‘ಅಸ್ತ್ರಾಲಯ’ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲಿಗೆ ಇದೇ ಕಾರಣ: ಮಾರ್ಕಂಡೇಯ ಕಾಟ್ಜು

ದುಬೈ ಅನ್ನು ಮಿಸ್ಟರ್ ದುಬೆ, ಈಜಿಪ್ಟ್ (ಹಿಂದಿಯಲ್ಲಿ ಮಿಸ್ರ್) ಮಿಸ್ಟರ್ ಮಿಶ್ರಾರಿಂದ ಮಾಡಲ್ಪಟ್ಟಿದೆ, ಇಸ್ರೇಲ್ ಅನ್ನು ಯಾದವರು, ಬಹರೇನ್​​  ಅನ್ನು ಭಗವಾನ್ ಬ್ರಹ್ಮ ಮತ್ತು ಸೌದಿ ಅರೇಬಿಯಾವನ್ನು ಸರಸ್ವತಿ ದೇವಿಯಿಂದ ರಚಿಸಲಾಗಿದೆ" ಎಂದು ಇನ್ನೊಬ್ಬ ಬಳಕೆದಾರರು ಕಾಟ್ಜು ಅವರನ್ನು ಲೇವಡಿ ಮಾಡಿದ್ದಾರೆ

'ಅಸ್ತ್ರಾಲಯ' ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಸೋಲಿಗೆ ಇದೇ ಕಾರಣ: ಮಾರ್ಕಂಡೇಯ ಕಾಟ್ಜು
ಮಾರ್ಕಂಡೇಯ ಕಾಟ್ಜು
Follow us
|

Updated on: Nov 20, 2023 | 6:31 PM

ದೆಹಲಿ ನವೆಂಬರ್ 20: ಆಸ್ಟ್ರೇಲಿಯಾ (Australia) ವಿರುದ್ಧ ಭಾರತ ಕ್ರಿಕೆಟ್ ವಿಶ್ವಕಪ್ (ICC world Cup 2023)ಫೈನಲ್‌ನಲ್ಲಿ ಸೋತಾಗಿನಿಂದ, ತಜ್ಞರು ಅದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸುತ್ತಿದ್ದಾರೆ. ಭಾರತದ ಬ್ಯಾಟಿಂಗ್ ಪ್ರದರ್ಶನದಿಂದ ಫೀಲ್ಡಿಂಗ್‌ನಲ್ಲಿ ಸ್ಲಿಪ್-ಅಪ್‌ಗಳವರೆಗೆ, ರೋಹಿತ್ ಶರ್ಮಾ ನೇತೃತ್ವದ ತಂಡ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ್ದರ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ವಿಶ್ಲೇಷಣೆ ಇದೆ.ಆದರೆ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು (Markandey Katju) ಅವರು ಅತ್ಯಂತ ವಿಲಕ್ಷಣವಾದ ಕಾರಣವನ್ನು ನೀಡಿದ್ದು ಅವರ ಪೋಸ್ಟ್ ವೈರಲ್ ಆಗಿದೆ.

ಪಾಂಡವರ ಕಾಲದಲ್ಲಿ ಆಸ್ಟ್ರೇಲಿಯವು ಭಾರತದ ಶಸ್ತ್ರಾಗಾರವಾಗಿತ್ತು. ಅದಕ್ಕಾಗಿಯೇ ಅದು ಪಂದ್ಯವನ್ನು ಗೆದ್ದಿದೆ ಎಂದು ನ್ಯಾಯಮೂರ್ತಿ ಕಾಟ್ಜು  ಹೇಳಿದ್ದಾರೆ.

