Union Health Secretary PC: ಕಳೆದ 12 ದಿನಗಳಿಂದ ದೇಶದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ: ಲವ್ ಅಗರ್ವಾಲ್

Health Ministry Announcements: ಸದ್ಯ 11 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳಿವೆ. ಕರ್ನಾಟಕ, ಕೇರಳ, ರಾಜಸ್ಥಾನದಲ್ಲಿ ಕೊವಿಡ್ ಸೋಂಕು ಹೆಚ್ಚಾಗುತ್ತಿವೆ. ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಕೊವಿಡ್​ ಸೊಂಕು ಕಡಿಮೆಯಾಗುತ್ತಿದೆ.

Union Health Secretary PC: ಕಳೆದ 12 ದಿನಗಳಿಂದ ದೇಶದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ: ಲವ್ ಅಗರ್ವಾಲ್
ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
Follow us
guruganesh bhat
|

Updated on:May 15, 2021 | 7:07 PM

ದೆಹಲಿ: ದೇಶದಲ್ಲಿ ಕಳೆದ 12 ದಿನಗಳಿಂದ ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕೊವಿಡ್​ನಿಂದ ನಿಧನರಾಗುವವರ ಸಂಖ್ಯೆಯೂ ಸ್ಥಿರವಾಗಿದೆ. ಇದು ಸದ್ಯ ಸಮಾಧಾನಕರ ವಿಷಯ. ಇತರ ಯಾವ ದೇಶದಲ್ಲೂ ನಡೆಸದಷ್ಟು ಕೊವಿಡ್ ಟೆಸ್ಟ್​ಗಳನ್ನು ಭಾರತದಲ್ಲಿ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದರು.

ದೇಶದಲ್ಲಿ ಕೊವಿಡ್ ನಿಯಂತ್ರಣದ ವೈದ್ಯಕೀಯ ಸೇವೆ ಗ್ರಾಮ ಗ್ರಾಮಗಳನ್ನೂ ತಲುಪಿದೆ. ಅತ್ಯಂತ ಸಮರ್ಪಕವಾಗಿ ಅಂತರಾಷ್ಟ್ರೀಯ ಗೈಡ್​ಲೈನ್ಸ್​ಗಳ ಅನುಸಾರ ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಕೊವಿಡ್ ಲಸಿಕೆಯನ್ನು ಉತ್ಪಾದನೆ ಹೆಚ್ಚಿಸಲು ಸದ್ಯ 11 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳಿವೆ. ಕರ್ನಾಟಕ, ಕೇರಳ, ರಾಜಸ್ಥಾನದಲ್ಲಿ ಕೊವಿಡ್ ಸೋಂಕು ಹೆಚ್ಚಾಗುತ್ತಿವೆ. ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಕೊವಿಡ್​ ಸೊಂಕು ಕಡಿಮೆಯಾಗುತ್ತಿದೆ. 24 ರಾಜ್ಯಗಳಲ್ಲಿ ಪಾಸಿಟಿವಿಟಿ ರೇಟ್‌ ಶೇಕಡಾ 15ರಷ್ಟಿದೆ. 10 ರಾಜ್ಯಗಳಲ್ಲಿ ಪಾಸಿಟಿವಿಟಿ ರೇಟ್‌ ಶೇ.5ರಿಂದ 15ರಷ್ಟಿದೆ. ಪುದುಚೆರಿಯಲ್ಲಿ ಅತಿ ಹೆಚ್ಚು, ಅಂದರೆ ಶೇಕಡಾ 43.3ರಷ್ಟು ಪಾಸಿಟಿವಿಟಿ ರೇಟ್ ಇದೆ. ಕರ್ನಾಟಕ ಪಾಸಿಟಿವಿಟಿ ರೇಟ್‌ನಲ್ಲಿ ದೇಶದಲ್ಲಿ ನಾಲ್ಕನೇ‌ ಸ್ಥಾನ ಪಡೆದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧುಮೇಹ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಿ ದೇಶದಲ್ಲಿ ಬ್ಲಾಕ್ ಫಂಗಸ್​ ಸೋಂಕು ತೀರ ವಿರಳವಾಗಿ ಕಂಡುಬರುತ್ತಿದೆ. ಕೊರೊನಾ ಬಳಿಕ ಫಂಗಲ್ ಇನ್ಫೆಕ್ಷನ್ ಹೆಚ್ಚಾಗಿದೆ. ಇದು ಹೊಸ ಖಾಯಿಲೆಯಲ್ಲ ಹೆಚ್ಚು ಜನರಲ್ಲಿ ಕಾಣಿಸುತ್ತಿರಲಿಲ್ಲ. ಕೊರೊನಾ ಬಳಿಕ ಹೆಚ್ಚು ರೋಗ ಕಾಣಿಸಿಕೊಳ್ಳುತ್ತಿದೆ. ಇದರಿಂದ ಕಣ್ಣು,ಮೆದುಳಿಗೆ ಇನ್ಪೆಕ್ಷನ್ ಉಂಟಾಗಲಿದೆ. ಗಾಳಿಯಲ್ಲೂ ಪಂಗಸ್ ಹರಡುವ ಸಾಧ್ಯತೆ ಇದೆ.  ಮಧುಮೇಹ ಇದ್ದವರು ಕೊವಿಡ್ ಬಂದಲ್ಲಿ ಸ್ಟಿರಾಯ್ಡ್ ಸೇವಿಸಿದರೆ ಆರೋಗ್ಯದ ಬಗ್ಗೆ ತೀವ್ರ ಲಕ್ಷ್ಯ ಹೊಂದಿರಬೇಕು. ಸ್ಟಿರಾಯ್ಡ್​ಗಳ ದುರ್ಬಳಕೆ, ಹೆಚ್ಚಿನ ಉಪಯೋಗ ಮಾಡಬಾರದು. ಹತ್ತಕ್ಕಿಂತ ಹೆಚ್ಚು ದಿನ ಸ್ಟಿರಾಯ್ಡ್​ಗಳ ಸೇವನೆ ಮಾಡಬಾರದು. ಬ್ಲಾಕ್ ಫಂಗಸ್​ನ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಮಧುಮೇಹದ ಬಗ್ಗೆ ಹೆಚ್ಚಿನ ಗಮನವಿರಲಿ, ತಕ್ಷಣವೇ ಸ್ಟಿರಾಯ್ಡ್ ಸೇವನೆ ನಿಲ್ಲಿಸುವಂತೆ ಏಮ್ಸ್ ಮುಖ್ಯಸ್ಥ ಡಾ. ಗುಲೇರಿಯಾ ನಿರ್ದೇಶನ ನೀಡಿದರು.

