AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4.37 ಲಕ್ಷ ಅಂಗನವಾಡಿಗಳಲ್ಲಿ ಪೋಷಣ್ ತೋಟ ನಿರ್ಮಾಣ: 6 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ1.10 ಲಕ್ಷ ಔಷಧ ಸಸ್ಯಗಳನ್ನು ನೆಡಲು ಕ್ರಮ

2022ರ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಉದ್ಯಾನವನಗಳು ಅಥವಾ ರೆಟ್ರೋ ಫಿಟ್ಟಿಂಗ್ ಪೋಷಣ್ ತೋಟಗಳನ್ನು ಕೋಳಿ ಸಾಕಾಣಿಕೆ/ಮೀನುಗಾರಿಕೆ ಘಟಕಗಳ ಹಿಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

4.37 ಲಕ್ಷ ಅಂಗನವಾಡಿಗಳಲ್ಲಿ ಪೋಷಣ್ ತೋಟ ನಿರ್ಮಾಣ: 6 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ1.10 ಲಕ್ಷ ಔಷಧ ಸಸ್ಯಗಳನ್ನು ನೆಡಲು ಕ್ರಮ
ಚತ್ತೀಸ್ ಘರ್, ಪೋಷಣ್ ಮಾಸಾಚರಣೆ 2022
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 23, 2022 | 8:47 PM

Share

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಆಯುಷ್ ಸಚಿವಾಲಯ (Ministry of Ayush) ದ ವಿವಿಧ ಕ್ರಮಗಳಡಿ 4.37 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ತೋಟ (Poshan Tota) ಗಳ  ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ 6 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ 1.10 ಲಕ್ಷ ಔಷಧ ಸಸ್ಯಗಳನ್ನು ನೆಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. 2022ರ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಉದ್ಯಾನವನಗಳು ಅಥವಾ ರೆಟ್ರೋ ಫಿಟ್ಟಿಂಗ್ ಪೋಷಣ್ ತೋಟಗಳನ್ನು ಕೋಳಿ ಸಾಕಾಣಿಕೆ/ಮೀನುಗಾರಿಕೆ ಘಟಕಗಳ ಹಿಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ವರೆಗೆ ಸುಮಾರು 1.5 ಲಕ್ಷ ರೆಟ್ರೋಫಿಟ್ಟಿಂಗ್ ಪೋಷಣ್ ತೋಟಗಳನ್ನು ಕೋಳಿ ಸಾಕಾಣಿಕೆ ಮತ್ತು ಮೀನುಗಾರಿಕೆ ಘಟಕಗಳ ಹಿಂಭಾಗ ಸ್ಥಾಪಿಸಿರುವುದಾಗಿ ವರದಿಯಾಗಿದೆ. ಅಲ್ಲದೇ ಹಿತ್ತಲಿನಲ್ಲಿ ಅಡುಗೆ ತೋಟಗಳು ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದನ್ನು ಉತ್ತೇಜಿಸಲು 75 ಸಾವಿರಕ್ಕೂ ಹೆಚ್ಚು ಸಂವೇದನಾಶೀಲತಾ ಶಿಬಿರಗಳನ್ನು ಸಹ ಆಯೋಜಿಸಲಾಗಿದೆ.

ಆಸಕ್ತಿದಾಯಕ ಸಂಗತಿ ಎಂದರೆ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಉದ್ಯಾನವನಗಳು/ಪೋಷಣ್ ತೋಟಗಳನ್ನು ನಿರ್ಮಿಸಲು ಸುಮಾರು 40 ಸಾವಿರ ಕಡೆಗಳಲ್ಲಿ ಭೂಮಿ ಗುರುತಿಸಲು ಅಭಿಯಾನ ಆರಂಭಿಸಿದ್ದು, ಪೋಷಣ್ ತೋಟಗಳ ಮಾದರಿಯನ್ನು ಹೊಸ ಅಂಗನವಾಡಿ ಕೇಂದ್ರಗಳಲ್ಲಿ/ ಅದರ ಆಸುಪಾಸಿನಲ್ಲೂ ಸಹ ನಿರ್ಮಾಣ ಮಾಡಲಾಗುತ್ತಿದೆ.

