Fact Check: ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೋ ಕರ್ನಾಟಕದ್ದು ಎಂದು ವೈರಲ್
ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆಯೊಡ್ಡುವ ವೈರಲ್ ವಿಡಿಯೋದ ಬಗ್ಗೆ ಮಾಡಲಾಗುತ್ತಿರುವ ಹಕ್ಕು ಸುಳ್ಳು ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ವಾಸ್ತವವಾಗಿ, ವೈರಲ್ ವಿಡಿಯೋ ಕರ್ನಾಟಕದಲ್ಲಿ ನಡೆದ ಘಟನೆಯೇ ಅಲ್ಲ, ಇದು 2018 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಾಗಿದೆ.
ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಎಲ್ಲ ಕಡೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ವೈರಲ್ ವಿಡಿಯೋ ಕರ್ನಾಟಕದಲ್ಲಿ ನಡೆದ ಘಟನೆಯಲ್ಲ, ಇದು 2018 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಾಗಿದೆ. ಮಹಾರಾಷ್ಟ್ರದ ಚೋಪ್ರಾ ಬಸ್ ನಿಲ್ದಾಣದ ಬಳಿಯ ಪ್ರದೇಶವನ್ನು ತೆರವುಗೊಳಿಸಲು ಪೊಲೀಸರು ಆಗಮಿಸಿದಾಗ ಅಂಗಡಿಯವನು ಪೊಲೀಸರಿಗೆ ಬೆದರಿಕೆ ಹಾಕಿದ್ದಾಗ ಸಂಭವಿಸಿದ ಘಟನೆ ಇದಾಗಿದೆ.
ವೈರಲ್ ಆಗುತ್ತಿರುವುದು ಏನು?:
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಳ್ಳುವಾಗ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, ‘‘ಕರ್ನಾಟಕ, ನೆಟ್ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬರು ನಿಮ್ಮ ಸಮವಸ್ತ್ರವನ್ನು ತೆಗೆದುಹಾಕಿ ಮತ್ತು ನನ್ನನ್ನು ಮಾತ್ರ ಭೇಟಿ ಮಾಡಿ ಎಂದು ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ,’’ ಎಂದು ಬರೆದಿದ್ದಾರೆ.
View this post on Instagram
Fact Check:
ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಿದ್ದೇವೆ. ಆಗ ಸೋಪಾನ್ ಜಾಧವ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 24, 2018 ರಂದು ಅಪ್‌ಲೋಡ್ ಮಾಡಲಾದ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಲಭ್ಯವಿರುವ ಮಾಹಿತಿಯ ಪ್ರಕಾರ, ವೈರಲ್ ವಿಡಿಯೋ ಮಹಾರಾಷ್ಟ್ರದ ಚೋಪ್ರಾ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯಾಗಿದೆ.
ಹಾಗೆಯೆ ಸೆಪ್ಟೆಂಬರ್ 20, 2018 ರಂದು ಜುಬಿಲಿಹಿಲ್ಸ್ ಫಿರೋಜ್ ಖಾನ್ ಹೆಸರಿನ ಪುಟದಲ್ಲಿ ಕೂಡ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇಲ್ಲಿಯೂ ಸಹ ಶೀರ್ಷಿಕೆಯಲ್ಲಿ ವಿಡಿಯೋವನ್ನು ಮಹಾರಾಷ್ಟ್ರದ ಚೋಪ್ರಾ ಬಸ್ ನಿಲ್ದಾಣದಿಂದ ಎಂದು ವಿವರಿಸಲಾಗಿದೆ.
ಈ ಮೂಲಕ ಈ ಹೇಳಿಕೆ ಆರು ವರ್ಷಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂಬುದು ತಿಳಿದುಬಂತು. ಇನ್ನು ಖಾಸಗಿ ವೆಬ್ಸೈಟ್ ಒಂದು ಈ ವಿಚಾರವಾಗಿ ಚೋಪ್ರಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಅವರು ನೀಡಿರುವ ಹೇಳಿಕೆ ಇಲ್ಲಿದೆ. ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವತಾರ್ ಸಿಂಗ್ ಚೌಹಾಣ್, ಈ ಘಟನೆ 2018 ರಲ್ಲಿ ಸಂಭವಿಸಿದ್ದು, ಕೆಲವರು ಚೋಪ್ರಾ ಬಸ್ ನಿಲ್ದಾಣದ ಬಳಿ ವಾಹನವನ್ನು ನಿಲ್ಲಿಸಿದಾಗ ಸಂಚಾರಕ್ಕೆ ತೊಂದರೆಯಾಗಿತ್ತು. ಅದನ್ನು ತೆಗೆಯುವ ವಿಚಾರದಲ್ಲಿ ವಾಗ್ವಾದ ನಡೆದಿದ್ದು, ಅಲ್ಲಿನ ಜನರು ಪೊಲೀಸರಿಗೆ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಶ್ವಾನಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಏನೆಲ್ಲಾ ತರಬೇತಿ ನೀಡಲಾಗುತ್ತದೆ? ಇಲ್ಲಿದೆ ಮಾಹಿತಿ
ಹೀಗಾಗಿ ವ್ಯಕ್ತಿಯೊಬ್ಬ ಪೊಲೀಸರಿಗೆ ಬೆದರಿಕೆಯೊಡ್ಡುವ ವೈರಲ್ ವಿಡಿಯೋದ ಬಗ್ಗೆ ಮಾಡಲಾಗುತ್ತಿರುವ ಹಕ್ಕು ಸುಳ್ಳು ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ವಾಸ್ತವವಾಗಿ, ವೈರಲ್ ವಿಡಿಯೋ ಕರ್ನಾಟಕದಲ್ಲಿ ನಡೆದ ಘಟನೆಯೇ ಅಲ್ಲ, ಇದು 2018 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಾಗಿದೆ. ಮಹಾರಾಷ್ಟ್ರದ ಚೋಪ್ರಾ ಬಸ್ ನಿಲ್ದಾಣದ ಬಳಿಯ ಪ್ರದೇಶವನ್ನು ತೆರವುಗೊಳಿಸಲು ಪೊಲೀಸರು ಆಗಮಿಸಿದಾಗ ಅಂಗಡಿಯವನು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಇದಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