ಲಸಿಕೆ ತಯಾರಿ ಅಷ್ಟು ಸುಲಭವಲ್ಲ.. ಖಾಸಗಿ ಕಂಪನಿಗಳಿಗೂ ಲಸಿಕೆ ತಂತ್ರಜ್ಞಾನ ನೀಡಲು ಸಿದ್ಧರಿದ್ದೇವೆ.  ಸಜೀವ ವೈರಸ್ ಅನ್ನು ಇನ್ ಆಕ್ಟೀವ್ ಮಾಡಿ ಕೊವಿಡ್ ಲಸಿಕೆ  ತಯಾರಿಸಲಾಗುತ್ತದೆ. ಲಸಿಕೆ ತಯಾರಿ ಅಷ್ಟೊಂದು ಸುಲಭವಲ್ಲ. ಇತರ ಕಾರ್ಖಾನೆಗಳಲ್ಲಿ ವಸ್ತುಗಳನ್ನು ಸಿದ್ಧಪಡಿಸಿದಂತೆ ಕೊವಿಡ್ ಲಸಿಕೆ ತಯಾರಿಸಲು ಸಾಧ್ಯವಿಲ್ಲ. ಲಸಿಕೆ ತಯಾರಕರನ್ನು ಸರ್ಕಾರದ ಸಹಭಾಗಿದಾರರು ಎಂದೇ ಪರಿಗಣಿಸುತ್ತೇವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ತಿಳಿಸಿದರು.

ಕೊವಿಶೀಲ್ಡ್ ಲಸಿಕೆಯನ್ನು ವಿಜ್ಞಾನಿಗಳ ಸಲಹೆ, ಶಿಫಾರಸು ಆಧಾರದಲ್ಲಿ 12 ವಾರಗಳಿಗೆ 2ನೇ ಡೋಸ್ ಪಡೆಯುವುದನ್ನು ಹೆಚ್ಚಿಸಲಾಗಿದೆ. ಲಸಿಕೆಯ ಕೊರತೆ ಕಾರಣದಿಂದ ಎರಡನೇ ಡೋಸ್ ಲಸಿಕೆಯ ಅಂತರ ಹೆಚ್ಚಿಸಿಲ್ಲ. ವಿಜ್ಞಾನಿಗಳ ಸಲಹೆ, ಶಿಫಾರಸು ಆಧರಿಸಿ ತೀರ್ಮಾನಿಸಲಾಗಿದೆ. ಇಂಗ್ಲೆಂಡ್ ನಲ್ಲಿ ಕಡಿಮೆ ಅಂತರದಲ್ಲಿ ಎರಡನೇ ಡೋಸ್ ಲಸಿಕೆ ಪಡೆದಾಗ ಶೇ. 65-82 ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಲಸಿಕೆಯ ಅಂತರ ಹೆಚ್ಚಿಸಿರುವುದರ ಹಿಂದೆ ಅಂಕಿಅಂಶಗಳ ಆಧಾರ ಇದ್ದು, ವೈಜ್ಞಾನಿಕ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿ.ಕೆ.ಪಾಲ್ ತಿಳಿಸಿದರು. ‌‌

ಇದನ್ನೂ ಓದಿ: DCM Ashwath Narayan Press Meet ಕೊರೊನಾ ಮಾರಿಯನ್ನು ನಿಯಂತ್ರಿಸಲು ರಾಜ್ಯ ಕೊವಿಡ್‌ ಟಾಸ್ಕ್ ಫೋರ್ಸ್ ತೆಗೆದುಕೊಂಡಿದೆ ಅನೇಕ ಪ್ರಮುಖ ತೀರ್ಮಾನಗಳು, ಏನವು? ಇಲ್ಲಿದೆ ವಿವರ

Neem Benefits: ಕೊರೊನಾ ಸೋಂಕು ತಡೆಗಟ್ಟಲು ಕಹಿಬೇವು ಪರಿಣಾಮಕಾರಿ; ಅಧ್ಯಯನ ವರದಿ (The number of active Covid cases has been decreasing in the country for the past 12 days says Union health ministry joint secretary Lav Agarwal)

Published On - 3:58 pm, Sat, 15 May 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