ಡಿಜಿಟಲ್ ಮೀಡಿಯಾ ಹೊಸ ನೀತಿ ಸಂಹಿತೆಯ ಕೆಲ ಅಂಶಗಳ ಪಾಲನೆಗೆ ವಿನಾಯ್ತಿ ನೀಡಿದ ಬಾಂಬೆ ಹೈಕೋರ್ಟ್​

ಕಾನೂನಿಗೆ ಸಂಬಂಧಿಸಿದ ಮಾಹಿತಿ ಪ್ರಕಟಿಸುವ ನ್ಯೂಸ್ ಪೋರ್ಟಲ್ ‘ದಿ ಲೀಫ್​ಲೆಟ್​’ ಮತ್ತು ಹಿರಿಯ ಪತ್ರಕರ್ತ ನಿಖಿಲ್ ವಾಘ್ಳೆ ಅವರಿಗೆ ಭಾಗಶಃ ಮಧ್ಯಂತರ ರಿಯಾಯ್ತಿ ಸಿಕ್ಕಿದೆ.

ಡಿಜಿಟಲ್ ಮೀಡಿಯಾ ಹೊಸ ನೀತಿ ಸಂಹಿತೆಯ ಕೆಲ ಅಂಶಗಳ ಪಾಲನೆಗೆ ವಿನಾಯ್ತಿ ನೀಡಿದ ಬಾಂಬೆ ಹೈಕೋರ್ಟ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 14, 2021 | 11:39 PM

ಮುಂಬೈ: ಕೇಂದ್ರ ಸರ್ಕಾರವು ರೂಪಿಸಿರುವ ಹೊಸ ಐಟಿ ನಿಯಮಾವಳಿಗಳ ಅನ್ವಯ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಪಾಲಿಸಬೇಕಿರುವ ನೀತಿ ಸಂಹಿತೆಗೆ ಬಾಂಬೆ ಹೈಕೋರ್ಟ್​ ಶನಿವಾರ  ಭಾಗಶಃ ರಿಯಾಯ್ತಿ ನೀಡಿದೆ. ಕಾನೂನಿಗೆ ಸಂಬಂಧಿಸಿದ ಮಾಹಿತಿ ಪ್ರಕಟಿಸುವ ನ್ಯೂಸ್ ಪೋರ್ಟಲ್ ‘ದಿ ಲೀಫ್​ಲೆಟ್​’ ಮತ್ತು ಹಿರಿಯ ಪತ್ರಕರ್ತ ನಿಖಿಲ್ ವಾಘ್ಳೆ ಅವರಿಗೆ ಭಾಗಶಃ ಮಧ್ಯಂತರ ರಿಯಾಯ್ತಿ ಸಿಕ್ಕಿದೆ.

ಡಿಜಿಟಲ್​ ಮಾಧ್ಯಮಗಳಿಗೆ ಅನ್ವಯವಾಗುವ ಹೊಸ ಐಟಿ ನಿಯಮಗಳ 9 (1) ಮತ್ತು 9 (3) ರಲ್ಲಿ ಇರುವ ಅಂಶಗಳ ಪಾಲನೆಯಿಂದ ಈ ವಿನಾಯ್ತಿ ಸಿಕ್ಕಿದೆ. ಹೊಸ ನಿಯಮಗಳ ಪ್ರಕಾರ, ನೀತಿ ಸಂಹಿತೆಯ ಉಸ್ತುವಾರಿ ಮತ್ತು ಪಾಲನೆ, ವಿವಿಧ ಇಲಾಖೆಗಳ ಸಮನ್ವಯ ಸಮಿತಿ ರಚನೆ ಮತ್ತು ತುರ್ತು ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ತಡೆಹಿಡಿಯಬೇಕು ಎನ್ನುವ ನಿಯಮಗಳನ್ನು ವಿರೋಧಿಸಿ ದಿ ಲೀಫ್​ಲೆಟ್ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು. ನೀತಿ ಸಂಹಿತೆಯ ಮೂಲಕ ಕೇಂದ್ರ ಸರ್ಕಾರವು ಹಲವು ಕಾನೂನುಗಳನ್ನು ನಿರ್ಲಕ್ಷಿಸಲು ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

