AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kochi Airport: ಶಾರ್ಜಾದಿಂದ ಬರುತ್ತಿದ್ದ ವಿಮಾನದಲ್ಲಿ ಸಮಸ್ಯೆ, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿ ಘೋಷಣೆ

ಕೊಚ್ಚಿ ವಿಮಾಣ ನಿಲ್ದಾಣದ ಅಧಿಕಾರಿಗಳು ಆತಂಕದಿಂದ ಗಮನಿಸುತ್ತಿರುವಂತೆಯೇ ವಿಮಾನವು ಭಾನುವಾರ ರಾತ್ರಿ 8:26ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು.

Kochi Airport: ಶಾರ್ಜಾದಿಂದ ಬರುತ್ತಿದ್ದ ವಿಮಾನದಲ್ಲಿ ಸಮಸ್ಯೆ, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿ ಘೋಷಣೆ
ಕೊಚ್ಚಿ ವಿಮಾನ ನಿಲ್ದಾಣ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ನಯನಾ ರಾಜೀವ್

Updated on: Jan 30, 2023 | 8:36 AM

ಕೊಚ್ಚಿ: ಶಾರ್ಜಾದಿಂದ ಬರುತ್ತಿದ್ದ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದಿಂದ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Cochin International Airport Limited – CIAL) ಭಾನುವಾರ ರಾತ್ರಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಅಧಿಕಾರಿಗಳು ಆತಂಕದಿಂದ ಗಮನಿಸುತ್ತಿರುವಂತೆಯೇ ವಿಮಾನವು ರಾತ್ರಿ 8:26ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ರಾತ್ರಿ 8:04ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿ ಘೋಷಿಸಲಾಗಿತ್ತು.

‘ಶಾರ್ಜಾದಿಂದ ಕೊಚ್ಚಿಗೆ ಬರುತ್ತಿದ್ದ IX 412 ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯದ ಅನುಮಾನ ಪೈಲಟ್‌ಗೆ ಬಂದಿತ್ತು. ಇದರಿಂದಾಗಿ ರಾತ್ರಿ 8:04ಕ್ಕೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತುಸ್ಥಿತಿ ಘೋಷಿಸಲಾಯಿತು. ವಿಮಾನವು ರಾತ್ರಿ 8:26ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು’ ಎಂದು ಕೊಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರನ್‌ವೇ ಬಳಕೆಗೆ ಯಾವುದೇ ಸಮಸ್ಯೆ ಆಗಿಲ್ಲ. ವಿಮಾನ ನಿಲ್ದಾಣದ ಕಾರ್ಯಾಚರಣೆಗೂ ಯಾವುದೇ ತೊಂದರೆಯಾಗಿಲ್ಲ. ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ತುರ್ತುಪರಿಸ್ಥಿತಿಯನ್ನು ತೆರವುಗೊಳಿಸಲಾಯಿತು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ವಕ್ತಾರರು, ‘ಶಾರ್ಜಾ-ಕೊಚ್ಚಿ ವಿಮಾನವು ತುರ್ತು ಭೂಸ್ಪರ್ಶ ಮಾಡಿಲ್ಲ. ಹೈಡ್ರಾಲಿಕ್ ವ್ಯವಸ್ಥೆಯಲ್ಲಿ (Hydraulic Pressure System) ಸಮಸ್ಯೆಯಿರುವ ಕುರಿತು ಪೈಲಟ್‌ಗೆ ಅರಿವಾದ ತಕ್ಷಣ ಅವರು ವಿಮಾ ನಿಲ್ದಾಣ ನಿಯಂತ್ರಕರ (ATC) ಗಮನಕ್ಕೆ ತಂದರು. ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ವಿಮಾನವು ಸಹಜವಾಗಿಯೇ ಭೂಸ್ಪರ್ಶ ಮಾಡಿದೆ. ತುರ್ತು ಭೂಸ್ಪರ್ಶ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಚ್ಚಿಯಲ್ಲಿ ಏರ್ ಏಷ್ಯಾ ವಿಮಾನಕ್ಕೆ ಹಕ್ಕಿಯೊಂದು ಅಪ್ಪಳಿಸಿದ ಕೆಲವೇ ಗಂಟೆಗಳಲ್ಲಿ ಏರ್‌ ಇಂಡಿಯಾ ವಿಮಾನದಲ್ಲಿ ಸಮಸ್ಯೆ ವರದಿಯಾಗಿತ್ತು. ಕೊಲ್ಕತ್ತಾಕ್ಕೆ ತೆರಳಲೆಂದು ಟೇಕಾಫ್ ಆಗಿದ್ದ ಏರ್‌ ಏಷ್ಯಾ ವಿಮಾನದಲ್ಲಿ 180 ಪ್ರಯಾಣಿಕರಿದ್ದರು. ಹಕ್ಕಿ ಅಪ್ಪಳಿಸಿದ ನಂತರ ವಿಮಾನವನ್ನು ಮತ್ತೆ ಕೊಚ್ಚಿ ನಿಲ್ದಾಣದಲ್ಲಿ ಇಳಿಸಿ ಸಂಪೂರ್ಣ ತಾಂತ್ರಿಕ ತಪಾಸಣೆ ನಡೆಸಲಾಯಿತು

ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!