Big News: ಬಿಹಾರದಲ್ಲಿ ಇಂದು ವಿಶ್ವಾಸಮತಯಾಚನೆ; 165 ಶಾಸಕರ ಬೆಂಬಲದಿಂದ ನಿತೀಶ್ ಕುಮಾರ್ ಸರ್ಕಾರಕ್ಕೆ ಗೆಲುವು ಖಚಿತ
165 ಶಾಸಕರು ಮಹಾಮೈತ್ರಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಅಗತ್ಯವಿರುವ 121ಕ್ಕಿಂತ ಹೆಚ್ಚು ಶಾಸಕರ ಬೆಲೆ ನಿತೀಶ್ ಕುಮಾರ್ ಸರ್ಕಾರಕ್ಕೆ ಸಿಕ್ಕಿದಂತಾಗಿದೆ.
ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ನೇತೃತ್ವದ ಮಹಾಘಟಬಂಧನ್ ಸರ್ಕಾರವು ವಿಶೇಷ ಅಧಿವೇಶನದ ಆರಂಭದ ದಿನವಾದ ಇಂದು (ಬುಧವಾರ) ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಲು ವಿಶ್ವಾಸಮತ ಯಾಚಿಸಲಿದೆ. ಏಕಸದಸ್ಯ ಎಐಎಂಐಎಂ ಮಂಗಳವಾರ ಮಹಾಮೈತ್ರಿಕೂಟ (Mahagathbandhan) ಸರ್ಕಾರಕ್ಕೆ ತನ್ನ ಬೆಂಬಲವನ್ನು ನೀಡಲು ನಿರ್ಧರಿಸಿದ ನಂತರ 243 ಸದಸ್ಯರ ವಿಧಾನಸಭೆಯಲ್ಲಿ ಸರ್ಕಾರವನ್ನು ಬೆಂಬಲಿಸುವ ಶಾಸಕರ ಸಂಖ್ಯೆ 165ಕ್ಕೆ ಏರಿಕೆಯಾಗಿದೆ. 2 ಸ್ಥಾನಗಳು ಖಾಲಿ ಇರುವುದರಿಂದ ಸದನದ ಒಟ್ಟು ಬಲ 241 ಆಗಿದೆ.
7 ಪಕ್ಷಗಳ ಒಟ್ಟು 163 ಶಾಸಕರು ಮತ್ತು ಒಬ್ಬ ಸ್ವತಂತ್ರ ಶಾಸಕ (ಸುಮಿತ್ ಕುಮಾರ್ ಸಿಂಗ್) ಆರ್‌ಜೆಡಿಯೊಂದಿಗೆ ಮತ್ತೆ ಕೈಜೋಡಿಸಲು ಬಿಜೆಪಿಯಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಆಗಸ್ಟ್ 9ರಂದು ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಗೆ ತಮ್ಮ ಬೆಂಬಲವನ್ನು ನೀಡಿದ್ದರು.
ಇದನ್ನೂ ಓದಿ: ಬಿಹಾರದ ಕಾನೂನು ಸಚಿವರ ವಿರುದ್ಧ ಬಂಧನ ವಾರೆಂಟ್; ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಸಿಎಂ ನಿತೀಶ್ ಕುಮಾರ್
ಹೊಸ ಸರ್ಕಾರವನ್ನು ಬೆಂಬಲಿಸುವ 8 ರಾಜಕೀಯ ಪಕ್ಷಗಳೆಂದರೆ ಆರ್ಜೆಡಿ (79), ಜೆಡಿಯು (45), ಕಾಂಗ್ರೆಸ್ (19), ಸಿಪಿಐ-ಎಂಎಲ್ (12), ಹೆಚ್ಎಎಂಎಸ್ (04), ಸಿಪಿಐ (2), ಸಿಪಿಎಂ (2) ಮತ್ತು ಎಐಎಂಐಎಂ ( 1) ಇವರಲ್ಲದೆ, ಸ್ವತಂತ್ರ ಶಾಸಕ ಮತ್ತು ಸಚಿವ ಸುಮಿತ್ ಕುಮಾರ್ ಸಿಂಗ್ ಕೂಡ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ್ದಾರೆ.
165 ಶಾಸಕರು ಮಹಾಮೈತ್ರಿ ಸರ್ಕಾರವನ್ನು ಬೆಂಬಲಿಸುವ ಮೂಲಕ ಅಗತ್ಯವಿರುವ 121ಕ್ಕಿಂತ ಹೆಚ್ಚು ಶಾಸಕರ ಬೆಲೆ ನಿತೀಶ್ ಕುಮಾರ್ ಸರ್ಕಾರಕ್ಕೆ ಸಿಕ್ಕಿದಂತಾಗಿದೆ. ಇಂದು ನಡೆಯುವ ವಿಶ್ವಾಸಮತ ಯಾಚನೆ ವೇಳೆ ನಿತೀಶ್ ಕುಮಾರ್ ಸರ್ಕಾರ ಉಳಿಯುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ: Big News: ಬಿಹಾರದಲ್ಲಿ ಸಚಿವ ಸಂಪುಟ ವಿಸ್ತರಣೆ; ತೇಜ್ ಪ್ರತಾಪ್ ಸೇರಿ 31 ನೂತನ ಸಚಿವರ ಪ್ರಮಾಣವಚನ ಸ್ವೀಕಾರ
ಇತರ ಎಲ್ಲಾ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್ ಸರ್ಕಾರವನ್ನು ಬೆಂಬಲಿಸಿರುವುದರಿಂದ ಬಿಜೆಪಿ ಕೇವಲ 76 ಶಾಸಕರ ಬಲ ಹೊಂದಿದೆ. ಈ ಮೂಲಕ ಬಿಜೆಪಿ ಬಿಹಾರದ ಏಕೈಕ ವಿರೋಧ ಪಕ್ಷವಾಗಲಿದೆ.