ಪೋಷಣ್ ಮಾಸಾಚರಣೆ

ಗುಜರಾತ್ ಪೋಷಣ್ ಮಾಸಾಚರಣೆ 2022

ಪ್ರಧಾನಮಂತ್ರಿ ಅವರು 2018 ರ ಮಾರ್ಚ್ 8 ರಂದು ಪೋಷಣ್ ಅಭಿಯಾನವನ್ನು ಆರಂಭಿಸಿದ್ದು, ಮಕ್ಕಳು, ಹದಿಹರೆಯದವರು, ಗರ್ಭೀಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಟಿಕತೆ ಸುಧಾರಿಸುವುದು ಇದರ ಉದ್ದೇಶವಾಗಿದೆ. ಪೋಷಣ್ ಅಭಿಯಾನ 2.0 ರ ಪ್ರಮುಖ ಅಂಗವೆಂದರೆ ಮಕ್ಕಳು, ಹದಿಯಹರೆಯದ ಹುಡುಗಿಯರು, ಗರ್ಭೀಣಿಯರು, ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆಯಿಂದ ಮುಕ್ತಿ ಹೊಂದಿ, ಪೌಷ್ಟಿಕಾಂಶ ಒದಗಿಸುವ ಮತ್ತು ಹೆರಿಗೆ ಕಾರ್ಯತಂತ್ರದಲ್ಲಿ ಬದಲಾವಣೆ ತರುವ ಆರೋಗ್ಯ, ಯೋಗ ಕ್ಷೇಮ, ರೋಗ ನಿರೋಧಕ ಶಕ್ತಿಯನ್ನು ಪೋಷಿಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಉತ್ತೇಜಿಸಲು ಏಕೀಕೃತ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಸಹ ಇದರ ಪ್ರಮುಖ ಅಂಶವಾಗಿದೆ.

ಪೋಷಣ್ ಮಾಸಾಚರಣೆ

ಚತ್ತೀಸ್ ಘರ್, ಪೋಷಣ್ ಮಾಸಾಚರಣೆ 2022

ಕೈಗೆಟುಕುವ ರೀತಿಯಲ್ಲಿ ಹಣ್ಣುಗಳು, ತರಕಾರಿಗಳು, ಔಷಧ ಸಸ್ಯಗಳು ಮತ್ತು ಮೂಲಿಕೆಗಳು ದೊರೆಯುವಂತೆ ಮಾಡಲು ಸರಿಯಾದ ರೀತಿಯಲ್ಲಿ ಪೋಷಣೆಯನ್ನು ಸಕ್ರಿಯಗೊಳಿಸಲು ದೇಶಾದ್ಯಂತ ಪೋಷಣ್ ತೋಟಗಳು ಮತ್ತು ಪೌಷ್ಟಿಕ ಉದ್ಯಾನವನಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಉದ್ದೇಶ ಸರಳವಾಗಿದ್ದು, ತಾಜಾ ಮತ್ತು ನಿಯಮಿತವಾಗಿ ಸ್ಥಳೀಯವಾಗಿ ಉತ್ಪಾದನೆಯಾಗುವ ಹಣ್ಣುಗಳು, ತರಕಾರಿಗಳು ಮತ್ತು ಔಷಧ ಸಸ್ಯಗಳನ್ನು ಮಕ್ಕಳು ಮತ್ತು ಮಹಿಳೆಯರಿಗೆ ಪೌಷ್ಟಿಕ ತೋಟಗಳು ಅಥವಾ ಸಮೀಪದ ಅಂಗನವಾಡಿ ಕೇಂದ್ರಗಳಿಂದ ನೇರವಾಗಿ ದೊರಕಿಸಿಕೊಡಲಾಗುತ್ತಿದೆ.

ಪೋಷಣ್ ಮಾಸಾಚರಣೆ

ಗೋವಾ ಪೋಷಣ್ ಮಾಸಾಚರಣೆ 2022

ಸ್ಥಳೀಯ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸೂಕ್ಷ್ಮ ಪೋಷಕಾಂಶಗಳಿದ್ದು, ಆಹಾರ ವೈವಿದ್ಯವನ್ನು ಹೆಚ್ಚಿಸಲು ಪೋಷಣ್ ತೋಟಗಳು ಪ್ರಮುಖ ಪಾತ್ರ ವಹಿಸಲಿವೆ. ಭೂಮಿಯ ಮೇಲಿನ ಕೇಂದ್ರೀಕೃತ ಚಟುವಟಿಕೆಗಳಿಗೆ ಪೋಷಣ್ ತೋಟಗಳು ಉತ್ತಮ ಉದಾಹರಣೆಯಾಗಿವೆ. ಇದರಿಂದ ಬಾಹ್ಯ ಅವಲಂಬನೆ ಕಡಿಮೆಯಾಗಲಿದ್ದು, ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಉತ್ಪನ್ನಗಳ ಪ್ರತಿಫಲವನ್ನು ದೊರಕಿಸಿಕೊಡುತ್ತದೆ. ಮತ್ತು ಪೌಷ್ಟಿಕಾಂಶ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗುತ್ತದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:41 pm, Fri, 23 September 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!