ಆಗ್ರಾ: ರೀಲ್ಸ್ ಮಾಡುತ್ತಿರುವಾಗ ಕಾಲು ಜಾರಿ ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಸಾವು
ರೀಲ್ಸ್ ಮಾಡುತ್ತಾ ಯುವಕನೊಬ್ಬ ಕಾಲು ಜಾರಿ ನಾಲ್ಕನೇ ಮಹಡಿಯಿಂದ ಬಿದ್ದಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಆಸಿಫ್ ಎನ್ನುವ ವ್ಯಕ್ತಿ ಸ್ಲೋ ಮೋಷನ್ ವಿಡಿಯೋ ಮಾಡಲು ಹೋಗಿ, ಕಾಲು ಜಾರಿ ಬಿದ್ದಿದ್ದಾನೆ. ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸೇಫ್ಟಿ ರೇಲಿಂಗ್ ತೆರೆದಿದ್ದರಿಂದ ಆತ ಕೆಳಗೆ ಬಿದ್ದಿದ್ದಾನೆ.

ರೀಲ್ಸ್ ಮಾಡುತ್ತಾ ಯುವಕನೊಬ್ಬ ಕಾಲು ಜಾರಿ ನಾಲ್ಕನೇ ಮಹಡಿಯಿಂದ ಬಿದ್ದಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ಆಸಿಫ್ ಎನ್ನುವ ವ್ಯಕ್ತಿ ಸ್ಲೋ ಮೋಷನ್ ವಿಡಿಯೋ ಮಾಡಲು ಹೋಗಿ, ಕಾಲು ಜಾರಿ ಬಿದ್ದಿದ್ದಾನೆ. ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸೇಫ್ಟಿ ರೇಲಿಂಗ್ ತೆರೆದಿದ್ದರಿಂದ ಆತ ಕೆಳಗೆ ಬಿದ್ದಿದ್ದಾನೆ.
ಆಸಿಫ್ ಒಬ್ಬನೇ ಅಲ್ಲಿರಲಿಲ್ಲ, ಸ್ನೇಹಿತರೂ ಕೂಡ ಇದ್ದರು, ದೂರದಲ್ಲಿದ್ದ ಒಬ್ಬನ ಕಡೆಗೆ ಸ್ಲೋ ಮೋಷನ್ನಲ್ಲಿ ಓಡಿ ಬರುತ್ತಿದ್ದ, ಆಗ ಕಾಲು ಜಾರಿ ಬಿದ್ದಿದ್ದಾನೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ನೇಹಿತನೊಬ್ಬ ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗಲಿಲ್ಲ.
ಸ್ವಲ್ಪ ಸಮಯದವರೆಗೆ ಕಬ್ಬಿಣದ ಗ್ರಿಲ್ ಅನ್ನು ಹಿಡಿದಿದ್ದ ಬಳಿಕ ಅಲ್ಲಿಂದ ಕೆಳಗೆ ಬಿದ್ದಿದ್ದಾನೆ. ಯುವಕನ ತಲೆ ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿತ್ತು.
ಬಿದ್ದ ತಕ್ಷಣ, ಅವನ ಸ್ನೇಹಿತರು ಸಹಾಯಕ್ಕಾಗಿ ಧಾವಿಸಿದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಲಿಫ್ಟ್ ಪ್ರದೇಶ ಸೇರಿದಂತೆ ಅವರು ಬಿದ್ದ ಸ್ಥಳದಲ್ಲಿ ರಕ್ತ ಚೆಲ್ಲಿರುವುದನ್ನು ಮತ್ತೊಂದು ವೀಡಿಯೊ ತೋರಿಸಿದೆ.
ಪಿಜಿಯ ಐದನೇ ಮಹಡಿಯಿಂದ ಬಿದ್ದು ಯುವತಿ ಸಾವು ಸಿಲಿಕಾನ್ ಸಿಟಿಯ ಪಿಜಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. PGಯ 5ನೇ ಮಹಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಮೃತ ಯುವತಿಯನ್ನು ಗೌತಮಿ ಎಂದು ಗುರುತಿಸಲಾಗಿದೆ. ಮೃತ ಗೌತಮಿ ಆಂಧ್ರಪ್ರದೇಶ ಕಡಪ ಮೂಲದವರು. ಬೆಂಗಳೂರಲ್ಲಿ ನೆಲೆಸಿದ್ದ ಯುವತಿ TCSನಲ್ಲಿ ಕೆಲಸ ಮಾಡುತ್ತಿದ್ದಳು. ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಪಿಜಿಯ ಐದನೇ ಮಹಡಿಯಿಂದ ಸಾವನ್ನಪ್ಪಿರುವ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಈ ಸಾವಿನ ತನಿಖೆ ನಡೆಸಿರುವ ವೈಟ್‌ಫೀಲ್ಡ್ ಠಾಣೆಯ ಪೊಲೀಸರಿಗೆ ಡೆತ್‌ನೋಟ್ ಕೂಡ ಸಿಕ್ಕಿದೆ. ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