
ನವದೆಹಲಿ, ಸೆಪ್ಟೆಂಬರ್ 24: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣೆಗಳಲ್ಲಿ ‘ಮತಗಳನ್ನು ಕದಿಯುವ’ ಮೂಲಕ ದೇಶದ ಸ್ವಾಯತ್ತ ಸಂಸ್ಥೆಗಳನ್ನು ಧ್ವಂಸಗೊಳಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವೋಟ್ ಚೋರಿಯಿಂದ ಕಾನೂನು ಚೋರಿಯವರೆಗೆ ಬಿಜೆಪಿ ಸರ್ಕಾರ ಅಕ್ರಮಗಳನ್ನು ನಡೆಸುತ್ತಲೇ ಇದೆ ಎಂದಿದ್ದಾರೆ. ಭಾರತದ ಹಲವು ರಾಜ್ಯಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಆಡಳಿತ ಬದಲಾವಣೆಯಾಗುವ ಪರಿಪಾಠವಿತ್ತು, ಆದರೆ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಗಿ ಆಡಳಿತ ವಿರೋಧಿ ಅಲೆಯೇ ಕಣ್ಮರೆಯಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ರಾಹುಲ್ ಗಾಂಧಿ, “ಭಾರತೀಯ ರಾಜಕೀಯದಲ್ಲಿ ಆಡಳಿತ ವಿರೋಧಿ ಅಲೆ ಎಂಬ ಮೂಲಭೂತ ಶಕ್ತಿಯಿದೆ. ಅದು ಯಾವುದೇ ಸರ್ಕಾರವನ್ನಾದರೂ ಅತ್ಯಂತ ವೇಗವಾಗಿ ವಿರೋಧಿಸಲು ಪ್ರಾರಂಭಿಸುತ್ತದೆ ಮತ್ತು ಯಾರನ್ನೂ ಬಿಡುವುದಿಲ್ಲ. 1971ರ ಬಾಂಗ್ಲಾದೇಶ ಯುದ್ಧ ಗೆದ್ದು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇಂದಿರಾ ಗಾಂಧಿಯವರೂ ಸಹ ಒಂದೆರಡು ವರ್ಷಗಳಲ್ಲಿ ತೀವ್ರ ಆಡಳಿತ ವಿರೋಧಿಯನ್ನು ಎದುರಿಸಬೇಕಾಯಿತು. ಇದು ಪ್ರತಿ ನಾಯಕನಿಗೂ, ಕಾಂಗ್ರೆಸ್‌ಗೂ ಮತ್ತು ಪ್ರಾದೇಶಿಕ ಪಕ್ಷಗಳಿಗೂ ಅನುಭವವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮಾತ್ರ ಏಕೆ ಆಡಳಿತ ವಿರೋಧಿ ಅಲೆ ಪರಿಣಾಮ ಬೀರಲಿಲ್ಲ?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.
VIDEO | Delhi: Addressing a press conference, Lok Sabha LoP Rahul Gandhi says, “The people at the top of that list are those we call the conspirators. By the way, Mr Gyanesh Kumar, who is sitting there, and two Election Commissioners are raising questions on that man. I have been… pic.twitter.com/iDIBL7iiab
— Press Trust of India (@PTI_News) September 24, 2026
ಇದನ್ನೂ ಓದಿ: ಸಿಇಸಿ ಜ್ಞಾನೇಶ್ ಕುಮಾರ್ 48 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಬೃಹತ್ ಪ್ರತಿಭಟನೆ; ಸಿಜೆಪಿ ಎಚ್ಚರಿಕೆ
