ಮಕ್ಕಳಲ್ಲಿ ಕೊರೊನಾ ಸೋಂಕು: ಲಕ್ಷಣಗಳೇನು? ಯಾವ ಹಂತದಲ್ಲಿ ಎಂಥಾ ಚಿಕಿತ್ಸೆ?-ಸ್ಪಷ್ಟವಾಗಿ ವಿವರಿಸಿದ ಆರೋಗ್ಯ ಇಲಾಖೆ

ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ಕೊರೊನಾ ಸೋಂಕು ತಗುಲಿದಾಗ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ, ಸುಸ್ತು, ಮಾಂಸಖಂಡಗಳ ನೋವು, ಗಂಟಲುನೋವು, ಅತಿಸಾರ, ರುಚಿ, ವಾಸನೆಗಳನ್ನು ಗುರುತಿಸಲು ಸಾಧ್ಯವಾಗದೆ ಇರುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.

ಮಕ್ಕಳಲ್ಲಿ ಕೊರೊನಾ ಸೋಂಕು: ಲಕ್ಷಣಗಳೇನು? ಯಾವ ಹಂತದಲ್ಲಿ ಎಂಥಾ ಚಿಕಿತ್ಸೆ?-ಸ್ಪಷ್ಟವಾಗಿ ವಿವರಿಸಿದ ಆರೋಗ್ಯ ಇಲಾಖೆ
ಪ್ರಾತಿನಿಧಿಕ ಚಿತ್ರ
Follow us
|

Updated on: May 15, 2021 | 4:55 PM

ಕೊರೊನಾ ಸೋಂಕಿನ ಎರಡನೇ ಅಲೆ ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಇನ್ನು ಮೂರಲೇ ಅಲೆ ಮಕ್ಕಳಿಗೆ ಬಾಧಿಸುವ ಸಾಧ್ಯತೆಯೇ ಹೆಚ್ಚಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಮಧ್ಯೆ ಪಾಲಕರಿಗೆ ಮತ್ತೊಂದು ಆತಂಕ ಶುರುವಾಗಿದೆ. ಮಕ್ಕಳಿಗೆ ಸೋಂಕು ತಗುಲಿದರೆ ಅಷ್ಟು ಬೇಗ ಲಕ್ಷಣಗಳು ಗೋಚರಿಸುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬಂದಿದೆ.

