡಿಐ ಬಂದರೆ, ಚೀನಾ 506 ಬಿಲಿಯನ್ ಡಾಲರ್ ಪಡೆದಿದೆ.
ಲೋವಿ ಇನ್ಸ್ಟಿಟ್ಯೂಟ್ನ ಈ ಇಂಡೆಕ್ಸ್ನಲ್ಲಿ ಏಷ್ಯನ್ ರಾಷ್ಟ್ರಗಳ ಸಶಸ್ತ್ರ ಪಡೆಗಳ ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ಭಾರತ ನೂರಕ್ಕೆ ನೂರು ಅಂಕ ಪಡೆದು ಅಗ್ರಸ್ಥಾನ ಪಡೆದಿದೆ. ಚೀನಾ ಮತ್ತು ಅಮೆರಿಕ ಕ್ರಮವಾಗಿ 85.3 ಮತ್ತು 64.8 ಅಂಕಗಳನ್ನು ಪಡೆದು ಟಾಪ್-3 ನಲ್ಲಿ ಇವೆ.
ಗಮನಿಸಬೇಕಾದ ಸಂಗತಿ ಎಂದರೆ, ಈ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿ ಇದೆ ಎಂದರೆ ಅದರ ಮಿಲಿಟರಿ ಶಕ್ತಿ ಎಲ್ಲರಿಗಿಂತ ಬಲಿಷ್ಠವಾದುದು ಎಂದರ್ಥವಲ್ಲ. ಮಿಲಿಟರಿ ಸಿಬ್ಬಂದಿ, ಸನ್ನದ್ಧತೆ ಮತ್ತು ಸಂಘಟನೆಯ ಬಲ ಇವುಗಳನ್ನು ಮಾಪನ ಮಾಡಿ ಶ್ರೇಯಾಂಕ ನೀಡಲಾಗಿದೆ.
2050ರವರೆಗೆ ಲಭ್ಯ ಇರಬಹುದಾದ ಮಾನವ ಸಂಪನ್ಮೂಲ ಸೂಚಕದಲ್ಲಿ ಭಾರತ ನೂರಕ್ಕೆ ನೂರು ಅಂಕ ಪಡೆದು ಮೊದಲ ಸ್ಥಾನ ಪಡೆದಿದೆ. ಮುಂದಿನ ಕೆಲ ದಶಕಗಳ ಕಾಲ ಭಾರತದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ದುಡಿಯುವ ವಯಸ್ಸಿನ ಜನರು ಇರಲಿದ್ದಾರೆ. ಆರ್ಥಿಕ ಬೆಳವಣಿಗೆಗೆ ಇವರ ಕೊಡುಗೆ ಮಹತ್ತರವಾಗಿರಲಿದೆ. ಈ ಕಾರಣದಿಂದ ಭಾರತಕ್ಕೆ ಈ ಸೂಚಕದಲ್ಲಿ ಮೊದಲ ಸ್ಥಾನ ಸಿಕ್ಕಿದೆ.
ಪ್ರಾದೇಶಿಕ ನಾಯಕತ್ವ ಶ್ರೇಯಾಂಕದಲ್ಲಿ ಲೋವಿ ಇನ್ಸ್ಟಿಟ್ಯೂಟ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವವನ್ನು ಗುರುತಿಸಿದೆ. ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಅವರ ಬಳಿಕ ಮೋದಿ ಅವರು ಏಷ್ಯಾದ ಅತ್ಯಂತ ಪ್ರಭಾವಿ ನಾಯಕರೆನಿಸಿದ್ದಾರೆ.
ಆದರೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಲ್ಲಿ ಭಾರತದ ರಾಜತಾಂತ್ರಿಕ ಪಾತ್ರ ಬಹಳ ಸೀಮಿತವಾಗಿರುವುದರಿಂದ ಮೋದಿ ಅವರ ಜಾಗತಿಕ ನಾಯಕತ್ವದ ಆಕಾಂಕ್ಷೆಗೆ ಹಿನ್ನಡೆಯಾಗಿರುವುದನ್ನು ಈ ವರದಿಯಲ್ಲಿ ಗಮನಿಸಲಾಗಿದೆ.
ಇದನ್ನೂ ಓದಿ: ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ
ಲೋವಿ ಇನ್ಸ್ಟಿಟ್ಯೂಟ್ನ ಏಷ್ಯಾ ಪವರ್ ಇಂಡೆಕ್ಸ್ನಲ್ಲಿ ಎಂಟು ಮಾಪನಗಳನ್ನು ಬಳಸಲಾಗಿದೆ. 131 ಸೂಚಕಗಳನ್ನು ರೂಪಿಸಲಾಗಿದೆ. ಈ ಎಂಟು ಮಾಪನಗಳು ಈ ಕೆಳಕಂಡಂತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