ಬ್ಯಾಂಕ್​ ಮ್ಯಾನೇಜರ್​ನ ಅಪಹರಿಸಿ 800 ಕಿ.ಮೀ ದೂರ ಹೋದ್ರೂ ಆರೋಪಿಗಳು ಸಿಕ್ಕಿಬಿದ್ರು

ಅಪಹರಣಕ್ಕೊಳಗಾಗಿದ್ದ ಬ್ಯಾಂಕ್​ ಮ್ಯಾನೇಜರ್​ನನ್ನು ಪೊಲೀಸರು ರಕ್ಷಣೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಪಹರಣಕ್ಕಿಂತ ಆಶ್ಚಯರ್ವೆನಿಸಿರುವ ಸಂಗತಿ ಎಂದರೆ ಅಪಹರಿಸಿ ಕಾರಿನಲ್ಲಿ ಕೂರಿಸಿಕೊಂಡು ಊರು ಊರು ಸುತ್ತುತ್ತಾ 800 ಕಿ.ಮೀ ಸಂಚರಿಸಿದ್ದಾರೆ. ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಫರೀದಾಬಾದ್​ನಿಂದ ಹಿಮಾಚಲ ಪ್ರದೇಶದ ಬಿಲಾಸ್ಪುರ ನಂತರ ಮಥುರಾಗೆ ಕರೆದೊಯ್ಯಲಾಗಿತ್ತು.

ಬ್ಯಾಂಕ್​ ಮ್ಯಾನೇಜರ್​ನ ಅಪಹರಿಸಿ 800 ಕಿ.ಮೀ ದೂರ ಹೋದ್ರೂ ಆರೋಪಿಗಳು ಸಿಕ್ಕಿಬಿದ್ರು
ಅಪಹರಣ-ಸಾಂದರ್ಭಿಕ ಚಿತ್ರ
Follow us
ನಯನಾ ರಾಜೀವ್
|

Updated on:Apr 25, 2024 | 2:38 PM

ಬ್ಯಾಂಕ್​ ಮ್ಯಾನೇಜರ್(Bank Manager)​ ಅಪಹರಣ(Kidnap) ಪ್ರಕರಣದಲ್ಲಿ ದಂಪತಿಯನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಇವರು ವ್ಯಕ್ತಿ ಹಣೆಗೆ ಬಂದೂಕಿಟ್ಟು ಅಪಹರಿಸಿದ್ದರು. ಅಪಹರಣಕ್ಕಿಂತ ಆಶ್ಚಯರ್ವೆನಿಸಿರುವ ಸಂಗತಿ ಎಂದರೆ ಅಪಹರಿಸಿ ಕಾರಿನಲ್ಲಿ ಕೂರಿಸಿಕೊಂಡು ಊರು ಊರು ಸುತ್ತುತ್ತಾ 800 ಕಿ.ಮೀ ಸಂಚರಿಸಿದ್ದರೂ ಕೊನೆಗೆ ಸಿಕ್ಕಿಬಿದ್ದಿದ್ದಾರೆ. ಫರೀದಾಬಾದ್​ನಿಂದ ಹಿಮಾಚಲ ಪ್ರದೇಶದ ಬಿಲಾಸ್ಪುರ ನಂತರ ಮಥುರಾಗೆ ಕರೆದೊಯ್ಯಲಾಗಿತ್ತು.

