ಜಾಮೀನು ಪಡೆದು ಹೊರಬಂದ ತಕ್ಷಣವೇ ಮತ್ತೊಂದು ಪ್ರಕರಣದಲ್ಲಿ ಟಿಎಂಸಿ ನಾಯಕ ಸಾಕೇತ್ ಗೋಖಲೆ ಬಂಧನ
ಕ್ಷದ ನಾಯಕ ಡೆರೆಕ್ ಒಬ್ರೇನ್ ಅವರು , ಗೋಖಲೆ ಅವರಿಗೆ "ಗುಜರಾತ್ ಪೋಲೀಸರಿಂದ ಕಿರುಕುಳ ನೀಡುತ್ತಿದ್ದಾರೆ" ಎಂದು ಆರೋಪಿಸಿ ಟ್ವೀಟ್ ಮಾಡಿದ್ದು, ಪಕ್ಷದ ಸಂಸದರ ನಿಯೋಗವು ಗುಜರಾತ್‌ಗೆ ತೆರಳುತ್ತಿದೆ ಎಂದು ಹೇಳಿದರು.
ಸುಳ್ಳು ದಾಖಲೆಗಳನ್ನು ತೋರಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಟ್ವೀಟ್ ಮಾಡಿದ ಪ್ರಕರಣದಲ್ಲಿ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಸಾಕೇತ್ ಗೋಖಲೆ (Saket Gokhale)ಅವರನ್ನು ಗುರುವಾರ ರಾತ್ರಿ ಮತ್ತೆ ಬಂಧಿಸಲಾಗಿದೆ.ಇದರ ವಿರುದ್ಧ ಟಿಎಂಸಿ ಪ್ರತಿಭಟನೆ ನಡೆಸಿದೆ.ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ ವಿ ಚೌಹಾಣ್ ಅವರು ತೃಣಮೂಲ ನಾಯಕನ ಪೊಲೀಸ್ ಕಸ್ಟಡಿ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ತಕ್ಷಣವೇ ಅವರನ್ನು ಮೊರ್ಬಿ ಪೊಲೀಸರು ಅಲ್ಲಿ ದಾಖಲಾದ ಮತ್ತೊಂದು ಅಪರಾಧದಲ್ಲಿ ಬಂಧಿಸಿದರು ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಂ) ಜಿತೇಂದ್ರ ಯಾದವ್ ಹೇಳಿದ್ದಾರೆ.ಪ ಕ್ಷದ ನಾಯಕ ಡೆರೆಕ್ ಒಬ್ರೇನ್ ಅವರು , ಗೋಖಲೆ ಅವರಿಗೆ “ಗುಜರಾತ್ ಪೋಲೀಸರಿಂದ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿ ಟ್ವೀಟ್ ಮಾಡಿದ್ದು, ಪಕ್ಷದ ಸಂಸದರ ನಿಯೋಗವು ಗುಜರಾತ್‌ಗೆ ತೆರಳುತ್ತಿದೆ ಎಂದು ಹೇಳಿದರು. ಸಾಕೇತ್ ಗೋಖಲೆ ಜಾಮೀನು ಪಡೆದ ನಂತರವೂ ಗುಜರಾತ್ ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದಾರೆ. ಡಿಸೆಂಬರ್ 8 ರಂದು ರಾತ್ರಿ 8.45 ಕ್ಕೆ ಮತ್ತೆ ಬಂಧಿಸಲಾಗಿದೆ. ಅವರು ಅಹಮದಾಬಾದ್‌ನ ಸೈಬರ್ ಪೊಲೀಸ್ ಠಾಣೆಯಿಂದ ಹೊರಡುತ್ತಿರುವಾಗ, ಯಾವುದೇ ಸೂಚನೆ/ವಾರೆಂಟ್ ಇಲ್ಲದೆ ಪೊಲೀಸ್ ತಂಡವು ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ. ಇದು ಖಂಡನೀಯ ಎಂದು ಒಬ್ರೇನ್ ಟ್ವೀಟ್ ಮಾಡಿದ್ದಾರೆ.
