AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರೂ ಅವರಿಂದ ಮೋದಿವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರ ಪಾತ್ರ ಹೇಗೆಲ್ಲ ಬದಲಾಯ್ತು?

ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಮುರಿದು ಅತಿ ಹೆಚ್ಚು ಕಾಲ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದು ಕೇವಲ ಸಂಖ್ಯೆಗಳು ಮತ್ತು ಅಂಕಿಅಂಶಗಳ ವಿಷಯವಲ್ಲ. ಅವರ ಜೀವನದ ಪ್ರತಿಯೊಂದು ಅಂಶದಲ್ಲೂ ತೀಕ್ಷ್ಣವಾದ ವ್ಯತ್ಯಾಸವಿದೆ, ಅದು ವೈಯಕ್ತಿಕ, ರಾಜಕೀಯ, ಸಾಮಾಜಿಕ ಅಥವಾ ಆಧ್ಯಾತ್ಮಿಕವೂ ಆಗಿರಬಹುದು. ನೆಹರು ಅವರ ಸಂಪುಟದಲ್ಲಿ ಯಾರಿಗೆ ಯಾವ ರೀತಿಯ ಸ್ಥಾನವಿತ್ತು, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದ ಸ್ಟೇಟಸ್ ಹೇಗಿದೆ? ಎಂಬ ಕುರಿತು ಮಾಹಿತಿ ಇಲ್ಲಿದೆ.

ನೆಹರೂ ಅವರಿಂದ ಮೋದಿವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಮಹಿಳೆಯರ ಪಾತ್ರ ಹೇಗೆಲ್ಲ ಬದಲಾಯ್ತು?
Nehru Pm ModiImage Credit source: TV9
ಸುಷ್ಮಾ ಚಕ್ರೆ
|

Updated on: Jun 09, 2026 | 4:49 PM

Share

ನವದೆಹಲಿ, ಜೂನ್ 9: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ನಾಳೆ (ಜೂನ್ 10) ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಪ್ರಧಾನಿಯಾಗಿ ಹಿಂದಿಕ್ಕಲಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸತತ 4,399 ದಿನಗಳ ಕಾಲ ಅಧಿಕಾರದಲ್ಲಿರುವ ಈ ಮೈಲಿಗಲ್ಲು ದೇಶದ ಆಡಳಿತದಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ಸಾರ್ವಜನಿಕ ಚರ್ಚೆಗಳು ಹೆಚ್ಚಾಗಿ ಮೂಲಸೌಕರ್ಯ ಮತ್ತು ಆರ್ಥಿಕ ಬದಲಾವಣೆಗಳ ಸುತ್ತ ಸುತ್ತುತ್ತಿದ್ದರೆ, ಕೇಂದ್ರ ಸಚಿವ ಸಂಪುಟದ ಸಾಮಾಜಿಕ ರಚನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಭಾರತದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೇಗೆ ಬದಲಾಗಿದೆ ಎಂಬ ಆಸಕ್ತಿದಾಯಕ ಸತ್ಯ ಹೊರಬೀಳುತ್ತದೆ.

ಜವಾಹರಲಾಲ್ ನೆಹರೂ ಅವರು 1952ರ ನಂತರ ಮೊದಲ ಬಾರಿಗೆ ಚುನಾಯಿತ ಸಚಿವ ಸಂಪುಟಗಳನ್ನು ರಚಿಸಿದಾಗ, ರಾಜಕೀಯ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಆಗ ಮಹಿಳೆಯರ ಪ್ರಾತಿನಿಧ್ಯವು ಕೇವಲ ಸಾಂಕೇತಿಕವಾಗಿತ್ತು ಮತ್ತು ಅತ್ಯಂತ ಸೀಮಿತವಾಗಿತ್ತು. ರಾಜಕುಮಾರಿ ಅಮೃತ್ ಕೌರ್ ಅವರಂತಹ ನಾಯಕಿಯರಿಗೆ ಕೇವಲ ಆರೋಗ್ಯದಂತಹ ಸಾಂಪ್ರದಾಯಿಕ ಮತ್ತು ಸೀಮಿತ ಖಾತೆಗಳನ್ನು ನೀಡಲಾಗಿತ್ತು. ದಶಕಗಳ ಕಾಲ, ನಿರ್ಧಾರ ತೆಗೆದುಕೊಳ್ಳುವ ಉನ್ನತ ಮಟ್ಟದ ಸಮಿತಿಗಳಲ್ಲಿ ಮಹಿಳೆಯರ ಉಪಸ್ಥಿತಿಯು ಕೇವಲ ಹೆಸರಿಗಷ್ಟೇ ಇರುತ್ತಿತ್ತೇ ವಿನಃ ಆರ್ಥಿಕ ಅಥವಾ ಭದ್ರತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ.

ಇದನ್ನೂ ಓದಿ: 12 ವರ್ಷಗಳ ಅಭಿವೃದ್ಧಿ, ವಿಶ್ವಾಸ ಮತ್ತು ಸಾರ್ವಜನಿಕ ಕಲ್ಯಾಣ: ದೇಶವನ್ನು ಬಲಪಡಿಸುವಲ್ಲಿ ಯಾವುದೇ ಅವಕಾಶ ಬಿಟ್ಟುಕೊಟ್ಟಿಲ್ಲ: ಪ್ರಧಾನಿ ಮೋದಿ

ಆದರೆ, ಕಳೆದ ಕೆಲವು ದಶಕಗಳಲ್ಲಿ ಸಂಪುಟದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಹೆಚ್ಚಾಗಿದ್ದರೂ, ಖಾತೆಗಳ ಹಂಚಿಕೆಯಲ್ಲಿ ನಿಜವಾದ ರಚನಾತ್ಮಕ ಬದಲಾವಣೆ ಕಂಡುಬಂದಿದ್ದು ತಡವಾಗಿ. ಅದು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ. ಪ್ರಧಾನಿ ಮೋದಿಯವರ ಸಚಿವ ಸಂಪುಟದಲ್ಲಿ ಮಹಿಳೆಯರ ಪಾತ್ರವು ಕೇವಲ ‘ಸಂಖ್ಯೆ’ಯಾಗಿ ಉಳಿಯದೆ ಮಹತ್ವದ ಸ್ಥಾನಗಳನ್ನು ಅಲಂಕರಿಸುವ ಮಟ್ಟಿಗೆ ಬದಲಾಯಿತು.

