ಜಮ್ಮು ಕಾಶ್ಮೀರದ ಮಾಜಿ ಸಚಿವ ಚೌಧರಿ ಬಿಜೆಪಿಗೆ ಸೇರ್ಪಡೆ

Chowdhary Zulfkar Ali joins BJP: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣಾ ದಿನಾಂಕಗಳ ಘೋಷಣೆಯಾಗಿದ್ದು, ಅದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಜುಲ್ಫಿಕರ್ ಅಲಿ ಭಾನುವಾರ ಬಿಜೆಪಿ ಸೇರಿದ್ದಾರೆ. ಜಮ್ಮುವಿನ ತ್ರಿಕೂಟ ನಗರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಏರಿದ್ದಾರೆ. ಈ ಬಗ್ಗೆ ಜಮ್ಮು-ಕಾಶ್ಮೀರ ಬಿಜೆಪಿ ಮಾಹಿತಿ ನೀಡಿದೆ.

ಜಮ್ಮು ಕಾಶ್ಮೀರದ ಮಾಜಿ ಸಚಿವ ಚೌಧರಿ ಬಿಜೆಪಿಗೆ ಸೇರ್ಪಡೆ
ಚೌಧರಿImage Credit source: India TV
Follow us
ನಯನಾ ರಾಜೀವ್
|

Updated on: Aug 18, 2024 | 2:55 PM

ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣಾ ದಿನಾಂಕಗಳ ಘೋಷಣೆಯಾಗಿದ್ದು, ಅದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಜುಲ್ಫಿಕರ್ ಅಲಿ ಭಾನುವಾರ ಬಿಜೆಪಿ ಸೇರಿದ್ದಾರೆ. ಜಮ್ಮುವಿನ ತ್ರಿಕೂಟ ನಗರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಏರಿದ್ದಾರೆ. ಈ ಬಗ್ಗೆ ಜಮ್ಮು-ಕಾಶ್ಮೀರ ಬಿಜೆಪಿ ಮಾಹಿತಿ ನೀಡಿದೆ.

ಜುಲ್ಫಿಕರ್ ಅಲಿ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ (ಜೆಕೆಎಪಿ) ಉಪಾಧ್ಯಕ್ಷರಾಗಿದ್ದಾರೆ. ಅವರು ವೃತ್ತಿಯಲ್ಲಿ ವಕೀಲರು. ಈ ಹಿಂದೆ ರಾಜ್ಯದಲ್ಲಿ ಸಂಪುಟ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.

ವೃತ್ತಿಯಲ್ಲಿ ವಕೀಲರಾಗಿರುವ ಅಲಿ ಅವರು 2008 ಮತ್ತು 2014 ರ ವಿಧಾನಸಭಾ ಚುನಾವಣೆಯಲ್ಲಿ ರಾಜೌರಿ ಜಿಲ್ಲೆಯ ದರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಟಿಕೆಟ್‌ನಲ್ಲಿ ಗೆದ್ದಿದ್ದರು. ಪಿಟಿಐ ವರದಿಯ ಪ್ರಕಾರ, ಅವರು 2015 ರಿಂದ 2018 ರವರೆಗೆ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಜೂನ್ 2018 ರಲ್ಲಿ ಬಿಜೆಪಿ ಸರ್ಕಾರದಿಂದ ಹೊರಬಂದ ನಂತರ ಸಮ್ಮಿಶ್ರ ಸರ್ಕಾರ ಪತನವಾಯಿತು. ಇದರ ನಂತರ, ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದಲ್ಲಿ ಅನೇಕ ಪಿಡಿಪಿ ನಾಯಕರು 2020 ರಲ್ಲಿ ಜೆಕೆಎಪಿ ಪಕ್ಷವನ್ನು ರಚಿಸಿದರು ಮತ್ತು ಅಲಿ ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅಲಿ ಅವರು ದೆಹಲಿಯಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿದರು ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನವನ್ನು ನಡೆಸಲು ದಿನಾಂಕಗಳನ್ನು ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು, ಎರಡನೇ ಹಂತ ಸೆಪ್ಟೆಂಬರ್ 25 ರಂದು ಮತ್ತು ಮೂರನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಇದರೊಂದಿಗೆ ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ.

ಆರ್ಟಿಕಲ್ 370 ರದ್ದಾದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದು ಎಂಬುದು ಗಮನಾರ್ಹ. ಈ ಹಿಂದೆ 2014ರಲ್ಲಿ ಇಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರವು ಪೂರ್ಣ ರಾಜ್ಯದ ಸ್ಥಾನಮಾನವನ್ನು ಹೊಂದಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