‘ಹೊಸ ಐಟಿ ನಿಯಮಗಳ 9ನೇ ಅಂಶವು ಅರ್ಜಿದಾರರ ಸಂವಿಧಾನಿಕ ಹಕ್ಕು (ಪರಿಚ್ಛೇದ 19 -2-ಎ) ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಇದು ಐಟಿ ಕಾಯ್ದೆಯ ವ್ಯಾಪ್ತಿಯನ್ನೂ ಮೀರಿದೆ. ಹೀಗಾಗಿಯೇ ನಾವು ಈ ಐಟಿ ನಿಯಮಗಳ 1ರಿಂದ 3ನೇ ಅನುಚ್ಛೇದಗಳಿಗೆ ತಡೆಯಾಜ್ಞೆ ಕೊಡುತ್ತಿದ್ದೇವೆ. ಆದರೆ 7 ಮತ್ತು 9ನೇ ನಿಯಮದ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಎಸ್.ಕುಲಕರ್ಣಿ ಹೇಳಿದರು.

ಪ್ರೆಸ್​ ಕೌನ್ಸಿಲ್ ಆಫ್ ಇಂಡಿಯಾ ಕಾಯ್ದೆ ಮತ್ತು ಕೇಬಲ್ ಟಿವಿ ಕಾಯ್ದೆಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಹೊಸ ನಿಯಮಗಳು ಈ ಕಾಯ್ದೆಯ ವ್ಯಾಪ್ತಿಯೊಳಗೆ ಬರುತ್ತವೆಯೇ? ಅಥವಾ ಇತರ ಕಾಯ್ದೆಗಳನ್ನು ಉಲ್ಲಂಘಿಸುತ್ತದೆಯೇ? ಒಂದು ವೇಳೆ ಹೀಗಾಗಿದ್ದರೆ ಒಂದೇ ವಿಚಾರಕ್ಕೆ ಹಲವು ಕಾಯ್ದೆಗಳು ಅಸ್ತಿತ್ವಕ್ಕೆ ಬಂದಂತೆ ಆಗುತ್ತವೆ ಎಂದು ಅಭಿಪ್ರಾಯಪಟ್ಟಿತು.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಯಾವುದೇ ಮಧ್ಯಂತರ ಆದೇಶ ನೀಡಬೇಡಿ. ನೀವು ನೀಡುವ ಮಧ್ಯಂತರ ಆದೇಶವು ಸುಳ್ಳುಸುದ್ದಿ ಹರಡಲು ಮತ್ತು ಕಾನೂನುಬಾಹಿರ ಮಾಹಿತಿ ಪ್ರಸಾರಗೊಳ್ಳಲು ಅವಕಾಶ ನೀಡಿದಂತೆ ಆಗಬಹುದು’ ಎಂದು ಮನವಿ ಮಾಡಿದರು. ಪ್ರಕರಣವನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದ ನ್ಯಾಯಪೀಠವು, ಕೇಂದ್ರ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿತು.

ಕೇಂದ್ರ ಸರ್ಕಾರವು ಕಳೆದ ಫೆಬ್ರುವರಿಯಲ್ಲಿ ಪ್ರಕಟಿಸಿದ್ದ ಹೊಸ ಐಟಿ ನಿಯಮಗಳು ಇದೇ ಮೇ ತಿಂಗಳಿನಿಂದ ಜಾರಿಗೆ ಬಂದಿವೆ. ಎಲ್ಲ ಸಾಮಾಜಿಕ ಮಾಧ್ಯಮಗಳು ದೂರು ಪರಿಹಾರ ಪ್ರಾಧಿಕಾರ ಸ್ಥಾಪಿಸಬೇಕು, ಸ್ಥಾನಿಕ ದೂರು ವಿಚಾರಣಾ ಅಧಿಕಾರಿಯನ್ನು ನೇಮಿಸಬೇಕು. ಡಿಜಿಟಲ್ ಮಾಧ್ಯಮಗಳು ಸರ್ಕಾರದ ಸಂಸ್ಥೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ಹೇಳುತ್ತವೆ.

(Bombay High Court stays provisions on adherence to Code of Ethics framed under new IT Rules)

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಭಾರತದಲ್ಲಿ ಡಿಜಿಟಲ್ ಜನಗಣತಿ: ಲೋಕಸಭೆಗೆ ಕೇಂದ್ರ ಸರ್ಕಾರದಿಂದ ಮಾಹಿತಿ

ಇದನ್ನೂ ಓದಿ: ಐಟಿ ನಿಯಮಗಳು ಈ ನೆಲದ ಕಾನೂನು, ಟ್ವಿಟರ್ ಅದನ್ನು ಪಾಲಿಸುವುದು ಕಡ್ಡಾಯ: ಕೇಂದ್ರ ಸರ್ಕಾರ

Published On - 11:36 pm, Sat, 14 August 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್