ಮಕ್ಕಳಲ್ಲಿ ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳಿದ್ದಾಗ ಅದು ಕೊವಿಡ್​ 19 ಎಂದು ಗುರುತಿಸುವುದು ಕಷ್ಟವಾಗುತ್ತಿದೆ. ಗುರುತಿಸುವುದು ಕಷ್ಟವಾದಾಗ ಸಹಜವಾಗಿಯೇ ಚಿಕಿತ್ಸೆ ತಡವಾಗುತ್ತದೆ. ಇದರಿಂದ ಮಕ್ಕಳು ಗಂಭೀರಸ್ವರೂಪದ ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುವಂತಾಗುತ್ತಿದೆ ಎಂಬ ಆತಂಕಯುಕ್ತ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಕೊರೊನಾ ಸೋಂಕನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಬಗ್ಗೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೆಚ್ಚಿನ ಸಂಖ್ಯೆಯ ಮಕ್ಕಳಲ್ಲಿ ಕೊರೊನಾ ಸೋಂಕು ತಗುಲಿದಾಗ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ, ಸುಸ್ತು, ಮಾಂಸಖಂಡಗಳ ನೋವು, ಗಂಟಲುನೋವು, ಅತಿಸಾರ, ರುಚಿ, ವಾಸನೆಗಳನ್ನು ಗುರುತಿಸಲು ಸಾಧ್ಯವಾಗದೆ ಇರುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಅದೂ ಕೂಡ ತುಂಬ ಸೌಮ್ಯ ಲಕ್ಷಣಗಳಾಗಿವೆ. ಹಾಗೇ ಕೆಲವು ಮಕ್ಕಳಲ್ಲಿ ಗ್ಯಾಸ್ಟ್ರಿಕ್​​ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರ ಹೊರತಾಗಿ ಮಕ್ಕಳಲ್ಲಿ ಮಲ್ಟಿ ಸಿಸ್ಟಮ್​ ಉರಿಯೂತದ ಲಕ್ಷಣಗಳೂ ಗೋಚರಿಸುತ್ತಿವೆ. ಅದು ಮುಖ್ಯವಾಗಿ ಜ್ವರ, ಹೊಟ್ಟೆನೋವು, ವಾಂತಿ, ಅತಿಸಾರ, ದದ್ದು ಮತ್ತು ಹೃದಯರಕ್ತನಾಳ ಮತ್ತು ನರ ಸಮಸ್ಯೆಗಳೂ ಕಾಣಿಸಿಕೊಂಡರೂ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾದಾಗ ಕೊರೊನಾ ಟೆಸ್ಟ್ ಮಾಡಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಏನೇ ಲಕ್ಷಣಗಳಿದ್ದರೂ ಜಾಗರೂಕತೆ ಇರಲಿ ಇನ್ನು ಕೆಲವು ಮಕ್ಕಳಿಗೆ ಕೊರೊನಾ ಪಾಸಿಟಿವ್​ ಬಂದರೂ ಅವರಲ್ಲಿ ಯಾವುದೇ ಲಕ್ಷಣಗಳು ಇರುವುದಿಲ್ಲ. ಹೀಗಿದ್ದಾಗ ಕೂಡ ನಿರ್ಲಕ್ಷ್ಯ ಬೇಡ. ಅವರ ಆರೋಗ್ಯದ ಮೇಲೆ ತುಂಬ ಗಮನ ಇಡಬೇಕು. ಯಾವ ಸಮಯದಲ್ಲಿ ಬೇಕಾದರೂ ಲಕ್ಷಣಗಳು ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಚಿಕಿತ್ಸೆ ನೀಡಿದರೆ ಖಂಡಿತ ಅಪಾಯದಿಂದ ಪಾರಾಗಬಹುದು ಎಂದು ಹೇಳಿದೆ. ಹಾಗೇ, ಹುಟ್ಟಿನಿಂದಲೂ ಹೃದಯ ಕಾಯಿಲೆ, ದೀರ್ಘಕಾಲದ ಶ್ವಾಸಮೋಶದ ಸಮಸ್ಯೆ, ಬೊಜ್ಜು ಸೇರಿ ಇನ್ನಿತರ ಕಾಯಿಲೆ ಇದ್ದೂ ಕೂಡ ಕೊರೊನಾಕ್ಕೆ ತುತ್ತಾದ ಮಕ್ಕಳಿಗೂ ಮನೆಯಲ್ಲಿ ಚಿಕಿತ್ಸೆ ನೀಡಬಹುದು. ಆದರೆ ಕಟ್ಟುನಿಟ್ಟಿನ ಎಚ್ಚರಿಕೆ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಸೌಮ್ಯ ಲಕ್ಷಣಗಳುಳ್ಳ ಮಕ್ಕಳಿಗೆ ಏನು ಚಿಕಿತ್ಸೆ? ಕೊರೊನಾದ ಸೌಮ್ಯ ಲಕ್ಷಣಗಳಿರುವ ಮಕ್ಕಳಿಗೆ ಪ್ಯಾರಾಸಿಟಮೋಲ್​ ನೀಡಿದರೆ ಸಾಕು. 4-6 ತಾಸುಗಳಿಗೊಮ್ಮೆ ಇದನ್ನು ನೀಡಬೇಕಾಗುತ್ತದೆ. ಸಣ್ಣ ಪ್ರಮಾಣದ ಕೆಮ್ಮು ಇದ್ದಾಗ ಬಿಸಿ ನೀರಿನಲ್ಲಿ ಗಂಟಲುಮುಕ್ಕಳಿಸಬೇಕು. ಅದರಲ್ಲೂ ಉಪ್ಪುನೀರಿನಲ್ಲಿ ಗಂಟಲುಮುಕ್ಕಳಿಸಿದರೆ ಇನ್ನೂ ಸಹಕಾರಿ ಎಂದು ಕೇಂದ್ರದ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕೊರೊನಾ ಸೌಮ್ಯ ಲಕ್ಷಣಗಳು ಇರುವ ಮಕ್ಕಳಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್​, ಫವಿಪಿರಾವಿರ್​, ಐವರ್​ಮೆಕ್ಟಿನ್​, ರೆಮ್​ಡೆಸಿವಿರ್​ಗಳಂತಹ ಆ್ಯಂಟಿವೈರಲ್​ಗಳ ಅಗತ್ಯ ಏನೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ದಿನದಲ್ಲಿ 2-3ಬಾರಿ ಮಕ್ಕಳ ಆಕ್ಸಿಜನ್ ಮಟ್ಟ ಮತ್ತು ಉಸಿರಾಟವನ್ನು ಚೆಕ್​ ಮಾಡುತ್ತಿರಬೇಕು. ಮಕ್ಕಳ ಮೂತ್ರದ ಬಣ್ಣ, ಎದೆಯಲ್ಲೇನಾದರೂ ಸಮಸ್ಯೆ ಆಗುತ್ತಿದೆಯಾ? ಎಂಬಿತ್ಯಾದಿ ವಿಚಾರಗಳನ್ನು ಗಮನಿಸುತ್ತಿರಬೇಕು. ಸ್ವಲ್ಪವೇನಾದರೂ ಸಮಸ್ಯೆಯಾಗುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸ್ವಲ್ಪಮಟ್ಟಿಗೆ ಗಂಭೀರ ಲಕ್ಷಣಗಳಿರುವ ಮಕ್ಕಳಿಗೇನು ಚಿಕಿತ್ಸೆ? ಇನ್ನು ಕೆಲವು ಮಕ್ಕಳಲ್ಲಿ ಸೌಮ್ಯವೂ ಅಲ್ಲದ..ತೀರ ಗಂಭೀರ ಸ್ವರೂಪವೂ ಅಲ್ಲದ ಮಧ್ಯಮ ಪ್ರಮಾಣದಲ್ಲಿ ಲಕ್ಷಣಗಳು ಗೋಚರಿಸುತ್ತವೆ. ಅಂಥ ಮಕ್ಕಳಿಗೆ ಚಿಕಿತ್ಸೆ ಹೇಗಿರಬೇಕು ಎಂಬುದನ್ನೂ ಆರೋಗ್ಯ ಇಲಾಖೆ ತಿಳಿಸಿದೆ. ಇಂಥ ಮಕ್ಕಳನ್ನು ನಿಗದಿತ ಕೊವಿಡ್ ಕೇರ್ ಸೆಂಟರ್​ ಅಥವಾ ಆಸ್ಪತ್ರೆಗಳಿಗೆ ದಾಖಲಿಸುವುದು ತುಂಬ ಒಳ್ಳೆಯದು ಎಂದು ಹೇಳಿದೆ.