ಸತೀಶ್​ ಅವರ ಮನೆಯಲ್ಲಿ ಮೊದಲು ಬಾಡಿಗೆಗಿದ್ದ ಭೂಪೇಂದ್ರ ಎಂಬಾತ ಪತ್ನಿಯ ಜತೆ ಸೇರಿ ಸಂಚು ರೂಪಿಸಿದ್ದ ಎನ್ನಲಾಗಿದೆ. ಆರೋಪಿಯಿಂದ ಪಿಸ್ತೂಲ್, ಮೂರು ಜೀವಂತ ಕಾಟ್ರಿಡ್ಜ್​ಗಳು ಮತ್ತು 4 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಓರ್ವ ತಲೆ ಮರೆಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಪಲ್ವಾನ್​ನ ಬಡೋಲಿ ಗ್ರಾಮದ ನಿವಾಸಿಗಳಾದ ಭೂಪೇಂದ್ರ ಹಾಗೂ ರಿಷಿತಾ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಮಾಸ್ಟರ್​ಮೈಂಡ್​ ಗುರುಗ್ರಾಮದ ಬಾದಶಹಪುರ ಗ್ರಾಮದ ರವೀಂದ್ರ ಎಂಬಾತ ಇನ್ನೂ ತಲೆ ಮರೆಸಿಕೊಂಡಿದ್ದಾನೆ. ಶಸ್ತ್ರಸಜ್ಜಿತ ಆರೋಪಿಗಳು ಏಪ್ರಿಲ್​ 21-22ರ ರಾತ್ರಿ ಬಲ್ಲಭಗಢ ಸೆಕ್ಟರ್ 62ರಲ್ಲಿ ಬ್ಯಾಂಕ್​ ಮ್ಯಾನೇಜರ್​ ಮನೆಗೆ ನುಗ್ಗಿ ಅಪಹರಿಸಿದ್ದರು.

ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್​ಕಾಲ್​ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ

ಆರೋಪಿಗಳು ಬ್ಯಾಂಕ್​ ಮ್ಯಾನೇಜರ್​ನ ಅವರ ಕಾರಲ್ಲೇ ಕೂರಿಸಿಕೊಂಡು ಪರಾರಿಯಾಗಿದ್ದರು. ಆರೋಪಿಗಳು ಮೊದಲು ಹಿಮಾಚಲಪ್ರದೇಶಕ್ಕೆ ಹೋಗಿದ್ದರು. ಅಲ್ಲಿಂದ ಮಥುರಾ ತಲುಪಿದ್ದರು. ನಾಲ್ಕು ತಿಂಗಳ ಹಿಂದಿನವರೆಗೂ ಆರೋಪಿಗಳು ಬ್ಯಾಂಕ್​ ಮ್ಯಾನೇಜರ್​ ಮನೆಯಲ್ಲಿ ಬಾಡಿಗೆಗಿದ್ದರು. ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂಬ ಅರಿವಿತ್ತು. ಮ್ಯಾನೇಜರ್​ ಪತ್ನಿ ಸರ್ಕಾರಿ ನೌಕರಿಯಲ್ಲಿರುವುದೂ ತಿಳಿದಿತ್ತು. ಕೆಲವು ದಿನಗಳ ಹಿಂದೆ ಕಾರು ಖರೀದಿಸಿರುವುದೂ ತಿಳಿದಿತ್ತು.

ಭೂಪೇಂದ್ರ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದಾಗ ರವೀಂದ್ರನನ್ನು ಭೇಟಿಯಾಗಿ ಸ್ನೇಹ ಬೆಳಸಿದ್ದ, ಬಳಿಕ ಹಣದ ಆಮಿಷವೊಡ್ಡಿ ಈ ಅಪರಾಧದಲ್ಲಿ ಭಾಗಿಯಾಗುವಂತೆ ಮಾಡಿದ್ದ. 50 ಲಕ್ಷ ಕೊಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು.

ಸಿಕ್ಕಿಬಿದ್ದಿದ್ಹೇಗೆ? ಮ್ಯಾನೇಜರ್ ಪತ್ನಿ ಗಂಡನನ್ನು ಬಿಡಿಸಲು 4 ಲಕ್ಷಗಳೊಂದಿಗೆ ಬೈಪಾಸ್​ ರಸ್ತೆಗೆ ಬಂದಿದ್ದರು. ಆಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:38 pm, Thu, 25 April 24