“50 ವರ್ಷಗಳಿಂದ ಹರಿಯಾಣದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಅಧಿಕಾರ ಬದಲಾಗುತ್ತಿತ್ತು. ಇದ್ದಕ್ಕಿದ್ದಂತೆ ಅಲ್ಲಿ ಆಡಳಿತ ವಿರೋಧಿ ಅಲೆ ಮಾಯವಾಯಿತು. ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲೂ ಇದೇ ಆಯಿತು. ಉತ್ತರ ಪ್ರದೇಶದಲ್ಲಿ ಒಮ್ಮೆ ಸಮಾಜವಾದಿ ಪಕ್ಷ, ಮತ್ತೊಮ್ಮೆ ಬಿಎಸ್‌ಪಿ ಅಧಿಕಾರಕ್ಕೆ ಬರುತ್ತಿದ್ದವು, ಆದರೆ ಈಗ ಎಲ್ಲವೂ ನಿಂತುಹೋಗಿದೆ. ಒಬ್ಬ ವ್ಯಕ್ತಿಯ ಜನಪ್ರಿಯತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು, ಆದರೆ ಆಡಳಿತ ವಿರೋಧಿ ಅಲೆಯೇ ಕಣ್ಮರೆಯಾಗುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸದ್ದಾಂ ಹುಸೇನ್ ಅವರ ಇರಾಕ್‌ನಲ್ಲಿ ಅಥವಾ ಉತ್ತರ ಕೊರಿಯಾದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ, ಪ್ರಜಾಪ್ರಭುತ್ವವಿರುವ ಯಾವುದೇ ದೇಶದಲ್ಲಿ ಈ ರೀತಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
Delhi: Congress MP and LoP Rahul Gandhi says, “Why I am showing you these videos is because I come from a political family, and I have spent more than 50 years in a political family. No political leader who operates in a democratic environment can make such a statement. Because… pic.twitter.com/SWNSDDr0oe
— IANS (@ians_india) September 24, 2026
ಈ ಪ್ರಶ್ನೆಗೆ ಕೊನೆಗೂ ನಮಗೆ ಉತ್ತರ ಸಿಕ್ಕಿದೆ ಎಂದ ರಾಹುಲ್ ಗಾಂಧಿ, ದೇಶದಲ್ಲಿ ‘ವೋಟ್ ಚೋರಿ’ (ಮತಗಳ ಕಳವು) ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. “ಚುನಾವಣಾ ಆಯೋಗವು ರಕ್ಷಿಸಬೇಕಾದ ‘ಮತ’ದಿಂದ ನಮ್ಮ ಸಂವಿಧಾನಕ್ಕೆ ಶಕ್ತಿ ಸಿಗುತ್ತದೆ. ಸಂವಿಧಾನದಿಂದ ಕಾನೂನುಗಳು ರೂಪುಗೊಳ್ಳುತ್ತವೆ ಮತ್ತು ಕಾನೂನುಗಳಿಂದ ಸ್ವಾಯತ್ತ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಒಂದು ವೇಳೆ ಮತವೇ ನಾಶವಾದರೆ, ಸಂವಿಧಾನವೇ ನಾಶವಾದಂತೆ. ಸಂವಿಧಾನವೇ ಇಲ್ಲದಿದ್ದರೆ ಸಂಸತ್ತು ಮಾಡುವ ಕಾನೂನುಗಳು ಕಾನೂನುಬಾಹಿರವಾಗುತ್ತವೆ. ಆ ಕಾನೂನುಗಳು ಕಾನೂನುಬಾಹಿರವಾದರೆ ಸಂಸ್ಥೆಗಳಿಗೆ ಬೆಲೆಯೇ ಇರುವುದಿಲ್ಲ. ವೋಟ್ ಚೋರಿಯಿಂದ (ಮತ ಕಳವು) ಕಾನೂನು ಚೋರಿ ಹಾಗೂ ಸಂಸ್ಥೆಗಳ ಕಳವು ನಡೆಯುತ್ತಿದೆ” ಎಂದು ರಾಹುಲ್ ಗಾಂಧಿ ವಾದಿಸಿದರು.