ಗಂಭೀರ ಸ್ವರೂಪಗಳನ್ನು ಹೊಂದಿರುವ ಮಕ್ಕಳಿಗೇನು ಚಿಕಿತ್ಸೆ? ಇನ್ನು ಗಂಭೀರ ಸ್ವರೂಪದ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಅವರಿಗೆ ಐಸಿಯು ಬೆಡ್​ಗಳ ಅಗತ್ಯ ಇರುತ್ತದೆ. ಅಂಥ ಮಕ್ಕಳಿಗೆ ರಕ್ತಪರೀಕ್ಷೆ, ಲಿವರ್​, ಎದೆಯ ಎಕ್ಸ್​-ರೇಗಳನ್ನು ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ಬೆಳಗ್ಗೆ ಕೊರೊನಾಗೆ ಬಲಿಯಾದ ತಾಯಿಯ ಮುಖ‌ ನೋಡಲು ಅಂತ್ಯಕ್ರಿಯೆ ಸ್ಥಳಕ್ಕೆ ಬಂದಿದ್ದ ಮಗ ಸ್ಥಳದಲ್ಲೇ ಕುಸಿದು ಸಾವು

ಅಪ್ಪ, ಅಮ್ಮ, ಅಜ್ಜ, ಅಜ್ಜಿ ಎಲ್ಲರನ್ನೂ ಕಸಿದುಕೊಂಡ ಕೊರೊನಾ; ಇಬ್ಬರು ಕಂದಮ್ಮಗಳ ಕಣ್ಣೆದುರೇ ಸ್ಮಶಾನವಾಯ್ತು ಮನೆ

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