Assam News: ಅಲ್ಖೈದಾ ಜೊತೆ ಸಂಪರ್ಕ ಹೊಂದಿದ್ದ ಅಸ್ಸಾಂನ 34 ಜನರ ಬಂಧನ
ಅಸ್ಸಾಂ ರಾಜ್ಯದಲ್ಲಿ ಕೆಲವು ಹೊಸ ಉಗ್ರರ ಗುಂಪುಗಳು ಹುಟ್ಟಿಕೊಳ್ಳುತ್ತಿದ್ದು, ಯುವಕರನ್ನು ಬಳಸಿಕೊಂಡು ತಮ್ಮ ಲಾಭ ಪಡೆಯುತ್ತಿವೆ ಎಂದು ಅಸ್ಸಾಂ ಡಿಜಿಪಿ ಹೇಳಿದ್ದಾರೆ.
ನವದೆಹಲಿ: ಅಸ್ಸಾಂನಲ್ಲಿ ಅಲ್-ಖೈದಾದೊಂದಿಗೆ (Al-Qaeda) ಸಂಪರ್ಕ ಹೊಂದಿರುವ 34ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಸ್ಸಾಂ (Assam) ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ, ಅಲ್-ಖೈದಾದೊಂದಿಗೆ ಸಂಬಂಧ ಹೊಂದಿರುವ 34ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಅಸ್ಸಾಂ ಪೊಲೀಸರು ಈ ರೀತಿಯ ಪಿತೂರಿಗಳನ್ನು ಸಹಿಸುವುದಿಲ್ಲ. ಉಗ್ರರ ನಂಟಿರುವವರ ಈ ಕೆಲಸ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಅಸ್ಸಾಂ ಪೊಲೀಸ್‌ನ ಹಿರಿಯ ಅಧಿಕಾರಿಯ ಪ್ರಕಾರ, ಕೆಲವು ಸೇನಾ ತರಬೇತಿ ಶಿಬಿರಗಳನ್ನು ಬಾಂಗ್ಲಾದೇಶಿಗಳು ಸ್ಥಾಪಿಸಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ಕೆಲವು ಹೊಸ ಉಗ್ರರ ಗುಂಪುಗಳು ಹುಟ್ಟಿಕೊಳ್ಳುತ್ತಿದ್ದು, ಯುವಕರನ್ನು ಬಳಸಿಕೊಂಡು ತಮ್ಮ ಲಾಭ ಪಡೆಯುತ್ತಿವೆ ಎಂದು ಅಸ್ಸಾಂ ಡಿಜಿಪಿ ಹೇಳಿದ್ದಾರೆ.
Assam | There are different types of groups of Madrasas in Assam… Some new groups are sprouting up & taking advantage. Conspiracy hatching from outside Assam, currently from Bangladesh & Al-Qaeda-affiliated groups, influencing youth to spread radicalization: DGP BJ Mahanta pic.twitter.com/PPbaf9TgCs
— ANI (@ANI) August 25, 2022
ಇದನ್ನೂ ಓದಿ: Jammu Kashmir: ಕಾಶ್ಮೀರದಲ್ಲಿ ಉಗ್ರನ ಬಂಧನ; ಹೊರಬಿತ್ತು ಆಘಾತಕಾರಿ ಸತ್ಯ, ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ದೊರಕಿತು ಸಾಕ್ಷ್ಯ
ಅಸ್ಸಾಂನಲ್ಲಿ ವಿವಿಧ ರೀತಿಯ ಮದರಸಾಗಳ ಗುಂಪುಗಳಿವೆ. ಕೆಲವು ಹೊಸ ಗುಂಪುಗಳು ಚಿಗುರೊಡೆದು ಪರಿಸ್ಥಿತಿಯ ಲಾಭ ಪಡೆಯುತ್ತಿವೆ. ಅಸ್ಸಾಂನ ಹೊರಗಿನಿಂದ ಸಂಚು ರೂಪಿಸಲಾಗುತ್ತಿದೆ ಎಂದು ಡಿಜಿಪಿ ಬಿಜೆ ಮಹಂತ ಹೇಳಿದ್ದಾರೆ.