ಪಹಲ್ಗಾಮ್ ದಾಳಿ ಬೆನ್ನಲ್ಲೇ ಕುಲ್ಗಾಮ್‌ನಲ್ಲಿ ಗುಂಡಿನ ಚಕಮಕಿ; ಟಿಆರ್‌ಎಫ್ ಕಮಾಂಡರ್ ಸೆರೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿನ್ನೆ ಉಗ್ರರ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ಇಂದು ಕುಲ್ಗಾಮ್‌ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಟಿಆರ್‌ಎಫ್ ಭಯೋತ್ಪಾದಕ ಸಿಕ್ಕಿಬಿದ್ದಿದ್ದಾನೆ. ಕುಲ್ಗಾಮ್ ಜಿಲ್ಲೆಯ ತಂಗ್‌ಮಾರ್ಗ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಗುಂಡೇಟಿನ ಶಬ್ದಗಳು ಕೇಳಿಬಂದವು. ಈ ಪ್ರದೇಶವು ಜನಪ್ರಿಯ ಪ್ರವಾಸಿ ತಾಣವಾದ ಪ್ರಸಿದ್ಧ ಅಬರ್ಬಲ್ ಜಲಪಾತದ ಬಳಿ ಇದೆ. ಈ ಪ್ರದೇಶವು ಪೂಂಚ್ ಜಿಲ್ಲೆಯ ಗಡಿಯಲ್ಲಿದೆ.

ಶ್ರೀನಗರ, ಏಪ್ರಿಲ್, 23: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಇಂದು ಕುಲ್ಗಾಮ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಟಿಆರ್‌ಎಫ್‌ನ ಕಮಾಂಡರ್ ಸಿಕ್ಕಿಬಿದ್ದಿದ್ದಾನೆ. ಕುಲ್ಗಾಮ್ ಜಿಲ್ಲೆಯ ತಂಗ್‌ಮಾರ್ಗ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಗುಂಡೇಟಿನ ಶಬ್ದಗಳು ಕೇಳಿಬಂದವು. ಈ ಪ್ರದೇಶವು ಜನಪ್ರಿಯ ಪ್ರವಾಸಿ ತಾಣವಾದ ಪ್ರಸಿದ್ಧ ಅಬರ್ಬಲ್ ಜಲಪಾತದ ಬಳಿಯಿದೆ. ಈ ಪ್ರದೇಶವು ಪೂಂಚ್ ಜಿಲ್ಲೆಯ ಗಡಿಯಲ್ಲಿದೆ.
ಪಹಲ್ಗಾಮ್ ದಾಳಿಗೆ ಭಾರತದ ಸಂಭಾವ್ಯ ಪ್ರತಿಕ್ರಿಯೆಯ ಸ್ಪಷ್ಟ ಸೂಚನೆಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಹಲ್ಗಾಮ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಜನರಿಗೆ ಸದ್ಯದಲ್ಲೇ ಉತ್ತರ ನೀಡುತ್ತೇವೆ. ಯಾವುದೇ ಭಯೋತ್ಪಾದಕ ಕೃತ್ಯಗಳಿಂದ ಭಾರತವನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pahalgam Attack: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತದೋಕುಳಿ; ಇಂದು ಉಗ್ರರ ದಾಳಿ ವೇಳೆ ಆಗಿದ್ದೇನು?
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನ ಉನ್ನತ ಕಮಾಂಡರ್ ಸಿಕ್ಕಿಬಿದ್ದಿದ್ದಾರೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಒಂದು ಭಾಗವಾದ ಟಿಆರ್‌ಎಫ್ ನಿನ್ನೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಹೊಣೆ ಹೊತ್ತಿಕೊಂಡಿತ್ತು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಇಂದು ಎನ್‌ಕೌಂಟರ್ ನಡೆದಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮಕ್ಕೆ ಭಾರತ ಚಿಂತನೆ
ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್‌ಮಾರ್ಗ್ ಪ್ರದೇಶದಲ್ಲಿ ಇನ್ನೂ ಗುಂಡಿನ ಚಕಮಕಿ ನಡೆಯುತ್ತಿದೆ. ಇಂದು ಮುಂಜಾನೆ, ಭಾರತೀಯ ಸೇನೆಯು ಇಬ್ಬರು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿತು ಮತ್ತು ಬಾರಾಮುಲ್ಲಾದಲ್ಲಿ ಭಾರೀ ಗುಂಡಿನ ಚಕಮಕಿಯ ನಂತರ ಅವರನ್ನು ಹೊಡೆದುರುಳಿಸಿತು. ಎನ್‌ಕೌಂಟರ್ ನಂತರ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ಹಾಗೂ ಪಾಕಿಸ್ತಾನಿ ಕರೆನ್ಸಿಯನ್ನು ವಶಪಡಿಸಿಕೊಂಡವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