ಭಾರತದ ಆಡಳಿತದ ಅತ್ಯುನ್ನತ ಮತ್ತು ಅತ್ಯಂತ ಶಕ್ತಿಶಾಲಿ ಸಮಿತಿಯಾದ ಕ್ಯಾಬಿನೆಟ್ ಭದ್ರತಾ ಸಮಿತಿ (CCS) ಒಳಗೆ ಮಹಿಳೆಯರ ಪ್ರವೇಶವಾಗಿದ್ದು ಇತ್ತೀಚಿನ ಇತಿಹಾಸದ ಅತ್ಯಂತ ಪ್ರಮುಖ ಬದಲಾವಣೆಯಾಗಿದೆ. ಈ ಹಿಂದೆ ಮಹಿಳೆಯರಿಗೆ ಸಂಸ್ಕೃತಿ, ಕಲ್ಯಾಣ ಅಥವಾ ಆರೋಗ್ಯದಂತಹ ಮೃದು ಖಾತೆಗಳನ್ನು ನೀಡಲಾಗುತ್ತಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣೆ ಮತ್ತು ಹಣಕಾಸಿನಂತಹ ಪ್ರಭಾವಿ ಹಾಗೂ ಭಾರೀ ಜವಾಬ್ದಾರಿಯ ಖಾತೆಗಳನ್ನು ಮಹಿಳಾ ಸಚಿವರಿಗೆ ನೀಡುವ ಮೂಲಕ ಹಳೆಯ ಸಂಪ್ರದಾಯವನ್ನು ಮುರಿಯಲಾಯಿತು. ನಿರ್ಮಲಾ ಸೀತಾರಾಮನ್ ಈ ಅವಧಿಯಲ್ಲೂ ಹಣಕಾಸು ಸಚಿವೆಯಾಗಿ ಮುಂದುವರೆಯುತ್ತಿರುವುದು ಇದಕ್ಕೆ ಉದಾಹರಣೆ.

ಇದನ್ನೂ ಓದಿ: ನೆಹರು ದಾಖಲೆ ಮುರಿಯಲು ಸಜ್ಜಾದ ಮೋದಿ; ಇಬ್ಬರೂ ಪ್ರಧಾನಿಗಳ ಅಧಿಕಾರಾವಧಿಯ ನಡುವಿನ ಹೋಲಿಕೆಗಳೇನು?

ಕೇವಲ ಹೈ ಪ್ರೊಫೈಲ್ ಪಾತ್ರಗಳಲ್ಲದೆ, ಇತ್ತೀಚಿನ ಸಚಿವ ಸಂಪುಟಗಳಲ್ಲಿ ಕಾರ್ಪೊರೇಟ್ ವ್ಯವಹಾರಗಳಿಂದ ಹಿಡಿದು ಅಲ್ಪಸಂಖ್ಯಾತರ ವ್ಯವಹಾರಗಳವರೆಗೆ ಪ್ರಮುಖ ನೀತಿ ನಿರೂಪಣಾ ವಲಯಗಳನ್ನು ಮಹಿಳಾ ನಾಯಕಿಯರೇ ಮುನ್ನಡೆಸುತ್ತಿದ್ದಾರೆ. ಮಹಿಳಾ ನಾಯಕತ್ವವು ಕೇವಲ ಅಂಚಿನಲ್ಲಿ ಉಳಿಯದೆ ರಾಷ್ಟ್ರೀಯ ನೀತಿಯನ್ನು ನಿರ್ದೇಶಿಸುವಲ್ಲಿ ಸಕ್ರಿಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10, 2026ರಂದು ನಿರಂತರವಾಗಿ 4,399 ದಿನಗಳನ್ನು ಪೂರೈಸುವ ಮೂಲಕ ನೆಹರೂ ಅವರ ದಾಖಲೆಯನ್ನು ಮೀರಿ ದೇಶದ ಸುದೀರ್ಘ ಅವಧಿಯ ಅಧಿಕಾರ ನಡೆಸಿದ ಪ್ರಧಾನಿಯಾಗಲಿದ್ದಾರೆ. ಇಷ್ಟೆಲ್ಲಾ ಮೈಲಿಗಲ್ಲುಗಳ ಹೊರತಾಗಿಯೂ, ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಸಕ್ರಿಯ ಸಚಿವ ಸಂಪುಟದಲ್ಲಿ ಮಹಿಳೆಯರ ಶೇಕಡಾವಾರು ಪ್ರಮಾಣ ಇನ್ನೂ ಸಾಧಾರಣ ಮಟ್ಟದಲ್ಲೇ ಇದೆ. ಪರಿಪೂರ್ಣ ರಾಜಕೀಯ ಒಳಗೊಳ್ಳುವಿಕೆಗೆ ಇನ್ನೂ ದೀರ್ಘ ಹಾದಿ ಸಾಗಬೇಕಿದೆ ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More