“ಆಸ್ಟ್ರೇಲಿಯಾವು ಪಾಂಡವರ ‘ಅಸ್ತ್ರಗಳ’ ಶೇಖರಣಾ ಕೇಂದ್ರವಾಗಿತ್ತು. ಅದನ್ನು ‘ಅಸ್ತ್ರಾಲಯ’ ಎಂದು ಕರೆಯಲಾಗುತ್ತಿತ್ತು. ಇದು ಅವರು ವಿಶ್ವಕಪ್ ಗೆಲ್ಲಲು ನಿಜವಾದ ಕಾರಣ” ಎಂದು ನ್ಯಾಯಮೂರ್ತಿ ಕಾಟ್ಜು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಟ್ಜು ಅವರ ಈ ಪೋಸ್ಟ್ ಬಗ್ಗೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಧನ್ಯವಾದಗಳು ಸರ್… ನಿಮ್ಮ ಹಾಸ್ಯದ ಮೂಲಕ ನೀವು ನಮ್ಮನ್ನು ಗೌರವಿಸಿ ಸ್ವಲ್ಪ ಸಮಯವಾಗಿದೆ” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ದುಬೈ ಅನ್ನು ಮಿಸ್ಟರ್ ದುಬೆ, ಈಜಿಪ್ಟ್ (ಹಿಂದಿಯಲ್ಲಿ ಮಿಸ್ರ್) ಮಿಸ್ಟರ್ ಮಿಶ್ರಾರಿಂದ ಮಾಡಲ್ಪಟ್ಟಿದೆ, ಇಸ್ರೇಲ್ ಅನ್ನು ಯಾದವರು, ಬಹರೇನ್​​  ಅನ್ನು ಭಗವಾನ್ ಬ್ರಹ್ಮ ಮತ್ತು ಸೌದಿ ಅರೇಬಿಯಾವನ್ನು ಸರಸ್ವತಿ ದೇವಿಯಿಂದ ರಚಿಸಲಾಗಿದೆ” ಎಂದು ಇನ್ನೊಬ್ಬ ಬಳಕೆದಾರರು ಕಾಟ್ಜು ಅವರನ್ನು ಲೇವಡಿ ಮಾಡಿದ್ದಾರೆ

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಕಾಟ್ಜು ಅವರು ತಮ್ಮ ಬಹಿರಂಗ ಅಭಿಪ್ರಾಯಗಳು ಮತ್ತು ಅಸಾಂಪ್ರದಾಯಿಕ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದಾರೆ. ನ್ಯಾಯಮೂರ್ತಿ ಕಾಟ್ಜು ಅವರು 1970 ರಿಂದ 1991 ರವರೆಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಏಪ್ರಿಲ್ 2006 ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ಗೆ ಏರುವ ಮೊದಲು ನ್ಯಾಯಾಂಗದಲ್ಲಿ ವಿವಿಧ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದರು. ಅವರು ಸೆಪ್ಟೆಂಬರ್, 2011 ರಲ್ಲಿ ನಿವೃತ್ತರಾದರು.

ಇದನ್ನೂ ಓದಿ: Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್‌ ಕೈಕುಲುಕದೇ ಹೋದರೆ ಮೋದಿ?

ಏತನ್ಮಧ್ಯೆ, ಭಾನುವಾರದ ಸೋಲು ಐದು ತಿಂಗಳಲ್ಲಿ ಆಸ್ಟ್ರೇಲಿಯನ್ನರ ವಿರುದ್ಧದ ಎರಡನೇ ಸೋಲು ಆಗಿದೆ.

ಭಾರತ 1983 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡಿತು, ಆದರೆ ನಂತರ 2015 ಮತ್ತು 2019 ರಲ್ಲಿ ಸೆಮಿಫೈನಲ್ ಹಂತದಲ್ಲಿ ಎಡವಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಟ್ರಾವಿಸ್ ಹೆಡ್: ವಿಡಿಯೋ ವೀಕ್ಷಿಸಿ
ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಟ್ರಾವಿಸ್ ಹೆಡ್: ವಿಡಿಯೋ ವೀಕ್ಷಿಸಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ ಗುರುವಾರದ ದಿನಭವಿಷ್ಯ ತಿಳಿಯಿರಿ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?