‘ಚುನಾವಣಾ ಆಯುಕ್ತರಿಗೆ ಲಂಚದ ರೂಪದಲ್ಲಿ ಪದ್ಮ ಪ್ರಶಸ್ತಿ, ಸಚಿವ ಸ್ಥಾನ ನೀಡುತ್ತಿತ್ತು’; ಪಿಯೂಷ್ ಗೋಯಲ್ ಗಂಭೀರ ಆರೋಪ

ಚುನಾವಣಾ ಆಯೋಗದ ಸ್ವಾತಂತ್ರ್ಯದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿರುಗೇಟು ನೀಡಿದ್ದಾರೆ. ಮೋದಿ ಸರ್ಕಾರ ಯಾವುದೇ ಚುನಾವಣಾ ಆಯುಕ್ತರಿಗೆ ರಾಜಕೀಯ ಸ್ಥಾನ ನೀಡಿಲ್ಲ, ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಚುನಾವಣಾ ಆಯುಕ್ತರನ್ನು ಸಂಸದರು ಮತ್ತು ಮಂತ್ರಿಗಳನ್ನಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಪಿಯೂಷ್ ಗೋಯಲ್, ಶೇಷನ್ ಅವರ ನಿಷ್ಪಕ್ಷಪಾತತೆಗೆ ಹೆಸರುವಾಸಿಯಾಗಿದ್ದರು, ಆದರೆ ಕಾಂಗ್ರೆಸ್ ನಂತರ ಅವರನ್ನು ಎಲ್.ಕೆ. ಅಡ್ವಾಣಿ ವಿರುದ್ಧ ಕಣಕ್ಕಿಳಿಸಿತು ಎಂದು ಹೇಳಿದರು.

ಚುನಾವಣಾ ಆಯುಕ್ತರಿಗೆ ಲಂಚದ ರೂಪದಲ್ಲಿ ಪದ್ಮ ಪ್ರಶಸ್ತಿ, ಸಚಿವ ಸ್ಥಾನ ನೀಡುತ್ತಿತ್ತು; ಪಿಯೂಷ್ ಗೋಯಲ್ ಗಂಭೀರ ಆರೋಪ
ಪಿಯೂಶ್ ಗೋಯಲ್
Image Credit source: PTI

Updated on: Oct 13, 2026 | 7:12 PM

ನವದೆಹಲಿ, ಅಕ್ಟೋಬರ್ 13: ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಕಾಂಗ್ರೆಸ್ ತೀವ್ರವಾಗಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, “ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ತನಗೆ ಒಲವು ತೋರಿದ ಚುನಾವಣಾ ಅಧಿಕಾರಿಗಳಿಗೆ ಪದ್ಮ ಪ್ರಶಸ್ತಿ, ಸಚಿವ ಸ್ಥಾನ ಮತ್ತು ರಾಜ್ಯಪಾಲರ ಹುದ್ದೆಗಳ ಆಮಿಷವೊಡ್ಡಿ ಕಾರ್ಯನಿರ್ವಹಿಸುತ್ತಿತ್ತು” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಂದು ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು ಹಾಗೂ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಂವಿಧಾನಿಕ ಹುದ್ದೆಗಳಲ್ಲಿದ್ದವರಿಗೆ ನೀಡಲಾದ ರಾಜಕೀಯ ಕೊಡುಗೆಗಳ ಉದಾಹರಣೆಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಮೋದಿ ಕುರಿತ ಅವಹೇಳನಕಾರಿ ಹೇಳಿಕೆ ಪ್ರಕರಣ; ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

“ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್ ಅವರು ಚುನಾವಣಾ ಆಯೋಗದಿಂದ ನಿವೃತ್ತರಾದ ಬಳಿಕ ಸಂಸದರಾಗಿ ಮತ್ತು ಯುಪಿಎ ಸರ್ಕಾರದಲ್ಲಿ ಕೇಂದ್ರ ಕ್ರೀಡಾ ಹಾಗೂ ಯುವಜನ ವ್ಯವಹಾರಗಳ ಸಚಿವರಾಗಿ ನೇಮಕಗೊಂಡಿದ್ದನ್ನು ಉಲ್ಲೇಖಿಸಿದ ಪಿಯೂಶ್ ಗೋಯಲ್, ಇದು ಪರಸ್ಪರ ಲಾಭದ ಒಪ್ಪಂದದ ಭಾಗವಾಗಿತ್ತು” ಎಂದು ಆರೋಪಿಸಿದರು.


1985ರ ಡಿಸೆಂಬರ್‌ನಲ್ಲಿ ನಿವೃತ್ತರಾದ ಮಾಜಿ ಇಸಿಐ ಟಿ.ಎನ್. ಶೇಷನ್ ಅವರನ್ನು 1986ರ ಫೆಬ್ರವರಿಯಲ್ಲಿ ರಾಜೀವ್ ಗಾಂಧಿ ಸರ್ಕಾರ ಗುಜರಾತ್ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. 2005ರಲ್ಲಿ ನವೀನ್ ಚಾವ್ಲಾ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿದ ಪಿಯೂಶ್ ಗೋಯಲ್, 2009ರಲ್ಲಿ ಆಗಿನ ಸಿಇಸಿ ಎನ್. ಗೋಪಾಲಸ್ವಾಮಿ ಅವರು ಚಾವ್ಲಾ ಅವರ ಪಕ್ಷಪಾತದ ನಡವಳಿಕೆಯನ್ನು ಉಲ್ಲೇಖಿಸಿ ಅವರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿದ್ದರೂ, ಮನಮೋಹನ್ ಸಿಂಗ್ ಸರ್ಕಾರ ಅದನ್ನು ನಿರ್ಲಕ್ಷಿಸಿ ಅವರಿಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಬಡ್ತಿ ನೀಡಿತ್ತು ಎಂದು ಟೀಕಿಸಿದರು.


ಇದನ್ನೂ ಓದಿ: ಪ್ರತಿಭಟನೆ ವೇಳೆ ಗರ್ಭಿಣಿ ಪತ್ರಕರ್ತೆಯ ತಳ್ಳಿದ ರಾಹುಲ್ ಗಾಂಧಿ, ಆಸ್ಪತ್ರೆಗೆ ದಾಖಲು

ಮಾಜಿ ಸಿಇಒ ಟಿಕಾರಾಮ್ ಮೀನಾ ನಿವೃತ್ತಿಯ ನಂತರ ರಾಜಸ್ಥಾನ ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿಗೆ ಸೇರ್ಪಡೆಯಾಗಿದ್ದರು ಹಾಗೂ ಮತ್ತೊಬ್ಬ ಅಧಿಕಾರಿ ರತನ್ ಯು. ಕೇಳ್ಕರ್ 2026ರ ಮೇ ತಿಂಗಳಿನಲ್ಲಿ ಅಸೆಂಬ್ಲಿ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು ಎಂದು ಗೋಯಲ್ ಆರೋಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Tue, 13 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us