ಪಶ್ಚಿಮ ಬಂಗಾಳದ ಬಳಿಕ ತಮಿಳುನಾಡಿನಲ್ಲೂ ಆರಂಭವಾದ ಕುಲಪತಿಗಳ ನೇಮಕ ಸಂಘರ್ಷ
ಪಶ್ಚಿಮ ಬಂಗಾಳದ ಬಳಿಕ ತಮಿಳುನಾಡಿನಲ್ಲೂ ವಿಶ್ವವಿದ್ಯಾಲಯ(Universities)ಗಳ ಕುಲಪತಿಗಳ ನೇಮಕ ವಿಚಾರ ವಿವಾದಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯಗಳಿಗೆ ನೇರವಾಗಿ ರಾಜ್ಯಪಾಲರು ಕುಲಪತಿಗಳನ್ನು ನೇಮಿಸಿರುವುದು ಈಗ ರಾಜಭವನ ಹಾಗೂ ತಮಿಳುನಾಡು ಸರ್ಕಾರ ನಡುವಿನ ಸಂಘರ್ಷಕ್ಕೆ ವೇದಿಕೆ ಏರ್ಪಟ್ಟಂತಾಗಿದೆ. ತಮಿಳುನಾಡು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಆರ್ಎನ್ ರವಿ ಹೊರಡಿಸಿರುವ ಅಧಿಸೂಚನೆಯಿಂದಾಗಿ ಡಿಎಂಕೆ ಕೆಂಡಾಮಂಡಲವಾಗಿದೆ.
ಪಶ್ಚಿಮ ಬಂಗಾಳದ ಬಳಿಕ ತಮಿಳುನಾಡಿನಲ್ಲೂ ವಿಶ್ವವಿದ್ಯಾಲಯ(Universities)ಗಳ ಕುಲಪತಿಗಳ ನೇಮಕ ವಿಚಾರ ವಿವಾದಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯಗಳಿಗೆ ನೇರವಾಗಿ ರಾಜ್ಯಪಾಲರು ಕುಲಪತಿಗಳನ್ನು ನೇಮಿಸಿರುವುದು ಈಗ ರಾಜಭವನ ಹಾಗೂ ತಮಿಳುನಾಡು ಸರ್ಕಾರ ನಡುವಿನ ಸಂಘರ್ಷಕ್ಕೆ ವೇದಿಕೆ ಏರ್ಪಟ್ಟಂತಾಗಿದೆ. ತಮಿಳುನಾಡು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಆರ್ಎನ್ ರವಿ ಹೊರಡಿಸಿರುವ ಅಧಿಸೂಚನೆಯಿಂದಾಗಿ ಡಿಎಂಕೆ ಕೆಂಡಾಮಂಡಲವಾಗಿದೆ.
ರಾಜ್ಯಪಾಲ ಆರ್.ಎನ್.ರವಿ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಅವರ ನಿರ್ಧಾರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಆರೋಪಿಸಿದ್ದಾರೆ. ಈ ಹಿಂದೆ ಯಾವುದೇ ರಾಜ್ಯಪಾಲರು ಸ್ವಂತವಾಗಿ ಶೋಧನಾ ಸಮಿತಿಯನ್ನು ರಚಿಸಿಲ್ಲ. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಇಂತಹ ಏಕಪಕ್ಷೀಯ ನಿರ್ಧಾರಗಳಿಗೆ ಯಾವುದೇ ಅವಕಾಶವಿಲ್ಲ.
ರಾಜ್ಯ ಸರ್ಕಾರವು ಆಯ್ಕೆ ಮಂಡಳಿಯ ವಿವರಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸುತ್ತಿತ್ತು. ಆಯಾ ವಿಶ್ವವಿದ್ಯಾನಿಲಯಗಳ ನಿಯಮಾನುಸಾರ ಶೋಧನಾ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅಧಿಸೂಚನೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಈಗ ರಾಜ್ಯಪಾಲರು ನಿರಂಕುಶವಾಗಿ ಶೋಧನಾ ಸಮಿತಿಯನ್ನು ರಚಿಸಿದ್ದು, ಇದು ವಿಶ್ವವಿದ್ಯಾನಿಲಯದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೆ ಪೊನ್ಮುಡಿ ಹೇಳಿದರು.
ತಮಿಳುನಾಡಿನಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸುಮಾರು 13 ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ವಿಶ್ವವಿದ್ಯಾಲಯಗಳು ತಮ್ಮದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ಹೊಂದಿವೆ. ಇವುಗಳ ಪ್ರಕಾರ, ಕುಲಪತಿಗಳ ಅಧಿಕಾರಾವಧಿಯ ನಂತರ, ಕುಲಪತಿಯನ್ನು ಆಯ್ಕೆ ಮಾಡಲು ಶೋಧನಾ ಸಮಿತಿಯನ್ನು ರಚಿಸಲಾಗುತ್ತದೆ.
ಮತ್ತಷ್ಟು ಓದಿ: ವಿಶ್ವವಿದ್ಯಾಲಯಗಳಲ್ಲಿ ರ‍್ಯಾಗಿಂಗ್ ತಡೆಯಲು ಹೊಸ ತಂತ್ರಜ್ಞಾನ: ಇಸ್ರೋ ಜತೆ ಪಶ್ಚಿಮ ಬಂಗಾಳ ರಾಜ್ಯಪಾಲ ಚರ್ಚೆ
ಬುಧವಾರ, ತಮಿಳುನಾಡು ರಾಜ್ಯಪಾಲರು ಮದ್ರಾಸ್ ವಿಶ್ವವಿದ್ಯಾನಿಲಯ, ಭಾರತಿಯಾರ್ ವಿಶ್ವವಿದ್ಯಾಲಯ ಮತ್ತು ತಮಿಳುನಾಡು ಶಿಕ್ಷಕರ ಶಿಕ್ಷಣ ವಿಶ್ವವಿದ್ಯಾಲಯ (TNTEU) ಗೆ ಕುಲಪತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶೋಧನಾ ಸಮಿತಿಗಳನ್ನು ಸ್ಥಾಪಿಸಲು ಅಧಿಸೂಚನೆಗಳನ್ನು ಹೊರಡಿಸಿದ್ದಾರೆ.
ಇನ್ನು 2022ರಲ್ಲಿ ತಮಿಳುನಾಡಿನ ವಿವಿಧ ವಿಶ್ವ ವಿದ್ಯಾಲಯಗಳಿಗೆ ಕುಲಪತಿಯನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಪ್ರಸ್ತುತ ರಾಜ್ಯದಲ್ಲಿರುವ 13 ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಕುಲಾಧಿಪತಿಗಳಾಗಿದ್ದು, ಅವರೇ ಕುಲಪತಿಯನ್ನು ನೇಮಿಸುತ್ತಿದ್ದರು. ಅವರ ಅಧಿಕಾರವನ್ನು ಕಿತ್ತುಕೊಳ್ಳುವ ಮಸೂದೆ ಅಂಗೀಕಾರಗೊಂಡಿತ್ತು.
ಸಿಎಂ ಎಂಕೆ ಸ್ಟಾಲಿನ್ ಈ ಕುರಿತು ಪ್ರತಿಕ್ರಿಯಿಸಿ ಶೈಕ್ಷಣಿಕ ಸಂಸ್ಥೆಗಳಿಗೆ ಶಿಕ್ಷಣ ತಜ್ಞರನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಪಾಲರ ಬಳಿ ಇದ್ದರೆ ಅದರಿಂದ ಕಾರ್ಯ ಚಟುವಟಿಕೆಗಳು ಮತ್ತು ಅಧಿಕಾರಿಗಳೊಂದಿಗೆ ಸಂಘರ್ಷವಾಗಲಿದೆ ಎಂದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