#WATCH | Delhi: Reacting to Indian Express report on 2 ECs objecting to discrepancies in SIR process, LoP Lok Sabha, Rahul Gandhi says, “I want to put some points across here about what has recently been in the news… I come from a political family, and I have spent more than 50… pic.twitter.com/VnDeKvRXZO
— ANI (@ANI) September 24, 2026
ಇದನ್ನೂ ಓದಿ: ವಿದ್ಯಾರ್ಥಿಗಳ ಆತಂಕವನ್ನು ರಾಜಕೀಯ ದಾಳ ಮಾಡಿಕೊಳ್ಳಬೇಡಿ: ರಾಹುಲ್ ಗಾಂಧಿಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಖಡಕ್ ತಿರುಗೇಟು
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಬುನಾದಿಯಾದ ‘ಮತದಾನ’ದ ಮೇಲೆಯೇ ದಾಳಿ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ಮತದಿಂದ ನಮ್ಮ ಸಂವಿಧಾನಕ್ಕೆ ಶಕ್ತಿ ಸಿಗುತ್ತದೆ. ಸಂವಿಧಾನದಿಂದ ಕಾನೂನುಗಳು ರೂಪುಗೊಳ್ಳುತ್ತವೆ. ಕಾನೂನುಗಳಿಂದ ಸಂಸ್ಥೆಗಳು ನಿರ್ಮಾಣವಾಗುತ್ತವೆ. ಇದೊಂದು ಸರಪಳಿ. ಇದೇ ಆಧುನಿಕ ಭಾರತವನ್ನು ವ್ಯಾಖ್ಯಾನಿಸುತ್ತದೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ ಒಂದು ವೇಳೆ ಮತವೇ ನಾಶವಾದರೆ, ನಮ್ಮ ಸಂವಿಧಾನವೇ ನಾಶವಾದಂತೆ. ಸಂವಿಧಾನವೇ ತನ್ನ ಶಕ್ತಿಯನ್ನು ಕಳೆದುಕೊಂಡರೆ, ಸಂಸತ್ತು ಮಾಡುವ ಕಾನೂನುಗಳು ಕಾನೂನುಬಾಹಿರವಾಗುತ್ತವೆ. ಕಾನೂನುಗಳೇ ಕಾನೂನುಬಾಹಿರವಾದರೆ, ಸ್ವಾಯತ್ತ ಸಂಸ್ಥೆಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ. ಭಾರತದ ಲೋಕಸಭಾ ಚುನಾವಣೆಗಳು ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಶೇ. 100ರಷ್ಟು ಅಕ್ರಮ ನಡೆಯುತ್ತಿದೆ” ಎಂದಿದ್ದಾರೆ.
#WATCH | Delhi: Reacting to Indian Express report on 2 ECs objecting to discrepancies in SIR process, LoP Lok Sabha, Rahul Gandhi says, “The first thing we are saying is Mr. Gyanesh Kumar must resign immediately. I would add to Mr. Gyanesh Kumar: You are a highly educated person.… pic.twitter.com/hCACV3lYT7
— ANI (@ANI) September 24, 2026
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ 10 ತಿಂಗಳುಗಳಲ್ಲಿ 14 ಬಾರಿ ಆಕ್ಷೇಪಣೆ ಸಲ್ಲಿಸಿರುವ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದರು. “ಇಬ್ಬರು ಚುನಾವಣಾ ಆಯುಕ್ತರೇ ಈಗ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರಶ್ನೆ ಎತ್ತುತ್ತಿದ್ದಾರೆ. ನಾನು ಕೂಡ ಈ ಪ್ರಶ್ನೆಗಳನ್ನು ಎತ್ತಿದ್ದೆ, ಆದರೆ ಅದನ್ನು ನಿರ್ಲಕ್ಷಿಸಲಾಯಿತು. ಜ್ಞಾನೇಶ್ ಕುಮಾರ್ ಅವರನ್ನು ಪ್ರಧಾನಿಯವರೇ ಆಯ್ಕೆ ಮಾಡಿದ್ದಾರೆ. ನಮ್ಮ ಮತದಾನ ವ್ಯವಸ್ಥೆಯ ಗೊಂದಲಕ್ಕೆ ಜ್ಞಾನೇಶ್ ಕುಮಾರ್ ಅವರೇ ಹೊಣೆ ಎಂದು ಈಗ ಆಯುಕ್ತರೇ ಹೇಳುತ್ತಿದ್ದಾರೆ. ಮತಗಳ ಕಳ್ಳತನದಿಂದಲೇ ಕಾನೂನುಗಳ ಕಳವು ಪ್ರಾರಂಭವಾಗುತ್ತದೆ, ಅದರಿಂದಲೇ ಸಂಸ್ಥೆಗಳ ಕಳವು ನಡೆಯುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