ಭಾರತ್ ಬಯೋಟೆಕ್ ಮಾತ್ರವಲ್ಲದೆ ಇನ್ನೂ 4 ಕಡೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ
CoVaxin: ಭಾರತ್ ಬಯೋಟೆಕ್ ಒಂದರಲ್ಲಷ್ಟೇ ಅಲ್ಲದೇ ಈ 4 ಸಂಸ್ಥೆಗಳಲ್ಲಿ ಕೊವಿಡ್ ಲಸಿಕೆ ಉತ್ಪಾದಿಸುವ ಮೂಲಕ ದೇಶದಲ್ಲಿನ ಲಸಿಕೆ ಕೊರತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ.
ದೇಶದಲ್ಲಿ ಕೊವಿಡ್ ಲಸಿಕೆ ವಿತರಣೆ ಅಭಿಯಾನವನ್ನು ತೀವ್ರಗೊಳಿಸಲು ಸರ್ಕಾರ ಹವಣಿಸುತ್ತಿದೆ. ಸದ್ಯ ಕೊವಿಡ್ ಲಸಿಕೆ ಉತ್ಪಾದಿಸುತ್ತಿರುವ ಭಾರತ್ ಬಯೋಟೆಕ್ನ ಜತೆ ದೇಶದ 4 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಕೊವಿಡ್ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಅನವರತ ತೊಡಗಿಕೊಂಡಿವೆ. ಭಾರತ್ ಬಯೋಟೆಕ್ ಒಂದರಲ್ಲಷ್ಟೇ ಅಲ್ಲದೇ ಈ 4 ಸಂಸ್ಥೆಗಳಲ್ಲಿ ಕೊವಿಡ್ ಲಸಿಕೆ ಉತ್ಪಾದಿಸುವ ಮೂಲಕ ದೇಶದಲ್ಲಿನ ಲಸಿಕೆ ಕೊರತೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಕ್ರಮ ಕೈಗೊಂಡಿದೆ.
ಮುಂಬೈಯ ಹಾಫ್ಕಿನ್ ಫಾರ್ಮಾಸೂಟಿಕಲ್ಸ್ ಕಾರ್ಪೊರೇಶನ್ ಲಿಮಿಟೆಡ್ ಮಹಾರಾಷ್ಟ್ರ ಸರ್ಕಾರದ ಅಡಿಯ ಪ್ರಮುಖ ಸಾರ್ವಜನಿಕ ಸಂಸ್ಥೆ. ಕೊವಿಡ್ ಲಸಿಕೆ ಉತ್ಪಾದನೆಗೆ ಸರ್ವ ಸನ್ನದ್ಧವಾಗಿರುವಂತೆ ಸೂಚಿಸಿರುವ ಭಾರತ ಸರ್ಕಾರ, ಈ ಹಾಪ್ಕಿನ್ ಫಾರ್ಮಾಸೂಟಿಕಲ್ಸ್ಗೆ 65 ಕೋಟಿ ಧನ ಸಹಾಯ ಒದಗಿಸಿದೆ. ಸದ್ಯ ಲಸಿಕೆ ಉತ್ಪಾದನೆಯ ಕುರಿತು ಕೆಲವು ಪ್ರಕ್ರಿಯೆಯಗಳು ನಡೆಯುತ್ತಿದ್ದು, ಪ್ರತಿ ತಿಂಗಳು 20 ಕೋಟಿ ಕೊವಿಡ್ ಲಸಿಕೆ ಉತ್ಪಾದನೆ ಮಾಡಲು ಹಾಪ್ಕಿನ್ ಫಾರ್ಮಾಸೂಟಿಕಲ್ಸ್ ಸಂಸ್ಥೆ ಶಕ್ತವಾಗಿದೆ.
ಹೈದರಾಬಾದ್ನ ಇಂಡಿಯನ್ ಇಮ್ಯುನೋಲಾಜಿಕಲ್ ಲಿಮಿಟೆಡ್ಗೆ ಸರ್ಕಾರ 60 ಕೋಟಿ ಸಹಾಯ ಧನ ನೀಡಿದ್ದು, ಕೊವಿಡ್ ಲಸಿಕೆ ಉತ್ಪಾದನೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ನಿರ್ಮಿಸಲು ತಿಳಿಸಿದೆ. ಇವೆರೆಡು ಸಂಸ್ಥೆಗಳ ಜತೆಗೆ ಬುಲಶಂದರ್ನಲ್ಲಿರುವ ಭಾರತ್ ಇಮ್ಯನೊಲಾಜಿಕಲ್ ಆ್ಯಂಡ್ ಬಯೋಲಾಜಿಕಲ್ ಲಿಮಿಟೆಡ್ಗೆ (BIBCOL) 30 ಕೋಟಿ ಸಹಾಯ ಧನ ನೀಡಿರುವ ಕೇಂದ್ರ ಸರ್ಕಾರ ಪ್ರತಿ ತಿಂಗಳಿಗೆ 1ರಿಂದ1.5 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಇಂಡಿಯನ್ ಇಮ್ಯುನೋಲಾಜಿಕಲ್ ಲಿಮಿಟೆಡ್ ಹೊಂದಿದೆ.
ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವೂ ಸಹ ಭಾರತ್ ಬಯೋಟೆಕ್ನ ಜತೆ ನಿಕಟ ಸಂಪರ್ಕದಲ್ಲಿದೆ. ಭಾರತ್ ಬಯೋಟೆಕ್ನಿಂದ ಲಸಿಕೆ ಉತ್ಪಾದನೆಯ ಫಾರ್ಮುಲಾ ಹಂಚಿಕೊಳ್ಳುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು ಪ್ರತಿ ತಿಂಗಳೂ 2 ಕೋಟಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಗುಜರಾತ್ನ ಈ ಸಂಸ್ಥೆ ಸಜ್ಜಾಗಿದೆ.
ಇದನ್ನೂ ಓದಿ: Union Health Secretary PC: ಕಳೆದ 12 ದಿನಗಳಿಂದ ದೇಶದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ: ಲವ್ ಅಗರ್ವಾಲ್
ಮಕ್ಕಳಲ್ಲಿ ಕೊರೊನಾ ಸೋಂಕು: ಲಕ್ಷಣಗಳೇನು? ಯಾವ ಹಂತದಲ್ಲಿ ಎಂಥಾ ಚಿಕಿತ್ಸೆ?-ಸ್ಪಷ್ಟವಾಗಿ ವಿವರಿಸಿದ ಆರೋಗ್ಯ ಇಲಾಖೆ