SHOCKER #Break @SaketGokhale @AITCofficial being harassed by Gujarat Police even after getting bail. ARRESTED AGAIN 8.45pm Dec 8. While he was leaving Cyber PS in Ahmedabad, Police team without notice/warrant are arresting him and taking him to unknown destination. CONDEMNABLE
— Derek O’Brien | ডেরেক ও’ব্রায়েন (@derekobrienmp) December 8, 2022
ನವೆಂಬರ್‌ನಲ್ಲಿ 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಸೇತುವೆ ಕುಸಿತದ ಸ್ಥಳವಾದ ಗುಜರಾತ್‌ನ ಮೋರ್ಬಿಗೆ ಪ್ರಧಾನಿ ಮೋದಿಯವರ ಭೇಟಿ ನೀಡಿದ್ದರು. ನವೆಂಬರ್‌ನಲ್ಲಿ ಮೋದಿ ಇಲ್ಲಿಗೆ ಭೇಟಿ ನೀಡಿದ್ದು ಅದಕ್ಕಾಗಿ ರಾಜ್ಯ ಸರ್ಕಾರ ₹ 30 ಕೋಟಿ ಖರ್ಚು ಮಾಡಿದೆ ಎಂದು ಆರೋಪಿಸಿ ಗೋಖಲೆ ಟ್ವೀಟ್ ಮಾಡಿದ್ದರು. ಅವರು ಈ ವಿಷಯದ ಬಗ್ಗೆ ತಮ್ಮ ಟ್ವೀಟ್‌ಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಆರೋಪಿಸಿವೆ.
ಮಾಹಿತಿ ಹಕ್ಕು (ಆರ್‌ಟಿಐ) ಉತ್ತರವನ್ನು ಉಲ್ಲೇಖಿಸಿ ಡಿಸೆಂಬರ್ 1 ರಂದು ಮಾಡಿದ ಟ್ವೀಟ್‌ನಲ್ಲಿ “ಪ್ರಧಾನಿ ಅವರ ಮೋರ್ಬಿ ಭೇಟಿಯಿಂದ ಗುಜರಾತ್ ಸರ್ಕಾರಕ್ಕೆ ₹ 30 ಕೋಟಿ ಖರ್ಚಾಗಿದೆ. ಇದು ಸಂತ್ರಸ್ತರಿಗೆ ನೀಡಿದ ಪರಿಹಾರಕ್ಕಿಂತ (ಒಟ್ಟು ₹ 5 ಕೋಟಿ) ಹೆಚ್ಚು ಎಂದಿದ್ದರು. ಅದೇ ದಿನ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕ ಇದನ್ನು “ನಕಲಿ” ಎಂದು ಹೇಳಿತ್ತು.
ಸಾಕೇತ್ ಗೋಖಲೆ ಅವರು ತಮ್ಮ ಟ್ವೀಟ್‌ನಲ್ಲಿ ಆರ್‌ಟಿಐ ಪ್ರತ್ಯುತ್ತರ ಎಂದು ತೋರಿಸಲು ಗುಜರಾತ್ ಸಮಾಚಾರ್ ಪತ್ರಿಕೆಯ ಸಲ್ಲಿಸಿದ ಆರ್ಟಿಐಗೆ ಉತ್ತರ ಎಂದು ಪ್ರಸ್ತುತ ಪತ್ರಿಕೆಯ ಫಾಂಟ್ ಬಳಸಿದ್ದಾರೆ ಎಂದು ಗುಜರಾತ್ ಪೊಲೀಸರ ಸೈಬರ್ ಸೆಲ್ ಎನ್ಡಿಟಿವಿಗೆ ಹೇಳಿದೆ.”ಇಡೀ ಆರ್‌ಟಿಐ ಅನ್ನು ಸಾಕೇತ್ ಗೋಖಲೆ ತಯಾರಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:11 am, Fri, 9 December 22